ಒಬ್ಬ ರೈತ ತನ್ನ ಹೊಲದಲ್ಲಿ ಹೊಸ ಬೆಳೆಯನ್ನು ಬೆಳೆಯಲು ಯೋಜಿಸಿದಾಗ, ಅವರು ಬೆಳೆಗೆ ತಕ್ಕಂತೆ ಅನುಕೂಲಕರ ಹವಾಮಾನ, ಮಣ್ಣಿನ ಫಲವತ್ತತೆ, ಸರಿಯಾದ ನೀರಾವರಿ ಮತ್ತು ಬೀಜದ ಗುಣಮಟ್ಟ ಎಲ್ಲವನ್ನೂ ನೋಡುತ್ತಾರೆ. ಇದೆಲ್ಲಾ ಗಮನಿಸಲಿಲ್ಲ ಎಂದ್ರೆ, ಬೆಳೆಯ ಗುಣಮಟ್ಟವು ಕುಂಠಿತಗೊಳ್ಳುತ್ತದೆ. ಬೆಳೆಯ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ಮಗು (Baby) ಮಾಡಿಕೊಳ್ಳುವ ಮೊದಲು ದಂಪತಿ ತಮ್ಮ ಆರೋಗ್ಯದ (Health) ಬಗ್ಗೆ ಗಮನ ಕೊಡಬೇಕು. ಆಯುರ್ವೇದವು (Ayurveda) ಪ್ರಸವಪೂರ್ವ ಆರೈಕೆಯಂತೆಯೇ ದಂಪತಿ (Couple) ಗರ್ಭಧಾರಣೆಗೆ (Pregnancy) ಸಿದ್ಧಪಡಿಸಲು ಒತ್ತು ನೀಡುತ್ತದೆ. ಆರೋಗ್ಯಕರ ಭ್ರೂಣಕ್ಕೆ ನೀವು ಕೆಲವೊಂದನ್ನು ಪಾಲಿಸಬೇಕು ಎಂದು ಈ ಬಗ್ಗೆ ಆಯುರ್ವೇದ ಸ್ತ್ರೀರೋಗ ತಜ್ಞೆ ಡಾ ರೇಷ್ಮಾ ಎಂ ಎ ವಿವರಿಸಿದ್ದಾರೆ.
ಆಯುರ್ವೇದ ಹೇಳುವುದೇನು?
'ಆರೋಗ್ಯಕರ ಭ್ರೂಣದ ಪರಿಕಲ್ಪನೆಗೆ, ಉತ್ತಮವಾದ ಅವಧಿ, ಆರೋಗ್ಯಕರ ಗರ್ಭಾಶಯದ ವಾತಾವರಣ, ಸರಿಯಾದ ರಕ್ತ ಪರಿಚಲನೆ ಮತ್ತು ಉತ್ತಮ ಗುಣಮಟ್ಟದ ಅಂಡಾಣು ಮತ್ತು ವೀರ್ಯಗಳು ಅತ್ಯಗತ್ಯ. ಅದಕ್ಕಾಗಿ ಆಯುರ್ವೇದವು ಗರ್ಭಧಾರಣೆಯ ಮೊದಲು ದಂಪತಿಗಳ ಪೂರ್ವಭಾವಿ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ'.
ಪಂಚಕರ್ಮ ಚಿಕಿತ್ಸೆ
ಆಯುರ್ವೇದದ ಪ್ರಕಾರ ದಂಪತಿಗೆ ಪಂಚಕರ್ಮ ಚಿಕಿತ್ಸೆಗಳ ಅಗತ್ಯ ಇರುತ್ತೆ. ಅದರಲ್ಲಿ ವಮನ, ವಿರೇಚನ, ಬಸ್ತಿ ಇತ್ಯಾದಿಗಳನ್ನು ದಂಪತಿಗಳ ದೇಹವನ್ನು ಶುದ್ಧೀಕರಿಸಲು ಸಲಹೆ ನೀಡಲಾಗುತ್ತದೆ. ಇಬ್ಬರಿಗೂ ಮಗು ಆಗುವಂತೆ ಸುಧಾರಿಸಲು ಔಷಧಿಗಳ ಪ್ರಿಸ್ಕ್ರಿಪ್ಷನ್ನೊಂದಿಗೆ ಒಂದು ತಿಂಗಳ ಇಂದ್ರಿಯನಿಗ್ರಹವನ್ನು ಸೂಚಿಸಲಾಗುತ್ತದೆ. ಇದರೊಂದಿಗೆ ದೇಹವು ಪರಿಪೂರ್ಣ ಸಮತೋಲನದಲ್ಲಿ ಕಾರ್ಯನಿರ್ವಹಿಸುತ್ತದೆ, ಅದೇ ಸಮಯದಲ್ಲಿ ಅಂಡಾಣು ಮತ್ತು ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ.
ಆಯುರ್ವೇದದಲ್ಲಿ ಬಿಜಾ ಸಂಸ್ಕರ್ ಎಂದರೇನು?
ಗಂಡು ಮತ್ತು ಹೆಣ್ಣು ಗ್ಯಾಮೆಟ್‍ಗಳ (ಬೀಜ) ಗುಣಮಟ್ಟವನ್ನು ಸುಧಾರಿಸಲು ಪೂರ್ವಭಾವಿ ಕಾಳಜಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಬೀಜ ಸಂಸ್ಕಾರ ಎಂಬ ಪದವನ್ನು ಬಳಸಲಾಗುತ್ತೆ. ಜೀವನಶೈಲಿಯ ಮಾರ್ಪಾಡುಗಳು, ಆಹಾರದ ಮಾರ್ಪಾಡುಗಳು, ಪ್ರಾಣಾಯಾಮದ ಅಳವಡಿಕೆ, ಧ್ಯಾನ, ಯೋಗ ಆಯುರ್ವೇದ ಸೂತ್ರೀಕರಣಗಳ ಮೇಲೆ ಕೇಂದ್ರೀಕರಿಸುತ್ತದೆ.
ಡಾಕ್ಟರ್ ರೇಷ್ಮಾ ಅವರು ಏನ್ ಹೇಳ್ತಾರೆ?
ದಂಪತಿ ಗರ್ಭಧಾರಣೆಯ ಯೋಜನೆಗೆ ಕನಿಷ್ಠ 3-6 ತಿಂಗಳ ಮೊದಲು ಬೀಜ ಸಂಸ್ಕಾರವನ್ನು ಪ್ರಾರಂಭಿಸಬೇಕು. ಪ್ರಾಯೋಗಿಕವಾಗಿ, ಬೀಜ ಸಂಸ್ಕಾರದ ನಂತರ ಗರ್ಭಧರಿಸುವ ಮಹಿಳೆಯು ಕಡಿಮೆ ಗರ್ಭಧಾರಣೆಯ ಸಂಬಂಧಿತ ತೊಡಕುಗಳನ್ನು ಹೊಂದಿರುತ್ತಾರೆ. ಉತ್ತಮ ಭ್ರೂಣದ ಆರೋಗ್ಯ ಮತ್ತು ಸುಂದರವಾದ ತಾಯ್ತನದ ಪ್ರಯಾಣವನ್ನು ಹೊಂದಿರುತ್ತಾರೆ.
ಜೀವನದಲ್ಲಿ ಮಕ್ಕಳು ಮುಖ್ಯ
ಮದುವೆ ಆದ ಮೇಲೆ ಮಕ್ಕಳು ಎಷ್ಟು ಮುಖ್ಯ ಎಂಬುವುದು ಎಲ್ಲರಿಗೂ ಗೊತ್ತೇ ಇದೆ. ಮಕ್ಕಳಾಗಿಲ್ಲ ಎಂದು ಕಂಡ ಕಂಡ ದೇವರಲ್ಲಿ ಬೇಡಿಕೊಳ್ಳುವುದು, ಆಸ್ಪತ್ರೆ ಸುತ್ತುವುದನ್ನು ನಾವು ನೋಡಿದ್ದೇವೆ. ಅದಕ್ಕೆ ಆರೋಗ್ಯವಂತ ಮಗು ಪಡೆಯಲು ಮೇಲೆ ಹೇಳಿದಂತೆ ನೀವು ಮೊದಲು ನಿಮ್ಮ ಆರೋಗ್ಯದತ್ತ ಗಮನ ಕೊಡಿ. ಮಗು ಮಾಡಿಕೊಳ್ಳಲು ದೈಹಿಕವಾಗಿಯೂ ಸಿದ್ಧವಾಗಿರಬೇಕು.
ಆಯುರ್ವೇದದ ಪ್ರಕಾರ ಉತ್ತಮವಾದ ಮಗು ಪಡೆಯಲು ಆರೋಗ್ಯಕರ ಗರ್ಭಾಶಯದ ವಾತಾವರಣ, ಸರಿಯಾದ ರಕ್ತ ಪರಿಚಲನೆ ಮತ್ತು ಉತ್ತಮ ಗುಣಮಟ್ಟದ ಅಂಡಾಣು ಮತ್ತು ವೀರ್ಯಗಳು ಅತ್ಯಗತ್ಯ.
ಇದನ್ನೂ ಓದಿ: Weight Loss: ಥೈರಾಯ್ಡ್ ರೋಗಿಗಳು ತೂಕ ಇಳಿಸಿಕೊಳ್ಳಲು ಈ ಆಹಾರ ಸೇವಿಸಿ!
ಆಯುರ್ವೇದವು ಗರ್ಭಾವಸ್ಥೆಯನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ದೀರ್ಘ ಸಂಪ್ರದಾಯವನ್ನು ಹೊಂದಿದೆ. ವಾಸ್ತವವಾಗಿ, ಆಯುರ್ವೇದವು ಗರ್ಭಧಾರಣೆಯ ಅವಧಿಗಿಂತ ಹೆಚ್ಚು ಅಲ್ಲದಿದ್ದರೂ, ಪೂರ್ವಭಾವಿ ಅವಧಿಯನ್ನು ಒತ್ತಿಹೇಳುತ್ತದೆ. ಪೂರ್ವಭಾವಿ ಸಮಯವು ನಿಮಗೆ ಮತ್ತು ನಿಮ್ಮ ಭವಿಷ್ಯದ ಮಗುವಿಗೆ ಉತ್ತಮ ಪೋಷಣೆ ಮತ್ತು ಆರೈಕೆಯನ್ನು ಒದಗಿಸಲು ಸುವರ್ಣಾವಕಾಶವನ್ನು ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ