ಉಪ್ಪು ತಿಂದರೆ ನೀರು ಕುಡಿದರೆ ಸಾಕಾಗಲ್ಲ, ಮಾತ್ರೆಯನ್ನು ತಿನ್ನಬೇಕಾಗುತ್ತದೆ..ಎಚ್ಚರಿಕೆ

ಹೀಗೆ ಉಪ್ಪಿನ ಪ್ರಮಾಣವನ್ನು ಆಹಾರದಲ್ಲಿ ಅಧಿಕಗೊಳಿಸುವುದರಿಂದ ಅಥವಾ ಉಪ್ಪನ್ನು ಮಾತ್ರ ತಿನ್ನುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು (ಕಿಡ್ನಿ ಸ್ಟೋನ್) ಉಂಟಾಗುತ್ತದೆ.

zahir | news18
Updated:February 15, 2019, 7:32 PM IST
ಉಪ್ಪು ತಿಂದರೆ ನೀರು ಕುಡಿದರೆ ಸಾಕಾಗಲ್ಲ, ಮಾತ್ರೆಯನ್ನು ತಿನ್ನಬೇಕಾಗುತ್ತದೆ..ಎಚ್ಚರಿಕೆ
@DoeMal
  • News18
  • Last Updated: February 15, 2019, 7:32 PM IST
  • Share this:
ಉಪ್ಪಿಗಿಂತ ರುಚಿ ಬೇರೆಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ನಾಣ್ಣುಡಿಯೊಂದಿದೆ. ಅದರಲ್ಲೂ ತಾಯಿಯ ಕೈ ರುಚಿಯಲ್ಲಿ ಉಪ್ಪು ಕೂಡ ಪ್ರಮುಖ ಪಾತ್ರವಹಿಸುತ್ತದೆ. ಅಡುಗೆಯಲ್ಲಿ ತಮ್ಮವರಿಗೆ ಬೇಕಾಗಿರುವ ಉಪ್ಪಿನ ಪ್ರಮಾಣ ಹೆತ್ತಮ್ಮಳಿಗೆ ಬಿಟ್ಟರೆ ಮತ್ಯಾರಿಗೆ ತಾನೇ ತಿಳಿಯುವುದು ಅಲ್ಲವೇ. ಆದರೆ ಉಪ್ಪಿನ ಪ್ರಮಾಣ ಏರುಪೇರಾದರೆ..? ನೀರು ಕುಡಿದರೆ ಸಾಕಾಗುವುದಿಲ್ಲ. ಮಾತ್ರೆಯನ್ನು ನುಂಗಬೇಕೆನ್ನುತ್ತದೆ ಹೊಸ ಸಂಶೋಧನೆ. ಹೌದು, ಮನುಷ್ಯನ ಹಲವು ರೋಗಗಳಿಗೆ ಉಪ್ಪಿನ ಪ್ರಮಾಣದಲ್ಲಿ ಹೆಚ್ಚಳವೇ ಪ್ರಮುಖ ಕಾರಣ ಎಂದು ಅಧ್ಯಯನ ತಂಡ ತಿಳಿಸಿದೆ. ಇದರಿಂದ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇತ್ತೀಚಿನ ಸಂಶೋಧನೆಯ ಪ್ರಕಾರ, ಉಪ್ಪಿನಲ್ಲಿ ಸೋಡಿಯಂ ಪ್ರಮಾಣ ಅಧಿಕ ಪ್ರಮಾಣದಲ್ಲಿರುತ್ತದೆ. ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಸೋಡಿಯಂ ಅಂಶ ಸೇರುವುದರಿಂದ ಮೂತ್ರದ ಮೂಲಕ ಸೋಡಿಯಂ ಜತೆ ಕ್ಯಾಲ್ಸಿಯಂ ಸಹ ಹೊರ ಬರುತ್ತದೆ. ಇದು ದೇಹದ ಆರೋಗ್ಯಕ್ಕೆ ಸೂಕ್ತವಲ್ಲ. ಹೀಗೆ ಉಪ್ಪಿನ ಪ್ರಮಾಣವನ್ನು ಆಹಾರದಲ್ಲಿ ಅಧಿಕಗೊಳಿಸುವುದರಿಂದ ಅಥವಾ ಉಪ್ಪನ್ನು ಮಾತ್ರ ತಿನ್ನುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು (ಕಿಡ್ನಿ ಸ್ಟೋನ್) ಉಂಟಾಗುತ್ತದೆ. ಅಲ್ಲದೆ ಇದರಿಂದ ಆಸ್ಟಿಯೊಪೊರೋಸಿಸ್​ನಂತಹ ರೋಗಗಳಿಗೆ ಕಾರಣವಾಗಬಹುದು.

ಹಾಗೆಯೇ ಈ ಅಧ್ಯಯನದಲ್ಲಿ ಉಪ್ಪನ್ನು ಬೇಯಿಸಿದ ಆಹಾರದ ಮೇಲೆ ಸಿಂಪಡಿಸಿ ತಿನ್ನುವುದು ಕೂಡ ಅಪಾಯಕಾರಿ ಎಂದು ತಿಳಿಸಿದೆ. ಅಡುಗೆಯಲ್ಲಿ ಉಪ್ಪನ್ನು ಬಳಸಿದರೆ ಅದರಲ್ಲಿರುವ ಐರನ್ ಅಂಶವು ದೇಹದಲ್ಲಿ ಸುಲಭವಾಗಿ ಜೀರ್ಣವಾಗಬಹುದು. ಆದರೆ ಹಣ್ಣುಗಳಿಗೆ ಅಥವಾ ಬಾಯಿ ರುಚಿ ಹೆಚ್ಚಿಸಲು ನೇರವಾಗಿ ಉಪ್ಪನ್ನು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ಎಂದು ತಿಳಿಸಿದೆ.

ಉಪ್ಪಿನ ಅಧಿಕ ಸೇವನೆಯಿಂದ ಮೂತ್ರಪಿಂಡಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೇಹದಲ್ಲಿ ಉಪ್ಪಿನಾಂಶ ಹೆಚ್ಚಾದರೆ, ಶರೀರದಿಂದ ನೀರಿನಾಂಶ ಬಿಡುಗಡೆಯಾಗುತ್ತೆ. ಇಂತಹ ಸಮಯದಲ್ಲಿ ಮೂತ್ರದ ರೂಪದಲ್ಲಿ ಅಥವಾ ಬೆವರಿನ ಮೂಲಕ ನೀರಿನಾಂಶ ಹೊರ ಹೋಗದಿದ್ದರೆ, ಅದು ಕಿಡ್ನಿಯಲ್ಲಿ ಕಲ್ಲುಗಳಾಗಿ ಮಾರ್ಪಾಡಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
First published:February 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ