• Home
  • »
  • News
  • »
  • lifestyle
  • »
  • Health Benefits Of Pulses: ದ್ವಿದಳ ಧಾನ್ಯಗಳ ಪ್ರಯೋಜನ ಒಂದೆರೆಡಲ್ಲ, ಸೆಲೆಬ್ರಿಟಿ ಟ್ರೈನರ್ ರುಜುತಾ ದಿವೇಕರ್ ಹೇಳ್ತಾರೆ ಕೇಳಿ

Health Benefits Of Pulses: ದ್ವಿದಳ ಧಾನ್ಯಗಳ ಪ್ರಯೋಜನ ಒಂದೆರೆಡಲ್ಲ, ಸೆಲೆಬ್ರಿಟಿ ಟ್ರೈನರ್ ರುಜುತಾ ದಿವೇಕರ್ ಹೇಳ್ತಾರೆ ಕೇಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Health Benefits Of Pulses by Rujuta Diwekar: ರುಜುತಾ ದಿವೇಕರ್ ಹೇಳುವಂತೆ ಧಾನ್ಯಗಳು ಒಳಗೊಂಡಿರುವ ಪೌಷ್ಟಿಕಾಂಶದ ಅಂಶದಿಂದಾಗಿ, ದ್ವಿದಳ ಧಾನ್ಯಗಳು ಚರ್ಮದ ಆರೋಗ್ಯ, ಕೂದಲಿನ ಆರೋಗ್ಯದಲ್ಲಿ ಸುಧಾರಣೆ ಮಾಡಲು ಸಹಾಯ ಮಾಡುತ್ತದೆ

  • Share this:

ಭಾರತೀಯ ಪಾಕಪದ್ಧತಿ (Indian) ಸಸ್ಯಾಹಾರಿಗಳಿಗೆ (Veg) ಸಾಕಷ್ಟು ಪ್ರೋಟೀನ್ ಆಯ್ಕೆಗಳನ್ನು ಹೊಂದಿದೆ, ದ್ವಿದಳ ಧಾನ್ಯಗಳು (Pulses) ಪ್ರಾಥಮಿಕ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬೇಳೆಕಾಳುಗಳು ನಿಸ್ಸಂದೇಹವಾಗಿ, ಪ್ರತಿಯೊಬ್ಬ ಭಾರತೀಯರ ಮನೆಗಳಲ್ಲಿ (Indians Home) ಕಂಡು ಬರುವ ದೈನಂದಿನ ಆಹಾರದ ಒಂದು ಅಂಶವಾಗಿದೆ. ಸಸ್ಯಾಹಾರಿ ಆಹಾರದಲ್ಲಿ ಪ್ರೋಟೀನ್ ನ ಪ್ರಮುಖ ಮೂಲಗಳಲ್ಲಿ ಒಂದಾಗಿರುವುದರ ಜೊತೆಗೆ, ಬೇಳೆಕಾಳುಗಳು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು (Health Benefits) ಸಹ ಹೊಂದಿದೆ.


ಮಸೂರ್ ಅಥವಾ ಉದ್ದು, ಹೆಸರುಕಾಳು  ಆಗಿರಲಿ, ಈ ಎಲ್ಲಾ ಬೇಳೆ ಪ್ರಭೇದಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ಹೇಳುವ ಅಂಶವನ್ನು ಬೆಂಬಲಿಸಲು ನಮಗೆ ವೈಜ್ಞಾನಿಕ ಪುರಾವೆಗಳು ಇವೆ. ಇತ್ತೀಚೆಗೆ, ಸೆಲೆಬ್ರಿಟಿ ಪೌಷ್ಟಿಕ ತಜ್ಞೆಯಾದ ರುಜುತಾ ದಿವೇಕರ್​ ಬೇಳೆಕಾಳುಗಳು ಒಟ್ಟಾರೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಬಹುದು ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


ಪೌಷ್ಟಿಕ ತಜ್ಞೆ ಈ ಬೇಳೆಕಾಳುಗಳ ಬಗ್ಗೆ ಹೇಳುವುದೇನು?


ಪೌಷ್ಟಿಕ ತಜ್ಞೆ ರುಜುತಾ ಅವರು ಬೇಳೆಕಾಳುಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದ್ದು ಇನ್‌ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರುಜುತಾ ದಿವೇಕರ್ ತಮ್ಮ ಫಾಲೋವರ್ಸ್‌ಗಳಿಗಾಗಿ ಟಾಸ್ಕ್ ಒಂದನ್ನು ನೀಡಿದ್ದು, ಬಟ್ಟಲಿನಲ್ಲಿರುವ ಎಲ್ಲಾ ಬೇಳೆಕಾಳುಗಳ ಹೆಸರುಗಳನ್ನು ಊಹಿಸಲು ತಿಳಿಸಿದ್ದಾರೆ.


"ಭಾರತೀಯ ಸಂಸ್ಕೃತಿಯಲ್ಲಿ ಬೇಳೆಕಾಳುಗಳ ಉಪಯೋಗ ಅಥವಾ ಬಳಕೆ ವಿವಿಧ ರೂಪಗಳಲ್ಲಿ ನಾವು ನೋಡಬಹುದಾಗಿದ್ದು, ದಿನನಿತ್ಯ ಮನೆಯಲ್ಲಿ ತಯಾರಿಸುವ ದಾಲ್ ಗಳಿಂದ ಹಿಡಿದು ನವರಾತ್ರಿಯ ವಿಶೇಷ ವ್ಯಂಜನದವರೆಗೆ ಬೇಳೆ ಕಾಳುಗಳು ಪ್ರಧಾನವಾಗಿವೆ. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ನಾವೆಲ್ಲಾ ಬೇರೆ ಬೇರೆ ಪಾಕವಿಧಾನಗಳನ್ನು ಅನುಸರಿಸಬಹುದು.



ಆದರೆ ಈ ಬೇಳೆಕಾಳುಗಳೊಂದಿಗೆ ಪ್ರತಿಯೊಬ್ಬರೂ ಬೆರೆತು ಹೋಗಿದ್ದಾರೆ ಹಾಗೂ ಬೇರೆ ಬೇರೆ ಹೆಸರಿನಲ್ಲಿ ಈ ಬೇಳೆಕಾಳುಗಳನ್ನು ಬಳಸಿಕೊಂಡು ಭಕ್ಷ್ಯ ಭೋಜನಗಳನ್ನು ತಯಾರಿಸುತ್ತಾರೆ ಎಂದು ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಫೋಟೋಗೆ ಸುಮಾರು 7,000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.


ದ್ವಿದಳ ಧಾನ್ಯಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ದ್ವಿದಳ ಧಾನ್ಯಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ನಮಗೆ ಪ್ರಯೋಜನಕಾರಿಯಾಗುತ್ತವೆ ಎಂದು ಪೌಷ್ಟಿಕ ತಜ್ಞೆ ಬಹಿರಂಗಪಡಿಸಿದ್ದಾರೆ.


ಪೌಷ್ಟಿಕ ತಜ್ಞೆ ಬಹಿರಂಗಪಡಿಸಿದ ದ್ವಿದಳ ಧಾನ್ಯಗಳ ಆರೋಗ್ಯ ಪ್ರಯೋಜನಗಳು ಇಲ್ಲಿವೆ:


ನಿಮ್ಮ ದೈನಂದಿನ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಸೇರಿಸುವುದು ದಿವೇಕರ್ ಪ್ರಕಾರ, ಆಹಾರ ವೈವಿಧ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಾಂಗವ್ಯೂಹದಲ್ಲಿರುವ ಕರುಳಿನ ಬ್ಯಾಕ್ಟೀರಿಯಾಗಳು ಇದರಿಂದ ಉತ್ತೇಜನವನ್ನು ಪಡೆಯುತ್ತವೆ ಎಂದಾಗಿದೆ.


ಇದನ್ನೂ ಓದಿ: ಮಕ್ಕಳಿಗೆ ಹಾಲನ್ನು ಅತಿಯಾಗಿ ಕೊಡಬೇಡಿ, ಅದಕ್ಕೂ ಒಂದು ಲಿಮಿಟ್​ ಇದೆ

ಅಮೈನೋ ಆಮ್ಲಗಳು ಅಥವಾ ಪ್ರೋಟೀನ್‌ಗಳಲ್ಲದೆ, ದ್ವಿದಳ ಧಾನ್ಯಗಳು ಕಬ್ಬಿಣ, ಫೋಲಿಕ್ ಆಮ್ಲ ಮತ್ತು ಖನಿಜಗಳನ್ನು ಸಹ ಹೊಂದಿರುತ್ತವೆ. ಈ ಅಂಶಗಳು ಅವುಗಳನ್ನು ಉತ್ತಮ ಆರೋಗ್ಯ ಶಕ್ತಿ ಕೇಂದ್ರವನ್ನಾಗಿ ರೂಪಿಸಿವೆ


ದ್ವಿದಳ ಧಾನ್ಯಗಳು ಎಚ್‌ಬಿ ಅಥವಾ ಹಿಮೋಗ್ಲೋಬಿನ್ ಅನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತವೆ ಎಂದು ದಿವೇಕರ್ ಮಾತಾಗಿದೆ. ದ್ವಿದಳ ಧಾನ್ಯಗಳು ಹೃದಯ ಹಾಗೂ ಸಂಪೂರ್ಣ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾದುದು ಎಂಬುದು ರುಜುತಾ ಅವರ ಮಾತಾಗಿದೆ


ಇದನ್ನೂ ಓದಿ: ಅತಿಯಾಗಿ ಬೆನ್ನು ನೋವು ಕಾಡ್ತಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ಅದು ಹೃದಯಾಘಾತದ ಲಕ್ಷಣವಂತೆ

ಮಧುಮೇಹಿಗಳಿಗೆ ಈ ದ್ವಿದಳ ಧಾನ್ಯಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತವೆ ಎಂಬುದನ್ನು ರುಜುತಾ ತಿಳಿಸಿದ್ದಾರೆ. ಇದಲ್ಲದೆ, ಇವುಗಳ ಸೇವನೆಯಿಂದ ನಿಮ್ಮ ಹೊಟ್ಟೆ ತುಂಬಿದ ಹಾಗೆ ಅನ್ನಿಸುತ್ತದೆ ಮತ್ತು ಇದರಿಂದ ದೀರ್ಘಕಾಲದವರೆಗೆ ಹೊಟ್ಟೆ ಹಸಿವು ಆಗುವುದಿಲ್ಲ ಎಂಬ ಆರೋಗ್ಯಕಾರಿ ಸಲಹೆಯನ್ನು ನೀಡಿದ್ದಾರೆ


ರುಜುತಾ ದಿವೇಕರ್ ಹೇಳುವಂತೆ ಧಾನ್ಯಗಳು ಒಳಗೊಂಡಿರುವ ಪೌಷ್ಟಿಕಾಂಶದ ಅಂಶದಿಂದಾಗಿ, ದ್ವಿದಳ ಧಾನ್ಯಗಳು ಚರ್ಮದ ಆರೋಗ್ಯ, ಕೂದಲಿನ ಆರೋಗ್ಯದಲ್ಲಿ ಸುಧಾರಣೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮನಸ್ಥಿತಿಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.


Published by:Sandhya M
First published: