ಈ ಜ್ಯೂಸ್ ಕುಡಿದ್ರೆ ಸುಲಭವಾಗಿ ಸಿಗರೇಟ್ ಚಟ ಬಿಡಬಹುದಂತೆ!

ಥಾಯ್ಲೆಂಡ್​ನ Srinakharinwirot University ಮೆಡಿಸಿನ್ ವಿಭಾಗದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಸಿಗರೇಟ್​ ಸೇವನೆಯಿಂದ ಮುಕ್ತಿ ಪಡೆಯಲು ನಿಂಬೆ ಜ್ಯೂಸ್ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ.

news18-kannada
Updated:January 5, 2020, 7:15 AM IST
ಈ ಜ್ಯೂಸ್ ಕುಡಿದ್ರೆ ಸುಲಭವಾಗಿ ಸಿಗರೇಟ್ ಚಟ ಬಿಡಬಹುದಂತೆ!
ನೀವು ಸ್ಮೋಕಿಂಗ್ ಅಭ್ಯಾಸವುಳ್ಳವರಾದರೆ ಇನ್ನೊಮ್ಮೆ ಯೋಚಿಸಿ. ತಂಬಾಕಿನಲ್ಲಿರುವ ಕೆಮಿಕಲ್ಗಳು ನಿಮ್ಮ ದೇಹದ ಕಾಮಾಸಕ್ತಿಯನ್ನು ಕುಗ್ಗಿಸುವ ಶಕ್ತಿ ಹೊಂದಿವೆ. ಅದರಲ್ಲೂ ಮುಖ್ಯವಾಗಿ ಪುರುಷರಲ್ಲಿ ಇವು ಸಂಪೂರ್ಣ ಲಿಬಿಡೋವನ್ನು ಕಸಿದುಕೊಳ್ಳಬಲ್ಲವು.
  • Share this:
ಧೂಮಪಾನ ಆರೋಗ್ಯಕ್ಕೆ ಹಾಕಿಕಾರಕ ಎಂದು ಗೊತ್ತಿದ್ದರೂ ಅದನ್ನು ಬಿಡುವುದು ಅಷ್ಟೊಂದು ಸುಲಭವಲ್ಲ. ತಂಬಾಕಿನಲ್ಲಿರುವ ನಿಕೋಟಿನ್​ ಅಂಶ ನಮ್ಮನ್ನು ಸಿಗರೇಟಿಗೆ ದಾಸರನ್ನಾಗಿಸುತ್ತದೆ. ಈ ಚಟದಿಂದ ಮುಕ್ತಿ ಹೊಂದಲು ಅನೇಕರು ವಿಫಲ ಯತ್ನ ನಡೆಸುತ್ತಲೇ ಇರುತ್ತಾರೆ. ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗೆ ಕಾರಣವಾಗುತ್ತಿರುವ ತಂಬಾಕು ಸೇವನೆಯಿಂದ ಮುಕ್ತಿ ಪಡೆಯಲು ಅನೇಕ ಚ್ಯುಯಿಂಗಮ್​ಗಳೂ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆದರೆ ಇದನ್ನು ಬಳಸಿದರೂ ಫಲಿತಾಂಶ ಮಾತ್ರ ಶೂನ್ಯ ಎಂಬುದು ಧಮ್​ ಪ್ರಿಯರ ಮಾತು. ಆದರೀಗ ಧೂಮಪಾನವನ್ನು ತೊಡೆದು ಹಾಕುವುದು ಹೇಗೆ ಎಂಬುದರ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಗಿದೆ. ಈ ಮಹತ್ತರ ಸಂಶೋಧನೆಯಿಂದ ನಿಂಬೆ ರಸವನ್ನು ಕುಡಿದರೆ ಸಿಗರೇಟಿಗೆ ಕಿಕ್ ಕೊಡಬಹುದು ಎಂದು ತಿಳಿಸಲಾಗಿದೆ.

ಥಾಯ್ಲೆಂಡ್​ನ Srinakharinwirot University ಮೆಡಿಸಿನ್ ವಿಭಾಗದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಸಿಗರೇಟ್​ ಸೇವನೆಯಿಂದ ಮುಕ್ತಿ ಪಡೆಯಲು ನಿಂಬೆ ಜ್ಯೂಸ್ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಈ ಅಧ್ಯಯನಕ್ಕಾಗಿ ಸಿಗರೇಟ್​ ಸೇವಿಸುತ್ತಿದ್ದ 2 ತಂಡಗಳ ಗುಂಪುಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಶೇ.47 ರಷ್ಟು ಮಂದಿಗೆ ಪ್ರತಿದಿನ ನಿಂಬೆ ರಸ ನೀಡಲಾಗಿತ್ತು. ಶೇ.53 ರಷ್ಟಿದ್ದ ಮತ್ತೊಂದು ಗುಂಪಿಗೆ ನಿಕೋಟಿನ್ ಚ್ಯುಯಿಂಗಮ್ ನೀಡಲಾಯಿತು. ನಂತರ  12 ವಾರಗಳವರೆಗೆ ಇವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿಲಾಗಿತ್ತು. ಈ ವೇಳೆ ಚ್ಯುಯಿಂಗಮ್ ಜಗಿದವರಿಕ್ಕಿಂತ ನಿಂಬೆ ಜ್ಯೂಸ್ ಕುಡಿದವರಲ್ಲಿ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ. ಅಲ್ಲದೆ ನಿಂಬೆ ರಸವನ್ನು ಸೇವಿಸಿದವರಲ್ಲಿ ಧಮ್ ಹೊಡೆಯುವ ಬಯಕೆಯು ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಜ್ಯೂಸ್ ತಯಾರಿಸುವುದು ಹೇಗೆ?

ಸಿಗರೇಟ್​ನಿಂದ ಮುಕ್ತಿ ಪಡೆಯಲು ನಿಂಬೆ ರಸವನ್ನು ಪ್ರತಿನಿತ್ಯ ಕುಡಿಯಬೇಕಾಗುತ್ತದೆ. ಈ ಜ್ಯೂಸ್ ತಯಾರಿಸಲು 1 ನಿಂಬೆ ಹಣ್ಣು (ಹಳದಿ), 1 ನಿಂಬೆಕಾಯಿ (ಹಸಿರು), 1 ಟೀ ಸ್ಪೂನ್ ಸಕ್ಕರ್, 1 ಕಪ್​ ನೀರು ಹಾಗೂ ಸ್ವಲ್ಪ ಐಸ್​ ಅವಶ್ಯಕ. ಒಂದು ಸಣ್ಣ ಗ್ಲಾಸ್​ ನೀರಿನಲ್ಲಿ ನಿಂಬೆಹಣ್ಣುಗಳನ್ನು ಕತ್ತರಿಸಿ ರಸ ಹಿಂಡಿರಿ. ಈ ರಸಕ್ಕೆ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮಿಶ್ರಣ ಮಾಡಿ ಜ್ಯೂಸ್ ಮಾಡಿ ದಿನಕ್ಕೆ 2 ಬಾರಿ ಕುಡಿಯಿರಿ. ಹೀಗೆ ಮಾಡುವುದರಿಂದ ಸಿಗರೇಟ್​ ಸೇದಬೇಕೆಂಬ ಬಯಕೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುತ್ತಾರೆ ಸಂಶೋಧಕರು.
Published by: Harshith AS
First published: January 5, 2020, 7:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading