Health Tips: ರುಚಿಯಾದ ಸ್ಟ್ರಾಬೆರಿ ತಿಂದು ತೂಕ ಇಳಿಸಿ, ಈ ಹಣ್ಣು ತಿಂದ್ರೆ ಬರಲ್ಲ ಹೃದ್ರೋಗದ ಸಮಸ್ಯೆ

ಸ್ಟ್ರಾಬೆರಿ ಹಣ್ಣಿನಲ್ಲಿ ಪೊಟ್ಯಾಶಿಯಮ್ ಹಾಗೂ ವಿಟಮಿನ್ ಸಿ ಗಳಿದ್ದು ಇದು ತೂಕ ಇಳಿಸುವಿಕೆಗೆ ಸಹಕರಿಸುವಲ್ಲಿ ಪ್ರಮುಖವಾಗಿವೆ ಎನ್ನಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಮ್ಮೊಮ್ಮೆ ಗಮನಿಸಿ ನೋಡಿ ಬಾಯಿಗೆ ರುಚಿ ಎನಿಸುವ ಆಹಾರ ಪದಾರ್ಥಗಳು (Food Items) ಆರೋಗ್ಯಕ್ಕೆ ಅತ್ಯುತ್ತಮವಾಗಿರಲ್ಲ. ಆದರೆ, ಆರೋಗ್ಯಕ್ಕೆ ಅತ್ಯುತ್ತಮ ಎನ್ನುವಂತಿರುವ ಆಹಾರ ಪದಾರ್ಥಗಳ ರುಚಿ ಅಷ್ಟಕ್ಕಷ್ಟೆ ಎನ್ನುವಂತಿರುತ್ತವೆ. ರುಚಿ (Test) ಮತ್ತು ಆರೋಗ್ಯ ಎರಡಕ್ಕೂ ಸೈ ಎನಿಸಿಕೊಳ್ಳುವ ಯಾವ ಪದರ್ಥಗಳು ಇಲ್ಲವೇ ಎಂದು ಚಿಂತಿಸಬೇಡಿ ಹಾಗೆಂದುಕೊಳ್ಳಬೇಡಿ. ರುಚಿಗೂ ಸೈ, ಆರೋಗ್ಯಕ್ಕೂ ಸೈ ಎನ್ನುವ ಹಣ್ಣಾದ ಸ್ಟ್ರಾಬೆರಿ (Strawberries) ಲಾಭಗಳ (Benefits) ಬಗ್ಗೆ ಒಂದೊಮ್ಮೆ ತಿಳಿಯಿರಿ. ಸ್ಟ್ರಾಬೆರಿ ಹಣ್ಣುಗಳನ್ನು ಸಾಮಾನ್ಯವಾಗಿ ಅಲಂಕಾರಿಕ ಹಣ್ಣುಗಳಲ್ಲಿ ನಾವು ಸೇರಿಸುತ್ತೇವೆ ಹಾಗೂ ಹೆಚ್ಚಾಗಿ ಐಸ್ ಕ್ರೀಮ್, ಕೇಕ್‌ಗಳಲ್ಲಿ ಇದನ್ನು ಬಳಸುತ್ತೇವೆ. ಆದರೆ, ಇದು ಅಲಂಕಾರಿಕ ಹಣ್ಣು ಮಾತ್ರವಲ್ಲ ಆರೋಗ್ಯಕ್ಕೂ ಹಲವು ಲಾಭಗಳನ್ನು ಒದಗಿಸುತ್ತದೆ ಎಂಬುದು ಗಮನದಲ್ಲಿರಲಿ.

ನೋಡಲು ಆಕರ್ಷಕವಾಗಿ ಕಂಗೊಳಿಸುವ ಸ್ಟ್ರಾಬೆರಿ ಹಣ್ಣುಗಳು ತಿನ್ನಲು ರುಚಿಯಾಗಿರುವುದಲ್ಲದೆ ಹಲವು ಬಗೆಯ ಪೋಷಕಾಂಶ ತತ್ವಗಳಿಂದ ಸಮೃದ್ಧವಾಗಿದ್ದು ಆರೋಗ್ಯಕ್ಕೆ ಹಲವು ಬಗ್ಗೆಗಳಲ್ಲಿ ಸಹಾಯಕವಾಗಿದೆ. ಈ ಹಣ್ಣುಗಳ ಸೇವನೆಯಿಂದ ಮನುಷ್ಯನ ಶರೀರಕ್ಕೆ ಸಾಕಷ್ಟು ಪ್ರಯೋಜನಗಳು ದೊರೆಯಲಿದ್ದು ಏನೆಲ್ಲ ಲಾಭಗಳು ಈ ಹಣ್ಣು ನೀಡುತ್ತದೆ, ಎಂಬುದನ್ನು ಬನ್ನಿ ತಿಳಿಯೋಣ.

ಸ್ಟ್ರಾಬೆರಿಯಲ್ಲಿರುವ ತತ್ವಗಳು

ಸ್ಟ್ರಾಬೆರಿ ಹಣ್ಣುಗಳು ಖನಿಜಗಳು ಹಾಗೂ ಜೀವಸತ್ವಗಳಿಂದ ಸಮೃದ್ಧವಾಗಿರುವುದು ಗೊತ್ತೇ ಇದೆ. ಇವುಗಳ ಹೊರತಾಗಿ ಸ್ಟ್ರಾಬೆರಿಗಳು ಆ್ಯಂಟಿ-ಆಕ್ಸಿಡೆಂಟ್‌ಗಳಿಂದಲೂ ಶ್ರೀಮಂತವಾಗಿವೆ ಹಾಗೂ ಈ ಆ್ಯಂಟಿ-ಆಕ್ಸಿಡೆಂಟ್‌ಗಳು ದೇಹದ ನೋವನ್ನು ಉಪಶಮನಗೊಳಿಸಲು ಪ್ರಮುಖ ಪಾತ್ರವಹಿಸುತ್ತವೆ. ಸ್ಟ್ರಾಬೆರಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸಲು ಸಾಕಷ್ಟು ಸಹಕರಿಸುತ್ತದೆ ಹಾಗೂ ಈ ಮೂಲಕ ಹೃದಯದ ಆರೋಗ್ಯಕ್ಕೆ ಸಹಕರಿಸುತ್ತದೆ. ತಜ್ಞರು ಹೇಳುವಂತೆ ಈ ಹಣ್ಣುಗಳಲ್ಲಿ ಕೊಲೆಸ್ಟ್ರಾಲ್ ಆಗಲಿ, ಕೊಬ್ಬಾಗಲಿ ಇರುವುದಿಲ್ಲ. ಹಾಗಾಗಿ ಇವು ಕಡಿಮೆ ಕ್ಯಾಲೋರಿ ಆಹಾರ ಪದಾರ್ಥಗಳಾಗಿದ್ದು ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ.

ಇದು ತೂಕ ಹೆಚ್ಚಿಸುತ್ತದೆಯೇ..?

ಹಾಗೆ ನೋಡಿದರೆ, ಸ್ಟ್ರಾಬೆರಿ ಹಣ್ಣುಗಳ ಕುರಿತು ಹಲವರಲ್ಲಿ ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಆದರೆ, ಪರಿಣಿತರ ಅಭಿಪ್ರಾಯದಂತೆ ಈ ನಂಬಿಕೆಯೂ ವಾಸ್ತವದಲ್ಲಿ ಅದಕ್ಕೆ ತದ್ವಿರುದ್ಧವಾಗಿದೆಯಂತೆ. ಅಂದರೆ, ಈ ಹಣ್ಣುಗಳಲ್ಲಿ ಉತ್ತಮ ಪ್ರಮಾಣದಲ್ಲಿ ಎನ್ನಬಹುದಾದ ಪೊಟ್ಯಾಶಿಯಮ್ ಹಾಗೂ ವಿಟಮಿನ್ ಸಿ ಗಳಿದ್ದು ಇದು ತೂಕ ಇಳಿಸುವಿಕೆಗೆ ಸಹಕರಿಸುವಲ್ಲಿ ಪ್ರಮುಖವಾಗಿವೆ ಎನ್ನಲಾಗಿದೆ. ಹಾಗಾಗಿ ಸ್ಟ್ರಾಬೆರಿ ಹಣ್ಣುಗಳು ತೂಕ ಇಳಿಕೆಗೆ ಸಹಕರಿಸುತ್ತವೆ ಎಂದೇ ಹೇಳಬಹುದು.

ಇದನ್ನೂ ಓದಿ: Health Tips: ಮಾಮೂಲಿ ಚಹಾ ಬಿಟ್ಟು ವೈಟ್ ಟೀ ಕುಡೀರಿ, ಪ್ರಯೋಜನ ಗೊತ್ತಾದ್ರೆ ನೀವು ಇದನ್ನು ಮಿಸ್ ಮಾಡೋದೇ ಇಲ್ಲ

ಇಷ್ಟೇ ಅಲ್ಲದೆ, ಈ ಹಣ್ಣುಗಳಲ್ಲಿ ವಿವಿಧ ಪೋಷಕಾಂಶಗಳು, ಫೈಬರ್ ಅಂಶ ಚೆನ್ನಾಗಿರುವುದರಿಂದ ಇದು ಪಚನ ಕ್ರಿಯೆಯನ್ನು ಸಹ ಉತ್ತಮಗೊಳಿಸುತ್ತದೆ ಹಾಗೂ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ತೂಕ ಇಳಿಸುವಿಕೆಗೂ ಸಾಕಷ್ಟು ಸಹಾಯ ಮಾಡುತ್ತದೆ ಎನ್ನುತ್ತಾರೆ ಡಯಟಿಶಿಯನ್‌ಗಳು.

ಪ್ರತಿರೋಧಕ ಶಕ್ತಿ

ಈಗಾಗಲೇ ನಮಗೆ ಗೊತ್ತಿರುವಂತೆ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯರು ಜನರನ್ನು ಕುರಿತು ವಿಟಮಿನ್ ಸಿ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸುವಂತೆ ಒತ್ತು ನೀಡಿದ್ದರು. ಏಕೆಂದರೆ, ಇದು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯುತ್ತಮವಾದ ಪಾತ್ರವಹಿಸುತ್ತದೆ. ಈ ಜೀವಸತ್ವ ಸಿ ಯು ಸ್ಟ್ರಾಬೆರಿ ಹಣ್ಣುಗಳಲ್ಲಿ ಯಥೇಚ್ಚವಾಗಿರುವುದರಿಂದ ಶರೀರದ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಸ್ಟ್ರಾಬೆರಿ ಸಹಕಾರಿಯಾಗಿದೆ. ಅಲ್ಲದೆ ಈ ಹಣ್ಣುಗಳಲ್ಲಿ ಉರಿಯೂತ-ವಿರೋಧಿ ಎನ್ಜೈಮ್‌ಗಳು, ಆ್ಯಂಟಿ-ಆಕ್ಸಿಡೆಂಟ್‌ಗಳು ಹೆಚ್ಚಾಗಿರುವುದರಿಂದ ಇದು ಶರೀರದ ಜೀರ್ಣಕ್ರಿಯೆಗೂ ಉತ್ತಮ ಉತ್ತೇಜನ ನೀಡುತ್ತದೆ.

ಇದನ್ನೂ ಓದಿ: Weight Loss: ಕಾರ್ನ್ ಸಲಾಡ್ ತಿನ್ನಿ ಸುಲಭವಾಗಿ ತೂಕ ಇಳಿಸಿ, ಹೈ-ಪ್ರೋಟೀನ್ ರೆಸಿಪಿ ಇಲ್ಲಿದೆ

ಸ್ಟ್ರಾಬೆರಿ ಹಣ್ಣುಗಳು ತನ್ನದೇ ಆದ ವಿಶಿಷ್ಟ ಅರೋಮಾ ಹಾಗೂ ಸ್ವಾದ ಹೊಂದಿದ್ದು ಸವಿಯಲು ಉತ್ತಮವಾಗಿರುತ್ತವೆ. ಆರೋಗ್ಯಕಾರಿ ಕ್ರಮದಲ್ಲಿ ಸೇವಿಸಬಯಸುವವರು ಇದನ್ನು ತಮ್ಮ ಸಲಾಡ್‌ನಲ್ಲಿ ಸೇರಿಸಿಕೊಂಡು ಸೇವಿಸಬಹುದು. ಉಪಾಹಾರದ ಸಮಯದಲ್ಲಿ ಓಟ್‍ಗಳೊಂದಿಗೆ ಸ್ಟ್ರಾಬೆರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎನ್ನಬಹುದಾಗಿದೆ.
Published by:Pavana HS
First published: