• Home
  • »
  • News
  • »
  • lifestyle
  • »
  • Health Problem: ನಿಮ್ಮ ಹೊಟ್ಟೆಯ ಬಲಭಾಗದಲ್ಲಿ ಆಗಾಗ ನೋವು ಬರುತ್ತದೆಯೇ? ಹಾಗಿದ್ರೆ ನಿರ್ಲಕ್ಷ್ಯ ಬೇಡ!

Health Problem: ನಿಮ್ಮ ಹೊಟ್ಟೆಯ ಬಲಭಾಗದಲ್ಲಿ ಆಗಾಗ ನೋವು ಬರುತ್ತದೆಯೇ? ಹಾಗಿದ್ರೆ ನಿರ್ಲಕ್ಷ್ಯ ಬೇಡ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಮಧ್ಯೆ ಅನೇಕರು ಆಗಾಗ ಹೊಟ್ಟೆ ನೋವನ್ನು ಅನುಭವಿಸುತ್ತಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಹೊಟ್ಟೆಯ ಬಲಭಾಗದಲ್ಲಿ ಆಗಾಗ ನೋವು ಬರುತ್ತಿರುತ್ತದೆ. ಆದ್ರೆ ಅದನ್ನು ನಿರ್ಲಕ್ಷಿಸಬೇಡಿ.

  • Trending Desk
  • 2-MIN READ
  • Last Updated :
  • Share this:

    ಇಂದಿನ ಕಾಲದಲ್ಲಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆ(Health Problem) ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿ ನೋವು ಅನ್ನೋದು ನಮ್ಮ ಜೀವನದಲ್ಲಿ ಬಹಳ ಸಾಮಾನ್ಯ ಎನ್ನುವ ಹಾಗೆ ಆಗಿದೆ. ಅದರಲ್ಲೂ ಕೈ ನೋವು, ಕಾಲು ನೋವು, ತಲೆ ನೋವು, ಹೊಟ್ಟೆ ನೋವು, ಮಂಡಿ ನೋವು ಹೀಗೆ ಹೆಚ್ಚಿನ ಸಮಯದಲ್ಲಿ ಈ ನೋವು ಅನ್ನೋದನ್ನು ಅನುಭವಿಸುತ್ತಲೇ ಇರುತ್ತೇವೆ. ಇವೆಲ್ಲ ಗಂಭೀರವಾಗಿ(Serious) ಹೇಳಿಕೊಳ್ಳುವಂಥ ನೋವಲ್ಲವಾದರೂ ಅದು ನಮ್ಮನ್ನು ನೋಯಿಸುತ್ತಲೇ ಇರುತ್ತದೆ. ಆದ್ರೆ ಅದಕ್ಕೆ ಔಷಧ(Medicine) ಮಾಡುವುದೂ ಕೂಡ ಮುಖ್ಯ ಅನ್ನೋದನ್ನು ಮರೆಯಬಾರದು.


    ಈ ಮಧ್ಯೆ ಅನೇಕರು ಆಗಾಗ ಹೊಟ್ಟೆ ನೋವನ್ನು ಅನುಭವಿಸುತ್ತಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಹೊಟ್ಟೆಯ ಬಲಭಾಗದಲ್ಲಿ ಆಗಾಗ ನೋವು ಬರುತ್ತಿರುತ್ತದೆ. ಆದ್ರೆ ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಇದು ಹಲವಾರು ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿರಬಹುದು. ಹಾಗಿದ್ರೆ ಬಲ ಹೊಟ್ಟೆಯಲ್ಲಿ ಆಗಾಗ ಕಾಣಿಸಿಕೊಳ್ಳುವ ನೋವಿಗೆ ಏನೆಲ್ಲ ಕಾರಣಗಳಿರಬಹುದು, ಯಾಕಾಗಿ ಈ ನೋವು ಕಾಣಿಸಿಕೊಳ್ಳುತ್ತದೆ ಅನ್ನೋದನ್ನು ನೋಡೋಣ.


    1.ಆಸಿಡ್ ರಿಫ್ಲಕ್ಸ್: ಹೊಟ್ಟೆಯ ಬಲಭಾಗದಲ್ಲಿ ನೋವು ಉಂಟಾಗುವುದಕ್ಕೆ ಸಾಮಾನ್ಯ ಕಾರಣವೆಂದರೆ ಎದೆಯುರಿ. ಇದು ಸಾಮಾನ್ಯವಾಗಿ ಆಸಿಡ್ ರಿಫ್ಲಕ್ಸ್‌ನಿಂದ ಉಂಟಾಗುತ್ತದೆ. ಮೇಯೊ ಕ್ಲಿನಿಕ್ ಪ್ರಕಾರ, ಹೊಟ್ಟೆಯ ಆಮ್ಲವು ಹೊಟ್ಟೆಯಿಂದ ಅನ್ನನಾಳಕ್ಕೆ ಸೋರಿಕೆಯಾದಾಗ ಆಸಿಡ್ ರಿಫ್ಲಕ್ಸ್ ಸಂಭವಿಸುತ್ತದೆ. ಇದು ಎದೆಯಲ್ಲಿ ಹಾಗೂ ಗಂಟಲಿನಲ್ಲಿ ಉರಿಯಂಥ ಅನುಭವವನ್ನು ಉಂಟಾಗುವಂತೆ ಮಾಡುತ್ತದೆ.


    ಇದನ್ನೂ ಓದಿ: Weight Loss Drinks: ಈ ಪಾನೀಯಗಳನ್ನು ಕುಡಿದರೆ ಸಾಕು, ನಿಮ್ಮ ತೂಕ ಕಡಿಮೆ ಆಗುತ್ತೆ


    2.ಕೊಬ್ಬಿನ ಯಕೃತ್‌ ಕಾಯಿಲೆ: ಸಾಮಾನ್ಯವಾಗಿ ಯಕೃತ್ತಿನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾದಾಗ ಕೊಬ್ಬಿನ ಯಕೃತ್‌ ಕಾಯಿಲೆ ಉಂಟಾಗುತ್ತದೆ. ಈ ಕಾಯಿಲೆಯು ಹೊಟ್ಟೆ ನೋವು ಅಥವಾ ಹೊಟ್ಟೆಯ ಮೇಲಿನ ಬಲಭಾಗದಲ್ಲಿ ಭಾರವಾದಂತೆ ಅನಿಸುತ್ತಿರುತ್ತದೆ ಎಂದು ಹೇಳಲಾಗುತ್ತದೆ.


    3. ಅಪೆಂಡಿಸೈಟಿಸ್: ಅಪೆಂಡಿಸೈಟಿಸ್ ಅನ್ನು ಅಪೆಂಡಿಕ್ಸ್‌ನ ಉರಿಯೂತ ಎಂದೂ ಸಹ ಹೇಳಲಾಗುತ್ತದೆ. ಇದು ನಿಮ್ಮ ಹೊಟ್ಟೆಯ ಕೆಳಗಿನ ಬಲಭಾಗದಲ್ಲಿರುವ ಕೊಲೊನ್‌ನಿಂದ ನೇತಾಡುವ ಸಣ್ಣ ಚೀಲವಾಗಿದೆ. ಇದು ಸಾಮಾನ್ಯವಾಗಿ ನಿಮ್ಮ ಹೊಟ್ಟೆಯ ಮಧ್ಯದಲ್ಲಿ ನೋವನ್ನು ಉಂಟುಮಾಡಬಹುದು. ನಂತರ ಅದು ನಿಮ್ಮ ಹೊಟ್ಟೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.


    4. ವಿವಿಧ ಬಗೆಯ ಕ್ಯಾನ್ಸರ್ ಸಾಧ್ಯತೆ: ಪ್ರಮುಖ ಆರೋಗ್ಯ ಸಂಸ್ಥೆಗಳ ಪ್ರಕಾರ, ಕೆಲವು ರೀತಿಯ ಕ್ಯಾನ್ಸರ್ ಕೂಡ ಹೊಟ್ಟೆಯ ಮೇಲ್ಭಾಗದಲ್ಲಿ ನೋವನ್ನು ಉಂಟುಮಾಡಬಹುದು.ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, "ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ನ ಸಾಮಾನ್ಯ ಲಕ್ಷಣವೆಂದರೆ ಹೊಟ್ಟೆಯ ಮೇಲ್ಭಾಗ ಅಥವಾ ಮಧ್ಯದಲ್ಲಿ, ಕೆಲವೊಮ್ಮೆ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. UK ರಾಷ್ಟ್ರೀಯ ಆರೋಗ್ಯ ಸೇವೆಗಳ (NHS) ಪ್ರಕಾರ, ನಿಮ್ಮ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣ ಕೂಡ ಆಗಿರಬಹುದು.


    ಇದನ್ನೂ ಓದಿ: Heart Attack Symptoms: ಈ ಲಕ್ಷಣಗಳು ಹಾರ್ಟ್​ ಅಟ್ಯಾಕ್​ನ ಸೂಚನೆ ಇರಬಹುದು, ಎಚ್ಚರ!


    ಇನ್ನು ಬಲ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಲು ಇನ್ನೂ ಕೆಲವಷ್ಟು ಕಾರಣಗಳಿರಬಹುದು. ಅವುಗಳು ಯಾವವು ಅನ್ನೋದನ್ನು ನೋಡೋದಾದ್ರೆ, ಪಿತ್ತಗಲ್ಲು, ಪಿತ್ತಕೋಶದ ಸಮಸ್ಯೆಗಳು, ಮೂತ್ರಪಿಂಡದ ತೊಂದರೆಗಳು ಮತ್ತು ಮೂತ್ರಪಿಂಡದ ಕಲ್ಲುಗಳು ಇದಕ್ಕೆ ಕಾರಣವಾಗಿರಬಹುದು. ಅಲ್ಲದೇ ಕಿಬ್ಬೊಟ್ಟೆಯ ನೋವಿಗೆ ಮಲಬದ್ಧತೆ, ಆಹಾರ ಅಲರ್ಜಿಗಳು, ಲ್ಯಾಕ್ಟೋಸ್ ಅಸಹಿಷ್ಣುತೆ, ಆಹಾರದಲ್ಲಿರುವ ವಿಷ ಮತ್ತು ಹೊಟ್ಟೆಯಲ್ಲಿ ಸೇರಿಕೊಳ್ಳುವ ವೈರಸ್ ಗಳು ಕಾರಣವಾಗಿರಬಹುದು.


    ಒಟ್ಟಾರೆ, ಆಗಾಗ ಕಂಡುಬರುವ ಇಂಥ ನೋವುಗಳನ್ನು ನಿರ್ಲ್ಯಕ್ಷ ಮಾಡದೇ ಇದರ ಲಕ್ಷಣಗಳು ಕಂಡುಬಂದರೆ ನೀವು ತಕ್ಷಣವೇ ವೈದ್ಯರನ್ನು ಕಾಣುವುದು ಒಳಿತು. ಅವರು ಇದಕ್ಕೆ ಕಾರಣ ಕಂಡುಹಿಡಿದು ಸರಿಯಾದ ಪರಿಹಾರವನ್ನು ಸೂಚಿಸುತ್ತಾರೆ. ನೀವು ಕಡಿಮೆಯಾಗಬಹುದು ನೋಡೋಣ... ಮನೆಯಲ್ಲಿಯೇ ಔಷಧ ಮಾಡೋಣ, ಔಷಧ ಅಂಗಡಿಯವರನ್ನು ಕೇಳಿ ತರೋಣ ಎನ್ನುತ್ತ ಕೂತರೆ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ಅಲ್ಲದೇ ಪರಿಸ್ಥಿತಿ ಕೈಮೀರಬಹುದು. ಆದ್ದರಿಂದ ಸಮಸ್ಯೆಗಳು ಉಲ್ಬಣವಾಗುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು