ಅಪಸ್ಮಾರ (Epilepsy ) ಎಂಬುದು ಒಂದು ನರವೈಜ್ಞಾನಿಕ ಕಾಯಿಲೆ (Neurological Disorder) ಆಗಿದೆ. ಅದು ಜೀವಕೋಶಗಳ ಮೂಲಕ ಸಂದೇಶಗಳನ್ನು ರವಾನೆ ಮಾಡಿದಾಗ ನಮ್ಮ ಮೆದುಳಿನ (Brain) ಚಟುವಟಿಕೆಗೆ ತಡೆ ಉಂಟಾಗುತ್ತದೆ. ವಿದ್ಯುತ್ ಚಟುವಟಿಕೆಯಲ್ಲಿ ಹೀಗೆ ಉಂಟಾಗುವ ಹಠಾತ್ ಬದಲಾವಣೆಯು ಸಾಮಾನ್ಯವಾಗಿ ಅಪಸ್ಮಾರದ ರೋಗಗ್ರಸ್ತವಾಗುವಿಕೆ ಸಮಸ್ಯೆಗೆ (Problem) ಉಂಟು ಮಾಡುತ್ತದೆ ಅಂತಾರೆ ತಜ್ಞರು. ರೋಗಗ್ರಸ್ತವಾಗುವಿಕೆಯು ವ್ಯಕ್ತಿಯು ದೇಹದಲ್ಲಿ ಅನೈಚ್ಛಿಕ ಚಲನೆ ಉಂಟು ಮಾಡುತ್ತದೆ. ಈ ಬಗ್ಗೆ ಬೆಂಗಳೂರು ಆಸ್ಟರ್ CMI ಆಸ್ಪತ್ರೆಯ, ನ್ಯೂರಾಲಜಿ ಮತ್ತು ಎಪಿಲೆಪ್ಟೋಲಜಿ ಸಲಹೆಗಾರ ಮತ್ತು ಲೇಖಕ ಡಾ. ಕೇನಿ ರವೀಶ್ ರಾಜೀವ್ ಅವರು ವಿವರಿಸಿದ್ದಾರೆ.
ಅಪಸ್ಮಾರವೆಂಬ ನರವೈಜ್ಞಾನಿಕ ಕಾಯಿಲೆ
ಈ ರೋಗಗ್ರಸ್ತವಾಗುವಿಕೆಯು ವ್ಯಕ್ತಿಯ ದೇಹದಲ್ಲಿ ಅನೈಚ್ಛಿಕ ಚಲನೆ ಉಂಟು ಮಾಡುವ ಸಾಧ್ಯತೆ ಹೆಚ್ಚು. ನರವೈಜ್ಞಾನಿಕ ಕಾಯಿಲೆಯಿಂದಾಗಿ ದೇಹದಲ್ಲಿ ಸೆಳೆತ, ನಡುಕ ಒಂದೆರಡು ನಿಮಿಷ ಇರುತ್ತದೆ. ಅಥವಾ ವ್ಯಕ್ತಿಯು ಸುಮ್ಮನೇ ಕುಳಿತು ತದೇಕಚಿತ್ತದಿಂದ ನೋಡುತ್ತಾ ಇರುವಂತೆ ಮಾಡುತ್ತದೆ.
ಅಪಸ್ಮಾರದ ರೋಗಗ್ರಸ್ತವಾಗುವಿಕೆಯು ಯಾವಾಗಲೂ ತುರ್ತುಸ್ಥಿತಿ ಉಂಟು ಮಾಡುವುದಿಲ್ಲ. ಅಂದರೆ ಗಂಭೀರ ಪರಿಸ್ಥಿತಿಗೆ ಕಾರಣವಾಗುವುದಿಲ್ಲ. ಆದರೆ ಈ ರೋಗಗ್ರಸ್ತವಾಗುವಿಕೆಯು 5 ನಿಮಿಷಕ್ಕಿಂತ ಹೆಚ್ಚು ಕಾಲ ಇದ್ದರೆ, ವ್ಯಕ್ತಿಯು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು.
ಅಪಸ್ಮಾರದ ರೋಗಿಯು ತನಗಾಗುವ ಹೆಚ್ಚಿನ ಹಾನಿ ಮತ್ತು ಅಪಾಯ ತಡೆಗಟ್ಟಲು, ವೈದ್ಯಕೀಯ ಸಹಾಯ ಪಡೆಯುವ ಮೊದಲೇ ತ್ವರಿತವಾಗಿ ಮಾಡಬಹುದಾದ ಕೆಲವು ನಿರ್ಣಾಯಕ ಪ್ರಥಮ ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು. ಇದು ಅವರಿಗೆ ಹಾನಿ ಮಾಡದೇ ತಡೆಯಲು ಸಾಧ್ಯವಾಗುತ್ತದೆ.
ಅಪಸ್ಮಾರ ರೋಗಿಗೆ ಹೇಗೆ ಸಹಾಯ ಮಾಡುವುದು?
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ