Health Benefits: 30ರ ನಂತರ ನಿಮ್ಮ ಹೃದಯವನ್ನು ಆರೋಗ್ಯಯುತವಾಗಿಡೋದು ಹೇಗೆ? ಇಲ್ಲಿವೆ ಈ ನಾಲ್ಕು ಮಾರ್ಗಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

"ನಾವು ಏನನ್ನು ಬಿತ್ತುತ್ತೇವೋ, ಅದನ್ನೇ ಕೊಯ್ಯುತ್ತೇವೆ" ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ನಮ್ಮ ಹೃದಯದ ಆರೋಗ್ಯಕ್ಕೂ ಅನ್ವಯವಾಗುತ್ತದೆ. ಹೀಗಾಗಿ 30ರ ನಂತರ ನಮ್ಮ ಹೃದಯವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆಯಾಗಿದೆ. ಭವಿಷ್ಯದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ನಾವು ಈಗ ಬಿತ್ತಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ. ಬೆಂಗಳೂರಿನ ರಿಚ್​ಮಂಡ್ ರಸ್ತೆಯಲ್ಲಿರುವ ಫೋರ್ಟಿಸ್​ ಆಸ್ಪತ್ರೆಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿ ನಿರ್ದೇಶಕ ಡಾ.ರಾಜಪಾಲ್ ಸಿಂಗ್ (Dr Rajpal Singh) ಅವರು ಈ ಬಗ್ಗೆ ವಿವರಿಸಿದ್ದಾರೆ, ಓದಿ...

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • New Delhi, India
  • Share this:

30ರ ನಂತರ ನಿಮ್ಮ ಹೃದಯವನ್ನು (Heart) ಆರೋಗ್ಯಯುತವಾಗಿಡಲು (Health) ನಾಲ್ಕು ಮಾರ್ಗಗಳನ್ನು ಬೆಂಗಳೂರಿನ (Bengaluru) ರಿಚ್​ಮಂಡ್ ರಸ್ತೆಯಲ್ಲಿರುವ (Richmond Road) ಫೋರ್ಟಿಸ್​ ಆಸ್ಪತ್ರೆಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಯ (Interventional Cardiology) ನಿರ್ದೇಶಕ ಡಾ.ರಾಜಪಾಲ್ ಸಿಂಗ್ (Dr Rajpal Singh) ಅವರು ನಾಲ್ಕು ಮಾರ್ಗಗಳನ್ನು ನೀಡಿದ್ದಾರೆ. ನಮ್ಮಲ್ಲಿ ಹೆಚ್ಚಿನ ಜನರು 30ರ ಆಸುಪಾಸಿನಲ್ಲಿ ಆರೋಗ್ಯಯುತ ಹೃದಯ ಮತ್ತು ಚುರುಕಾದ ದೈಹಿಕ ಸ್ಥಿತಿಯನ್ನು ಹೊಂದಿರುತ್ತೇವೆ. "ನಾವು ಏನನ್ನು ಬಿತ್ತುತ್ತೇವೋ, ಅದನ್ನೇ ಕೊಯ್ಯುತ್ತೇವೆ" ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ನಮ್ಮ ಹೃದಯದ ಆರೋಗ್ಯಕ್ಕೂ ಅನ್ವಯವಾಗುತ್ತದೆ. ಹೀಗಾಗಿ 30ರ ನಂತರ ನಮ್ಮ ಹೃದಯವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆಯಾಗಿದೆ. ಭವಿಷ್ಯದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ನಾವು ಈಗ ಬಿತ್ತಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.


  • ನಿಯಮಿತ ವ್ಯಾಯಾಮ


ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಅತಿಯಾದ ಕೊಬ್ಬಿನ ಪ್ರಮಾಣ ಮೊದಲಾದ ಹೃದಯ ಸಂಬಂಧಿ ಅಪಾಯಗಳನ್ನು ಕಡಿಮೆ ಮಾಡಲು ದೈಹಿಕ ವ್ಯಾಯಾಮದ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ. ವ್ಯಾಯಾಮವು ಯಾವುದೇ ರೂಪದಲ್ಲಿರಬಹುದು, ಕ್ರೀಡೆ, ಈಜು ಅಥವಾ ಪ್ರತಿದಿನ 40 ನಿಮಿಷಗಳ ಅಥವಾ ವಾರಕ್ಕೆ ಕನಿಷ್ಠ 5 ಬಾರಿ ಸರಳವಾದ ನಡುಗೆಯೊಂದಿಗೆ ದೇಹದಲ್ಲಿ ಬೆವರು ತರಿಸುವ ಯಾವುದೇ ರೂಪದ ವ್ಯಾಯಾಮವಾಗಬಹುದು .

  • ಸೂಕ್ಷ್ಮ ಆಹಾರ ಪದ್ಧತಿ


ಪ್ರೋಟೀನ್‌ಯುಕ್ತ ಮತ್ತು ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನಿಂದ ವಿಮುಖವಾಗಿರುವ ಆಹಾರವನ್ನು ಶಿಫಾರಸು ಮಾಡಲಾಗುತ್ತದೆ. ಒಣ ಹಣ್ಣುಗಳ ಸೇವನೆ ಆರೋಗ್ಯಕರ. ದಿನಕ್ಕೆ 5 ಭಾಗ ಹಣ್ಣುಗಳನ್ನು ಸೇವಿಸುವುದು ಉತ್ತಮ. ಉಪ್ಪಿನ ಬಳಕೆ ಕಡಿಮೆ ಇರಲಿ. ಹೈಡ್ರೇಷನ್‌ ಉತ್ತಮವಾಗಿರಲಿ ಮತ್ತು ಆಲ್ಕೋಹಾಲ್ ಮಿತವಾಗಿರಲಿ. ಒಂದೇ ಸಲ ಅತಿಯಾಗಿ ತಿನ್ನುವ ಬದಲು ನಿಯಮಿತ ಮಧ್ಯಂತರದಲ್ಲಿ ಸ್ವಲ್ಪ, ಸ್ವಲ್ಪ ಆಹಾರ ಸೇವಿಸಬೇಕು.


ಡಾ.ರಾಜಪಾಲ್ ಸಿಂಗ್-ನಿರ್ದೇಶಕರು,ಇಂಟರ್ವೆನ್ಷನಲ್ ಕಾರ್ಡಿಯಾಲಜಿ, ಫೋರ್ಟಿಸ್ ಆಸ್ಪತ್ರೆ, ರಿಚ್ಮಂಡ್ ರಸ್ತೆ,ಬೆಂಗಳೂರು


  • ಧೂಮಪಾನವನ್ನು ನಿಲ್ಲಿಸಿ


ಹೃದಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಧೂಮಪಾನವು ಅತಿ ದೊಡ್ಡ ಶತೃವಾಗಿದೆ. ಧೂಮಪಾನ ಮಾಡುವವರಲ್ಲಿ ಹೃದಯಾಘಾತ ಸಾಧ್ಯತೆಯು ಧೂಮಪಾನ ಮಾಡದವರಿಗಿಂತ ಎರಡು ಪಟ್ಟು ಅಧಿಕ ಮತ್ತು ಸಾಯುವ ಸಾಧ್ಯತೆ 3-4 ಪಟ್ಟು ಹೆಚ್ಚು. ಧೂಮಪಾನವನ್ನು ನಿಲ್ಲಿಸಿದ ನಂತರ ಧೂಮಪಾನಿಗಳ ಹೃದಯ ರಕ್ತನಾಳದ ಅಪಾಯವು ಅರ್ಧದಷ್ಟು ಕಡಿಮೆಯಾಗಲು ಕೇವಲ ಒಂದು ವರ್ಷ ತೆಗೆದುಕೊಳ್ಳುತ್ತದೆ ಮತ್ತು ಧೂಮಪಾನಿಗಳಲ್ಲದವರಲ್ಲಿ ಈ ಅಪಾಯ ಅಭಿವೃದ್ಧಿಗೊಳ್ಳಲು ಎರಡು ವರ್ಷ ಬೇಕಾಗುತ್ತದೆ.


ನಿಷ್ಕ್ರಿಯ ಅಥವಾ ಅಪರೂಪದ ಧೂಮಪಾನ ಕೂಡ ಇದೇ ರೀತಿಯ ಹಾನಿಕಾರಕ ಪರಿಣಾಮಗಳನ್ನು ಹೊಂದಿದೆ. ಆದ್ದರಿಂದ, ಯಾವುದೇ ವಯಸ್ಸಿನ ಧೂಮಪಾನಿಗಳು, ವಿಶೇಷವಾಗಿ 30 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ತಕ್ಷಣವೇ ಧೂಮಪಾನವನ್ನು ನಿಲ್ಲಿಸಬೇಕು.


  • ಆರೋಗ್ಯ ತಪಾಸಣೆ


"ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ" ಎಂಬ ಮಾತಿದೆ. ಒಮ್ಮೆ ನೀವು 30 ವರ್ಷ ದಾಟಿದರೆ, ವರ್ಷಕ್ಕೊಮ್ಮೆಯಾದರೂ ನಿಯಮಿತ ಹೃದಯ ಮತ್ತು ಆರೋಗ್ಯ ತಪಾಸಣೆಯನ್ನು ನಿಮಗೆ ಶಿಫಾರಸು ಮಾಡಲಾಗುತ್ತದೆ. ಧೂಮಪಾನಿಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯದ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಅಪಾಯ ಹೆಚ್ಚು. ಕುಟುಂಬದಲ್ಲಿ ಅಕಾಲಿಕ ಹೃದ್ರೋಗಗಳ ಇತಿಹಾಸ ಹೊಂದಿರುವವರು ಹೃದ್ರೋಗ ತಜ್ಞರನ್ನು ಭೇಟಿ ಮಾಡಿ ಮತ್ತು ಸಲಹೆ ಪಡೆಯಬೇಕು.




ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಒಟ್ಟಿಗೆ ಪಾಲಿಸಬೇಕು ಮತ್ತು ಉತ್ತಮ ನಿದ್ರೆ ಮತ್ತು ಧನಾತ್ಮಕ ಆಲೋಚನೆಗಳು ಜೊತೆಯಾಗಿ ನಿಮ್ಮ 30 ನಂತರದ ದಿನಗಳಲ್ಲಿ ಹೃದಯವನ್ನು ಆರೋಗ್ಯವಾಗಿಡಲು ಮತ್ತು ಸಂತೋಷವಾಗಿಡಲು ಸಹಕಾರಿಯಾಗಿದೆ.

Published by:Monika N
First published: