Wheat Grass: ಗೋಧಿ ಹುಲ್ಲಿನಲ್ಲಿದೆ ಇಷ್ಟೆಲ್ಲ ಆರೋಗ್ಯಕರ ಪ್ರಯೋಜನಗಳು ..

Health Benefits Of Wheat Grass : ಸಂಶೋಧನೆಯ ಪ್ರಕಾರ, 10 ವಾರಗಳವರೆಗೆ ವೀಟ್ ಗ್ರಾಸ್ ಪೌಡರ್ ಅನ್ನು ಕ್ಯಾಪ್ಸುಲ್ ಮೂಲಕ ಪ್ರತಿದಿನ ತೆಗೆದುಕೊಳ್ಳುವುದರಿಂದ ಒಟ್ಟು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡಿ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಮಹಿಳೆಯರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಹ ಹೇಳಲಾಗುತ್ತದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವೀಟ್ ಗ್ರಾಸ್(Wheat Grass) ಒಂದು ರೀತಿಯ ಹುಲ್ಲು. ಇದನ್ನು  ಔಷಧ ತಯಾರಿಸಲು ಬಳಸಲಾಗುತ್ತದೆ. ಗೋಧಿ ಹುಲ್ಲನ್ನು ಹೆಚ್ಚಾಗಿ ಪೋಷಕಾಂಶಗಳ ಮೂಲವಾಗಿ ಬಳಸಲಾಗುತ್ತದೆ. ಇದು ವಿಟಮಿನ್ ಎ(Vitamin A), ವಿಟಮಿನ್ ಸಿ,(Vitamin C) ವಿಟಮಿನ್ ಇ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಬೀಟಾ-ಥಲಸ್ಸೆಮಿಯಾ, ಅಧಿಕ ಕೊಲೆಸ್ಟ್ರಾಲ್, ಅಲ್ಸರೇಟಿವ್ ಕೊಲೈಟಿಸ್, ಸೇರಿದಂತೆ  ಇತರ  ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.  ವೀಟ್ ಗ್ರಾಸ್ ಜ್ಯೂಸ್ ಜನಪ್ರಿಯ ಆರೋಗ್ಯ ಪಾನೀಯವಾಗಿದೆ.  ತಯಾರಿಸಿದ  ತಕ್ಷಣ ಖಾಲಿ ಹೊಟ್ಟೆಯಲ್ಲಿ  ಸೇವಿಸಿದಾಗ ಮಾತ್ರ ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಭಾವಿಸಲಾಗಿದೆ.  

ಗೋಧಿ ಹುಲ್ಲಿನಲ್ಲಿ ಆಂಟಿಆಕ್ಸಿಡೆಂಟ್ ಮತ್ತ ಊತ-ವಿರೋಧಿ  ಗುಣಗಳನ್ನು ಹೊಂದಿರುವ ರಾಸಾಯನಿಕಗಳಿವೆ. ಇದು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡುವಂತಹ ರಾಸಾಯನಿಕವನ್ನು ಕೂಡ ಒಳಗೊಂಡಿದೆ. ಬೀಟಾ-ಥಲಸ್ಸೆಮಿಯಾ  ಎಂದು ಕರೆಯಲ್ಪಡುವ ರಕ್ತದಲ್ಲಿನ ಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡುವ ರಕ್ತದ ಸಮಸ್ಯೆಯನ್ನು ಬಗೆಹರಿಸಲು ಇದು ಸಹಾಯ ಮಾಡುತ್ತದೆ.

ಕೆಲವು  ಸಂಶೋಧನೆಗಳ ಪ್ರಕಾರ 100 ಎಂಎಲ್ ಗೋಧಿ ಹುಲ್ಲಿನ ರಸವನ್ನು 18 ತಿಂಗಳವರೆಗೆ ಕುಡಿಯುವುದು ಅಥವಾ 1-4 ಗ್ರಾಂ ವೀಟ್ ಗ್ರಾಸ್ ಹೊಂದಿರುವ ಮಾತ್ರೆಗಳನ್ನು 12 ತಿಂಗಳುಗಳವರೆಗೆ ಸೇವಿಸುವುದರಿಂದ ಬೀಟಾ-ಥಲಸ್ಸೆಮಿಯಾ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಬಾಳೆಹಣ್ಣು ಹಾಳಾಗದಂತೆ ಕಾಪಾಡಲು ಹೀಗೆ ಮಾಡಿ..

ಹಿಮ್ಮಡಿ ನೋವು

6 ವಾರಗಳವರೆಗೆ ದಿನಕ್ಕೆ ಎರಡು ಬಾರಿ ಪಾದದ ಕೆಳಭಾಗಕ್ಕೆ ವೀಟ್ ಗ್ರಾಸ್ ಕ್ರೀಮ್ ಹಚ್ಚುವುದರಿಂದ ಹಿಮ್ಮಡಿ ನೋವು ಕಡಿಮೆಯಾಗುವುದಿಲ್ಲ ಎಂದು ಸಂಶೋಧನೆಗಳು ಸಾಬೀತು ಮಾಡಿವೆ.

ಅಧಿಕ ಕೊಲೆಸ್ಟ್ರಾಲ್

ಸಂಶೋಧನೆಯ ಪ್ರಕಾರ, 10 ವಾರಗಳವರೆಗೆ ವೀಟ್ ಗ್ರಾಸ್ ಪೌಡರ್ ಅನ್ನು ಕ್ಯಾಪ್ಸುಲ್ ಮೂಲಕ ಪ್ರತಿದಿನ ತೆಗೆದುಕೊಳ್ಳುವುದರಿಂದ ಒಟ್ಟು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡಿ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಮಹಿಳೆಯರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಹ ಹೇಳಲಾಗುತ್ತದೆ.

ರಕ್ತಹೀನತೆ

ಈ ವೀಟ್ ಗ್ರಾಸ್ ಜ್ಯೂಸ್ ಅಥವಾ ಅದರ ಮಾತ್ರೆಯ ಸೇವನೆ ಮಾಡುವುದು ರಕ್ತ ಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂಬುದು ಸಾಬೀತಾಗಿದೆ.

ಇಷ್ಟೇ ಅಲ್ಲದೇ ವೀಟ್ ಗ್ರಾಸ್ ಪದಾರ್ಥಗಳ ಸೇವನೆ ಈ ಕೆಳಗಿನ ಸಮಸ್ಯೆಗಳಿಗೆ ಸಹ ಪರಿಹಾರ ನೀಡುತ್ತದೆ.

ಕ್ಯಾನ್ಸರ್

ಮಧುಮೇಹ

ತೀವ್ರ ರಕ್ತದೊತ್ತಡ

ಸೋಂಕು

ಹಲ್ಲಿನ ಸಮಸ್ಯೆ

ಗಾಯದ ಸಮಸ್ಯೆ

ವೀಟ್​ಗ್ರಾಸ್ ಸೇವನೆ ಮಾಡುವ ಮುನ್ನ ಈ ಅಂಶಗಳನ್ನು ನೆನಪಿಡಿ

ಗರ್ಭಧಾರಣೆ ಮತ್ತು ಸ್ತನ್ಯಪಾನ: ಗರ್ಭಿಣಿಯರು ಅಥವಾ ಸ್ತನ್ಯಪಾನ ಮಾಡಿಸುವವರು ವೀಟ್ ಗ್ರಾಸ್  ಸೇವಿಸುವುದು ಸುರಕ್ಷಿತ ಎಂಬುದು ಇನ್ನು ಸಾಬೀತಾಗಿಲ್ಲ. ಹಾಗಾಗಿ ಗರ್ಭಿಣಿಯರು ಮತ್ತು ಬಾಳಂತಿಯರು ಇದರ ಸೇವನೆ ಮಾಡಬಾರದು.

ಮಧುಮೇಹ: ಮಧುಮೇಹ ಇರುವವರಲ್ಲಿ ವೀಟ್ ಗ್ರಾಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ನಿಮಗೆ ಮಧುಮೇಹವಿದ್ದರೆ ಮತ್ತು ಗೋಧಿ ಹುಲ್ಲನ್ನು ಬಳಸಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಮತೋಲನ ಮಾಡುವ ಕಡೆ ಗಮನ ನೀಡಬೇಕು.

ಶಸ್ತ್ರಚಿಕಿತ್ಸೆ: ವೀಟ್ ಗ್ರಾಸ್ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಬಹುದು ಮತ್ತು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರ ರಕ್ತದಲ್ಲಿನ ಸಕ್ಕರೆಯ ನಿಯಂತ್ರಣದಲ್ಲಿ  ಸಮಸ್ಯೆ ಮಾಡಬಹುದು. ನಿಗದಿತ ಶಸ್ತ್ರಚಿಕಿತ್ಸೆಗೆ ಕನಿಷ್ಠ 2 ವಾರಗಳ ಮೊದಲು ಗೋಧಿ ಹುಲ್ಲನ್ನು ಔಷಧಿಯಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಿ.

ಇದನ್ನೂ ಓದಿ: ಪಾಪ್​ ಕಾರ್ನ್​ನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು ..

ಗೋಧಿ ಹುಲ್ಲಿನ ಪದಾರ್ಥಗಳನ್ನು ಸೇವನೆ   ವಯಸ್ಸು, ಆರೋಗ್ಯ ಮತ್ತು ಹಲವಾರು ಇತರ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಸಮಯದಲ್ಲಿ ಗೋಧಿ ಹುಲ್ಲಿಗೆ ಸೂಕ್ತವಾದ ಪ್ರಮಾಣವನ್ನು ನಿರ್ಧರಿಸಲು ಸಾಕಷ್ಟು ವೈಜ್ಞಾನಿಕ ಮಾಹಿತಿಯಿಲ್ಲ. ವೈದ್ಯರನ್ನು ಸಂಪರ್ಕಿಸಿ ಸೇವನೆ ಮಾಡುವುದು ಉತ್ತಮ.
Published by:Sandhya M
First published: