• Home
  • »
  • News
  • »
  • lifestyle
  • »
  • Fish Oil: ಕಣ್ಣಿನ ಆರೋಗ್ಯ ಮಾತ್ರವಲ್ಲದೇ, ತೂಕ ಇಳಿಕೆಗೂ ಸಹಕಾರಿ ಮೀನಿನ ಎಣ್ಣೆ

Fish Oil: ಕಣ್ಣಿನ ಆರೋಗ್ಯ ಮಾತ್ರವಲ್ಲದೇ, ತೂಕ ಇಳಿಕೆಗೂ ಸಹಕಾರಿ ಮೀನಿನ ಎಣ್ಣೆ

ಮೀನಿನ ಎಣ್ಣೆ

ಮೀನಿನ ಎಣ್ಣೆ

Fish oil Benefits: ದೇಹದಲ್ಲಿನ ಕೊಬ್ಬು ಕರಗಿಸಿ ಕೊಳ್ಳಬೇಕು ಎಂದು ಬಯಸುತ್ತಿರುವವರು ಹಲವಾರು ಆಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡುತ್ತಾರೆ.. ತಮ್ಮ ಡಯಟ್ ಚಾರ್ಟ್ ನಲ್ಲಿ ಮೀನಿನ ಎಣ್ಣೆ ಸೇರಿಸಿಕೊಂಡರೆ ತೂಕ ಇಳಿಕೆ ಮಾಡಿಕೊಳ್ಳಬೇಕು ಎನ್ನುತ್ತಿರುವವರು ಸುಲಭವಾಗಿ ತೂಕ ಕಳೆದುಕೊಳ್ಳಬಹುದು

ಮುಂದೆ ಓದಿ ...
  • Share this:

    ಸಮುದ್ರದಲ್ಲಿ(ocean) ಸಿಗುವಂತಹ ಹೆಚ್ಚಿನ ಮೀನು(Fish) ಹಾಗೂ ಮೀನಿಗೆ ಜಾತಿಗೆ ಸೇರಿದ ಪ್ರತಿಯೊಂದನ್ನು ಮನುಷ್ಯ ಸೇವನೆ ಮಾಡುತ್ತಾನೆ. ಮಾಂಸಾಹಾರಿಗಳಿಗೆ(Non veg) ಹೆಚ್ಚು ಪ್ರಿಯವಾಗಿರುವ ಮೀನಿನಿಂದ ನಮ್ಮ ದೇಹಕ್ಕೆ(Body) ಹಲವಾರು ರೀತಿಯ ಆರೋಗ್ಯ(Health) ಲಾಭಗಳು ಇವೆ. ಮೀನು ನಮಗೆ ತಕ್ಷಣ ಶಕ್ತಿ, ಕೊಲೆಸ್ಟ್ರಾಲ್(cholesterol) ಮಟ್ಟ ನಿಯಂತ್ರಣ, ಅಪಧಮನಿ ಆರೋಗ್ಯ ಸುಧಾರಣೆ, ಮಾನಸಿಕ ಆರೋಗ್ಯ(Mental Health) ಸುಧಾರಣೆ, ಶ್ವಾಸಕೋಶದ ಆರೋಗ್ಯಕ್ಕೆ ಸಹಕಾರಿ, ನಿದ್ರಾಹೀನತೆ ತಡೆಯುವುದು, ಚರ್ಮಕ್ಕೆ ಕಾಂತಿ ನೀಡುವುದು ಮತ್ತು ಹಾನಿಗೀಡಾಗಿರುವಂತಹ ತಲೆಬುರುಡೆಯನ್ನು ಸರಿಪಡಿಸುವುದು ಹಲವಾರು ಆರೋಗ್ಯ ಪ್ರಯೋಜನಗಳಿವೆ.. ಮೀನಿನ ಇಷ್ಟೆಲ್ಲ ಉಪಯೋಗ ಇರುವಾಗ ಮೀನಿನ ಎಣ್ಣೆ ಸೇವನೆಯ ಮಾಡುವುದರಿಂದ ದೇಹಕ್ಕೆ ಇನ್ನೆಷ್ಟು ಪ್ರಯೋಜನ ಸಿಗಬಹುದು ನೀವೇ ಹೇಳಿ.


    ಮೀನಿನ ಎಣ್ಣೆಯಲ್ಲಿ ಇದೆ ಆರೋಗ್ಯದ ಗುಟ್ಟು


    ಮೀನಿನಂತೆ ಮೀನಿನ ಎಣ್ಣೆಯಲ್ಲಿ ಹಲವಾರು ಪೋಷಕಾಂಶಗಳು ಅಡಕವಾಗಿವೆ. ಒಮೆಗಾ -3 ಕೊಬ್ಬಿನಾಮ್ಲಗಳು ಮೀನಿನಲ್ಲಿ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕಾಣಿಸಿಕೊಳ್ಳುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಮೀನಿನ ಎಣ್ಣೆ ಸಹಕಾರಿ .ಫಿಶ್ ಆಯಿಲ್ 30 ಶೇಕಡಾದಷ್ಟು ಮೀನಿನ ಎಣ್ಣೆ ಅಂಶದಿಂದಲೂ, ಉಳಿದ 70 ಶೇಕಡಾ ಇತರೆ ಅಗತ್ಯ ನ್ಯೂಟ್ರಿಯಂಟ್ಸ್ ಗಳಿಂದಲೂ ತಯಾರಿಸಲ್ಪಡುತ್ತೆ. ತೂಕ ಇಳಿಸುವುದರಿಂದ ಹಿಡಿದು ಕ್ಯಾನ್ಸರ್ ವರೆಗಿನ ಹಲವು ಕಾಯಿಲೆಗಳಿಗೆ ಫಿಶ್ ಆಯಿಲ್ ಬಳಕೆ ಮಾಡಲಾಗುತ್ತೆ.


    ಇದನ್ನೂ ಓದಿ: ಒಂದು ಮೀನಿಗಾಗಿ 5,600ಕ್ಕೂ ಹೆಚ್ಚು ಬಾರಿ ಸಮುದ್ರದಾಳದಲ್ಲಿ ಹುಡುಕಾಟ ನಡೆಸಿದ್ರು, ಅಂತೂ ಸಿಕ್ತು!


    1) ಹೃದಯದ ಆರೋಗ್ಯ ಕಾಪಾಡಲು: ಸಾಮಾನ್ಯವಾಗಿ ವೈದ್ಯರು ಹೃದಯ ರೋಗಿಗಳಿಗೆ ಸೇವನೆ ಮಾಡಲು ತಿಳಿಸುತ್ತಾರೆ. ಯಾಕಂದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತದೆ.. ಅದೇ ರೀತಿ ಮೀನಿನ ಎಣ್ಣೆ ಸೇವನೆ ಮಾಡುವುದರಿಂದ, ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ಹೃದಯಘಾತದಿಂದ ತಪ್ಪಿಸಿಕೊಳ್ಳಬಹುದು.


    2) ತೂಕ ಇಳಿಕೆಗೆ ಸಹಕಾರಿ: ದೇಹದಲ್ಲಿನ ಕೊಬ್ಬು ಕರಗಿಸಿ ಕೊಳ್ಳಬೇಕು ಎಂದು ಬಯಸುತ್ತಿರುವವರು ಹಲವಾರು ಆಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡುತ್ತಾರೆ.. ತಮ್ಮ ಡಯಟ್ ಚಾರ್ಟ್ ನಲ್ಲಿ ಮೀನಿನ ಎಣ್ಣೆ ಸೇರಿಸಿಕೊಂಡರೆ ತೂಕ ಇಳಿಕೆ ಮಾಡಿಕೊಳ್ಳಬೇಕು ಎನ್ನುತ್ತಿರುವವರು ಸುಲಭವಾಗಿ ತೂಕ ಕಳೆದುಕೊಳ್ಳಬಹುದು..


    3) ಮಾನಸಿಕ ಆರೋಗ್ಯಕ್ಕೆ ಸಹಕಾರಿ: ಪ್ರಸ್ತುತ ದಿನಮಾನಗಳಲ್ಲಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯ ಅತಿಮುಖ್ಯ. ಮೀನಿನ ಎಣ್ಣೆ ಯಲ್ಲಿ ಇರುವ
    ಒಮೆಗಾ 3 ಫ್ಯಾಟಿ ಆಸಿಡ್ ಗಳು ನಮ್ಮ ಮೆದುಳಿನ ಕಾರ್ಯಚಟುವಟಿಕೆಗೆ ಸಹಕಾರಿಯಾಗಿದೆ.ಸ್ಕಿಝೋಫ್ರೇನಿಯಾ, ಸೈಕೋಟಿಕ್ ಡಿಸಾರ್ಡರ್, ಬೈಪೋಲಾರ್ ಡಿಸಾರ್ಡರ್ ತುಂಬಾ ಮಾನಸಿಕ ಕಾಯಿಲೆಗಳು ಬರದಂತೆ ತಡೆಯಲು ಮೀನಿನ ಎಣ್ಣೆ ಸಹಕಾರಿಯಾಗಿದೆ .


    4) ಕಣ್ಣಿನ ಆರೋಗ್ಯಕ್ಕೆ ಸಹಕಾರಿ: ಮೀನು ಸೇವನೆಯಿಂದ ಎ ವಿಟಮಿನ್ ನಮ್ಮ ದೇಹಕ್ಕೆ ದೊರಕುತ್ತದೆ.. ಹೀಗಾಗಿ ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದೇ ರೀತಿ ಮೀನಿನಲ್ಲಿರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ ವಯಸ್ಸಾದಂತೆ ಕಣ್ಣಿಗೆ ಪೊರೆ ಬರುವುದು, ಕಣ್ಣು ಕಾಣಿಸದಂತೆ ಆದವರಿಗೆ ಕಣ್ಣಿಗೆ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸಿ ಕಣ್ಣಿನ ಆರೋಗ್ಯ ಕಾಪಾಡಲು ಸಹಾಯಕಾರಿಯಾಗಿದೆ.


    5) ಕ್ಯಾನ್ಸರ್ ನಿಂದ ರಕ್ಷಣೆ: ಪ್ರಸ್ತುತ ದಿನಮಾನಗಳಲ್ಲಿ ಜಗತ್ತನೆ ನಡುಗಿಸುತ್ತಿರುವ ಮಹಾಮಾರಿ ಕ್ಯಾನ್ಸರ್ ಇದುವರೆಗೂ ಕ್ಯಾನ್ಸರ್ ಗೆ ಮದ್ದು ಕಂಡು ಹಿಡಿಯಲಾಗಿಲ್ಲ.. ಆದರೆ ಕೆಲವೊಂದು ಆಹಾರಗಳ ಸೇವನೆಯಿಂದ ಕ್ಯಾನ್ಸರ್ ನಿಂದ ದೂರ ಇರಬಹುದು.
    ಇಂತಹ ಆಹಾರ ಪದಾರ್ಥಗಳಲ್ಲಿ ಮೀನಿನ ಎಣ್ಣೆ ಕೂಡ ಒಂದು.. ಮೀನಿನ ಎಣ್ಣೆ ಬಳಕೆ ಮಾಡುವುದರಿಂದ ಬ್ರೆಸ್ಟ್ ಕ್ಯಾನ್ಸರ್, ಪ್ರೋಸ್ಟೇಟ್ ಕ್ಯಾನ್ಸರ್ ನಂತ ವಿವಿಧ ಕ್ಯಾನ್ಸರ್ ಸೆಲ್ ಗಳ ನಿವಾರಣೆಗೆ ಫಿಶ್ ಆಯಿಲ್ ಸಹಕರಿಸುತ್ತೆ.


    ಇದನ್ನೂ ಓದಿ: ಭಾರತದ ಬೆಸ್ಟ್ ಸೀ ಫುಡ್​ಗಳನ್ನು ಸವಿಬೇಕು ಅಂದ್ರೆ ಈ ಸ್ಥಳಗಳಿಗೆ ಭೇಟಿ ನೀಡಿ


    6) ಚರ್ಮದ ಆರೋಗ್ಯಕ್ಕೆ: ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇದ್ದೇ ಇರುತ್ತದೆ.. ಇಂಥವರು ಮೀನಿನ ಎಣ್ಣೆಯ ನಿಯಮಿತವಾಗಿ ಬಳಕೆ ಮಾಡುವುದರಿಂದ ತಮ್ಮ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ತುರಿಕೆ, ರ್ಯಾಷಸ್ ಆಗುವುದು, ಚರ್ಮದಲ್ಲಿ ಕಜ್ಜಿಗಳು ಕಾಣಿಸಿಕೊಳ್ಳುವುದು ಹೀಗೆ ಚರ್ಮhea ಬೇರೆಬೇರೆ ಕಾಯಿಲೆಗಳಿಗೆ ಮೀನಿನ ಎಣ್ಣೆ ಸಹಕಾರಿ

    Published by:ranjumbkgowda1 ranjumbkgowda1
    First published: