ದಾಳಿಂಬೆ ಸಿಪ್ಪೆಯಲ್ಲಿರುವ ಆರೋಗ್ಯಕಾರಿ ಪ್ರಯೋಜನ ಗೊತ್ತಾದ್ರೆ, ಮತ್ತೆ ಯಾವತ್ತೂ ಬಿಸಾಡಲ್ಲ..!

ದಾಳಿಂಬೆಯ ಒಣ ಸಿಪ್ಪೆಯನ್ನು ಪುಡಿಯನ್ನು ಮಾಡಿ, ಅದಕ್ಕೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಸುಕ್ಕುಗಳನ್ನು ದೂರ ಮಾಡಬಹುದು.

news18-kannada
Updated:June 17, 2020, 2:48 PM IST
ದಾಳಿಂಬೆ ಸಿಪ್ಪೆಯಲ್ಲಿರುವ ಆರೋಗ್ಯಕಾರಿ ಪ್ರಯೋಜನ ಗೊತ್ತಾದ್ರೆ, ಮತ್ತೆ ಯಾವತ್ತೂ ಬಿಸಾಡಲ್ಲ..!
pomegranate peels
  • Share this:
ದಾಳಿಂಬೆ ಆರೋಗ್ಯಕರ ಹಣ್ಣು ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ಇದರ ಸಿಪ್ಪೆ ಕೂಡ ಅಷ್ಟೇ ಪ್ರಯೋಜನಕಾರಿ ಎಂಬುದು ಗೊತ್ತಿದೆಯಾ?. ಇಷ್ಟು ದಿನ ನೀವೆಲ್ಲರೂ ದಾಳಿಂಬೆ ಸಿಪ್ಪೆಯನ್ನು ಎಸೆದಿರುತ್ತೀರಿ. ಇನ್ಮುಂದೆ ಆ ತಪ್ಪನ್ನು ಮಾಡದಿರಿ. ಏಕೆಂದರೆ ದಾಳಿಯಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಸಾಮಾನ್ಯವಾಗಿ ಮಹಿಳೆಯರಲ್ಲಿ ಋತುಸ್ರಾವದ ವೇಳೆ ಅಸಹನೀಯ ನೋವು ಕಂಡು ಬರುತ್ತದೆ. ಇಂತಹ ಸಮಯದಲ್ಲಿ ದಾಳಿಂಬೆಯ ಒಣ ಸಿಪ್ಪೆಯನ್ನು ಪುಡಿ ಮಾಡಿ ಮತ್ತು ಒಂದು ಚಮಚ ನೀರಿನಲ್ಲಿ ಹಾಕಿ ಕುಡಿಯಿರಿ. ಇದು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ, ಹಾಗೆಯೇ ಹೊಟ್ಟೆ ನೋವಿಗೂ ಪರಿಹಾರ ನೀಡುತ್ತದೆ.

ಪೈಲ್ಸ್ ಸಂಬಂಧಿ ತೊಂದರೆಗಳಿದ್ದರೆ ದಾಳಿಂಬೆ ಸಿಪ್ಪೆ ಮತ್ತು ಬೆಲ್ಲವನ್ನು ಪುಡಿ ಮಾಡಿ, ಸಣ್ಣ ಮಾತ್ರೆಗಳನ್ನಾಗಿ ತಯಾರಿಸಿ. ಇದನ್ನು ಪ್ರತಿದಿನ ಸೇವಿಸುವುದರಿಂದ ಪೈಲ್ಸ್​ ರೋಗದಿಂದ ಮುಕ್ತಿ ಪಡೆಯಬಹುದು.

ಗಂಟಲು ಟಾನ್ಸಿಲ್, ಹೃದ್ರೋಗ, ಸುಕ್ಕುಗಳು, ಬಾಯಿಯ ದುರ್ವಾಸನೆ, ಕೆಮ್ಮು ಮತ್ತು ರಕ್ತಸ್ರಾವ ಮುಂತಾದ ಕಾಯಿಲೆಗಳನ್ನು ನಿವಾರಿಸಲು ದಾಳಿಂಬೆ ಸಿಪ್ಪೆ ಪ್ರಯೋಜನಕಾರಿಯಾಗಿದೆ.

ದಾಳಿಂಬೆಯ ಒಣ ಸಿಪ್ಪೆಯನ್ನು ಪುಡಿಯನ್ನು ಮಾಡಿ, ಅದಕ್ಕೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಸುಕ್ಕುಗಳನ್ನು ದೂರ ಮಾಡಬಹುದು.

ಬಾಯಿ ವಾಸನೆ ಇದ್ದರೆ, ದಾಳಿಂಬೆ ಸಿಪ್ಪೆಯ ಒಣ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಕುಡಿಯಿರಿ.

ದಾಳಿಂಬೆ ಸಿಪ್ಪೆಗಳನ್ನು ಸನ್‌ ಕ್ರೀಮ್​ನಂತೆ ಅನ್ವಯಿಸಬಹುದು. ಒಣ ಸಿಪ್ಪೆಯನ್ನು ಯಾವುದೇ ಎಣ್ಣೆಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಸನ್​ ಟ್ಯಾನಿಂಗ್ ಸಮಸ್ಯೆಯನ್ನು ದೂರ ಮಾಡಬಹುದು.
First published:June 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading