ಸಿಟ್ರಸ್ (Citrus)ಹಣ್ಣುಗಳೆಂದು ಕರೆಯಲಾಗುವ ಹುಳಿ ಹಣ್ಣುಗಳು ಪೌಷ್ಠಿಕಾಂಶದ ಶಕ್ತಿ ಕೇಂದ್ರಗಳೆಂದು ಕರೆಯಿಸಿಕೊಳ್ಳುತ್ತವೆ. ಈ ಸಿಟ್ರಸ್ ಹಣ್ಣುಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧವಾಗಿವೆ. ಇದು ವಿಟಮಿನ್ ಸಿ, ಜೀವಕೋಶದ ಹಾನಿಯಿಂದ ರಕ್ಷಿಸುವ ಉತ್ಕರ್ಷಣ ನಿರೋಧಕ ಗುಣ ಸೇರಿದಂತೆ ವಿವಿಧ ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಅಂದಹಾಗೆ ನೀರಿನಲ್ಲಿ ಕರಗುವ ವಿಟಮಿನ್ ಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಬ್ಬಿಣದ (Iron) ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಇದು ಅಂಗಾಂಶಗಳ ಬೆಳವಣಿಗೆಗೆ ಮುಖ್ಯವಾಗಿದೆ. ನಿಂಬೆಹಣ್ಣು, ಕಿತ್ತಳೆಹಣ್ಣು, ದ್ರಾಕ್ಷಿ ಮುಂತಾದ ಹಣ್ಣುಗಳಲ್ಲಿ ಸಿಟ್ರಸ್ ಅಂಶ ಹೇರಳವಾಗಿರುತ್ತದೆ. ಇವು ನಮ್ಮ ದೇಹದಲ್ಲಿ ನಡೆಯುವ ಅನೇಕ ಚಯಾಪಚಯ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತವೆ. ಹಾಗಿದ್ರೆ ಈ ಹುಳಿ ಹಣ್ಣುಗಳನ್ನು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಅನ್ನೋದನ್ನು ತಿಳಿದುಕೊಳ್ಳೋಣ.
* ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆ ನಿಲ್ಲಿಸುತ್ತದೆ: ಸಿಟ್ರಸ್ ಹಣ್ಣುಗಳು ಸಿಟ್ರಿಕ್ ಆಸಿಡ್ ಎಂಬ ಹುಳಿ ಪದಾರ್ಥವನ್ನು ಹೊಂದಿರುತ್ತವೆ. ಇದನ್ನು ನೈಸರ್ಗಿಕ ಸಂರಕ್ಷಕವಾಗಿಯೂ ಬಳಸಲಾಗುತ್ತದೆ. ಇದು ಮೂತ್ರದ pH ಅನ್ನು ಬದಲಾಯಿಸಬಹುದು. ಹಾಗೆಯೇ ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಯನ್ನು ನಿಲ್ಲಿಸಲೂ ಸಹಾಯಕವಾಗಿದೆ.
* ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ: ಈ ಹಣ್ಣುಗಳು ಸಹ ಸಾಕಷ್ಟು ಫೈಬರ್ ಅನ್ನು ಹೊಂದಿರುತ್ತವೆ. ಇದು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಸಂರಕ್ಷಿಸುತ್ತದೆ.
ಅಲ್ಲದೇ ಮಲಬದ್ಧತೆ, ಕರುಳಿನ ಅನಾರೋಗ್ಯ, ಮಧುಮೇಹ, ಸ್ಥೂಲಕಾಯತೆ ಮತ್ತು ಹೃದ್ರೋಗ ಸೇರಿದಂತೆ ಹಲವು ಸಮಸ್ಯೆಗಳಿಂದ ರಕ್ಷಿಸುತ್ತದೆ.
ಇದರಲ್ಲಿರುವ ಫೈಬರ್ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ. ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ದೇಹದ ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
* ಬಿ ಕಾಂಪ್ಲೆಕ್ಸ್ ಹೇರಳವಾಗಿದೆ: ಈ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿದೆ. ಇದರಿಂದ ಆಯಾಸ, ಸ್ನಾಯು ದೌರ್ಬಲ್ಯ, ಬಾಯಿ ಹುಣ್ಣು, ದೃಷ್ಟಿಗೆ ತೊಂದರೆ, ಜ್ಞಾಪಕಶಕ್ತಿ ಮತ್ತು ತಿಳುವಳಿಕೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಇನ್ನು, ಖಿನ್ನತೆಯು ಬಿ ಕಾಂಪ್ಲೆಕ್ಸ್ ಕೊರತೆಯ ಲಕ್ಷಣಗಳಾಗಿವೆ.
* ರಕ್ತದೊತ್ತಡ ನಿಯಂತ್ರಿಸುತ್ತದೆ: ಪೊಟ್ಯಾಸಿಯಮ್, ಸ್ನಾಯುವಿನ ಸಂಕೋಚನ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುವ ಖನಿಜವು ಹುಳಿ ಹಣ್ಣುಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಎಷ್ಟೇ ಎಚ್ಚರಿಕೆ ತಗೊಂಡ್ರು ಬ್ಲೇಡ್ನಿಂದ ಗಾಯವಾಯ್ತಾ? ಈ ಟಿಪ್ಸ್ ಫಾಲೋ ಮಾಡಿ
* ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ: ಆರೋಗ್ಯಕರ ಚರ್ಮವನ್ನು ಬಯಸುವವರಿಗೆ ಸಿಟ್ರಸ್ ಹಣ್ಣುಗಳು ಬೆಸ್ಟ್. ಏಕೆಂದರೆ ಇದು ಸೆಲ್ಯುಲಾರ್ ಅವನತಿಯಿಂದ ರಕ್ಷಿಸುತ್ತದೆ. ಆಂಟಿಏಜಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಮೃದುವಾದ, ಹೊಳೆಯುವ ಚರ್ಮವನ್ನು ನೀಡುತ್ತದೆಯಲ್ಲದೇ ಚರ್ಮ ಮತ್ತು ಕೂದಲಿಗೆ ಅತ್ಯುತ್ತಮವಾಗಿದೆ.
* ಸ್ವತಂತ್ರ ರಾಡಿಕಲ್‌ಗಳನ್ನು ತೊಡೆದು ಹಾಕುತ್ತದೆ: ದೇಹದ ಪ್ರತಿಯೊಂದು ಜೀವಕೋಶವು ಡಿಎನ್ಎಯನ್ನು ಹೊಂದಿರುತ್ತದೆ. ಇದು ಸ್ವತಂತ್ರ ರಾಡಿಕಲ್ಗಳಿಗೆ ಒಡ್ಡಿಕೊಂಡಾಗ ಹಾನಿ ಅಥವಾ ರೂಪಾಂತರಕ್ಕೆ ಒಳಗಾಗುತ್ತದೆ.
ಆನುವಂಶಿಕ ರೂಪಾಂತರಗಳು ಮಾರಣಾಂತಿಕ ಕೋಶಗಳನ್ನು ವೃದ್ಧಿಸಲು ಕಾರಣವಾಗಬಹುದು. ವಿಟಮಿನ್ ಸಿ ಇಂಥ ಸ್ವತಂತ್ರ ರಾಡಿಕಲ್ಗಳನ್ನು ತೊಡೆದುಹಾಕುವ ಮೂಲಕ ಈ ರೂಪಾಂತರವನ್ನು ನಿಲ್ಲಿಸಬಹುದು.
ಇನ್ನು, ಸಿಟ್ರಸ್ ಹಣ್ಣುಗಳ ಬೀಜಗಳನ್ನು ಸಿಟ್ರಸ್ ಸಾರಭೂತ ತೈಲವನ್ನು ಉತ್ಪಾದಿಸಲು ಬಳಸಲಾಗುತ್ತದೆ. ಈ ಎಣ್ಣೆಯ ಹನಿಗಳನ್ನು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಗಳ ಜೊತೆ ಬೆರೆಸಿದಾಗ ನಮ್ಮ ಚರ್ಮವು ತೇವವಾಗಿರುತ್ತದೆ. ಹಾಗೆಯೇ ಇದು ಕೂದಲಿನ ಬೆಳವಣಿಗೆಯು ಸುಧಾರಿಸುತ್ತದೆ.
ಸಿಟ್ರಸ್ ಹಣ್ಣುಗಳನ್ನು ಮಿತವಾಗಿ ಸೇವಿಸಿ
ಆದರೆ ಸಿಟ್ರಸ್ ಹಣ್ಣುಗಳು ಪೌಷ್ಟಿಕ, ವಿಟಮಿನ್-ಭರಿತ ಆಹಾರವಾಗಿದೆ. ಆದರೆ ಎಲ್ಲವೂ ಮಿತವಾಗಿರಬೇಕು ಎಂದು ನೆನಪಿಡಿ. ಈ ಹುಳಿ ಹಣ್ಣುಗಳನ್ನೂ ಮಿತವಾಗಿ ಸೇವಿಸುವ ಅಗತ್ಯವಿದೆ.
ಏಕೆಂದರೆ ಅವು ಬಹಳಷ್ಟು ಆಮ್ಲವನ್ನು ಹೊಂದಿರುತ್ತವೆ. ಇದು ಹೊಟ್ಟೆಯನ್ನು ಕೆರಳಿಸಬಹುದು. ಅದರಲ್ಲೂ ವಿಶೇಷವಾಗಿ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD) ಹೊಂದಿರುವ ಜನರಲ್ಲಿ ಹೊಟ್ಟೆಯ ಸಮಸ್ಯೆ ಉಂಟುಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ