ಸ್ಟಾರ್ ಸುವರ್ಣದ (Star Suvarna) ಬೊಂಬಾಟ್ ಭೋಜನ (Bombat Bhojana) ಮಹಿಳೆಯರಿಗೆ ಮೋಡಿ ಮಾಡಿತ್ತು. ಮಧ್ಯಾಹ್ನ 12 ಗಂಟೆಯಾದ್ರೆ ಸಾಕು, ಎಲ್ಲರೂ ತಪ್ಪದೇ ಸ್ಟಾರ್ ಸುವರ್ಣ ನೋಡ್ತಾರೆ. ಈಗ ಬೊಂಬಾಟ್ ಭೋಜನ ಸೀಸನ್ 3 ಶುರುವಾಗಿದೆ. ನಟರಾಗಿ ಜನರ ಮನಸ್ಸು ಗೆದ್ದಿದ್ದ ಸಿಹಿ ಕಹಿ ಚಂದ್ರು ಅವರು ತಮ್ಮ ರುಚಿಕರ ಅಡುಗೆ ಮೂಲಕವೂ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಿನನಿತ್ಯ ಬಳಸುವ, ಕೈಗೆಟುಕುವ ಸಾಮಾಗ್ರಿಗಳಲ್ಲೇ ರುಚಿಕರ ಅಡುಗೆ ಮಾಡುತ್ತಾರೆ. ಇನ್ನು ಕಳೆದ ಸೀಸನ್ ನಂತೆ ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ. ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ. ಬೊಂಬಾಟ್ ಭೋಜನದಲ್ಲಿ ಪೈನಾಪಲ್ (Pineapple) ಹಣ್ಣಿನ ಸಿಪ್ಪೆಯ ಚಹಾ (Tea) ತಯಾರಿಸುವುದನ್ನು ಹೇಳಿಕೊಟ್ಟಿದ್ದಾರೆ.
ಬೊಂಬಾಟ್ ಭೋಜನದ ವಿಶೇಷತೆ
ಸೋಮವಾರದಿಂದ ಶನಿವಾರದವರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಬೊಂಬಾಟ್ ಭೋಜನ ಸೀಸನ್ 3 ಪ್ರಸಾರವಾಗುತ್ತೆ. ಈ ಬಾರಿ ಬಯಲೂಟ, ಸವಿಯೂಟ, ಮನೆ ಊಟ, ಅಂದ ಚಂದ, ಅಂಗೈಯಲ್ಲಿ ಆರೋಗ್ಯ, ಹಾಗೂ ಅತಿಥಿ ದೇವೋಭವ ಎಂಬ ವಿಶೇಷತೆಗಳನ್ನು ಒಳಗೊಂಡಿದೆ. ಕಾರ್ಯಕ್ರಮದ ಕೊನೆಯಲ್ಲಿ ದುಂಡಿರಾಜ್ ಅವರ ಹನಿಗವನನ್ನು ಹೇಳುತ್ತಾರೆ.
ಆರೋಗ್ಯದ ಕುರಿತು ಮನೆಮದ್ದು
ಇನ್ನು ಕಳೆದ ಸೀಸನ್ ನಂತೆ ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ. ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕ ಚಿಕ್ಕ ವಿಷಯಗಳಿಗೆ ಆಸ್ಪತ್ರೆಗೆ ಹೋಗಬೇಡಿ. ಅದಕ್ಕೆ ಮನೆಯಲ್ಲೇ ಅನೇಕ ಮದ್ದುಗಳಿವೆ ಎಂದು ಡಾ. ಗೌರಿ ಸುಬ್ರಹ್ಮಣ್ಯ ಹೇಳುತ್ತಾರೆ. ದಿನ ಆರೋಗ್ಯ ಸಂಬಂಧಿಸಿದ ಟಿಪ್ಸ್ ಹೇಳ್ತಾರೆ.
ಪೈನಾಪಲ್ ಹಣ್ಣಿನ ಸಿಪ್ಪೆಯ ಚಹಾ
ಪೈನಾಪಲ್ ಹಣ್ಣಿನ ಸಿಪ್ಪೆ ತೆಗೆದುಕೊಂಡು ನೀರಿನಲ್ಲಿ ಹಾಕಿ, 2 ನಿಮಿಷ ಹಾಗೇ ಬಿಡಬೇಕು. ಇದರಿಂದ ಸಿಪ್ಪೆ ಶುದ್ಧವಾಗುತ್ತೆ. ನಂತರ ಅದನ್ನು ತೆಗೆದುಕೊಂಡು ಒಲೆ ಮೇಲೆ ನೀರಿನೊಂದಿಗೆ ಕುದಿಸಿ, ಶೋಧಿಸಬೇಕು. ಜೇನು ತುಪ್ಪ ಹಾಕಿಕೊಂಡು ಕುಡಿಬೇಕು. ಪೈನಾಪಲ್ ಹಣ್ಣಿನಲ್ಲಿರು ವಿಶೇಷತೆಗಿಂತ ದುಪ್ಪಟ್ಟು ಗುಣಗಳನ್ನು ಹೊಂದಿದೆ ಪೈನಾಪಲ್ ಸಿಪ್ಪೆ. ಆದ್ದರಿಂದ ಸಿಪ್ಪೆ ಬೀಸಾಕಬೇಡಿ ಸದ್ಬಳಕೆ ಮಾಡಿಕೊಳ್ಳಿ ಎಂದು ಡಾ. ಗೌರಿ ಸುಬ್ರಹ್ಮಣ್ಯ ಅವರು ಹೇಳಿದ್ದಾರೆ.
View this post on Instagram
ನಿದ್ದೆ ಬರದೇ ಸಮಸ್ಯೆ ಎದುರಿಸುವವರು ಈ ಟೀ ಕುಡಿಯಬಹುದು. ವಿಟಮಿನ್ ಸಿ ಹಣ್ಣಿಗಿಂತ ಹೆಚ್ಚು ಸಿಪ್ಪೆಯಲ್ಲಿ ಸಮೃದ್ಧವಾಗಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತೆ. ಚರ್ಮದ ಮೇಲೆ ಬರುವ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತೆ.
ನೀವೂ ಮನೆಯಲ್ಲಿ ಒಮ್ಮೆ ಪೈನಾಪಲ್ ಸಿಪ್ಪೆ ಟೀ ಮಾಡಿ ಕುಡಿಯಿರಿ. ಸಿಪ್ಪೆ ಅಂತ ಬೀಸಾಕಬೇಡಿ.
ರೋಮಾಂಚಕ ಹಳದಿ ವರ್ಣ ಮತ್ತು ಮಧುರವಾದ ಪರಿಮಳದಿಂದಾಗಿ ಇದು ಸಾಕಷ್ಟು ಆಕರ್ಷಣೀಯವಾಗಿದೆ ಅನಾನಸ್. ಹುಳಿ ಮಿಶ್ರಿತ ಸಿಹಿ ಇರುವ ಈ ಹಣ್ಣಿನಿಂದ ಜ್ಯೂಸ್, ಸಲಾಡ್ ಮತ್ತು ಇತರ ತಿನಿಸುಗಳನ್ನು ತಯಾರಿಸುವರು. ಇದು ಅನೇಕ ಪೋಷಕಾಂಶಗಳನ್ನು ಹೊಂದಿದ್ದು,
ಇದನ್ನೂ ಓದಿ: Health Tips: ಪೈನಾಪಲ್ ಸೇವನೆಯಿಂದ ಕಡಿಮೆಯಾಗುತ್ತೆ ಮೊಡವೆ ಸಮಸ್ಯೆ, ಮಾನಸಿಕ ಒತ್ತಡ
ಕೆಲವು ವೈದ್ಯಕೀಯ ಚಿಕಿತ್ಸೆಗಳಿಗಾಗಿಯೂ ಅನಾನಸನ್ನು ಬಳಸಲಾಗುತ್ತದೆ. ಇದರಲ್ಲಿ ಜೀರೋ ಕೊಲೆಸ್ಟ್ರಾಲ್, ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಮ್ಯಾಂಗನೀಸ್, ಸತು ಹಾಗೂ ದೇಹಕ್ಕೆ ಅಗ್ಯತವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ