ಮನೆಯಲ್ಲಿ(Home) ಯಾರಿಗಾದರೂ ಹುಷಾರ್ ಇಲ್ಲದಾಗ, ಮನೆಗೆ ಬಂದು ಆರೋಗ್ಯ(Health) ವಿಚಾರಿಸಲು ಅಪರೂಪಕ್ಕೂದರೂ ಅತಿಥಿಗಳು(Guest) ಬರುತ್ತಾರೆ. ಅವರು ಬಂದಾಗ ಕೈಯಲ್ಲೊಂದು ಕವರ್(Cover) ತಂದು ಇರುತ್ತಾರೆ. ಕುತೂಹಲದಿಂದ ಆ ಕವರ್ ಒಳಗೆ ಏನಿದೆ ಎಂದು ಇಣುಕಿದಾಗ, ಮೂಸಂಬಿ ಅಥವಾ ಕಿತ್ತಳೆ(Orange),ಆ್ಯಪಲ್(Apple) ನಂಥ ಹಣ್ಣುಗಳಿರುತ್ತವೆ. ಅದ್ರಲ್ಲೂ ಕಿತ್ತಳೆ ಹಣ್ಣು ರಸಭರಿತವಾಗಿದ್ದು, ಅನೇಕ ಪೋಷಕಾಂಶಗಳನ್ನು ಹೊಂದಿದೆ. ಕಿತ್ತಳೆ ಹಣ್ಣಿನಲ್ಲಿ ಜೀವಸತ್ವಗಳು, ಖನಿಜಗಳು, ಬೀಟಾ-ಕ್ಯಾರೋಟಿನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ಇರುತ್ತದೆ. ಕಿತ್ತಳೆ ಹಣ್ಣಿನಲ್ಲಿ(Orange Fruit) ವಿಟಮಿನ್ ಸಿ(Vitamin C) ಸಮೃದ್ಧವಾಗಿದೆ. ಈ ಹಣ್ಣು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದು ತೂಕ ಇಳಿಸಿಕೊಳ್ಳಲು(Weight Loss) ಸಹಾಯ ಮಾಡುವುದರ ಜತೆಗೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಚಳಿಗಾಲದಲ್ಲಿ ರಸಭರಿತ ಕಿತ್ತಳೆ ಹಣ್ಣು ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಿತ್ತಳೆ ಹಣ್ಣಿನ ಸೇವನೆಯು ಕೆಮ್ಮು, ನೆಗಡಿ ಮತ್ತು ಕೆಮ್ಮಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಕಿತ್ತಳೆ ಹಣ್ಣು ಚರ್ಮದಿಂದ ಹಿಡಿದು ಹೊಟ್ಟೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳವರೆಗೆ ಉತ್ತಮ ಪರಿಹಾರ ನೀಡುತ್ತದೆ. ಯಕೃತ್ ಸಮಸ್ಯೆ ಉಳ್ಳವರಿಗೂ ಸಹ ಕಿತ್ತಳೆ ಹಣ್ಣು ಉತ್ತಮವಾಗಿದೆ.
1)ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಕಿತ್ತಳೆ ಹಣ್ಣುನ್ನು ಸೇವಿಸುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಡಿ, ಮತ್ತು ವಿಟಮಿನ್ ಎ ಸತ್ವ ಅಡಗಿದೆ ಜೊತೆಗೆ ಹಲವು ಸಂಯುಕ್ತಗಳಾದ ಕ್ಯಾರೋಟಿನಾಯಡ್ಸ್ ಮತ್ತು ಪ್ಲೆವೊನಾಯಡ್ಸ್ ಗಳು ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆ. ಇದರಿಂದ ಸೊಂಕುಗಳು ಬಾರದಂತೆ ತಡೆಯಬಹುದಾಗಿದೆ. ಶೀತ ಮತ್ತು ಜ್ವರದಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು ಮತ್ತು ಇದರಿಂದಾಗುವ ಹಾನಿಯನ್ನು ಕಡಿಮೆ ಮಾಡಲು ಸಹ ನೆರವಾಗುತ್ತದೆ.
ಇದನ್ನೂ ಓದಿ: ತೂಕ ಇಳಿಸುವುದರಿಂದ ಹೃದಯದ ಆರೋಗ್ಯದವರೆಗೆ ಪೇರಲೆ ಹಣ್ಣಿನ ಪ್ರಯೋಜನಗಳು ಒಂದೆರೆಡಲ್ಲ
2)ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಸಹಕಾರಿ: ಕಿತ್ತಳೆ ಹಣ್ಣು ಎಂದ ತಕ್ಷಣ ನಮಗೆ ಮೊದಲು ನೆನಪಿಗೆ ಬರುವ ಒಂದು ಸಂಗತಿಯೆಂದರೆ ಅದರಿಂದ ಬಿಡಿಸಿ ತಿನ್ನುವ ರುಚಿಯಾದ ರಸ ತುಂಬಿದ ಕಿತ್ತಳೆ ತೊಳೆಗಳು. ಅವುಗಳಲ್ಲಿ ಅಪಾರ ಪ್ರಮಾಣದ ನೀರಿನ ಅಂಶ ಇರುವುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ.ಕಿತ್ತಳೆ ಹಣ್ಣಿನಲ್ಲಿ ಸುಮಾರು ಶೇಕಡ 87 ರಷ್ಟು ನೀರಿನ ಅಂಶ ಸೇರಿರುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ನಾವು ನೀರು ಕಡಿಮೆ ಕುಡಿಯುತ್ತೇವೆ. ಇಂತಹ ಸಮಯದಲ್ಲಿ ಕಿತ್ತಳೆ ಹಣ್ಣು ಸೇವನೆ ನಮ್ಮ ದೇಹದಲ್ಲಿ ನೀರಿನ ಅಂಶದ ಸಮತೋಲನ ಕಾಪಾಡುತ್ತದೆ.
3)ಕಣ್ಣಿನ ಆರೋಗ್ಯಕ್ಕೆ ಸಹಕಾರಿ: ನಾವು ವಯಸ್ಸಾದಂತೆ ನಮ್ಮ ಕಣ್ಣುಗಳು ಸಹ ಹಾನಿಗೊಳಗಾಗುತ್ತವೆ. ಆದರೆ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತವೆ. ಆದ್ದರಿಂದ ದೃಷ್ಟಿ ಚೆನ್ನಾಗಿರ ಬೇಕೆಂದು ಬಯಸುವವರು ಪ್ರತಿದಿನ ಕಿತ್ತಳೆ ತಿನ್ನಿರಿ.
4)ತೂಕ ನಷ್ಟ: ಕಿತ್ತಳೆ ಹಣ್ಣು ಫೈಬರ್ ಅನ್ನು ಹೊಂದಿರುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿರುವ ಫೈಬರ್ ಹೊಟ್ಟೆಯ ಹಸಿವನ್ನು ನೀಗಿಸುತ್ತದೆ ಮತ್ತು ಕಡಿಮೆ ಆಹಾರವನ್ನು ಸೇವಿಸುವಂತೆ ಮಾಡುತ್ತದೆ. ಈ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆ ಇರುತ್ತದೆ. ಕಿತ್ತಳೆ ಹಣ್ಣನ್ನು ಜ್ಯೂಸ್ ರೂಪದಲ್ಲಿ ಕುಡಿಯುವುದು ಕೂಡ ದೇಹಕ್ಕೆ ಒಳ್ಳೆಯದು.
5)ಹೃದಯವನ್ನು ಆರೋಗ್ಯವಾಗಿರಿಸುತ್ತದೆ: ವಿಟಮಿನ್ ಸಿ ಇದರಲ್ಲಿ ಸಮೃದ್ಧವಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಇರಿಸುವ ಮೂಲಕ ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿತ್ತಳೆಯಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ.
6)ಮಲಬದ್ಧತೆ ಸಮಸ್ಯೆ ನಿವಾರಣೆ: ಜೀರ್ಣವಾಗುವ ಫೈಬರ್ ಅನ್ನು ಕಿತ್ತಳೆಯು ಹೊಂದಿದ್ದು ಇದು ಜೀರ್ಣದ್ರವಗಳನ್ನು ಪ್ರಚೋದಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನೀಗಿಸುತ್ತದೆ.
ಇದನ್ನೂ ಓದಿ: ಬೆಳಗಿನ ತಿಂಡಿ ಬಿಟ್ಟು ತೂಕ ಇಳಿಸಿಕೊಳ್ಳುವ ಬದಲು ಈ ಕ್ರಮ ಅನುಸರಿಸಿ
7)ತ್ವಚೆಯ ಸಂರಕ್ಷಣೆ: ಇದು ಬೀಟಾ - ಕ್ಯಾರೊಟಿನ್ ಅಂಶವನ್ನು ಹೊಂದಿದ್ದು, ಒಂದು ಶಕ್ತಿಯುತ ಉತ್ಕರ್ಷಣ ನಿರೋಧಿಯಾಗಿದ್ದುಕೊಂಡು ತ್ವಚೆಯ ಕೋಶಗಳನ್ನು ಹಾನಿಯಾಗುವಲ್ಲಿಂದ ರಕ್ಷಿಸುತ್ತದೆ. ಕಿತ್ತಳೆಯ ಅತ್ಯಮೂಲ್ಯ ಆರೊಗ್ಯ ಪ್ರಯೋಜನಗಳಲ್ಲಿ ಇದೂ ಒಂದಾಗಿದೆ. ಚಳಿಗಾಲದಲ್ಲಿ ಮರೆಯದೇ ಕಿತ್ತಳೆ ಹಣ್ಣನ್ನು ಸೇವನೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ