ಸಣ್ಣ ಪೀಚ್​ ಹಣ್ಣಿನಲ್ಲಿದೆ ದೊಡ್ಡ ಪ್ರಯೋಜನಗಳು

news18
Updated:July 15, 2018, 4:19 PM IST
ಸಣ್ಣ ಪೀಚ್​ ಹಣ್ಣಿನಲ್ಲಿದೆ ದೊಡ್ಡ ಪ್ರಯೋಜನಗಳು
news18
Updated: July 15, 2018, 4:19 PM IST
-ನ್ಯೂಸ್ 18 ಕನ್ನಡ

ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳು ದೊರೆಯುತ್ತದೆ. ಬೇಸಿಗೆಯ ಅಂತ್ಯಕ್ಕೆ ಪ್ರಕೃತಿಯಲ್ಲಿ ಕಂಡು ಬರುವ ಪೀಚ್​ ಹಣ್ಣು ಕೂಡ ಆರೋಗ್ಯಕ್ಕೆ ಬಲು ಪ್ರಯೋಜನಕಾರಿ. ಈ ಹಣ್ಣನ್ನು ಮೊದಲು ಚೀನಾದಲ್ಲಿ ಬೆಳೆಯಲಾಗುತಿತ್ತು, ಕ್ರಮೇಣ ಈ ಹಣ್ಣಿನ ಉಪಯೋಗ ತಿಳಿದ ಇತರೆ ದೇಶಿಗರಿಗರು ಇದನ್ನು ಬೆಳೆಯಲಾರಂಭಿಸಿದರು. ಈ ಹಣ್ಣಿನಲ್ಲಿ ಕಾರ್ಬೊಹೈಡ್ರೇಟ್​​ಗಳು, ಪ್ರೊಟೀನ್​, ಖನಿಜಗಳು ಮತ್ತು ಫೈಬರ್​ ಅಂಶಗಳು ಹೇರಳವಾಗಿದೆ. ಅಲ್ಲದೆ ಈ ಹಣ್ಣನ್ನು ತಿನ್ನುವುದರಿಂದ ಇನ್ನೂ ಹಲವು ಪ್ರಯೋಜನಗಳಿವೆ. ಅವುಗಳೆಂದರೆ...

ದೇಹದ ತೂಕ ಇಳಿಸಲು : ಪೀಚ್​ ಹಣ್ಣಿನಲ್ಲಿ ಕ್ಯಾಲೊರಿ ತುಂಬಾ ಕಡಿಮೆ ಇರುತ್ತದೆ. 100 ಗ್ರಾಂ ಪೀಚ್​​ನಲ್ಲಿ ಕೇವಲ 39 ಕ್ಯಾಲೊರಿಗಳು ಕಂಡು ಬರುತ್ತದೆ. ಇದನ್ನು ತಿಂದು ಹೊಟ್ಟೆ ತುಂಬಿಸಿಕೊಂಡರೂ, ಯಾವುದೇ ರೀತಿಯಲ್ಲೂ ತೂಕ ಹೆಚ್ಚಾಗುವುದಿಲ್ಲ. ಅಲ್ಲದೆ ಪ್ರತಿನಿತ್ಯ ಈ ಹಣ್ಣನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.

ಒತ್ತಡ ನಿಯಂತ್ರಣ : ಪೀಚ್​​ ಹಣ್ಣಿನಲ್ಲಿರುವ ಖನಿಜಾಂಶಗಳು ಒತ್ತಡ ನಿವಾರಣೆಗೆ ಸಹಾಯಕವಾಗಿದೆ. ಇದರ ಹೂವುಗಳನ್ನು ಮನಸ್ಸನ್ನು ಶಾಂತಗೊಳಿಸಲು ಬಳಸಲಾಗುತ್ತದೆ.

ಕಣ್ಣಿನ ಆರೋಗ್ಯ : ಈ ಹಣ್ಣಿನಲ್ಲಿ ವಿಟಮಿನ್ ಎ ಜೊತೆ ಕ್ಯಾರೊಟಿನ್ ಅಂಶಗಳು ಕಂಡು ಬರುತ್ತದೆ. ಇದು ಕಣ್ಣಿನ ರೆಟಿನಾದ ಮೇಲೆ ಪರಿಣಾಮ ಬೀರಿ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

ಅಂಟಿ-ಆಕ್ಸಿಡೆಂಟ್​​ಗಳು : ಪೀಚ್​ ಹಣ್ಣಿನ ಸಿಪ್ಪೆಯು ಪಾಲಿಫೆನಾಲ್​ ಎಂಬ ಅಂಶವನ್ನು ಒಳಗೊಂಡಿರುತ್ತದೆ. ಇದು ದೇಹದಲ್ಲಿ ಅಂಟಿ-ಆಕ್ಸಿಡೆಂಟ್​​ಗಳಾಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್​ ಸಿ ಗಣನೀಯ ಪ್ರಮಾಣದಲ್ಲಿದ್ದು, ಈ ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನುವುದು ಉತ್ತಮ.

ದೇಹದ ಆರೋಗ್ಯ ಹೆಚ್ಚಿಸುತ್ತದೆ : ಪೀಚ್​ನಲ್ಲಿ ಕಂಡುಬರುವ ಖನಿಜಾಂಶಗಳು ಮತ್ತು ಫೈಬರ್​ಗಳು ದೇಹದ ಒಳಭಾಗವನ್ನು ಸ್ವಚ್ಚಗೊಳಿಸುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕಲು ಈ ಹಣ್ಣಿನ ಸೇವನೆ ತುಂಬಾ ಪ್ರಯೋಜನಕಾರಿ.ಪೀಚ್​ ಹಣ್ಣು ಬಳಸಿ ಟೀ ಕೂಡ ತಯಾರಿಸಲಾಗುತ್ತಿದ್ದು, ಪ್ರತಿನಿತ್ಯ ಈ ಪಾನೀಯ ಸೇವಿಸದರೆ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು.

ಕಿಡ್ನಿ ಸ್ಟೋನ್​ಗೆ ಪರಿಹಾರ : ಈ​ ಹಣ್ಣು ಬರಪೂರ ಪೊಟಾಶಿಯಂ ಅಂಶ ಹೊಂದಿರುತ್ತದೆ. ಇದು ಕಡ್ನಿಯ ಆರೋಗ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಪ್ರತಿನಿತ್ಯ ಪೀಚ್​ ಹಣ್ಣು ತಿಂದರೆ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಬಹುದು.

ದಂತಕ್ಷಯಕ್ಕೆ ಪರಿಹಾರ : ಪೀಚ್​ನಲ್ಲಿ ಫ್ಲೋರೈಡ್​ ಮತ್ತು ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಇದು ಹಲ್ಲು ಮತ್ತು ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಈ ಹಣ್ಣನ್ನು ದಿನನಿತ್ಯ ತಿನ್ನುವುದರಿಂದ ದಂತಕ್ಷಯದ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು.

ಕ್ಯಾನ್ಸರ್​ಗೆ ರಾಮಬಾಣ : ಈ​ ಹಣ್ಣಿನಲ್ಲಿ ಕಂಡುವ ಅ್ಯಂಟಿ-ಆಕ್ಸಿಡೆಂಟ್​​ಗಳು ಕ್ಯಾನ್ಸರ್ ರೋಗ ಬಾಧಿಸದಂತೆ ತಡೆಯುತ್ತದೆ. ಅಲ್ಲದೆ ಕಿಮೊಥೆರಪಿಯ ಅಡ್ಡ ಪರಿಣಾಮಗಳಿಂದ ದೇಹವನ್ನು ರಕ್ಷಿಸಲು ಪೀಚ್​ ಹಣ್ಣು ಸಹಕಾರಿ ಎಂದು ಕೆಲ ಅಧ್ಯಯನಗಳೂ ಕೂಡ ತಿಳಿಸಿದೆ.
First published:July 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ