ಇಂದಿನ ದಿನಗಳಲ್ಲಿ ಆಲ್ಕೋಹಾಲ್ (Alcohol) ಎಂಬುವುದು ಕಾಮನ್ ಆಗಿದೆ. ಕುಡಿದರೆ ಎಲ್ಲಾ ನೋವನ್ನು ಮರೆಯಬಹುದು, ಕುಡಿದರೆ ಇಡೀ ದಿನದ ಸುಸ್ತು, ದೇಹದ ನೋವು (Body Pain) ದೂರವಾಗುತ್ತದೆ, ಮಾನಸಿಕ ನೋವು ಕಡಿಮೆಯಾಗುತ್ತದೆ, ಎಲ್ಲಾ ದುಃಖ ಮರೆಯಬಹುದು ಎಂದುಕೊಳ್ಳುವವರೇ ಹೆಚ್ಚು. ಆದರೆ ಕುಡಿಯುವುದರಲ್ಲೂ ವಿವಿಧತೆಯಿದೆ. ಅದರಲ್ಲಿ ಒಂದು ಬಿಂಜ್ ಡ್ರಿಂಕ್ಸ್ (Binge Drinks) . ಅಂದ ಹಾಗೇ ಈ ಬಿಂಜ್ ಡ್ರಿಂಕ್ಸ್ ಕುಡಿಯುವುದು ಹೃದಯದ ಆರೋಗ್ಯಕ್ಕೆ (Heart Health) ಒಳ್ಳೆಯದು ಎಂಬುದು ಹಲವರ ನಂಬಿಕೆ. ಆದರೆ ಆಲ್ಕೋಹಾಲ್ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಉಂಟು ಮಾಡುತ್ತದೆ ಅಂತಾರೆ ವೈದ್ಯರು. ದೀರ್ಘಕಾಲದ ಕುಡಿತದ ಚಟ ಹಾಗೂ ಮಿತಿ ಮೀರಿದ ಆಲ್ಕೋಹಾಲ್ ಸೇವನೆಯು ಹೃದಯದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ವೈದ್ಯರ ಅಭಿಪ್ರಾಯ.
ಅತಿಯಾಗಿ ಮದ್ಯ ಸೇವಿಸುವುದು ಹೃದಯದ ಆರೋಗ್ಯಕ್ಕೆ ತರುತ್ತದೆ ಕುತ್ತು!
ಅತಿಯಾಗಿ ಮದ್ಯ ಸೇವಿಸುವ ಚಟವು ಹೃದಯದ ಆರೋಗ್ಯ ಹಾಳು ಮಾಡುತ್ತದೆ. ಜೊತೆಗೆ ಇದು ಆಲ್ಕೊಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಹೆಚ್ಚಿಸಬಹುದು ಎಂಬುದು ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಲೇಖಕರು ಹಾಗೂ ಹಿರಿಯ ಸಲಹೆಗಾರರಾದ ಡಾ. ಪ್ರದೀಪ್ ಕುಮಾರ್ ಡಿ ಅವರ ಅಭಿಪ್ರಾಯವಾಗಿದೆ. ಹಾಗಿದ್ದರೆ ನಾವಿಲ್ಲಿ ಆಲ್ಕೋಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಎಂದರೇನು? ಇದಕ್ಕೆ ಕಾರಣಗಳು, ರೋಗ ಲಕ್ಷಣಗಳು, ಸಂಕೇತಗಳು ಯಾವುವು ಎಂಬ ಬಗ್ಗೆ ತಿಳಿಯೋಣ.
ಆಲ್ಕೊಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಎಂದರೇನು?
ಆಲ್ಕೋಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಎಂಬುದು ದೀರ್ಘಕಾಲದ ಹಾಗೂ ಮಿತಿ ಮೀರಿದ ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಹೃದಯ ಕಾಯಿಲೆಯಾಗಿದೆ. ಇದು ಕುಹರದ ವಿಸ್ತರಣೆ ಮತ್ತು ದುರ್ಬಲತೆ ಉಂಟು ಮಾಡುತ್ತದೆ.
ಆಲ್ಕೋಹಾಲ್ ಅತಿಯಾದ ಸೇವನೆಯು ಹೃದಯ ವೈಫಲ್ಯಕ್ಕೆ ಕಾರಣವಾದೀತು!
ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಲೇಖಕರು ಹಾಗೂ ಹಿರಿಯ ಸಲಹೆಗಾರರಾದ ಡಾ. ಪ್ರದೀಪ್ ಕುಮಾರ್ ಡಿ ಅವರ ಪ್ರಕಾರ, ಆಲ್ಕೋಹಾಲ್ ನ ಅತಿಯಾದ ಸೇವನೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ.
ಇದು ಹೃದಯ ಸ್ನಾಯುಗಳು ದುರ್ಬಲವಾಗಲು ಕಾರಣವಾಗುತ್ತದೆ ಎಂದಿದ್ದಾರೆ. ಹಾಗೆಯೇ ಹೃದಯವು ಸರಿಯಾಗಿ ರಕ್ತ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೃದಯವು ವಿಸ್ತರಿಸಲು ಮತ್ತು ಹೆಚ್ಚು ರಕ್ತವನ್ನು ಹಿಡಿದಿಡಲು ಹಾಗೂ ರಕ್ತವು ತೆಳುವಾಗಲು ಕಾರಣವಾಗುತ್ತದೆ.
ಅತಿಯಾದ ಮದ್ಯ ಸೇವನೆಯು ರಕ್ತ ಮತ್ತು ಹೃದಯ ಸ್ನಾಯುಗಳ ಕಾರ್ಯ ನಿರ್ವಹಣೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಒಂದು ವೇಳೆ ಅಧಿಕ ರಕ್ತದೊತ್ತಡ ಸಮಸ್ಯೆಗೆ ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೇ ಹೋದರೆ ಅದು ಹೃದಯ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ದೀರ್ಘಕಾಲದ ಮದ್ಯ ಸೇವನೆಯು ಹೃದಯ ಸ್ನಾಯುವಿನ ಕಾಯಿಲೆ ಬೆಳೆಯಲು ಕಾರಣವಾಗುತ್ತದೆ. ಹೃದಯದಲ್ಲಿ ಕಾರ್ಡಿಯೊಮಿಯೋಪತಿ ಸಮಸ್ಯೆ, ಹೃದಯ ಸ್ನಾಯುವಿನ ಕಾಯಿಲೆ ಬೆಳವಣಿಗೆಯಾಗುತ್ತದೆ. ಹೀಗಾಗಿ ಹೃದಯದ ಸ್ನಾಯುಗಳು ಅಸಹಜವಾಗಿ ಹಿಗ್ಗುತ್ತವೆ.
ಈ ಕಾರ್ಡಿಯೊಮಿಯೋಪತಿ ಕಾಯಿಲೆಯನ್ನು ದೀರ್ಘಕಾಲದವರೆಗೆ ಪತ್ತೆ ಹಚ್ಚದೇ ಬಿಟ್ಟರೆ, ಸೂಕ್ತ ಚಿಕಿತ್ಸೆ ಪಡೆಯದೇ ಹೋದರೆ ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚು. ಕಾರ್ಡಿಯೊಮಿಯೋಪತಿ ಸ್ಥಿತಿಯು ಮಾರಣಾಂತಿಕವಾಗುತ್ತದೆ.
ಹಾಗೂ ಅನಿಯಮಿತ ಹೃದಯ ಬಡಿತದ ಅಪಾಯ ಹೆಚ್ಚಿಸುತ್ತದೆ. ಜೊತೆಗೆ ಹೃದಯಾಘಾತಕ್ಕೂ ಕಾರಣವಾಗುತ್ತದೆ. ಸಾಮಾನ್ಯವಾಗಿ ಕಾರ್ಡಿಯೊಮಿಯೋಪತಿ ಸ್ಥಿತಿಯನ್ನು 35 ರಿಂದ 50 ವಯಸ್ಸಿನ ಜನರಲ್ಲಿ ರೋಗ ನಿರ್ಣಯ ಮಾಡಲಾಗುತ್ತದೆ. ಹಾಗೂ ಮಹಿಳೆಯರಿಗಿಂತ ಪುರುಷರೇ ಈ ಕಾಯಿಲೆಗೆ ಹೆಚ್ಚು ತುತ್ತಾಗುತ್ತಾರೆ.
ಯಾರಿಗೆ ಆಲ್ಕೊಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಅಪಾಯ ಹೆಚ್ಚು?
ಆಲ್ಕೊಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಅಪಾಯವು, 5 ರಿಂದ 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಅಂದರೆ ದೀರ್ಘಕಾಲ ಆಲ್ಕೋಹಾಲ್ ಸೇವಿಸುವ ಜನರಲ್ಲಿ ಇದು ಹೆಚ್ಚು ಅಪಾಯವನ್ನುಂಟು ಮಾಡುತ್ತದೆ.
ವಾರದಲ್ಲಿ 14 ಬಾರಿ ಡ್ರಿಂಕ್ ಮಾಡುವವರು ಅಥವಾ ದಿನಕ್ಕೆ 4 ಬಾರಿ ಡ್ರಿಂಕ್ ಮಾಡುವ ಪುರುಷರಲ್ಲಿ ಆಲ್ಕೊಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಅಪಾಯವಿದೆ.
ದಿನಕ್ಕೆ 3 ಕ್ಕಿಂತ ಹೆಚ್ಚು ಬಾರಿ ಡ್ರಿಂಕ್ ಅಥವಾ ವಾರಕ್ಕೆ 7 ಬಾರಿ ಡ್ರಿಂಕ್ ಮಾಡುವ ಮಹಿಳೆಯರು ಸಹ ಆಲ್ಕೊಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು.
ಆಲ್ಕೋಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಸಂಕೇತಗಳು ಮತ್ತು ರೋಗ ಲಕ್ಷಣಗಳು
ಅಂದ ಹಾಗೇ, ಆಲ್ಕೋಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಕಾಯಿಲೆಯು ಮೊದಲ ಹಂತದಲ್ಲಿದ್ದಾಗ ಯಾವುದೇ ಸಂಕೇತಗಳನ್ನು ನೀಡುವುದಿಲ್ಲ. ಇದು ಕೊನೆಯ ಹಂತ ತಲುಪುವ ಸಮಯದವರೆಗೆ ಯಾವುದೇ ಸಂಕೇತಗಳನ್ನು ನೀಡುವುದಿಲ್ಲ. ಕೊನೆಯ ಹಂತದಲ್ಲಿ ರೋಗಿಯಲ್ಲಿ ಈ ರೋಗ ಲಕ್ಷಣಗಳು ಗೋಚರಿಸುತ್ತವೆ.
ಕಾರ್ಡಿಯೊಮಿಯೋಪತಿ ಕಾಯಿಲೆಗೆ ನಿಖರ ಕಾರಣಗಳು ಯಾವವು ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಅದಾಗ್ಯೂ ಆಲ್ಕೊಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಕಾಯಿಲೆ ಉಂಟು ಮಾಡುವ ಕೆಲವು ಕಾರಣಗಳನ್ನು ಗುರುತಿಸಬಹುದು ಎಂದು ವೈದ್ಯರುಸ ಹೇಳಿದ್ದಾರೆ.
ಆಲ್ಕೋಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಗುಣಪಡಿಸುವ ಮಾರ್ಗಗಳು
ಕಾರ್ಡಿಯೊಮಿಯೋಪತಿ ಕಾಯಿಲೆಗೆ ಚಿಕಿತ್ಸೆ ನೀಡುವ ಮೊದಲು ರೋಗಿಯು ಯಾವ ಕಾಯಿಲೆಯಿಂದ ಬಳಲುತ್ತಿದ್ದಾನೆ ಮತ್ತು ಯಾವ ಸ್ಥಿತಿಯಲ್ಲಿದ್ದಾನೆ ಎಂದು ಮೊದಲು ತಿಳಿದುಕೊಳ್ಳಬೇಕಾಗುತ್ತದೆ.
- ಹಿಗ್ಗಿದ ಕಾರ್ಡಿಯೊಮಿಯೋಪತಿ ಕಾಯಿಲೆಯಿರುವ ರೋಗಿಗೆ ವೈದ್ಯರು ಹೃದಯದ ಕಾರ್ಯ ಸುಧಾರಿಸಲು ಔಷಧ ನೀಡುತ್ತಾರೆ. ಈ ಮೂಲಕ ಕಾಯಿಲೆ ಸ್ಥಿತಿಯನ್ನು ಗುಣಪಡಿಸಬಹುದು. ಕಾಯಿಲೆ ತೀವ್ರವಾಗಿದ್ದರೆ ಶಸ್ತ್ರಚಿಕಿತ್ಸೆಯ ಕಸಿ ಮಾಡಲು ಸೂಚಿಸಲಾಗುತ್ತದೆ.
- ಕಾರ್ಡಿಯೊಮಿಯೋಪತಿ ಕಾಯಿಲೆಗೆ ಚಿಕಿತ್ಸೆ ನೀಡುವ ಮೊದಲು ವೈದ್ಯರು ನಿಮಗೆ ರಕ್ತದೊತ್ತಡ ಮಟ್ಟ ಎಷ್ಟಿದೆ ಎಂದು ತಿಳಿದುಕೊಳ್ಳುತ್ತಾರೆ.
- ಕೆಲವು ಔಷಧ ಸೇವನೆ ಹಾಗೂ ಅಧಿಕ ರಕ್ತದೊತ್ತಡದ ಮಟ್ಟ ಎಷ್ಟಿದೆ ಎಂದು ತಿಳಿದುಕೊಳ್ಳಲಾಗುತ್ತದೆ.
- ಉಪ್ಪು ಮತ್ತು ನೀರಿನ ಸೇವನೆ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಕಂಡು ಹಿಡಿಯಲಾಗುತ್ತದೆ. ಜೊತೆಗೆ ರೋಗಿಯ ತೂಕ ಎಷ್ಟಿದೆ ಎಂದು ಮೇಲ್ವಿಚಾರಣೆ ಮಾಡಲಾಗುತ್ತದೆ.
- ಕಾರ್ಡಿಯೊಮಿಯೋಪತಿ ತೀವ್ರತರ ಪ್ರಕರಣದಲ್ಲಿ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸಸ್ ಅಂದ್ರೆ VAD ಅಥವಾ ಹೃದಯ ಕಸಿ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ.
ಆಲ್ಕೋಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಕಾಯಿಲೆ ಕಡಿಮೆ ಮಾಡಲು ಅಥವಾ ನಿಯಂತ್ರಿಸಲು ಏನು ಮಾಡಬೇಕು?
ಆಲ್ಕೋಹಾಲ್ಯುಕ್ತ ಕಾರ್ಡಿಯೊಮಿಯೋಪತಿ ಕಾಯಿಲೆ ಅಪಾಯ ಕಡಿಮೆ ಮಾಡಲು ನೀವು ಕೆಲವು ನಿಯಮಗಳನ್ನು ಪಾಲಿಸಬಹುದು. ಈ ಮೂಲಕ ನೀವು ಕಾಯಿಲೆ ನಿಯಂತ್ರಿಸಬಹುದು.
ಕೆಲವು ಅಧ್ಯಯನಗಳು ಬಿಂಜ್ ಡ್ರಿಂಕಿಂಗ್ ಆರೋಗ್ಯಕ್ಕೆ ಕೆಲವು ಪ್ರಯೋಜನ ನೀಡುತ್ತವೆ ಎಂದು ಹೇಳುತ್ತವೆ. ಇನ್ನು ಕೆಲವು ಅಧ್ಯಯನಗಳು ಸಾಂದರ್ಭಿಕವಾಗಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವ್ಯಾಖ್ಯಾನಿಸಿವೆ. ಆದರೆ ಯಾವುದೇ ಕಾರಣಕ್ಕೂ ಆಲ್ಕೋಹಾಲ್ ಸೇವನೆ ಒಳ್ಳೆಯದಲ್ಲ. ಸಾಧ್ಯವಾದಷ್ಟು ಆಲ್ಕೋಹಾಲ್ ಸೇವನೆ ತಪ್ಪಿಸಿ.
ಹೃದ್ರೋಗದ ಅಪಾಯ ಕಡಿಮೆ ಮಾಡಲು ಮದ್ಯಪಾನ ತ್ಯಜಿಸಿ. ಧೂಮಪಾನ ತ್ಯಜಿಸಿ. ಯೋಗ ಹಾಗೂ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಆಲ್ಕೋಹಾಲ್ ಸೇವನೆಯು ಹೃದಯಕ್ಕೆ ಪ್ರಯೋಜನ ನೀಡುತ್ತದೆ ಎಂದು ಹೇಳಿದರೂ ಸಹ ಇದು ಕ್ಯಾನ್ಸರ್, ಯಕೃತ್ತಿನ ಕಾಯಿಲೆ ಅಪಾಯ ತಂದೊಡ್ಡುತ್ತದೆ.
ಇದನ್ನೂ ಓದಿ: ಈ 5 ಲಕ್ಷಣ ಕಾಣಿಸಿಕೊಂಡ್ರೆ ತಪ್ಪದೇ ಕಣ್ಣಿನ ಪರೀಕ್ಷೆ ಮಾಡಿಸಿ, ವೈದ್ಯರೇ ಕೊಟ್ಟ ಸಲಹೆ ಇದು
ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲು ಹಾಗೂ ಹೃದ್ರೋಗದ ಅಪಾಯ ಕಡಿಮೆ ಮಾಡಲು ನಿಯಮಿತವಾಗಿ ವ್ಯಾಯಾಮ ಮಾಡಿ, ಆರೋಗ್ಯಕರ ಆಹಾ ಸೇವನೆಯಂತಹ ಸುರಕ್ಷಿತ ಮಾರ್ಗಗಳನ್ನು ಫಾಲೋ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ