• Home
 • »
 • News
 • »
 • lifestyle
 • »
 • Bone Health: ಹಾಲುಣಿಸುವ ತಾಯಂದಿರೇ ಈ ವಿಷಯದ ಬಗ್ಗೆ ಕಾಳಜಿ ವಹಿಸಿ- ಇಲ್ಲವಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ

Bone Health: ಹಾಲುಣಿಸುವ ತಾಯಂದಿರೇ ಈ ವಿಷಯದ ಬಗ್ಗೆ ಕಾಳಜಿ ವಹಿಸಿ- ಇಲ್ಲವಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿಶುಗಳಿಗೆ ಹಾಲುಣಿಸುವ ಅವಧಿಯಲ್ಲಿಯೂ ಕೆಲಸಕ್ಕೆ ಹೋಗುವ ತಾಯಂದಿರು ಮತ್ತು ಋತುಬಂಧಕ್ಕೊಳಗಾದ ಮಹಿಳೆಯರಿಗೆ ಕ್ಯಾಲ್ಸಿಯಂ ಪೂರಕಗಳು ಸಾಮಾನ್ಯರಿಗಿಂತ ಹೆಚ್ಚು ಅಗತ್ಯವಿದೆ. ಮೂಳೆ ಆರೋಗ್ಯ ವೃದ್ಧಿಸುವ ಆಹಾರದ ಅಗತ್ಯಗಳು ವಯಸ್ಸಿಗೆ ಅನುಗುಣವಾಗಿ ಭಿನ್ನವಾಗಿರುತ್ತವೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

  ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಕೆಲಸ ಮಾಡುವ ತಾಯಂದಿರು (Working Mothers) ಮೂಳೆಯ ಆರೋಗ್ಯದ (Bone Health) ಕುರಿತು ನಿಗಾ ವಹಿಸುವುದು ಬಹಳ ಅವಶ್ಯಕವಾಗಿದೆ. ಇದು ವಾಕಿಂಗ್, ಸುಲಭ ವ್ಯಾಯಾಮಗಳ (Exercises) ಜೊತೆಗೆ ನಾವು ಆಹಾರದಿಂದ ಪಡೆಯುವ ವಿಟ್‍ಮಿನ್ ಪೂರಕಗಳನ್ನು ಆಧರಿಸಿದೆ. ಶಿಶುಗಳಿಗೆ ಹಾಲುಣಿಸುವ ಅವಧಿಯಲ್ಲಿಯೂ ಕೆಲಸಕ್ಕೆ ಹೋಗುವ ತಾಯಂದಿರು ಮತ್ತು ಋತುಬಂಧಕ್ಕೊಳಗಾದ ಮಹಿಳೆಯರಿಗೆ (Menopausal Women)  ಕ್ಯಾಲ್ಸಿಯಂ ಪೂರಕಗಳು ಸಾಮಾನ್ಯರಿಗಿಂತ ಹೆಚ್ಚು ಅಗತ್ಯವಿದೆ. ಮೂಳೆ ಆರೋಗ್ಯ ವೃದ್ಧಿಸುವ ಆಹಾರದ ಅಗತ್ಯಗಳು ವಯಸ್ಸಿಗೆ ಅನುಗುಣವಾಗಿ ಭಿನ್ನವಾಗಿರುತ್ತವೆ. ಹೆಣ್ಣು ಮಕ್ಕಳು ಮೂಳೆ ಆರೋಗ್ಯದ ಮೇಲೆ ಗಮನ ಕೊಡಬೇಕು.


  ಶೀಘ್ರ ಮೂಳೆ ಸವೆತ
  ಕಿರಿಯ ವಯಸ್ಸಿನವರು ಸೂರ್ಯನ ಬೆಳಕಿನಿಂದ ದೂರ ಉಳಿಯುತ್ತಾರೆ. ಸೌಂದರ್ಯ ಹಾಳಾಗುತ್ತೆ ಎನ್ನುವುದು ಅವರ ಮನೋಭಾವನೆ. ಇದರಿಂದಾಗಿ ದೇಹಕ್ಕೆ ಅಗತ್ಯ ವಿಟಮಿನ್-ಡಿ ಸಿಗದೇ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ.


  ಮಧ್ಯವಯಸ್ಸಿನ ಮತ್ತು ದುಡಿಯುವ ಯುವಜನರು ಕೂಡ ವಿಟಮಿನ್ ಡಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಮೂಳೆ ಆರೋಗ್ಯದ ನಿರ್ಲಕ್ಷಕ್ಕೆ ಒಳಗಾಗುತ್ತಾರೆ. ವಯಸ್ಸಾದವರಲ್ಲಿ ಆಸ್ಟಿಯೊಪೊರೋಸಿಸ್ ಅಂದರೆ ಶೀಘ್ರ ಮೂಳೆ ಸವೆತ ಸಾಮಾನ್ಯ ಸಮಸ್ಯೆಯಾಗಿದೆ.


  ಮೂಳೆ ಆರೋಗ್ಯಕ್ಕೆ ಏನು ಮಾಡಬೇಕು?
  ಮೊದಲನೆಯದಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಸಮೃದ್ಧ ಆಹಾರಗಳಾದ ಹಾಲು, ಮೊಸರು, ಪಾಲಕ್, ಬಾದಾಮಿ, ಮೀನು, ಕಿತ್ತಳೆ, ಕೋಸುಗಡ್ಡೆ, ಅಣಬೆಗಳು ಸೇವಿಸಬೇಕು. ಸೂರ್ಯನ ಬೆಳಕು ಪಡೆಯಬೇಕು . ಇದರ ಬಗ್ಗೆ ನಿಮ್ಮ ಸುತ್ತಮುತ್ತಲಿನವರಿಗೆ ಇದರ ಬಗ್ಗೆ ಶಿಕ್ಷಣ ಮತ್ತು ಅರಿವು ಮೂಡಿಸಬೇಕು.


  ದೈನಂದಿನ ಅಗತ್ಯ ಚಾರ್ಟ್ ಕೆಳಗಿನಂತಿದೆ
  ಡಾ. ಸಾಯಿ ಕೃಷ್ಣ ಬಿ ನಾಯ್ಡು ಅವರು ಹೇಳೋದೇನು?
  ಮೂಳೆ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಮತ್ತು ಬಿಡುಗಡೆಗಾಗಿ ವ್ಯಾಯಾಮಕ್ಕೆ ಒತ್ತು ನೀಡುಬೇಕು. ಸಾಮಾನ್ಯವಾಗಿ ನಮ್ಮ ದೇಹವು ಮೂಳೆಯ ನಷ್ಟದೊಂದಿಗೆ ಮೂಳೆ ಬದಲಾವಣೆಗೆ ಪ್ರಕ್ರಿಯೆಗೆ ಒಳಗಾಗುತ್ತದೆ. ನಂತರ ಹೊಸ ಮೂಳೆ ರಚನೆ ಮತ್ತು ಶೇಖರಣೆಗೆಯಾಗುತ್ತದೆ.


  bone health, bone health for working mothers, bone health supplements, bone health foods, food for strong bones and muscles, ಮೂಳೆ ಆರೋಗ್ಯ, ಮೂಳೆ ಆರೋಗ್ಯ ಆಹಾರಗಳು, ಬಲವಾದ ಮೂಳೆಗಳು ಮತ್ತು ಸ್ನಾಯುಗಳಿಗೆ ಆಹಾರ, ಹಾಲುಣಿಸುವ ತಾಯಂದಿರು ಮೂಳೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು, kannada news, karnataka news,
  ಡಾ ಸಾಯಿ ಕೃಷ್ಣ ಬಿ ನಾಯ್ಡು, HOD ಆರ್ಥೋಪೆಡಿಕ್ಸ್ ವಿಭಾಗ. ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸೆ. ಫೋರ್ಟಿಸ್ ಆಸ್ಪತ್ರೆ, ರಿಚ್ಮಂಡ್ ರಸ್ತೆ ಬೆಂಗಳೂರು.


  ಉತ್ತಮ ಮೂಳೆ ಹಾಗೂ ಅದರ ಗುಣಮಟ್ಟದ ಕಾರ್ಯ ಚಟುವಟಿಕೆಗಾಗಿ ಸಹಾಯ ಮಾಡುವ ನಿರಂತರ ಸ್ವಾಭಾವಿಕ ಪ್ರಕ್ರಿಯೆ ಇದಾಗಿದೆ. ಇದಕ್ಕೆ ವ್ಯಾಯಾಮಗಳು ಅವಶ್ಯಕವಾಗಿದೆ ವಾಕಿಂಗ್, ಓಟ, ಜಿಮ್ ಅಥವಾ ನೃತ್ಯ ಮಾಡಬಹುದು ಎಂದು ಡಾ. ಸಾಯಿ ಕೃಷ್ಣ ಬಿ ನಾಯ್ಡು ಅವರು ಹೇಳಿದ್ದಾರೆ.  ವಯಸ್ಸಾದವರು ಏನು ಮಾಡಬೇಕು?
  ವಯಸ್ಸಾದವರಿಗೆ ಮೂಳೆ ಆರೋಗ್ಯ ಸಂಪೂರ್ಣವಾಗಿ ವಿಭಿನ್ನ ಪ್ರಕ್ರಿಯೆ. ಏಕೆಂದರೆ ಅವರಲ್ಲಿ ಹೆಚ್ಚಿನವರು ಆಸ್ಟಿಯೊಪೊರೋಸಿಸ್ ನಿಂದ ಬಳಲುತ್ತಿರುತ್ತಾರೆ.ಅಂದ್ರೆ ಮೂಳೆ ಸವೆತ. ಆಸ್ಟಿಯೊಪೊರೋಸಿಸ್ ಅನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಈ ಕುರಿತು ವೈದ್ಯಕೀಯ ತಪಾಸಣೆ ಮತ್ತು ಪರೀಕ್ಷೆಯ ನಂತರ ಸರಿಯಾದ ಚಿಕಿತ್ಸೆಯಿಂದ ಕಡಿಮೆ ಮಾಡಬಹುದು.


  bone health, bone health for working mothers, bone health supplements, bone health foods, food for strong bones and muscles, ಮೂಳೆ ಆರೋಗ್ಯ, ಮೂಳೆ ಆರೋಗ್ಯ ಆಹಾರಗಳು, ಬಲವಾದ ಮೂಳೆಗಳು ಮತ್ತು ಸ್ನಾಯುಗಳಿಗೆ ಆಹಾರ, ಹಾಲುಣಿಸುವ ತಾಯಂದಿರು ಮೂಳೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು, kannada news, karnataka news,
  ಮೂಳೆ ಆರೋಗ್ಯದ ಬಗ್ಗೆ ಗಮನ ಕೊಡಿ


  ಮೂಳೆ ಸವೆತ ಎನ್ನುವುದು ಮಹಿಳೆಯರಲ್ಲಿ ಋತುಬಂಧದಲ್ಲಿ, ವಯಸ್ಸಾಗುವಿಕೆಯಿಂದಾಗುವ ಹಾರ್ಮೋನಿನ ಅಸಮತೋಲನದಿಂದ ಉಂಟಾಗುತ್ತದೆ. ಬಿಸ್ ಫಾಸ್ಪೋನೇಟ್‍ನಂತಹ ಔಷಧಿಗಳೊಂದಿಗೆ ಋತುಬಂಧದಲ್ಲಿನ ಹಾರ್ಮೋನ್ ಚಿಕಿತ್ಸೆಯಿಂದ ಇದನ್ನು ತಡೆಯಬಹುದು. 60 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಮೂಳೆಗಳ ಕ್ಷಿಪ್ರವಾಗಿ ಸವೆಯಲು ಪ್ರಾರಂಭ ಆಗುತ್ತೆ. ಅವರು ಸಹ ಬೇಗ ಚಿಕಿತ್ಸೆ ಪಡೆದ್ರೆ ಒಳ್ಳೆಯದು.


  ಇದನ್ನೂ ಓದಿ: Health Tips: ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ಮೊಡವೆಗಳ ನಿಯಂತ್ರಣಕ್ಕೆ ಹೀಗೆ ಮಾಡಿ


  ಮೂಳೆ ಸಮಸ್ಯೆ ತಡೆಗಟ್ಟುವುದು ಹೇಗೆ?
  ಮೂಳೆ ಸಮಸ್ಯೆ ಇರುವವರು ವೈದ್ಯರಿಂದ ಡೆಕ್ಸಾ ಸ್ಕ್ಯಾನ್ ಮತ್ತು ಕೆಲವು ಸರಳ ರಕ್ತ ಪರೀಕ್ಷೆಗಳನ್ನು ಮೊದಲೇ ಮಾಡುವುದರೊಂದಿಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಥೈರಾಯ್ಡ್ ಮತ್ತು ಇತರ ಹಾರ್ಮೋನುಗಳ ಅಸಮತೋಲನದಂತಹ ಕೆಲವು ಸಮಸ್ಯೆಗಳನ್ನು ಸರಿಯಾಗಿ ರೋಗನಿರ್ಣಯ ಮಾಡಿದರೆ ದುರ್ಬಲ ಮೂಳೆ ಸಮಸ್ಯೆ ತಡೆಗಟ್ಟಬಹುದು.

  Published by:Savitha Savitha
  First published: