Swimming: ಈಜುವುದರಿಂದಲೂ ಆಗುತ್ತೆ ಕಾರ್ಡಿಯೋ ವರ್ಕೌಟ್, ನೀರಿನಲ್ಲೂ ಮಾಡಬಹುದಂತೆ ವ್ಯಾಯಾಮ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀರಿನಲ್ಲಿ ಈಜಾಡುವುದು ತುಂಬಾನೇ ಮನರಂಜನಾತ್ಮಕವಾಗಿರುತ್ತದೆ, ಅದು ನಮ್ಮನ್ನು ಬೇಗನೆ ಉಲ್ಲಾಸಗೊಳಿಸುತ್ತದೆ ಮತ್ತು ಶಕ್ತಿಯುತ ಸಹ ಗೊಳಿಸುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಭಾರತದ ಕೆಲವು ಭಾಗಗಳಲ್ಲಿ, ಫಿಸಿಯೋಥೆರಪಿ ಕೇಂದ್ರಗಳಲ್ಲಿ ಬರುವ ಜನರಿಗೆ ಪ್ರತ್ಯೇಕವಾದ ನೀರಿನ ಕೊಳಗಳಿರುತ್ತವೆ.

ಮುಂದೆ ಓದಿ ...
  • Share this:

ಬೇಸಿಗೆ (Winter) ಬಂತೆಂದರೆ ಸಾಕು ಅನೇಕ ಜನರು ಈಜುಕೋಳ (Swimming Pool) ಎಂದರೆ ಸ್ವಿಮ್ಮಿಂಗ್ ಪೂಲ್ ಎಲ್ಲಿದೆ ಅಂತ ಹುಡುಕಿಕೊಂಡು ಹೋಗುತ್ತಾರೆ. ಏಕೆಂದರೆ ಈಜು ಒಂದು ಉತ್ತಮವಾದ ತಾಲೀಮು (Exercise) ಅಂತ ಅನೇಕರು ನಂಬಿದ್ದಾರೆ. ಈ ನೀರಿನಲ್ಲಿ ಮಾಡುವ ವ್ಯಾಯಾಮಗಳು ಕೇವಲ ದೈಹಿಕವಾಗಿ (Physical) ಅಲ್ಲದೆ ಮಾನಸಿಕವಾಗಿಯೂ ಆರೋಗ್ಯಕ್ಕೆ (Health) ತುಂಬಾನೇ ಒಳ್ಳೆಯದು ಅಂತ ಹೇಳಬಹುದು.ಬೇಸಿಗೆ ಬಂತೆಂದರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರ ವರೆಗೆ ಎಲ್ಲರೂ ದಿನದ ಒಂದಲ್ಲ ಒಂದು ಗಂಟೆಯನ್ನು ಈಜುಕೊಳದಲ್ಲಿ ಹೋಗಿ ಈಜಾಡುವುದಕ್ಕೆ (Swimming) ಮೀಸಲಿಡಲು ನೋಡುತ್ತಿರುತ್ತಾರೆ ಅಂತ ಹೇಳಬಹುದು. ಈಜುಕೊಳದಲ್ಲಿ ಈಜಾಡುತ್ತಿರುವಾಗ ನೀರಿನ ವಿರುದ್ಧ ಮೆಲ್ಲಗೆ ಈಜುವಾಗ ನೀರು ನಮ್ಮ ದೇಹಕ್ಕೆ ಒಂದು ರೀತಿಯ ಮೃದುವಾದ ಮಸಾಜ್ ಅನ್ನು ಒದಗಿಸುತ್ತದೆ.


ಹೆಚ್ಚಿನ ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಭಾರತದ ಕೆಲವು ಭಾಗಗಳಲ್ಲಿ, ಫಿಸಿಯೋಥೆರಪಿ ಕೇಂದ್ರಗಳಲ್ಲಿ ಬರುವ ಜನರಿಗೆ ಪ್ರತ್ಯೇಕವಾದ ನೀರಿನ ಕೊಳಗಳಿರುತ್ತವೆ.


ನೀರಿನಲ್ಲಿ ಈಜಾಡುವುದು ತುಂಬಾನೇ ಮನರಂಜನಾತ್ಮಕವಾಗಿರುತ್ತದೆ, ಅದು ನಮ್ಮನ್ನು ಬೇಗನೆ ಉಲ್ಲಾಸಗೊಳಿಸುತ್ತದೆ ಮತ್ತು ಶಕ್ತಿಯುತ ಸಹ ಗೊಳಿಸುತ್ತದೆ.


ಈಜು ಯೋಗದ ನಂತರ ಅತ್ಯುತ್ತಮವಾದ ವ್ಯಾಯಾಮ


ಈಜು ಒಂದು ಉತ್ತಮವಾದ ವ್ಯಾಯಾಮವಾಗಿದ್ದು, ಅಲ್ಲಿ ನಿಮ್ಮ ಇಡೀ ದೇಹವು ಒಟ್ಟಿಗೆ ಕೆಲಸ ಮಾಡುತ್ತದೆ. ಇದು ಹೆಚ್ಚು ತೀವ್ರತೆಯನ್ನು ಹೊಂದಿಲ್ಲದಿರಬಹುದು ಆದರೆ ಯೋಗದ ನಂತರ ಇದನ್ನು ಎರಡನೇ ಅತ್ಯುತ್ತಮವಾದ ವ್ಯಾಯಾಮ ಅಂತ ಪರಿಗಣಿಸಲಾಗುತ್ತದೆ.


ಇದು ದುಗ್ಧರಸ ಹರಿವನ್ನು ಬಹಳ ಸುಲಭವಾಗಿ ನೋಡಿಕೊಳ್ಳುತ್ತದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಶಕ್ತಿ, ಚುರುಕುತನ, ರೋಗನಿರೋಧಕ ಶಕ್ತಿ, ಸ್ಥಿರತೆಯನ್ನು ಹೆಚ್ಚಿಸುತ್ತದೆ.


Cardio workout can be done by swimming, exercise can be done in water too!
ಸಾಂದರ್ಭಿಕ ಚಿತ್ರ


ವಿಶೇಷವಾಗಿ ನೀವು ಪ್ರತಿದಿನ ಈಜಾಡಿದರೆ, ಅದೊಂದು ಉತ್ತಮವಾದ ಕಾರ್ಡಿಯೋ ಚಟುವಟಿಕೆಯಾಗುತ್ತದೆ, ಇದರಿಂದಾಗಿ ನಿಮ್ಮ ಹೃದಯದ ಆರೋಗ್ಯ ಸಹ ಸುಧಾರಿಸುತ್ತದೆ.


ಅನೇಕ ಆರೋಗ್ಯ ಸಮಸ್ಯೆಗಳಿಗೆ ಈಜು ತುಂಬಾನೇ ಒಳ್ಳೆಯ ವ್ಯಾಯಾಮ


ಪ್ರತಿದಿನ ಒಂದು ಗಂಟೆ ಈಜುಕೊಳಕ್ಕೆ ಹೋಗಿ ಈಜಾಡುವುದು ಮಧುಮೇಹ, ರಕ್ತದೊತ್ತಡ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆಗಳು, ಗ್ಲೈಕೋಜೆನ್ ನಿರ್ವಹಣೆ ಮತ್ತು ತೂಕ ನಿಯಂತ್ರಣಕ್ಕೆ ತುಂಬಾನೇ ಒಳ್ಳೆಯ ವ್ಯಾಯಾಮ ಅಂತ ಹೇಳಬಹುದು. ಈಜು ವಿಶೇಷವಾಗಿ ನಿಮ್ಮ ಶಕ್ತಿಯ ಉತ್ಪಾದನೆಯನ್ನು ನಿಮಗೆ ಆಯಾಸವಾಗದಂತೆ ನೋಡಿಕೊಳ್ಳುತ್ತದೆ.


ನೀರಿನಲ್ಲಿ ಮಾಡುವ ವ್ಯಾಯಾಮದ ಪ್ರಯೋಜನಗಳು ಏನು?


ನೀರು ಪ್ರಕೃತಿಯಲ್ಲಿ ತುಂಬಾ ಹಿತಕರವಾಗಿದೆ, ಅದು ನಮಗೆ ವಿಶ್ರಾಂತಿ ನೀಡುತ್ತದೆ ಮತ್ತು ಲ್ಯಾಕ್ಟಿಕ್ ಆಮ್ಲದ ರಚನೆಯನ್ನು ಬಹಳ ಸುಲಭವಾಗಿ ನೋಡಿಕೊಳ್ಳುತ್ತದೆ.


ಈಜು ನಮ್ಮನ್ನು ಚುರುಕಾಗಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕೀಲುಗಳನ್ನು ಮೃದುಗೊಳಿಸುತ್ತದೆ, ಅದಕ್ಕಾಗಿಯೇ ಇದನ್ನು ಹಿರಿಯ ನಾಗರಿಕರಿಗೆ ಶಿಫಾರಸು ಮಾಡಲಾಗುತ್ತದೆ.


ಈಜುಕೊಳದಲ್ಲಿ ಮಾಡಬಹುದಾದ ಅತ್ಯಂತ ಸರಳವಾದ ವ್ಯಾಯಾಮವೆಂದರೆ, ವಿಶೇಷವಾಗಿ ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಮೊಣಕಾಲುಗಳು, ಸೊಂಟ, ಪಾದಗಳು ಮತ್ತು ಬೆನ್ನಿನಂತಹ ಕೀಲುಗಳ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವವರು ನಿಧಾನವಾಗಿ ನಡೆಯುವುದಾಗಿದೆ.


ನೀವು ಈಜುಕೊಳದ ತುಂಬಾ ಆಳವಿಲ್ಲದ ತುದಿಯಲ್ಲಿ ಇಳಿದು ಕಾಲುಗಳನ್ನು ಮೇಲಕ್ಕೆ ಎತ್ತುವುದು ಮತ್ತು ಕೆಳಕ್ಕೆ ಇಳಿಸುವುದು, ಸ್ವಲ್ಪ ನಡೆದಾಡುವುದು ಈ ರೀತಿಯ ಚಟುವಟಿಕೆಯನ್ನು ಮಾಡಬಹುದಾಗಿದೆ.


ನಿಯಮಿತ ಅಭ್ಯಾಸವಾಗಿ ನೀರಿನ ಮೇಲೆ ತೇಲುವುದು ನಿಮ್ಮ ಮಾನಸಿಕ ಶಾಂತತೆಯನ್ನು ನಿರ್ಮಿಸಲು ಮತ್ತು ಸೂಕ್ತ ಅಂತಃಸ್ರಾವಕ ಮತ್ತು ಅಂಗ ಕಾರ್ಯಗಳಿಗಾಗಿ ನಿಮ್ಮ ದೇಹದ ಸಾಮರ್ಥ್ಯಗಳನ್ನು ಸಂಘಟಿಸಲು ಸಹಾಯ ಮಾಡುತ್ತದೆ. ಕೊಳದ ನೀರಿನ ಒತ್ತಡವು ಇಡೀ ದೇಹದಲ್ಲಿ ರಕ್ತದ ಉತ್ತಮ ಪರಿಚಲನೆಗೆ ಸಹಾಯ ಮಾಡುತ್ತದೆ.


ಈ ನೀರಿನ ವ್ಯಾಯಾಮಗಳನ್ನು ತಪ್ಪದೆ ಮಾಡಿರಿ


1. ನೀರಿನಲ್ಲಿ ನಡೆದಾಡುವುದು, ಪಕ್ಕಕ್ಕೆ ನಡೆಯುವುದು, ಕಾಲು ಎತ್ತುವುದು, ಸ್ಕ್ವಾಟ್ಸ್ ಮತ್ತು ಸೊಂಟದ ತಿರುಗುವಿಕೆಯ ಹೊರತಾಗಿ, ಕೆಲವು ಸರಳ ನೀರಿನ ವ್ಯಾಯಾಮಗಳು ಇಲ್ಲಿವೆ ನೋಡಿ.


2. ಈಜುಕೊಳದ ಆಳವಿಲ್ಲದ ತುದಿಯಲ್ಲಿ ನಿಮ್ಮ ಬೆನ್ನನ್ನು ಗೋಡೆಗೆ ವಿರುದ್ಧವಾಗಿ ಇರಿಸಿ, ನಿಮ್ಮ ಎರಡೂ ಕೈಗಳನ್ನು ಅಗಲವಾಗಿರಿಸಿ ಬಾರ್ ರೇಲಿಂಗ್ ಅನ್ನು ಹಿಡಿದು, ನಿಮ್ಮ ಕೆಳಗಿನ ದೇಹವನ್ನು ಹಾಗೆ ಮೇಲಕ್ಕೆ ಎತ್ತಲು ಪ್ರಯತ್ನಿಸಿ ಮತ್ತು ನಿಮ್ಮ ಕಾಲುಗಳನ್ನು ಮೇಲಕ್ಕೆ ಕೆಳಕ್ಕೆ ಮಾಡಿರಿ.


ಇದನ್ನು ಮಾಡುವಾಗ ನಿಧಾನವಾಗಿ ಉಸಿರಾಡಿ, ಇದು ನಿಮ್ಮ ದೇಹದ ಕೆಳಭಾಗವನ್ನು ಮೇಲಕ್ಕೆ ಎತ್ತಲು ಸಹಾಯ ಮಾಡುತ್ತದೆ.


3. ರೇಲಿಂಗ್ ಕಡೆಗೆ ಮುಖ ಮಾಡಿ ಪ್ಯಾರಾಪೆಟ್ ಅನ್ನು ಹಿಡಿದುಕೊಳ್ಳಿ ಮತ್ತು ಕ್ರಮೇಣ ನೀವು ನಿಮ್ಮ ಕಾಲುಗಳನ್ನು ಪಕ್ಕಕ್ಕೆ ಮೇಲಕ್ಕೆ ಸರಿಸಬಹುದು. ಬಲ ಮತ್ತು ಎಡಕ್ಕೆ ಪಕ್ಕಕ್ಕೆ ಒದೆಯುವುದು, ನೀವು ಒದೆಯುವಾಗ ಉಸಿರಾಡುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.


ಇದನ್ನೂ ಓದಿ:Benefits of Swimming: ಈಜಾಟ ಗರ್ಭಿಣಿಯರಿಗೆ ಬೆಸ್ಟ್, ಪ್ರಯೋಜನಗಳು ಹಲವು!


4. ನಿಮ್ಮನ್ನು ಕುತ್ತಿಗೆಯವರೆಗೆ ನೀರಿನಲ್ಲಿ ಮುಳುಗಿಸಿಕೊಳ್ಳಿ. ಭುಜದ ಮಟ್ಟಕ್ಕೆ ತೋಳನ್ನು ಎತ್ತಬಹುದು. ನೀವು ಉಸಿರಾಡುವಾಗ ನಿಮ್ಮ ತೋಳುಗಳನ್ನು ಚಾಚಿ, ಉಸಿರಾಡುವಾಗ ಅವುಗಳನ್ನು ಒಳಗೆ ಎಳೆಯಿರಿ. ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ತೋಳುಗಳನ್ನು ಬಲಪಡಿಸಿಕೊಳ್ಳಲು ಈ ವ್ಯಾಯಾಮ ಒಳ್ಳೆಯದು.


5. ನೀರಿನ ಮೇಲೆ ತೇಲುತ್ತಾ, ಪ್ಯಾರಾಪೆಟ್ ಅಥವಾ ರೇಲಿಂಗ್ ಗಳನ್ನು ಹಿಡಿದುಕೊಂಡು, ಹಿಂದಕ್ಕೆ ಒದೆಯುವುದು ಎಂದರೆ ಬ್ರೆಸ್ಟ್ ಸ್ಟ್ರೋಕ್ ಮಾಡುವುದು.


top videos    6. ನೀರಿನಲ್ಲಿ ಸ್ಥಿರ ಭಂಗಿಯಲ್ಲಿ ನಿಂತು, ತಮ್ಮ ಮೊಣಕಾಲುಗಳನ್ನು ನಿಧಾನವಾಗಿ ಬಗ್ಗಿಸಬಹುದು ಮತ್ತು ಫ್ರೀಸ್ಟೈಲ್ ನಂತೆ ಸ್ಥಿರವಾದ ತಾಲೀಮು ಮಾಡಬಹುದು. ನಿಮ್ಮ ಬ್ಯಾಕ್ ಸ್ಟ್ರೋಕ್ ಮತ್ತು ಬಟರ್ ಫ್ಲೈ ಸ್ಟ್ರೋಕ್ ನೊಂದಿಗೂ ಸಹ ನೀವು ಅದೇ ರೀತಿ ಮಾಡಬಹುದು.

    First published: