Health Tips: ವಿಟಮಿನ್ ಡಿ 3 ಕೊರತೆಯ ಲಕ್ಷಣಗಳೇನು? ಇದಕ್ಕೇನು ಪರಿಹಾರ? ಇಲ್ಲಿದೆ ಮಾಹಿತಿ

ಕೆಲ ಆಹಾರಗಳ ಮೂಲಕ ವಿಟಮಿನ್ ಡಿ2 ಕೊರತೆಯನ್ನು ನೀಗಿಸಬಹುದು. ವಿಟಮಿನ್ ಡಿ 3 ಕೊರತೆಯಿಂದ ದೇಹದಲ್ಲಿ ಯಾವ ಸಮಸ್ಯೆಗಳು ಉಂಟಾಗಬಹುದು ಮತ್ತು ಅದರ ಲಕ್ಷಣಗಳು ಯಾವುವು? ಯಾವ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

vitamin

vitamin

  • Share this:
    ಆರೋಗ್ಯವಾಗಿರಲು ದೇಹಕ್ಕೆ ಹಲವು ರೀತಿಯ ಜೀವಸತ್ವಗಳು ಬೇಕಾಗುತ್ತವೆ. ಇವುಗಳಲ್ಲಿ ಪ್ರಮುಖವಾದದ್ದು ವಿಟಮಿನ್ ಡಿ 3. ಏಕೆಂದರೆ ಇದು ಇತರ ಜೀವಸತ್ವಗಳಿಗಿಂತ ಭಿನ್ನವಾಗಿ ಹಾರ್ಮೋನ್‌ನಂತೆ ಕಾರ್ಯನಿರ್ವಹಿಸುತ್ತದೆ. ಮೂತ್ರಪಿಂಡಗಳಿಂದ ಕ್ಯಾಲ್ಸಿಯಂನಂತಹ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಇದು ವಿಶೇಷ ಪಾತ್ರ ವಹಿಸುತ್ತದೆ. ವಿಟಮಿನ್ ಡಿ 3 ನಮ್ಮ ಮೂಳೆಗಳು ಮತ್ತು ಸ್ನಾಯುಗಳು ಸೇರಿದಂತೆ ದೇಹದ ಎಲ್ಲಾ ಭಾಗಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಕೊರತೆಯು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆ. ವಿಟಮಿನ್ ಡಿ 3 ಕೊರತೆಯು ಮೂಳೆ ನೋವಿಗೆ ಪ್ರಮುಖ ಕಾರಣವಾಗಿದೆ.

    ಆಧುನಿಕ ಜೀವನ ಶೈಲಿ ನಡುವೆ ಹೆಚ್ಚಿನವರಲ್ಲಿ ವಿಟಮಿನ್ ಡಿ 3 ಕೊರತೆಯು ಸಾಮಾನ್ಯವಾಗಿ ಕಂಡು ಬರುತ್ತಿವೆ. ವಿಶ್ವಾದ್ಯಂತ ಸುಮಾರು 1 ಬಿಲಿಯನ್ ಜನರಲ್ಲಿ ವಿಟಮಿನ್ ಡಿ ಮಟ್ಟ ಕಡಿಮೆಯಿದೆ ಎಂದು ವರದಿಯೊಂದು ತಿಳಿಸಿದೆ. ಹಾಗೆಯೇ ಹೆಲ್ತ್‌ಲೈನ್.ಕಾಂನಲ್ಲಿ ಪ್ರಕಟವಾದ ವರದಿಯ ಪ್ರಕಾರ, 2011 ರಲ್ಲಿ ನಡೆಸಿದ ಅಧ್ಯಯನವು ಯುಎಸ್‌ನಲ್ಲಿ 41.6% ವಯಸ್ಕರಲ್ಲಿ ವಿಟಮಿನ್ ಡಿ ಕೊರತೆಯಿದೆ ಎಂದು ತಿಳಿಸಿದ

    ಅದಾಗ್ಯೂ, ವಿಟಮಿನ್ ಡಿ 3 ಕೊರತೆಯನ್ನು ಸೂರ್ಯನ ಬೆಳಕಿನ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಬಹುದು. ಆದರೆ ಎಸಿ ಮತ್ತು ಬ್ಲೋವರ್‌ಗಳ ಯುಗದಲ್ಲಿ ಅಂತಹ ಸಾಹಸಕ್ಕೆ ಯಾರು ಮುಂದಾಗುತ್ತಿಲ್ಲ ಎಂಬುದೇ ಸತ್ಯ. ಇದರ ಹೊರತಾಗಿ ಕೆಲ ಆಹಾರಗಳ ಮೂಲಕ ವಿಟಮಿನ್ ಡಿ2 ಕೊರತೆಯನ್ನು ನೀಗಿಸಬಹುದು. ವಿಟಮಿನ್ ಡಿ 3 ಕೊರತೆಯಿಂದ ದೇಹದಲ್ಲಿ ಯಾವ ಸಮಸ್ಯೆಗಳು ಉಂಟಾಗಬಹುದು ಮತ್ತು ಅದರ ಲಕ್ಷಣಗಳು ಯಾವುವು? ಯಾವ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ನೋಡೋಣ.

    ವಿಟಮಿನ್ ಡಿ3 ಕೊರತೆಯ ಲಕ್ಷಣಗಳು:

    -ಆಗಾಗ್ಗೆ ಅನಾರೋಗ್ಯ
    -ಆರಂಭಿಕ ಆಯಾಸ,
    -ಮೂಳೆಗಳು ಮತ್ತು ಬೆನ್ನು ನೋವು,
    -ಆಸ್ಟಿಯೊಪೊರೋಸಿಸ್ (ಮೂಳೆ ಮುರಿತ) ರೋಗ,
    -ಸ್ನಾಯು ನೋವು
    -ಅನಿಯಮಿತ ಮುಟ್ಟು
    -ಖಿನ್ನತೆ
    -ಬಂಜೆತನ
    -ಕೂದಲು ಉದುರುವಿಕೆ
    -ಚರ್ಮ ಕಪ್ಪಾಗುವುದು
    -ಅಧಿಕ ತೂಕ ಅಥವಾ ಬೊಜ್ಜು.

    ವಿಟಮಿನ್ ಡಿ3 ಕೊರತೆಯಾದರೆ ಏನು ಮಾಡಬೇಕು?
    -ಹೆಚ್ಚು ಮೀನು ಅಥವಾ ಡೈರಿ ಉತ್ಪನ್ನಗಳನ್ನು ಸೇವಿಸಬೇಡಿ
    -ಸೂರ್ಯನ ಶಾಖದಿಂದ ದೂರ ಉಳಿಯಿರಿ.
    -ಹೊರಗಡೆ ಹೋಗುವಾಗ ಯಾವಾಗಲೂ ಸನ್‌ಸ್ಕ್ರೀನ್ ಬಳಸಿ
    -ಮುಂಜಾನೆಯ ಬಿಸಿಲಿಗೆ ಮೈಯೊಡ್ಡಿರಿ
    -ಟ್ಯೂನ ಮೀನುಗಳನ್ನು ಸೇವಿಸಿ.
    -ಅಣಬೆಗಳನ್ನು ತಿನ್ನಿರಿ
    -ಪಾಶ್ಚರೀಕರಿಸಿದ ಹಾಲು ಕುಡಿಯಿರಿ
    -ಪ್ರತಿದಿನ ಕಿತ್ತಳೆ ರಸವನ್ನು ಕುಡಿಯಿರಿ,
    -ಮೊಟ್ಟೆಯ ಹಳದಿ ಲೋಳೆಯನ್ನು ಸೇವಿಸಿ
    -ಧಾನ್ಯಗಳನ್ನು ಸೇವಿಸಿ
    Published by:zahir
    First published: