Sunlight Benefits: ಸೂರ್ಯನ ಬೆಳಕಿನಲ್ಲಿದೆ ಆರೋಗ್ಯದ ಹಲವು ಗುಟ್ಟುಗಳು

Benefits of Sunlight :ವೈದ್ಯರು ಸಹ ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಪೂರೈಕೆ ಮಾಡಿಕೊಳ್ಳಲು ಪ್ರತಿನಿತ್ಯ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಲ್ಲಲು ಸೂಚನೆ ನೀಡುತ್ತಾರೆ. ಸೂರ್ಯನ ಬೆಳಕಿಗೆ ಮೈಯೊಡ್ಡಿ ನಿಲ್ಲುವುದರಿಂದ ನೈಸರ್ಗಿಕವಾಗಿ ದೇಹದಲ್ಲಿ ಡಿ ವಿಟಮಿನ್ ಉತ್ಪಾದನೆಯಾಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸೂರ್ಯ(Sun) ಈ ಜಗತ್ತಿನಲ್ಲಿ (World)ಎಲ್ಲದಕ್ಕೂ ಮೂಲ.. ನಾವು ಸೇವಿಸುವ ಆಹಾರವೂ (Food)ಕೂಡ ಸೂರ್ಯನ ಬೆಳಕಿನ (Sun light)ಸಹಾಯದಿಂದಲೇ ತಯಾರಾಗಿದ್ದು.. ಅಲ್ಲದೇ ಸೂರ್ಯನ ಕಿರಣಗಳು ನಮ್ಮ ಆರೋಗ್ಯಕ್ಕೂ (Health) ಸಹಾಯಕಾರಿ. ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಲ್ಲುವುದರಿಂದ ನಮ್ಮ ದೇಹಕ್ಕೆ(Body)ಹತ್ತು ಹಲವು ಪ್ರಯೋಜನಗಳಿವೆ.. ಹೀಗಾಗಿ ಆಯುರ್ವೇದ (Ayurveda)ಯೋಗದಲ್ಲಿ(Yoga) ಸಹ ಪ್ರತಿ ನಿತ್ಯ ಸೂರ್ಯನಮಸ್ಕಾರ(Surya Namaskara)ಮಾಡುವುದರ ಬಗ್ಗೆ ಉಲ್ಲೇಖವಿದೆ... ವೈದ್ಯರು ಸಹ ನಮ್ಮ ದೇಹಕ್ಕೆ ಬೇಕಾದ ವಿಟಮಿನ್(Vitamin)ಪೂರೈಕೆ ಮಾಡಿಕೊಳ್ಳಲು ಪ್ರತಿನಿತ್ಯ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಲ್ಲಲು ಸೂಚನೆ ನೀಡುತ್ತಾರೆ.... ಆಗಿದ್ರೆ ಪ್ರತಿನಿತ್ಯ ಸೂರ್ಯನ ಕಿರಣಗಳು ನಮ್ಮನ್ನ ಸ್ಪರ್ಶ ಮಾಡುವುದರಿಂದ ಸಿಗುವ ಉಪಯೋಗಗಳು ಏನು ಎನ್ನುವ ಮಾಹಿತಿ ಇಲ್ಲಿದೆ..

    ಜಗತ್ತಿಗೆ ಮಾತ್ರವಲ್ಲ ದೇಹದ ಆರೋಗ್ಯಕ್ಕೂ ಬೆಳಕು ನೀಡುವ ಸೂರ್ಯ..

    ಕೆಲವರು ಸೂರ್ಯ ನೆತ್ತಿಯ ಮೇಲೆ ಬಂದರೂ ಸಹ ನಿದ್ರೆ ಮಾಡುವುದನ್ನು ಬಿಡಲ್ಲ.. ಸೂರ್ಯನ ಬೆಳಕಿಗೆ ಬಂದು ಎಲ್ಲಿ ಚರ್ಮಕ್ಕೆ ಹಾನಿ ಆಗುತ್ತದೆ ಎನ್ನುವ ಭಯದಿಂದ ಎಷ್ಟೋ ಜನರು ಸೂರ್ಯನ ಕಿರಣಗಳು ತಮ್ಮ ದೇಹವನ್ನು ಸ್ಪರ್ಶಿಸಿದಂತೆ ಕಾಪಾಡಿಕೊಳ್ಳುತ್ತಾರೆ.. ಆದರೆ ಹೀಗೆ ಮಾಡುವುದರಿಂದ, ಕ್ಷಣಕಾಲಕ್ಕೆ ಮಾತ್ರ ಆರೋಗ್ಯಯುತವಾಗಿ ಇರುವಂತೆ ಕಂಡರೂ ನಮಗೆ ಗೊತ್ತಿಲ್ಲದ ಅನೇಕ ರೋಗಗಳು ನಮ್ಮನ್ನು ಆವರಿಸಿಕೊಳ್ಳುತ್ತದೆ. ಹೀಗಾಗಿ ಇದರಿಂದ ಮುಕ್ತಿ ಪಡೆಯಲು ನಾವು ವೈದ್ಯರ ಬಳಿ ಹೋದರೂ ಸಹ, ವೈದ್ಯರು ನಮ್ಮ ದೇಹಕ್ಕೆ ಅಗತ್ಯವಿರುವ ಡಿ ವಿಟಮಿನ್ ಹೆಚ್ಚಿಸಿಕೊಳ್ಳಲು ಸೂಚನೆ ನೀಡುತ್ತಾರೆ . ಜೊತೆಗೆ ಸೂರ್ಯನ ಬೆಳಕಿಗೆ ಮೈಯೊಡ್ಡಿ ನಿಲ್ಲಲು ಸೂಚಿಸುತ್ತಾರೆ. ಆಗಿದ್ರೆ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೈಸರ್ಗಿಕವಾಗಿ ಸಿಗುವ ಸೂರ್ಯನ ಬೆಳಕಿನ ಉಪಯೋಗ ಏನು ಎನ್ನುವ ಮಾಹಿತಿ ಇಲ್ಲಿದೆ..

    ಇದನ್ನೂ ಓದಿ : ಸೂರ್ಯನ ಬೆಳಕಿಗೆ ಹೆಚ್ಚು ಎಕ್ಸ್‌ಪೋಸ್‌ ಆದರೆ ಕೋವಿಡ್ -19 ಸಾವಿನ ಪ್ರಮಾಣ ಕಡಿಮೆಯಾಗಬಹುದು..!

    * ಚರ್ಮದ ರಕ್ಷಣೆ : ಮುಂಜಾನೆಯ ಎಳೆ ಬಿಸಿಲು ಅಥವಾ ಸಾಯಂಕಾಲದ ಬಿಸಿಲು ನಮ್ಮ ಮೈಮೇಲೆ ಸ್ಪರ್ಶ ಮಾಡುವುದರಿಂದ ನಮ್ಮ ಚರ್ಮದಲ್ಲಿ ಉಷ್ಣ ಅಧಿಕವಾಗುತ್ತದೆ.. ಇದರಿಂದ ಚರ್ಮದಲ್ಲಿ ಅಧಿಕ ರಕ್ತ ಸಂಚಾರವಾಗಿ ಚರ್ಮ ಆರೋಗ್ಯಯುತವಾಗುತ್ತದೆ.

    * ರಕ್ತದ ಹರಿವು ಸರಾಗವಾಗಿ ಸಾಗಲು : ಸೂರ್ಯನ ಬೆಳಕಿನಲ್ಲಿರುವ UVA ನೈಟ್ರಿಕ್ ಆಕ್ಸೈಡ್ ಅನ್ನು ಹೆಚ್ಚಿಸುತ್ತದೆ. ವಾಸೋಡಿಲೇಟರ್ ಇದು ರಕ್ತದ ಹರಿವು ಮತ್ತು ಆಮ್ಲಜನಕೀಕರಣವನ್ನು ಸುಧಾರಿಸುತ್ತದೆ ಮತ್ತು ಉಸಿರಾಟದ ದರ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.

    * ಶಕ್ತಿ ಹಾಗೂ ಆರೋಗ್ಯ ಹೆಚ್ಚಳ : ಹಗಲಿನಲ್ಲಿ ಸೂರ್ಯನಿಂದ ಬರುವ ಕೆಂಪು ಬಣ್ಣದ ಕಿರಣಗಳು, ಮೈಟೊಕಾಂಡ್ರಿಯಾದ ಕಾರ್ಯವನ್ನು ಸ್ಪರ್ಶಿಸುತ್ತದೆ. ಇದರಿಂದ ದೇಹದಲ್ಲಿ ಶಕ್ತಿ ವೃದ್ಧಿಯಾಗಿ ಆರೋಗ್ಯ ಸುಧಾರಣೆಯಾಗುತ್ತದೆ.

    * ಆತಂಕ ಮತ್ತು ಖಿನ್ನತೆ ನಿವಾರಣೆ : ಸೂರ್ಯನ ನೈಸರ್ಗಿಕ ಬೆಳಕು ನಮ್ಮ ನರಮಂಡಲದ ಮೇಲೆ ಬೀಳುವುದರಿಂದ ನರಮಂಡಲಗಳು ಚುರುಕಾಗಿ ಕಾರ್ಯ ನಿರ್ವಹಣೆ ಮಾಡುತ್ತವೆ.. ಸದಾ ಖಿನ್ನತೆ ಹಾಗೂ ಆತಂಕದಿಂದ ಬಳಲುತ್ತಿರುವವರು ಪಕ್ಷದಿಂದ ಆದಷ್ಟು ಬೇಗ ಚೇತರಿಕೆ ಮಾನಸಿಕ ಆರೋಗ್ಯ ಕಂಡುಕೊಳ್ಳುವರು.

    ಇದನ್ನೂ ಓದಿ : ಸೂರ್ಯನ ಬೆಳಕು ಕಾಣದೆ 28 ವರ್ಷದಿಂದ ಕಾಲ ಕಳೆಯುತ್ತಿರುವ ಮಹಿಳೆ: ಕಾರಣ ಹೀಗಿದೆ..!

    * ಹಾರ್ಮೋನ್ ಉತ್ಪಾದನೆ : ಸೂರ್ಯನ ನೀಲಿ ಬೆಳಕು ನಮ್ಮನ ಸದಾ ಎಚ್ಚರವಾಗಿರುತ್ತದೆ.. ದೇಹದಲ್ಲಿ ಅಗತ್ಯ ಪ್ರಮಾಣದ ಹಾರ್ಮೋನುಗಳನ್ನು ಉತ್ಪಾದನೆ ಮಾಡಿ, ಅಸ್ವಸ್ಥತೆ ಮತ್ತು ಖಿನ್ನತೆಯಿಂದ ದೂರಮಾಡುತ್ತದೆ..

    * ಉತ್ತಮ ನಿದ್ರೆಗಾಗಿ : ಬೆಳಗಿನ ವೇಳೆಯಲ್ಲಿ ಬೀಳುವ ಸೂರ್ಯನ ಬೆಳಗಿನಿಂದ ನಿದ್ರೆಯ ಹಾರ್ಮೋನಾದ ಮೆಲಟೋನಿನ್ ಪ್ರಮಾಣ ಸುಧಾರಿಸುತ್ತದೆ.. ಇದರಿಂದ ನಮ್ಮ ದೇಹಸ್ಥಿತಿಯಲ್ಲಿರಲಿದೆ.ಹೀಗಾಗಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಸೂರ್ಯನ ಬೆಳಕಿಗೆ ಮೈಯೊಡ್ಡಿ ನಿಲ್ಲುವುದು ಒಳಿತು..

    * ಡಿ ವಿಟಮಿನ್ ಹೆಚ್ಚಳ : ಕ್ಯಾನ್ಸರ್ ಮಾನಸಿಕ ಅಸ್ವಸ್ಥತೆ ಮಧುಮೇಹ ನರಮಂಡಲದ ಸಮಸ್ಯೆಗಳು ಡಿ ವಿಟಮಿನ್ ಕೊರತೆಯಿಂದ ಬರುತ್ತವೆ.. ಹೀಗಾಗಿ ಸೂರ್ಯನ ಬೆಳಕಿಗೆ ಮೈಯೊಡ್ಡಿ ನಿಲ್ಲುವುದರಿಂದ ನೈಸರ್ಗಿಕವಾಗಿ ದೇಹದಲ್ಲಿ ಡಿ ವಿಟಮಿನ್ ಉತ್ಪಾದನೆಯಾಗುತ್ತದೆ.. ಇದರಿಂದ ಆರೋಗ್ಯ ಸುಧಾರಣೆಯ ಸದಾ ಲವಲವಿಕೆಯಿಂದ ಇರಬಹುದು
    Published by:ranjumbkgowda1 ranjumbkgowda1
    First published: