HOME » NEWS » Lifestyle » HEALTH TIPS 8 WARNING SIGNS THAT YOUR LIFESTYLE HAS PUT YOU AT RISK OF DIABETES STG LG

Diabetes: ಡಯಾಬಿಟಿಸ್‍ನಿಂದ ದೂರವಿರಲು ಜೀವನ ಶೈಲಿ ಉತ್ತಮವಾಗಿರಲಿ; ರೋಗದ ಲಕ್ಷಣಗಳು ಹೀಗಿವೆ ನೋಡಿ

ನಿಮಗೆ ಮಧುಮೇಹ ಇದ್ದಾಗ, ದೇಹವು ಶಕ್ತಿಯನ್ನು ಬಿಡುಗಡೆ ಮಾಡಲು ಅಗತ್ಯವಿರುವ ಗ್ಲೂಕೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹೆಚ್ಚುವರಿ ಗ್ಲೂಕೋಸ್ ಜೀರ್ಣವಾಗದಿದ್ದಾಗ, ನಿಮ್ಮಲ್ಲಿರುವ ಶಕ್ತಿಯ ಬಗ್ಗೆ ನಿಮಗೇ ಅರಿವಿರುವುದಿಲ್ಲ ಮತ್ತು ಇದು ಹಸಿವಿಗೆ ಕಾರಣವಾಗಬಹುದು

news18-kannada
Updated:April 11, 2021, 9:53 AM IST
Diabetes: ಡಯಾಬಿಟಿಸ್‍ನಿಂದ ದೂರವಿರಲು ಜೀವನ ಶೈಲಿ ಉತ್ತಮವಾಗಿರಲಿ; ರೋಗದ ಲಕ್ಷಣಗಳು ಹೀಗಿವೆ ನೋಡಿ
ಸಾಂದರ್ಭಿಕ ಚಿತ್ರ
  • Share this:
ಡಯಾಬಿಟಿಸ್ ಅಥವಾ ಮಧುಮೇಹ ಇದೀಗ ಎಲ್ಲಾ ವಯೋಮಾನದವರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. ಡಯಾಬಿಟಿಸ್ ವ್ಯಕ್ತಿಗಳಿಲ್ಲದ ಮನೆಗಳು ತುಂಬಾ ಕಡಿಮೆ ಎನ್ನುವಷ್ಟರ ಮಟ್ಟಿಗೆ ಈ ರೋಗ ತನ್ನ ಜಾಲ ಹರಡಿದೆ. ಇದಕ್ಕೆ ಮೂಲ ಕಾರಣ ಕೆಟ್ಟ ಜೀವನಶೈಲಿ ಎನ್ನುತ್ತಾರೆ ಕೆಲವರು. ಅಸಮರ್ಪಕ ನಿದ್ದೆ, ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದು, ಆಧುನಿಕ ಆಹಾರ ಪದ್ಧತಿ ಹೀಗೆ ಅನೇಕ ಕಾರಣಗಳು ಇಡೀ ನಮ್ಮ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀಳುತ್ತದೆ. ಹಾಗಾಗಿ ಉತ್ತಮ ಜೀವಶೈಲಿ, ಉತ್ತಮ ಮನಸ್ಥಿತಿ ಡಯಾಬಿಟಿಸ್‍ಗೆ ರಾಮಬಾಣ. ಒಮ್ಮೆ ಡಯಾಬಿಟಿಸ್ ಕಾಣಿಸಿಕೊಂಡಿತೋ ಒಂದಲ್ಲಾ ಒಂದು ರೋಗಗಳು ಸಾಲುಗಟ್ಟಿ ಬರುತ್ತದೆ. ಹಾಗಾಗಿ ಜೀವನಶೈಲಿ ಉತ್ತಮವಾಗಿದ್ದಷ್ಟು ಆರೋಗ್ಯ ಉತ್ತಮವಾಗಿರುತ್ತದೆ.

ಡಯಾಬಿಟಿಸ್ ಬಂತೆಂದರೆ ಮೂತ್ರಪಿಂಡಗಳ ಸಮಸ್ಯೆಗಳು, ಜೀರ್ಣಕ್ರಿಯೆ ತೊಂದರೆಗಳು, ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಪ್ರತಿಯೊಬ್ಬರು ಎಚ್ಚರದಿಂದ ಸಮತೋಲಿತ ಜೀವನ ರೂಪಿಸಿಕೊಳ್ಳುವುದು ಮುಖ್ಯ. ಮುಖ್ಯವಾಗಿ ಡಯಾಬಿಟಿಸ್ ಕಾಣಿಸಿಕೊಳ್ಳಲು ಎರಡು ಕಾರಣಗಳಿವೆ.

ಮೊದಲನೆಯ ಕಾರಣ ಇದು ಅನುವಂಶಿಯವಾಗಿ ಕಾಣಿಸಿಕೊಳ್ಳುತ್ತದೆ. ಮತ್ತೊಂದು ಕೆಟ್ಟ ಜೀವನಶೈಲಿಯ ಆಯ್ಕೆಗಳಿಂದ ಬರುತ್ತದೆ. ಇಲ್ಲಿ ಕೆಲವು ಯಾವ ಅಂಶಗಳಿಂದ ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ ಎಂದು ವಿವರಿಸಲಾಗಿದೆ.

ಜಂಕ್ ಫುಡ್
ಆಧುನಿಕ ಜೀವನಶೈಲಿ, ಸಮಯದ ಅಭಾವ, ಕೆಲಸದ ಒತ್ತಡ ಹೀಗೆ ಅನೇಕ ಕಾರಣಗಳಿಂದ ಜನರು ಜಂಕ್ ಫುಡ್ ತಿನ್ನುತ್ತಾರೆ, ಯಥೇಚ್ಛ ಮಸಾಲೆ, ಕರಿದ ತಿಂಡಿಗಳು ಇವು ಆರೋಗ್ಯವನ್ನು ಹಾಳು ಮಾಡುವುದಲ್ಲದೇ ಡಯಾಬಿಟಿಸ್‍ಗೆ ಆಹ್ವಾನ ನೀಡಿದಂತಾಗುತ್ತದೆ.

ರಸಗೊಬ್ಬರ ಬೆಲೆ ಬಗ್ಗೆ ಸೋಮವಾರ ರಸಗೊಬ್ಬರ ಕಂಪನಿಗಳ ಜೊತೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಸಭೆ

ವ್ಯಾಯಾಮ ಮಾಡದಿರುವುದುಮಾನವನ ದೇಹಕ್ಕೆ ಕನಿಷ್ಟ ಮಟ್ಟದ ವ್ಯಾಯಾಮದ ಅವಶ್ಯಕತೆ ಇರುತ್ತದೆ. ಬೆಳಗ್ಗೆ ಅಥವಾ ರಾತ್ರಿ ಕನಿಷ್ಟ 30 ನಿಮಿಷ ಅಥವಾ 1 ಗಂಟೆ ಕಾಲ ವ್ಯಾಯಾಮ ಮಾಡಿದರೆ ಒಳ್ಳೆಯದು. ಜನರ ಸೋಮಾರಿತನವೂ ಡಯಾಬಿಟಿಸ್‍ಗೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು.

ಆರೋಗ್ಯ ತಪಾಸಣೆಗೆ ಹೋಗದಿರುವುದು
ಮನುಷ್ಯ ದೇಹ ಅನೇಕ ಅಂಗಾಂಗಗಳ ಆಗರ. ವಯಸ್ಸಾದಂತೆ ಅಥವಾ ಆಧುನಿಕ ಬದುಕಿನ ಜೀವನಶೈಲಿ ಇನ್ನಿತರ ಕಾರಣಗಳಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿರುತ್ತದೆ. ಇದನ್ನು ವ್ಯಕ್ತಿಗಳು ಹೆಚ್ಚು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆರೋಗ್ಯ ತಪಾಸಣೆಗೂ ಹೋಗುವುದಿಲ್ಲ. ಆದರೆ ತಿಂಗಳಿಗೆ ಒಮ್ಮೆಯಾದರೂ ವ್ಯಕ್ತಿಗಳು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂಬುದು ತಜ್ಞರ ಸಲಹೆ.

ತೂಕವನ್ನು ಸಮರ್ಪಕವಾಗಿಟ್ಟುಕೊಳ್ಳದಿರುವುದು
ಮನುಷ್ಯನ ದೇಹ ಬಳುಕುವ ಬಳ್ಳಿಯಂತಿರಬೇಕು ಎಂದು ಯಾರು ಕೇಳುವುದಿಲ್ಲ. ಆದರೆ ಒಬ್ಬ ವ್ಯಕ್ತಿಗೆ ಇಷ್ಟೇ ಎತ್ತರ ಇರಬೇಕು ಎಂದಿದೆ. ಆದರೆ ಕೆಲವರು ನಿರ್ಲಕ್ಷ್ಯವಹಿಸುವ ಕಾರಣ ಎತ್ತರಕ್ಕಿಂತ ತೂಕ ಹೆಚ್ಚಿರುತ್ತದೆ. ತೂಕ ಹೆಚ್ಚಳವಾದರೆ ಸೋಮಾರಿತನ, ಆಯಾಸ, ಓಡಾಡಲು ನಡೆಯಲು ಆಗದೆ ಒದ್ದಾಡಬೇಕಾಗುತ್ತದೆ. ತೂಕವನ್ನು ಸಮತೋಲಿತವಾಗಿ ನೋಡಿಕೊಳ್ಳದಿರುವುದು ಸಹ ಡಯಾಬಿಟಿಸ್‍ಗೆ ಕಾರಣವಾಗಬಹುದು.

ಡಯಾಬಿಟಿಸ್ ಲಕ್ಷಣಗಳು

ಬಾಯಾರಿಕೆ:

ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ ಡಯಾಬಿಟಿಸ್ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.

ಪದೇ ಪದೇ ಮೂತ್ರಕ್ಕೆ ಹೋಗುವುದು:

ಯಾವುದೇ ವ್ಯಕ್ತಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೆ, ಆತನಲ್ಲಿ ಡಯಾಬಿಟಿಸ್ ಕಾಣಿಸಿಕೊಂಡಿದೆ ಎಂದೇ ಅರ್ಥ.

ಹಸಿವು:

ನಿಮಗೆ ಮಧುಮೇಹ ಇದ್ದಾಗ, ದೇಹವು ಶಕ್ತಿಯನ್ನು ಬಿಡುಗಡೆ ಮಾಡಲು ಅಗತ್ಯವಿರುವ ಗ್ಲೂಕೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹೆಚ್ಚುವರಿ ಗ್ಲೂಕೋಸ್ ಜೀರ್ಣವಾಗದಿದ್ದಾಗ, ನಿಮ್ಮಲ್ಲಿರುವ ಶಕ್ತಿಯ ಬಗ್ಗೆ ನಿಮಗೇ ಅರಿವಿರುವುದಿಲ್ಲ ಮತ್ತು ಇದು ಹಸಿವಿಗೆ ಕಾರಣವಾಗಬಹುದು

ಒಣಗಿದ ಚರ್ಮ:
ಡಯಾಬಿಟಿಸ್‍ಗೆ ತುತ್ತಾದ ವ್ಯಕ್ತಿಗೆ ಚರ್ಮ ಒಣಗುತ್ತಾ ಹೋಗುತ್ತದೆ.

ಗಾಯ ಮಾಗಲು ಹೆಚ್ಚು ಅವಧಿ ತೆಗೆದುಕೊಳ್ಳುವುದು:
ಈ ವ್ಯಕ್ತಿಗಳು ಸಣ್ಣ ಗಾಯವೂ ಆಗದಂತೆ ಎಚ್ಚರ ವಹಿಸಬೇಕು. ಏಕೆಂದರೆ ಒಂದು ಸಣ್ಣ ಗಾಯ ಮಾಗಲು ತಿಂಗಳುಗಟ್ಟಲೇ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಗಾಯ ಮಾಗದಿದ್ದರೆ ದೇಹದ ಅಂಗ ಕತ್ತರಿಸುವ ಸಂದರ್ಭವೂ ಬರಬಹುದು.

ತೂಕ ಕಳೆದುಕೊಳ್ಳುವುದು:
ವ್ಯಕ್ತಿ ತೂಕ ಕಳೆದುಕೊಳ್ಳುತ್ತಿದ್ದರೆ ಆತನಲ್ಲಿ ಡಯಾಬಿಟಿಸ್ ಲಕ್ಷಣಗಳು ಇರುವ ಸಾಧ್ಯತೆ ಇರುತ್ತದೆ.
Youtube Video

ಉತ್ತಮ ಜಿವನ ಶೈಲಿಯ ಮೂಲಕ ಡಯಾಬಿಟಿಸ್ ಸೇರಿದಂತೆ ಇತರೆ ರೋಗಗಳನ್ನು ಸುಲಭವಾಗಿ ಹತ್ತಿರವೂ ಸುಳಿಯದಂತೆ ಮಾಡಬಹುದು.
Published by: Latha CG
First published: April 11, 2021, 9:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories