ಪರಂಗಿ ಹಣ್ಣಿನ ಪ್ರಯೋಜನಗಳ ಬಗ್ಗೆ ಅರಿಯಿರಿ

news18
Updated:May 15, 2018, 2:05 PM IST
ಪರಂಗಿ ಹಣ್ಣಿನ ಪ್ರಯೋಜನಗಳ ಬಗ್ಗೆ ಅರಿಯಿರಿ
news18
Updated: May 15, 2018, 2:05 PM IST
ನ್ಯೂಸ್ 18 ಕನ್ನಡ

ಸಾಮಾನ್ಯವಾಗಿ ಮಳೆಗಾಲದ ಆರಂಭ ಪರಂಗಿ ಹಣ್ಣಿನ ಸೀಜನ್​.  ರುಚಿ ಮತ್ತು ವಾಸನೆಯ ಕಾರಣದಿಂದ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಪಪ್ಪಾಯಿ ಎಂಬುದು ಕೇವಲ ಹಣ್ಣಲ್ಲ, ಅನೇಕ ರೋಗಗಳಿಗೆ ಮನೆಮದ್ದು ಎಂಬುದು ಗೊತ್ತಿರಲಿ. ಇದನ್ನು ತಿನ್ನುವುದರಿಂದ ಸಿಗುವ ಪ್ರಯೋಜನಗಳು ಸಾಕಷ್ಟಿವೆ.

* ಪಪ್ಪಾಯಿ ಹಣ್ಣನ್ನು ದಿನಂಪ್ರತಿ ತಿನ್ನುವುದರಿಂದ ಚರ್ಮದ ಸಮಸ್ಯೆಗೆ ಪರಿಹಾರ ಕಾಣಬಹುದು. ಚರ್ಮ ಸುಕ್ಕುಗಟ್ಟುವುದನ್ನು ತಡೆದು, ಚಿರ ಯೌವನವನ್ನು ಕಾಪಾಡಿಕೊಳ್ಳಲು ಪರಂಗಿ ಹಣ್ಣು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಮುಖಕ್ಕೆ ಪಪ್ಪಾಯ ಪ್ಯಾಕ್ ಮಾಡುವ ಮೂಲಕ ಕಂದು ಬಣ್ಣದ ತ್ವಚೆಯಿಂದ ಮುಕ್ತಿ ಹೊಂದಬಹುದು.

* ಈ ಹಣ್ಣನ್ನು ತಿನ್ನುವುದರಿಂದ ಕೂದಲು ಉದುರುವುದನ್ನು ಸಹ ತಡೆಗಟ್ಟಬಹುದು. ಗರ್ಭಾವಸ್ಥೆಯ ಬಳಿಕ ಕಾಡುವ ಸಮಸ್ಯೆಗಳಿಗೆ ಈ ಹಣ್ಣು ರಾಮ ಬಾಣ.

* ಹೊಟ್ಟೆಯ ಸಮಸ್ಯೆಗಳಿಗೆ ಪಪ್ಪಾಯ ಹೇಳಿ ಮಾಡಿಸಿದ ಮದ್ದು. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಮಲಬದ್ದತೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

* ಇತ್ತೀಚಿನ ಜೀವನಶೈಲಿಯಿಂದ ಪ್ರತಿಯೊಬ್ಬರಲ್ಲೂ ರಕ್ತದೊತ್ತಡದ ಸಮಸ್ಯೆ ಕಾಣಬಹುದು. ಇದಕ್ಕೆ ಪರಿಹಾರವಾಗಿ ದಿನವೂ ಈ ಹಣ್ಣನ್ನು ತಿನ್ನಬಹುದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಪರಿಣಾಮಕಾರಿಯಾಗಿದೆ.

* ಸಣ್ಣಪುಟ್ಟ ಸುಟ್ಟ ಗಾಯಗಳಿಗೂ ಪಪ್ಪಾಯ ಹಣ್ಣಿನ ಪೇಸ್ಟ್​ ಅನ್ನು ಮನೆಮದ್ದಾಗಿ ಬಳಸಬಹುದು. ಆದರೆ ಇದರಿಂದ ಉರಿಯೂತ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
First published:May 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ