ಸರ್ವೇಂದ್ರಿಯಾಣಾಂ ನಯನಂ ಪ್ರದ್ನಂ ಎಂಬ ಮಾತನ್ನು ಎಲ್ಲರೂ ಕೇಳಿರುತ್ತೇವೆ. ಈ ಮಾತು ಮಾನವ ಜೀವನದಲ್ಲಿ ಕಣ್ಣುಗಳ (Eye) ಮಹತ್ವ ಎಷ್ಟು ಎಂಬುವುದನ್ನು ತೋರಿಸುತ್ತದೆ. ಇತ್ತೀಚಿಗೆ ಜನರು ವಿವಿಧ ಕಾರಣಗಳಿಂದ ತಮ್ಮ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಕಣ್ಣಿನ ಪೊರೆ (Cataract Surgery) ಅನೇಕ ಜನರನ್ನು ಕತ್ತಲೆಗೆ ದೂಡುತ್ತಿದೆ. ವಯಸ್ಕರಿಗೆ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಈ ಬಗ್ಗೆ ಈಗಿನಿಂದಲೇ ಮುಂಜಾಗ್ರತೆ ವಹಿಸದಿದ್ದರೆ, ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ. ಇದಲ್ಲದೇ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರವೂ ಕಣ್ಣುಗಳನ್ನು ಎಚ್ಚರಿಕೆಯಿಂದ ರಕ್ಷಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ (Shivamogga) ಜಿಲ್ಲೆಯ ಶಂಕರ ನೇತ್ರಾಲಯ ಆಸ್ಪತ್ರೆಯ (Sankara Eye Hospital) ಕಣ್ಣಿನ ಪೊರೆ (Cataract) ಮತ್ತು ಟ್ರಾಮಾ (Trauma) ಮುಖ್ಯ ವೈದ್ಯಾಧಿಕಾರಿ ಡಾ.ಮಹೇಶ. ಎಸ್ ಅವರು ಒಂದಷ್ಟು ಮಾಹಿತಿಯನ್ನು ನೀಡಿದ್ದಾರೆ.
ಕಣ್ಣಿನ ಶಸ್ತ್ರ ಚಿಕಿತ್ಸೆ ನಂತರದ ರೋಗಲಕ್ಷಣಗಳು:
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ಕಣ್ಣುಗಳ ಬಗ್ಗೆ ಕಾಳಜಿ ವಹಿಸುವು ಕಣ್ಣಿನ ಆರೋಗ್ಯ ಮತ್ತು ದೃಷ್ಟಿಗೆ ಬಹಳ ಮುಖ್ಯ. ಈ ಶಸ್ತ್ರಚಿಕಿತ್ಸೆಯ ನಂತರ ಅದೇ ದಿನ ನೀವು ನಾರ್ಮಲ್ ಆಗಿದ್ದರೆ ಮನೆಗೆ ಹೋಗಬಹುದು. ಇಲ್ಲದಿದ್ದರೆ ವಿಶ್ರಾಂತಿ ಪಡೆಯಬಹುದು. ಒಂದು ವೇಳೆ ಏನಾದರೂ ಸಮಸ್ಯೆ ಇದ್ದರೆ, ವೈದ್ಯರು ಆಸ್ಪತ್ರೆಯಲ್ಲಿಯೇ ಉಳಿಯಲು ಸೂಚಿಸುತ್ತಾರೆ. ಹೆಚ್ಚಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗುತ್ತದೆ. ಮನೆಗೆ ಹೋಗುವಾಗ ಪ್ಯಾಡ್ ಮತ್ತು ಪ್ಲಾಸ್ಟಿಕ್ ಶೀಲ್ಡ್ ಅನ್ನು ಆಪರೇಟೆಡ್ ಕಣ್ಣಿನ ಮೇಲೆ ಇರಿಸಲು ಮತ್ತು ಒಂದು ದಿನದ ನಂತರ ಅದನ್ನು ತೆಗೆದುಹಾಕಲು ಸಲಹೆ ನೀಡಲಾಗುತ್ತದೆ.
ಕೆಲವು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಕಣ್ಣು ಸಾಮಾನ್ಯವಾಗಿದೆ ಎಂದು ಅನಿಸಿದರೂ, ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕೆಲವು ದಿನಗಳನ್ನು ತೆಗೆದುಕೊಳ್ಳಬಹುದು. ಹಾಗಾಗಿ ವೈದ್ಯರು ನೀಡುವ ಈ ಸಲಹೆಯನ್ನು ಪಾಲಿಸಿದರೆ ಗಾಬರಿಯಾಗುವ ಅಗತ್ಯವಿಲ್ಲ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ಕಣ್ಣಿನಲ್ಲಿ ನೀರು ಬರುವುದು, ದೃಷ್ಟಿ ಮಂದವಾಗುವುದು, ಎರಡು ದೃಷ್ಟಿ ಮತ್ತು ಕೆಂಪು ಕಣ್ಣು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಆದರೆ ಈ ಪರಿಣಾಮಗಳು ಕೆಲವು ದಿನಗಳಿಂದ ವಾರಗಳಲ್ಲಿ ಕಣ್ಮರೆಯಾಗುತ್ತವೆ.
ಈ ಸಮಸ್ಯೆ ಎದುರಾದರೆ ವೈದ್ಯರನ್ನು ಸಂಪರ್ಕಿಸಬೇಕು:
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ನಿಮ್ಮ ದೃಷ್ಟಿ ಕಡಿಮೆಯಾಗಿದೆ ಎಂದು ನಿಮಗೆ ಅನಿಸಿದರೆ ಅಥವಾ ನಿಮಗೆ ಕಣ್ಣಿನ ನೋವು ಹೆಚ್ಚಾದರೆ ಮತ್ತು ನಿಮ್ಮ ಕಣ್ಣು ಹೆಚ್ಚು ಕೆಂಪಾಗುತ್ತಿದೆ ಎಂದು ನೀವು ಭಾವಿಸಿದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
ಕೆಲವು ವಾರಗಳವರೆಗೂ ಈ ಟಿಪ್ಸ್ ಫಾಲೋ ಮಾಡಿ:
ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಂತರ ಹೀಗೆ ಮಾಡಬೇಡಿ:
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ನಂತರ ಇತರ ಮುನ್ನೆಚ್ಚರಿಕೆಗಳು:
ಮೊದಲು ನೀರನ್ನು ಕುದಿಸಿ ತಣ್ಣಗಾಗಲು ಬಿಡಿ. ನಂತರ ನಿಮ್ಮ ಕೈಗಳನ್ನು ತೊಳೆಯಿರಿ. ಆ ನೀರಿನಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ. ಕಣ್ಣಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ನಿಧಾನವಾಗಿ ಒರೆಸಿ. ಕಣ್ಣುಗಳ ಒಳಗೆ ಒರೆಸಬೇಡಿ. ಕಣ್ಣನ್ನು ನೀರಿನಿಂದ ತೊಳೆಯಬೇಡಿ. ಕಣ್ಣನ್ನು ಒತ್ತಬೇಡಿ ಅಥವಾ ಉಜ್ಜಬೇಡಿ. ಮೊದಲ 2 ವಾರಗಳಲ್ಲಿ ಕಣ್ಣನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಬೇಕು. ಏಕೆಂದರೆ ಕಣ್ಣಿನ ಡ್ರಾಪ್ಸ್ ಅಂಟಿಕೊಳ್ಳುತ್ತವೆ. ವಾಸ್ತವವಾಗಿ ಹೇಳಬೇಕೆಂದರೆ ಹೆಚ್ಚಿನ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ. ನೀವು ವೈದ್ಯರ ಸೂಚನೆಗಳನ್ನು ಅನುಸರಿಸಿದರೆ, ಬೇಗನೆ ಚೇತರಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ