Wheatgrass Juice: ಸರ್ವ ರೋಗಕ್ಕೂ ಮದ್ದು ಈ ಗೋಧಿ ಹುಲ್ಲಿನ ಜ್ಯೂಸ್

Benefits of Wheatgrass juice: ವೀಟ್ ಗ್ರಾಸ್ ಕೂಡ ಬ್ಲಡ್ ಪ್ರೆಶರ್ ಅನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಕ್ಲೋರೊಫಿಲ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಅಧಿಕ ರಕ್ತದೊತ್ತಡ ಇರುವವರು ಮಾತ್ರವಲ್ಲ, ಸಾಮಾನ್ಯ ರಕ್ತದೊತ್ತಡ ಇರುವವರು ಕೂಡಾ ಕುಡಿಯಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜನರು ಆರೋಗ್ಯವಾಗಿರಲು(Health), ವಿವಿಧ ಹಣ್ಣುಗಳು(Fruits) ಮತ್ತು ತರಕಾರಿಗಳ ಜ್ಯೂಸ್ (Vegetable Juice) ಅನ್ನು ಕುಡಿಯುತ್ತಲೇ ಇರುತ್ತಾರೆ.. ಅವುಗಳಲ್ಲಿ ಗೋಧಿ ಹುಲ್ಲಿನ ಜ್ಯೂಸ್(Wheatgrass Juice) ಕೂಡಾ ಒಂದು. ಇದನ್ನು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಉತ್ತರ ಭಾರತದ(North India) ನಿತ್ಯದ ಆಹಾರಧಾನ್ಯವಾಗಿರುವ ಗೋಧಿಯಲ್ಲಿರುವ(Wheat) ಪೋಷಕಾಂಶಗಳು ಆರೋಗ್ಯಕ್ಕೆ ಅತ್ಯುತ್ತಮವಾಗಿವೆ. ಅಂತೆಯೇ ಗೋಧಿಯ ಗಿಡ ಇನ್ನೂ ಎಳೆಯದಿರುವಾಗಲೇ, ಅಂದರೆ ನೆಲಮಟ್ಟದಿಂದ ಸುಮಾರು ಎಂಟು ಅಥವಾ ಹತ್ತು ಇಂಚು ಇರುವಂತೆಯೇ ಕತ್ತರಿಸಿ ಈ ಎಳೆಯ ಹಸಿರು ಹುಲ್ಲನ್ನು ಕಡೆದು ಸೋಸಿ ತೆಗೆದ ಜ್ಯೂಸ್ ಸಹ ಪೋಷಕಾಂಶಗಳ ಆಗರವಾಗಿದೆ.ಹೀಗಾಗಿ ಗೋಧಿ ಹುಲ್ಲಿನ ಜ್ಯೂಸ್ ನಿಂದ ಆಗುವ ಪ್ರಯೋಜನಗಳು ಏನು, ಅದನ್ನು ತಯಾರಿಸುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

    ಗೋಧಿ ಹುಲ್ಲಿನ ಜ್ಯೂಸ್ ತಯಾರಿಸಲು ಬೇಕಾಗುವ ಪದಾರ್ಥಗಳು

    *ಒಂದು ಲೋಟ ನೀರು
    *ಎರಡು ಚಮಚ ಗೋಧಿ ಹುಲ್ಲಿನ ಪೌಡರ್
    *ಒಂದು ಟೀ ಚಮಚ ನಿಂಬೆ ರಸ

    ಇದನ್ನೂ ಓದಿ: ಕರ್ನಾಟಕದಲ್ಲೇ ಮೊದಲ ಬಾರಿಗೆ ಕಪ್ಪು ಗೋಧಿ ಬೆಳೆದು ಸೈ ಎನಿಸಿಕೊಂಡ ಬಾಗಲಕೋಟೆ ರೈತ

    ಜ್ಯೂಸ್ ತಯಾರು ಮಾಡುವುದು ಹೇಗೆ..?

    ಮೊದಲು ನೀರು ಗೋಧಿ ಹುಲ್ಲಿನ ಪೌಡರ್ ನಿಂಬೆರಸ, ಎಲ್ಲಾ ಮೂರು ಪದಾರ್ಥಗಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಬಳಿಕ ಇನ್ನೂ ಸ್ವಲ್ಪ ನೀರು ಸೇರಿಸಿ ಮತ್ತು ಸ್ವಲ್ಪ ಸಮಯದ ವರೆಗೆ ಮಿಕ್ಸ್ ಮಾಡಿ.
    ನಂತರ ಅದನ್ನು ಗ್ಲಾಸ್ ನಲ್ಲಿ ತೆಗೆದುಕೊಂಡು ಫಿಲ್ಟರ್ ಮಾಡಿದ್ರೆ ಗೋಧಿ ಹುಲ್ಲಿನ ಜ್ಯೂಸ್ ಸಿದ್ಧವಾಗಿರುತ್ತದೆ..

    ಗೋಧಿ ಹುಲ್ಲಿನ ಜ್ಯೂಸ್ ಉಪಯೋಗಗಳೇನು..?

    * ತೂಕ ಕಳೆದುಕೊಳ್ಳುವವರಿಗೆ ಗೋಧಿಹುಲ್ಲಿನ ಜ್ಯೂಸ್ ಹೇಳಿ ಮಾಡಿಸಿದ ಆಹಾರವಾಗಿದೆ. ಇದು ಥೈರಾಯ್ಡ್ ಗ್ರಂಥವನ್ನು ಪ್ರಚೋದಿಸಿ ಹಸಿವೆಯಾಗುವ ಬಯಕೆಯನ್ನು ಕಡಿಮೆ ಮಾಡುತ್ತದೆ.

    *ವೀಟ್ ಗ್ರಾಸ್ ಕೂಡ ಬ್ಲಡ್ ಪ್ರೆಶರ್ ಅನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಕ್ಲೋರೊಫಿಲ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಅಧಿಕ ರಕ್ತದೊತ್ತಡ ಇರುವವರು ಮಾತ್ರವಲ್ಲ, ಸಾಮಾನ್ಯ ರಕ್ತದೊತ್ತಡ ಇರುವವರು ಕೂಡಾ ಕುಡಿಯಬಹುದು

    *ದಿನಕ್ಕೊಂದು ಲೋಟದ ಗೋಧಿಹುಲ್ಲಿನ ಜ್ಯೂಸ್ ಹಲವು ರೀತಿಯ ಕ್ಯಾನ್ಸರ್ ಕಣಗಳನ್ನು ನಿವಾರಿಸುವ ಮೂಲಕ ಕ್ಯಾನ್ಸರ್ ಒಂದು ವೇಳೆ ಈಗಾಗಲೇ ಪ್ರಾರಂಭವಾಗಿದ್ದರೆ ಅದನ್ನು ನಿವಾರಿಸುತ್ತದೆ. ಜೊತೆಗೆ ಇವು ಮತ್ತೊಮ್ಮೆ ಬಾಧಿಸದಂತೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

    ಇದನ್ನೂ ಓದಿ: ಗೋಧಿ ಹಿಟ್ಟಿನ ಚಪಾತಿಗೆ ಪರ್ಯಾಯವಾಗಿ ಈ ಆರೋಗ್ಯಕರ ಖಾದ್ಯಗಳನ್ನು ಸವಿಯಿರಿ..!

    *ಗೋಧಿ ಹುಲ್ಲಿನ ಜ್ಯೂಸ್ ಕುಡಿಯುವುದು ಕೂದಲಿಗೆ ಪ್ರಯೋಜನಕಾರಿ ಎನ್ನಲಾಗುತ್ತದೆ. ಇದರಲ್ಲಿರುವ ಪ್ರೋಟೀನ್ ದೇಹದಲ್ಲಿ ಅಮೈನೋ ಆಸಿಡ್ ನ ರೂಪದಲ್ಲಿ ವಿಭಜನೆಯಾಗುತ್ತದೆ. ಈ ಅಮೈನೋ ಆಸಿಡ್ ಕೂದಲನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಕೂದಲನ್ನು ಆರೈಕೆ ಮಾಡುವ ಜಿಂಕ್ ಅನ್ನು ಕೂಡಾ ಹೊಂದಿದೆ. ಅಷ್ಟೇ ಅಲ್ಲ, ಇದು ಕೂದಲು ಬಿಳಿ ಆಗುವುದನ್ನು ಕಡಿಮೆ ಮಾಡುತ್ತದೆ.

    *ಗೋಧಿ ಹುಲ್ಲಿನ ಜ್ಯೂಸ್ ಕುಡಿಯುವುದರಿಂದ ನಿತ್ಯದ ಕಣ್ಣಿನ ದೃಷ್ಟಿ ಉತ್ತಮಗೊಂಡಿರುವುದನ್ನು ಕಂಡುಕೊಳ್ಳಲಾಗಿದೆ. ರಾತ್ರಿಯ ಕುರುಡು ಮತ್ತು ಕಣ್ಣಿನ ಅಡಿಯ ಕಪ್ಪು ವರ್ತುಲಗಳನ್ನೂ ಸಮರ್ಥವಾಗಿ ನಿವಾರಿಸುತ್ತದೆ.

    *ಅಲರ್ಜಿಯನ್ನು ಕಡಿಮೆ ಮಾಡಲು ಇದನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಅಲರ್ಜಿಕ್ ರಿನಿಟಿಸ್ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು, ಒಂದು ರೀಸರ್ಚ್ ಪೇಪರ್ ನಲ್ಲಿ ಬರೆಯಲಾಗಿದೆ. ಇದರಲ್ಲಿ, ಗೋಧಿ ಹುಲ್ಲಿನಲ್ಲಿರುವ ಕ್ಲೋರೊಫಿಲ್ ಅನ್ನು ಪ್ರಯೋಜನಕಾರಿ

    ಗೋಧಿ ಹುಲ್ಲಿನ ಜ್ಯೂಸ್ ನ ಅಪಾಯಗಳೇನು..?

    ಕೆಲವು ಸೂಕ್ಷ್ಮ ಜನರಿಗೆ ಇದರಿಂದ ಅಲರ್ಜಿ ಆಗಬಹುದು.

    * ಗೋಧಿ ಹುಲ್ಲಿನ ಜ್ಯೂಸ್ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದರಿಂದ ವಾಕರಿಕೆ ಮತ್ತು ವಾಂತಿ ಆಗಬಹುದು.

    * ಗರ್ಭಿಣಿಯರು ಇದನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಕುಡಿಯಬೇಕು.

    *ಗೋಧಿ ಹುಲ್ಲಿನ ಜ್ಯೂಸ್ ಹೆಚ್ಚು ಸೂಕ್ಷ್ಮವಾದ ಜನರಿಗೆ ನಾಲಿಗೆ ಊದಿಕೊಳ್ಳಲು ಕಾರಣವಾಗಬಹುದು.
    Published by:ranjumbkgowda1 ranjumbkgowda1
    First published: