ಹೊಟ್ಟೆಯ ಬೊಜ್ಜು ಕರಗಿಸೋದು ಕಷ್ಟವೇನಲ್ಲ!; ಇಲ್ಲಿವೆ 5 ಸುಲಭ ಮಾರ್ಗಗಳು

ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಒತ್ತಡಕ್ಕೆ ಒಳಗಾದಂತೆ ನಿಮ್ಮ ತೂಕವೂ ಹೆಚ್ಚತೊಡಗುತ್ತದೆ. ಒತ್ತಡ ಹೆಚ್ಚಾದಂತೆ ಸ್ಟ್ರೆಸ್​ ಹಾರ್ಮೋನ್ ಕಾಟ್ರಿಸಾಲ್​ ಉತ್ಪತ್ತಿಯಾಗಿ ಹಸಿವಿನ ಪ್ರಮಾಣವೂ ಹೆಚ್ಚುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಟಿವಿ, ಯೂಟ್ಯೂಬ್​ಗಳನ್ನು ನೋಡಿ ಯೋಗ, ಜಿಮ್​ನತ್ತ ವಾಲುತ್ತಿರುವ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲಾರಂಭಿಸಿದ್ದಾರೆ. ಇತ್ತೀಚಿನ ಜೀವನಶೈಲಿ, ಆಹಾರಕ್ರಮಗಳಿಂದಾಗಿ ಈ ಬಗೆಯ ಆರೋಗ್ಯ ಕಾಳಜಿ ಅಗತ್ಯವೂ ಹೌದು, ಅನಿವಾರ್ಯವೂ ಹೌದು. ತಿಂಗಳಿಗೆ ಸಾವಿರಾರು ರೂ. ಕೊಟ್ಟು ಜಿಮ್​ ಸೇರಿ ಬೆವರು ಹರಿಸುವ ಬದಲು ಆಹಾರ ಸೇವನೆಯಲ್ಲಿ ಸ್ವಲ್ಪ ಹೆಚ್ಚು ಜಾಗ್ರತೆ ವಹಿಸಿದರೂ ಸಾಕು, ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು.

  ಬಳುಕುವ ಬಳ್ಳಿಯಂತಾಗಲು ಸಾಧ್ಯವಾಗದಿದ್ದರೂ ಸೊಂಟದ ಸುತ್ತಲಿನ ಬೊಜ್ಜು ಕರಗಬೇಕು, ಆರಾಮಾಗಿ ಎದ್ದು, ಕೂತು, ಓಡಾಡಲು ಸಾಧ್ಯವಾಗಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಅದರಲ್ಲೂ 40 ವರ್ಷವಾದ ನಂತರ ಮಹಿಳೆಯರ ಹಾರ್ಮೋನ್​ಗಳಲ್ಲಿಯೂ ವ್ಯತ್ಯಾಸ ಆಗುವುದರಿಂದ ಸೊಂಟದ ಸುತ್ತಲೂ ಬೊಜ್ಜು ಹೆಚ್ಚಾಗುತ್ತದೆ. ಸೊಂಟದ ಬೊಜ್ಜಿನಿಂದ ಡಯಾಬಿಟಿಸ್, ಕೆಲವು ರೀತಿಯ ಕ್ಯಾನ್ಸರ್​ನಂತಹ ಸಮಸ್ಯೆಗಳು ಶುರುವಾಗುತ್ತವೆ. ಹಾಗಿದ್ದರೆ ಸೊಂಟ ಅಥವಾ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ? ಯಾವ ರೀತಿಯ ಆಹಾರವನ್ನು ಸೇವಿಸುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು? ಯಾವ ರೀತಿಯ ಜೀವನ ಕ್ರಮವನ್ನು ನಾವು ಅನುಸರಿಸಬೇಕು? ಇಲ್ಲವೆ ಕೆಲವು ಟಿಪ್ಸ್​...

  ಮೆಂತ್ಯೆಯನ್ನು ಬಳಸಿ:

  ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚೆಚ್ಚು ಬಳಸುವುದರಿಂದ ಸೊಂಟದ ಕೊಬ್ಬನ್ನು ಕರಗಿಸಬಹುದು. ಸ್ವಲ್ಪ ಮೆಂತ್ಯೆ ಕಾಳುಗಳನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಸೇರಿಸಿ ಕುಡಿಯಿರಿ. ಹಾಗೇ, ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದಲೂ ಬೊಜ್ಜು ಕರಗುತ್ತದೆ.

  ಇದನ್ನೂ ಓದಿ: ಬಿಳುಪಾದ ಹಲ್ಲುಗಳಿಗೆ ನೈಸರ್ಗಿಕ ಮನೆಮದ್ದು: ಕಾಂತಿಯುತ ದಂತಕ್ಕೆ ಐದೇ ನಿಮಿಷ ಸಾಕು

  ಜ್ಯೂಸ್​ ಬದಲು ಹಣ್ಣುಗಳನ್ನೇ ತಿನ್ನಿ;

  ಸಾಕಷ್ಟು ಜನ ಹಣ್ಣಿನ ಜ್ಯೂಸ್ ಅಥವಾ ಮಿಲ್ಕ್​ಶೇಕ್​​ ಮಾಡಿಕೊಂಡು ಕುಡಿಯುತ್ತಾರೆ. ಆದರೆ, ಅದಕ್ಕಿಂತಲೂ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಪೂರ್ತಿ ಹಣ್ಣನ್ನು ತಿನ್ನುವುದರಿಂದ ಅದರಲ್ಲಿನ ನಾರಿನಂಶ ನಮ್ಮ ದೇಹವನ್ನು ಸೇರುತ್ತದೆ. ಹಾಗಾಗಿ, ಸಕ್ಕರೆ ಹಾಕಿರುವ ಅಥವಾ ಹಾಲು ಸೇರಿಸಿರುವ ಜ್ಯೂಸ್​ ಕುಡಿಯುವುದಕ್ಕಿಂತ ತಾಜಾ ಹಣ್ಣುಗಳನ್ನೇ ಸೇವಿಸುವುದು ಒಳ್ಳೆಯದು.

  ಒಂದೇ ಬಾರಿ ತಿನ್ನಬೇಡಿ:

  ಹಸಿವಾಗಿದೆ ಎಂದು ಒಂದೇ ಸಲ ರಾಶಿಗಟ್ಟಲೆ ತಿನ್ನುವ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿನ್ನುತ್ತಾ ಇರುವುದರಿಂದ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಇದರಿಂದ ಕೊಬ್ಬು ಶೇಖರವಾಗುವುದು ತಪ್ಪುತ್ತದೆ. ಹಾಗೇ, ಊಟದಲ್ಲಿ ತರಕಾರಿ, ಶೇಂಗಾ ಎಣ್ಣೆಯನ್ನು ಬಳಸಿ. ಮೊಟ್ಟೆಯನ್ನು ತಿನ್ನುವುದಾದರೆ ಹಳದಿ ಭಾಗದ ಬದಲಾಗಿ ಬಿಳಿಯ ಭಾಗವನ್ನು ಮಾತ್ರ ತಿನ್ನಿ. ಹೆಚ್ಚೆಚ್ಚು ಪ್ರೋಟೀನ್​ ಮತ್ತು ನಾರಿನಂಶ ಇರುವ ಆಹಾರ ಸೇವಿಸಿ.

  ಇದನ್ನೂ ಓದಿ: ಅಪ್ಪಿತಪ್ಪಿಯೂ ತಡರಾತ್ರಿ ಈ ಆಹಾರ ಸೇವಿಸಬೇಡಿ: ಗಂಭೀರ ಸಮಸ್ಯೆ ಎದುರಿಸಬೇಕಾದೀತು

   

  ಹೆಚ್ಚಿನ ಒತ್ತಡ ಒಳ್ಳೆಯದಲ್ಲ:

  ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಒತ್ತಡಕ್ಕೆ ಒಳಗಾದಂತೆ ನಿಮ್ಮ ತೂಕವೂ ಹೆಚ್ಚತೊಡಗುತ್ತದೆ. ಒತ್ತಡ ಹೆಚ್ಚಾದಂತೆ ಸ್ಟ್ರೆಸ್​ ಹಾರ್ಮೋನ್ ಕಾಟ್ರಿಸಾಲ್​ ಉತ್ಪತ್ತಿಯಾಗಿ ಹಸಿವಿನ ಪ್ರಮಾಣವೂ ಹೆಚ್ಚುತ್ತದೆ. ಬಾಳೆಹಣ್ಣು, ಬಾದಾಮಿ, ಚೆರ್ರಿಯನ್ನು ಡಯಟ್​ನಲ್ಲಿ ಹೆಚ್ಚು ಬಳಸುವುದರಿಂದ ಒತ್ತಡವೂ ಕಡಿಮೆಯಾಗುತ್ತದೆ.

  ಹಾಲಿನ ಉತ್ಪನ್ನಗಳನ್ನು ಕಡಿಮೆ ಬಳಸಿ:

  ಹಾಲು ಅಥವಾ ಹಾಲಿನ ಉತ್ಪನ್ನಗಳು ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ, ಡಯಟ್​ ಮಾಡುವವರು ಇಂತಹ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಐಸ್​ಕ್ರೀಂ, ಮೊಸರು, ಪೇಡಗಳನ್ನು ಅವಾಯ್ಡ್​ ಮಾಡಿ.

  ಇದನ್ನೂ ಓದಿ: ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ

   
  First published: