ಒಂದು ಹೆಣ್ಣಿಗೆ ಮಕ್ಕಳಾದ್ರೆ ಒಂದು ಹೆಣ್ಣಿನ ಜೀವನ ಪರಿಪೂರ್ಣ ಎಂದು ಹೇಳಲಾಗುತ್ತೆ. ಅಂತೆಯೇ ಒಂದು ಹೆಣ್ಣು ತಾಯಿಯಾದ್ರೆ ತಮ್ಮನ್ನು ತಾವು ಹೇಗೆ ನೋಡಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಭ್ರೂಣದಲ್ಲಿರುವ (Fetal) ಮಗುವಿನ ಆರೈಕೆ ಜಾಗರೂಕತೆಯಿಂದ ಮಾಡಬೇಕು. ಭ್ರೂಣ ಶಾಸ್ತ್ರವು (Perinatology) ಭ್ರೂಣ ಆರೈಕೆ ಮತ್ತು ಸಂಕೀರ್ಣವಾದ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಸಂಬಂಧಿಸಿದ ಪ್ರಸೂತಿ ಶಾಸ್ತ್ರದ ಉಪ-ವಿಭಾಗವಾಗಿದೆ. ಪೆರಿನಾಟಾಲಜಿಯನ್ನು (ಭ್ರೂಣ ಶಾಸ್ತ್ರ) ತಾಯಿ (Mother) ಭ್ರೂಣದ ಔಷಧೀಯ ಶಾಸ್ತ್ರ ಎಂದೂ ಕರೆಯಲಾಗುತ್ತದೆ. ಭ್ರೂಣ ಶಾಸ್ತ್ರದ ಬಗ್ಗೆ ಗಮನ ಕೊಟ್ಟರೆ, ನಿಮ್ಮ ಮಗುವೂ (Child) ಸುರಕ್ಷಿತವಾಗಿರುತ್ತೆ.
ಭ್ರೂಣ ಆರೈಕೆ ವಿಭಾಗ ಏನನ್ನು ಒಳಗೊಂಡಿರುತ್ತೆ?
-ಹೆರಿಗೆಯ ನಂತರದ ಅಪಾಯಗಳು ಸೇರಿದಂತೆ ಭ್ರೂಣದ ಬೆಳವಣಿಗೆ ಮತ್ತು ಯೋಗಕ್ಷೇಮದ ಮೌಲ್ಯಮಾಪನ ಮತ್ತು ಮೇಲ್ವಿಚಾರಣೆ
-ಭ್ರೂಣದ ಆರೋಗ್ಯ ನಿರ್ವಹಣೆ
-ಭ್ರೂಣದ ಕಾಯಿಲೆಗಳು ಮತ್ತು ಅಸಹಜತೆಗಳ ರೋಗನಿರ್ಣಯಗಳನ್ನು ಒಳಗೊಂಡಿರುತ್ತೆ.
ಗರ್ಭಾವಸ್ಥೆ ವೇಳೆ ತಾಯಿ ಭ್ರೂಣಕ್ಕೆ ನೀಡುವ ಪರಿಸರದಿಂದ ವಿಧಿಸಲಾದ ಮಾನದಂಡಗಳನ್ನು ಆಧರಿಸಿ ಮೇಲೆ ಹೇಳಲಾದ ಆರೈಕೆ ಮಾಡಲಾಗುತ್ತದೆ. ಮೇಲಿನ ಪ್ರತಿಯೊಂದು ಅಂಶಗಳ ಪ್ರಾಮುಖ್ಯತೆಯು ತಾಯಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಏಕೆಂದರೆ ಆಕೆಯು ಭ್ರೂಣವನ್ನು ತನ್ನ ಒಡಲಿನಲ್ಲಿ ಹೊಂದಿರುತ್ತಾಳೆ.
ಭ್ರೂಣ ಆರೈಕೆಯ ಅಗತ್ಯ ಸೇವೆಗಳು
ಗರ್ಭಧಾರಣೆಯಿಂದ ಹೆರಿಗೆಯವರೆಗೆ ಅಲ್ಟ್ರಾಸೌಂಡ್ 2Dಮತ್ತು3D ಎರಡೂ ಸ್ಕ್ಯಾನ್ ಮಾಡಲಾಗುತ್ತದೆ. ಗರ್ಭಧಾರಣೆಯ ಪ್ರಾರಂಭಿಕ ಸ್ಕ್ಯಾನ್ ಭ್ರೂಣ ಅಥವಾ ಗರ್ಭಾಶಯದೊಳಗೆ ಅಥವಾ ಹೊರಗೆ ಗರ್ಭಾವಸ್ಥೆಯ ಸ್ಥಾನವನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತೆ. ಗರ್ಭಾಶಯದ ಹೊರಗೆ ಇರುವ ಗರ್ಭಧಾರಣೆಯನ್ನು ಮೊದಲೇ ಗುರುತಿಸದಿದ್ದರೆ ಮತ್ತು ತೆಗೆದು ಹಾಕದಿದ್ದರೆ ತಾಯಂದಿರ ಜೀವಕ್ಕೆ ದೊಡ್ಡ ಅಪಾಯವಿರುತ್ತೆ.
5 ನೇ ತಿಂಗಳ ಸ್ಕ್ಯಾನ್
ಮಗುವಿನ ಬೆಳವಣಿಗೆ ಸರಿಯಾಗಿ ಆಗುತ್ತಿದೆಯೇ ಎಂದು ತಿಳಿದುಕೊಳ್ಳಲು 5ನೇ ತಿಂಗಳಿನಲ್ಲಿ ಸ್ಕ್ಯಾನ್ ಮಾಡಲಾಗುತ್ತೆ. ಭ್ರೂಣದಲ್ಲಿ ರಚನಾತ್ಮಕ ಬೆಳವಣಿಗೆ ನೋಡಲು ಪ್ರಮುಖ ಸ್ಕ್ಯಾನ್. ಇದನ್ನು ಎಲ್ಲಾ ಗರ್ಭಿಣಿಯರು ಕಡ್ಡಾಯವಾಗಿ ಮಾಡಿಸಲೇಬೇಕು. ಯಾವುದೇ ರಚನಾತ್ಮಕ ಅಸಹಜತೆ ಅನುಮಾನ ಬಂದರೆ, ಮಗು ಬೇಕೋ ಬೇಡವೋ ಎಂದು ದಂಪತಿ ನಿರ್ಧರಿಸಬಹುದು.
ಡಾ.ಚಿತ್ರಾ ಗಣೇಶ್ ಅವರು ಹೇಳುವುದೇನು?
ಮಗು ಬೆಳವಣಿಗೆಯ ಹಲವು ಪರೀಕ್ಷೆಗಳು ಅಗತ್ಯವಾಗಿರುತ್ತವೆ. ಅವುಗಳಲ್ಲಿ,
-ಭ್ರೂಣದ ಎಕೋ ಕಾರ್ಡಿಯೋಗ್ರಫಿ
-ಬೆಳವಣಿಗೆಯ ಮೌಲ್ಯಮಾಪನ
-ರಕ್ತದ ಹರಿವಿನ ಮೌಲ್ಯಮಾಪನ
-ಬಹು ಗರ್ಭಧಾರಣೆಯ ಸ್ಕ್ಯಾನಿಂಗ್
-ಅವಳಿ ಗರ್ಭಧಾರಣೆಯ ಚಿಕಿತ್ಸೆ, ಇದನ್ನು ಮೊನೊಕೊರಿಯಾನಿಕ್ ಗರ್ಭಧಾರಣೆ ಎಂದೂ ಕರೆಯುತ್ತಾರೆ
-ಟಿಟಿಟಿಎಸ್ಗಾಗಿ ಇಂಟ್ರಾ ಫೆಟಲ್ ಲೇಸರ್ ಫೋಟೊಕೊಗ್ಯುಲೇಷನ್ (ಟ್ವಿನ್ ಟು ಟ್ವಿನ್ ಟ್ರಾನ್ಸ್ಫ್ಯೂಷನ್ ಸಿಂಡ್ರೋಮ್)
-ರೇಡಿಯೊಫ್ರೀಕ್ವೆನ್ಸಿ ಅಬ್ಲೇಶನ್
-ಬೈಪೋಲಾರ್ ಬಳ್ಳಿಯ ಹೆಪ್ಪುಗಟ್ಟುವಿಕೆ
-ಅನುವಂಶಿಕ ಸಾಮಾನ್ಯತೆಯನ್ನು ಸಾಬೀತುಪಡಿಸಲು ಭ್ರೂಣದ ಆಕ್ರಮಣಕಾರಿ ವಿಧಾನಗಳು
-ಕೊರಿಯಾನಿಕ್ ವಿಲಸ್ ಸ್ಯಾಂಪ್ಲಿಂಗ್ ((CVS))
-ಭ್ರೂಣದ ರಕ್ತದ ಮಾದರಿ
-ಭ್ರೂಣದ ಚಿಕಿತ್ಸೆ
-ಭ್ರೂಣದ ರಕ್ತಹೀನತೆಯಲ್ಲಿ ಗರ್ಭಾಶಯದ ಒಳ ವರ್ಗಾವಣೆ
-ಬಹು ಭ್ರೂಣದ ಗರ್ಭಧಾರಣೆ ತಪ್ಪಿಸುವಿಕೆ
-ಅನುವಂಶಿಕ ಗರ್ಭಧಾರಣೆ ಕುರಿತು ಸಮಾಲೋಚನೆ
ಪೆರಿನಾಟಲ್ ಪೆಥಾಲಜಿ (ಭ್ರೂಣ ಪರೀಕ್ಷೆ)
ತಂತ್ರಜ್ಞಾನವು ಭ್ರೂಣಗಳ ರೋಗನಿರ್ಣಯ ಮತ್ತು ಮೇಲ್ವಿಚಾರಣೆ ಮಾಡುವ ನಮ್ಮ ಸಾಮಥ್ರ್ಯವನ್ನು ಸುಧಾರಿಸಿದೆ. ಇದು ಸುರಕ್ಷಿತ ಹೆರಿಗೆಯಲ್ಲಿ ಒಳಗೊಂಡಿರುವ ಇತರ ವಿಶೇಷತೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಪ್ರಸೂತಿ ತಜ್ಞರು, ನವಜಾತಶಾಸ್ತ್ರಜ್ಞರು, ಮಕ್ಕಳ ಹೃದ್ರೋಗ ತಜ್ಞರು ಮತ್ತು ಮಕ್ಕಳ ಶಸ್ತ್ರಚಿಕಿತ್ಸಕರಂತಹ ಭ್ರೂಣ ಶಾಸ್ತ್ರ ತಜ್ಞರಿಗೆ ಇದರಿಂದ ದೊಡ್ಡ ಸಹಾಯವಾಗಿದೆ.
ಇದನ್ನೂ ಓದಿ: Pregnant Women: ಗರ್ಭಾವಸ್ಥೆಯಲ್ಲಿದ್ದಾಗ ಮೊಬೈಲ್ ಬಳಕೆ ಮಾಡಬಹುದಾ? ಇದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತಾ?
ಭ್ರೂಣ ಆರೈಕೆ ಶಾಸ್ತ್ರವು ತಾಯಿಯ, ಮಗುವಿನ ಮತ್ತು ನವಜಾತಶಾಸ್ತ್ರದ ವಿಭಾಗಗಳನ್ನು ಒಟ್ಟಿಗೆ ಬೆಸೆಯುತ್ತದೆ ಮತ್ತು ನಮ್ಮ ಇಚ್ಛೆಗೆ ತಕ್ಕ ಉತ್ತಮ ಫಲಿತಾಂಶಗಳನ್ನು ಖಚಿತಪಡಿಸುತ್ತದೆ. ಸಂಕೀರ್ಣವಾದ ಗರ್ಭಧಾರಣೆಗಳನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ ಮತ್ತು ವಿಶೇಷವಾಗಿ ಹುಟ್ಟಲಿರುವ ಮಗುವಿಗೆ ಅತ್ಯುತ್ತಮವಾದ ಆರೈಕೆ ಮತ್ತು ತಾಯಿಗೆ ವಿಶ್ವ ದರ್ಜೆಯ ವೈದ್ಯಕೀಯ ಸೇವೆ ಅನುಭವವನ್ನು ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ