ಮೂಲಂಗಿಯನ್ನು ಮೂಲೆಗೆ ತಳ್ಳುವ ಮುನ್ನ ಇದರ ಆರೋಗ್ಯಕಾರಿ ಪ್ರಯೋಜನ ತಿಳಿದುಕೊಳ್ಳಿ

health benefits: ಪ್ರತಿದಿನ ಬೆಳಿಗ್ಗೆ ಕಚ್ಚಾ ಮೂಲಂಗಿಯನ್ನು ತಿನ್ನುವುದರಿಂದ ಕಾಮಾಲೆ ಅಲ್ಲದೆ ಮಧುಮೇಹ ರೋಗವನ್ನು ಸಹ ದೂರ ಮಾಡಬಹುದು. 

zahir | news18
Updated:August 1, 2019, 4:03 PM IST
ಮೂಲಂಗಿಯನ್ನು ಮೂಲೆಗೆ ತಳ್ಳುವ ಮುನ್ನ ಇದರ ಆರೋಗ್ಯಕಾರಿ ಪ್ರಯೋಜನ ತಿಳಿದುಕೊಳ್ಳಿ
Raddish
  • News18
  • Last Updated: August 1, 2019, 4:03 PM IST
  • Share this:
ಮನುಷ್ಯನಿಗೆ ಆರೋಗ್ಯ ಎಂಬುದು ಅತ್ಯವಶ್ಯಕ. ಅದರಲ್ಲೂ ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯಕಾರಿ ಆಹಾರಗಳತ್ತ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಅಂತಹ ಆಹಾರಗಳಲ್ಲೊಂದು ಮೂಲಂಗಿ. ಕೆಲವರಿಗೆ ಮೂಲಂಗಿ ಪದಾರ್ಥಗಳು ಇಷ್ಟವಾದರೆ, ಮತ್ತೆ ಕೆಲವರು ಹಸಿ ಮೂಲಂಗಿಯನ್ನು ತಿನ್ನುವುದು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇನ್ನು ಕೆಲವರು ಮೂಲಂಗಿಯಿಂದಲೇ ದೂರ. ಆದರೆ ಇದರಿಂದ ಸಿಗುವ ಪ್ರಯೋಜನಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಖಂಡಿತವಾಗಿಯು ಮೂಲಂಗಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವಿರಿ.

ಮೂತ್ರಪಿಂಡದ ಆರೋಗ್ಯ:
ಪೌಷ್ಠಿಕಾಂಶಗಳ ಆಗರವೇ ಆಗಿರುವ ಮೂಲಂಗಿ ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ನಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರ ಹಾಕುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ನ್ಯಾಚುರಲ್ ಕ್ಲಿಂಜರ್ ಎಂದು ಕರೆಯಲಾಗುವ ಮೂಲಂಗಿ ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುವ ಮೂಲಂಗಿ ಸೇವನೆಯಿಂದ ಮಲಬದ್ಧತೆ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಾಣಬಹುದು.

ಹೊಟ್ಟೆ ಸಂಬಂಧಿ ರೋಗಕ್ಕೆ ರಾಮಬಾಣ:
ಹಸಿವಾಗದಿರುವಂತಹ ಸಮಸ್ಯೆಗೆ ಮೂಲಂಗಿ ರಾಮಬಾಣ. ಇದಕ್ಕಾಗಿ ನೀವು ಮೂಲಂಗಿ ರಸದೊಂದಿಗೆ ಶುಂಠಿ ರಸವನ್ನು ಬೆರಸಿ ಕುಡಿಯಿರಿ. ಇದರಿಂದ ಹಸಿವು ಹೆಚ್ಚುವುದಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ದೂರ ಮಾಡುತ್ತದೆ.

ಕರಳಿನ ಆರೋಗ್ಯ ಹೆಚ್ಚಳ:
ಹೊಟ್ಟೆ ಉರಿಯೂತ, ಭಾರವಾಗುವಿಕೆ ಸಮಸ್ಯೆ ಕಂಡು ಬರುತ್ತಿದ್ದರೆ ಮೂಲಂಗಿ ರಸದಲ್ಲಿ ಉಪ್ಪನ್ನು ಸೇರಿಸಿ ಕುಡಿಯಿರಿ. ಇದು ನಿಮಗೆ ಆರಾಮ ನೀಡುವುದಲ್ಲೇ, ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡುತ್ತದೆ. ಹಾಗೆಯೇ ಪ್ರತಿನಿತ್ಯದ ಆಹಾರದಲ್ಲಿ ಮೂಲಂಗಿಯನ್ನು ಬಳಸುವುದರಿಂದ ಯಕೃತ್​ ಆರೋಗ್ಯವರ್ಧಿಸುತ್ತದೆ.ರಕ್ತದೊತ್ತಡ ನಿಯಂತ್ರಣ:
ಬಿಪಿ ತೊಂದರೆಯಿಂದ ಬಳಲುತ್ತಿರುವವರಿಗೆ ಮೂಲಂಗಿ ತುಂಬಾ ಪ್ರಯೋಜನಕಾರಿ. ಅಧಿಕ ರಕ್ತದೊತ್ತಡ ಹೊಂದಿರುವವರು ಮೂಲಂಗಿಯನ್ನು ತಿನ್ನುವುದರಿಂದ ಬ್ಲಡ್ ಪ್ಲೆಶರ್​ ನಿಯಂತ್ರಿಸಲು ಸಹಾಯಕವಾಗುತ್ತದೆ. ಇದಲ್ಲದೆ, ಈ ತರಕಾರಿಯಲ್ಲಿ ಗಣನೀಯ ಪ್ರಮಾಣದ ಪೊಟ್ಯಾಷಿಯಮ್ ಇದೆ. ಇದು ನಮ್ಮ ದೇಹದಲ್ಲಿ ಸೋಡಿಯಂ-ಪೊಟ್ಯಾಷಿಯಮ್ ಅನುಪಾತದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಇದರಿಂದ ರಕ್ತದೊತ್ತಡ ಸದಾ ನಿಯಂತ್ರಣದಲ್ಲಿರುತ್ತದೆ.

ಕಾಮಾಲೆಗೆ ಮನೆಮದ್ದು:
ಜಾಂಡೀಸ್ ಅಥವಾ ಕಾಮಾಲೆ ರೋಗಕ್ಕೆ ಮೂಲಂಗಿ ರಾಮಬಾಣ. ಕಾಮಾಲೆ ಕಾಣಿಸಿಕೊಳ್ಳುವ ಪ್ರಾರಂಭದಲ್ಲೇ ಆಹಾರದಲ್ಲಿ ತಾಜಾ ಮೂಲಂಗಿಯನ್ನು ಸೇರಿಸಿಕೊಳ್ಳಿ. ಇದರಿಂದ ಜಾಂಡೀಸ್ ರೋಗದಿಂದ ಮುಕ್ತಿ ಪಡೆಯಬಹುದು. ಪ್ರತಿದಿನ ಬೆಳಿಗ್ಗೆ ಕಚ್ಚಾ ಮೂಲಂಗಿಯನ್ನು ತಿನ್ನುವುದರಿಂದ ಕಾಮಾಲೆ ಅಲ್ಲದೆ ಮಧುಮೇಹ ರೋಗವನ್ನು ಸಹ ದೂರ ಮಾಡಬಹುದು.
First published: August 1, 2019, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading