HOME » NEWS » Lifestyle » HEALTH BENEFITS OF SWITCHING TO BROWN RICE ZP

ದೇಹ ತೂಕ ಇಳಿಕೆಗೆ ಕಂದು ಅಕ್ಕಿ ಸಹಕಾರಿ: ಇದರ ಇನ್ನಿತರ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಹೆಲ್ತ್‌ಲೈನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಂದು ಅಕ್ಕಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಫೈಬರ್ ಮತ್ತು ಪ್ರಯೋಜನಕಾರಿ ಸಂಯುಕ್ತಗಳಿಂದ ತುಂಬಿದ್ದು, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

news18-kannada
Updated:March 3, 2021, 7:16 AM IST
ದೇಹ ತೂಕ ಇಳಿಕೆಗೆ ಕಂದು ಅಕ್ಕಿ ಸಹಕಾರಿ: ಇದರ ಇನ್ನಿತರ ಪ್ರಯೋಜನಗಳನ್ನು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
  • Share this:
ಬ್ರೌನ್ ರೈಸ್ ಅಥವಾ ಕಂದು ಅಕ್ಕಿ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಇದು ತುಂಬಾ ಪೌಷ್ಟಿಕವಾಗಿದೆ. ಹಾಗೆಯೇ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅನೇಕರು ದೇಹ ತೂಕ ಹೆಚ್ಚಾಗಬಹುದೆಂಬ ಭಯದಿಂದ ಈ ಅಕ್ಕಿಯನ್ನು ತಿನ್ನುವುದಿಲ್ಲ. ಆದರೆ ಬಿಳಿ ಅಕ್ಕಿಗೆ ಹೋಲಿಸಿದರೆ, ಅದು ಹೆಚ್ಚು ಪೌಷ್ಟಿಕವಾಗಿದೆ. ಇದು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ. ಇದರಲ್ಲಿ ಸಾಕಷ್ಟು ಮ್ಯಾಂಗನೀಸ್, ರಂಜಕ, ಸೆಲೆನಿಯಮ್ ಮತ್ತು ಕಬ್ಬಿಣಾಂಶಗಳು ಕಂಡುಬರುತ್ತದೆ. ಇದು ದೇಹದಲ್ಲಿನ ಕ್ಯಾಲೊರಿಗಳನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರಹಿಸುತ್ತದೆ. ಅದರ ಜೊತೆಗೆ, ಇದು ಇತರ ಹಲವು ಆರೋಗ್ಯಕರ ಪ್ರಯೋಜನಗಳನ್ನು ಸಹ ಹೊಂದಿದೆ.

ಮಧುಮೇಹ ತಡೆಗಟ್ಟುವಿಕೆ: ಕಂದು ಅಕ್ಕಿ ಆಹಾರ ಸೇವನೆಯು ಟೈಪ್ 2 ಮಧುಮೇಹವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಬ್ರೌನ್ ರೈಸ್ ಬಿಳಿ ಅಕ್ಕಿಗಿಂತ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ.

ಹೃದಯದ ಆರೋಗ್ಯ: ಹೆಲ್ತ್‌ಲೈನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಂದು ಅಕ್ಕಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಫೈಬರ್ ಮತ್ತು ಪ್ರಯೋಜನಕಾರಿ ಸಂಯುಕ್ತಗಳಿಂದ ತುಂಬಿದ್ದು, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ, ಯುವಕರಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಸಹ ಸಂಭವಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಕೊಲೆಸ್ಟ್ರಾಲ್ ಅನ್ನು ಸಮತೋಲನದಲ್ಲಿಡುವುದು ಬಹಳ ಮುಖ್ಯ. ಇಲ್ಲದಿದ್ದರೆ ಅದು ನಿಮ್ಮ ನರಗಳನ್ನು ನಿರ್ಬಂಧಿಸುತ್ತದೆ. ಕಂದು ಅಕ್ಕಿಯಿಂದ ಬರುವ ನೀರು ಅಪರ್ಯಾಪ್ತ ತೈಲವನ್ನು ಹೊಂದಿರುತ್ತದೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೆದುಳನ್ನು ಆರೋಗ್ಯವಾಗಿರಿಸುತ್ತದೆ: ಆಧುನಿಕ ಜೀವನ ಶೈಲಿಯಲ್ಲಿ, ನಾವು ಅನೇಕ ರೀತಿಯ ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗಿದೆ. ಅನೇಕ ಮಾನಸಿಕ ಕಾಯಿಲೆಗಳ ಅಪಾಯವಿದೆ. ಕಂದು ಅಕ್ಕಿಯಲ್ಲಿ ಮ್ಯಾಂಗನೀಸ್ ಕಂಡುಬರುತ್ತದೆ. ಈ ಪೋಷಕಾಂಶವು ನರಮಂಡಲಕ್ಕೆ ಅನುಕೂಲವಾಗುವ ಕೊಬ್ಬಿನಾಮ್ಲಗಳು ಮತ್ತು ಹಾರ್ಮೋನುಗಳ ರಚನೆಗೆ ಸಹಾಯ ಮಾಡುತ್ತದೆ.

ದೇಹ ತೂಕ ಇಳಿಸಿಕೊಳ್ಳಲು ಸಹಾಯಕ: ಬಿಳಿ ಅಕ್ಕಿಗಿಂತ ಕಂದು ಅಕ್ಕಿಯಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆ. ಇದು ದೇಹ ತೂಕ ಇಳಿಕೆಗೆ ಅತ್ಯಂತ ಸಹಕಾರಿಯಾಗಿದೆ. ಬ್ರೌನ್ ರೈಸ್‌ನಲ್ಲಿ ಅತಿಯಾದ ಪ್ರಮಾಣದ ಫೈಬರ್ ಇದ್ದು, ಇದು ಚಯಾಪಚಯವನ್ನು ಆರೋಗ್ಯಕರವಾಗಿರಿಸುತ್ತದೆ. ನಿಯಮಿತವಾಗಿ ಕಂದು ಅಕ್ಕಿಯ ಸೇವನೆಯಿಂದ ದೇಹ ತೂಕವನ್ನು ನಿಯಂತ್ರಣದಲ್ಲಿಡಬಹುದು.
Published by: zahir
First published: March 3, 2021, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories