ಈರುಳ್ಳಿ(Onion) ಬಳಸದೆ ಮಾಡಿದ ಅಡುಗೆ(Food))ಸಂಪೂರ್ಣ ಅಪೂರ್ಣ(In complete).. ಯಾವುದೇ ಆಹಾರ ಪದಾರ್ಥ ತ್ಯಾಗಿ ಇರಬೇಕು ಅಂತ ಅಂದ್ರೆ ಅಡುಗೆಯಲ್ಲಿ ಈರುಳ್ಳಿ ಬಳಕೆ ಮಾಡಲೇಬೇಕು.ಅದ್ರಲ್ಲೂ ಮಾಂಸಾಹಾರದ (Non-veg)ಅಡುಗೆಗಳು ಈರುಳ್ಳಿ ಬಳಕೆ ಇಲ್ಲದೆ ಇನ್ ಕಂಪ್ಲೀಟ್.. ಅಲ್ಲದೆ ನಾವು ಡಯಟ್ (Diet)ಮಾಡ್ತೀನಿ ಅಂತ ಅಂತ ಸಲಾಡ್ (salad)ಮಾಡಿಕೊಂಡು ತಿನ್ನುವವರಿಗೆ ಕೂಡ ಈರುಳ್ಳಿ ಅಗತ್ಯ..ಆದರೆ ಕೆಲವರಿಗೆ ಮಾತ್ರ ಈರುಳ್ಳಿ ಸೇವನೆ ಅಂದ್ರೆ ಅಲರ್ಜಿ.. ಈರುಳ್ಳಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಶಕ್ತಿ ದೊರೆಯುತ್ತದೆ ಅನ್ನೋದನ್ನ ತಿಳಿಯದೆ ಕೆಲವರು ಈರುಳ್ಳಿ ದ್ವೇಷ ಮಾಡುತ್ತಾರೆ.. ಆದರೆ ಅವರಿಗೆ ಒಂದು ವೇಳೆ ಈರುಳ್ಳಿ ಆಗುವ ಲಾಭಗಳ ಬಗ್ಗೆ ಗೊತ್ತಾದ್ರೆ ಖಂಡಿತ ಅವರು ಪ್ರತಿನಿತ್ಯ ಮಿಸ್ ಮಾಡದೇ ಈರುಳ್ಳಿ ಸೇವನೆ ಮಾಡುತ್ತಾರೆ..
ಪೌಷ್ಟಿಕಾಂಶಗಳ ಕಣಜ ಈರುಳ್ಳಿ
ಈರುಳ್ಳಿಯನ್ನು ಹಸಿಯಾಗಿ ಅಥವಾ ಅಡುಗೆ ಜೊತೆಗೆ ಸೇವಿಸುವುದರಿಂದ ನಮ್ಮ ದೇಹಕ್ಕೆ ಆರೋಗ್ಯ ಶಕ್ತಿ ದೊರೆಯುತ್ತದೆ. ಈರುಳ್ಳಿಯಲ್ಲಿ ಹೆಚ್ಚು ಪ್ರಮಾಣದ ಸಲ್ಫರ್ ಅಂಶಗಳಿದ್ದು ವಾಸನೆ ನಿಗ್ರಹಿಸುವ ಗುಣಗಳಿವೆ.. ವಿಟಮಿನ್ ಕೊರತೆಯಿಂದ ಬಳಲುತ್ತಿರುವವರು ಈರುಳ್ಳಿ ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ವಿಟಮಿನ್ ಬಿ6, ಬಯೋಟಿನ್ ಫೋಲಿಕ್ ಆಸಿಡ್, ಕ್ರೋಮಿಯಂ ಕ್ಯಾಲ್ಸಿಯಂ ಮತ್ತು ಫೈಬರ್ ನಮ್ಮ ದೇಹಕ್ಕೆ ಸಿಗಲಿದೆ.
1) ಹೃದಯದ ಆರೋಗ್ಯ ಹೆಚ್ಚಿಸಲು
ಈರುಳ್ಳಿ ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ.ಈರುಳ್ಳಿಯಲ್ಲಿ ಫ್ಲೋವೊನೈಡ್ಗಳು ಮತ್ತು ಥಿಯೋಸೆಲ್ಫಿನೇಟ್ ಗಳು ಸಮೃದ್ಧವಾಗಿದೆ.ಫ್ಲೋವೊನೈಡ್ಗಳು ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ..ಥಿಯೋಸೆಲ್ಫಿನೇಟ್ ಗಳು ರಕ್ತವನ್ನು ಅನುವಾಗುವಂತೆ ಮಾಡಿ ರಕ್ತದ ಸ್ಥಿರತೆಯನ್ನು ಸರಿಯಾಗಿ ಇಳಿಸಲು ಸಹಾಯ ಮಾಡುತ್ತದೆ.. ಈ ಕಾರಣದಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ..
2)ಮೂಳೆಗಳನ್ನು ಬಲಪಡಿಸಲು
ಮೂಳೆಗಳನ್ನು ಬಲಪಡಿಸಲು ಈರುಳ್ಳಿ ಸೇವನೆ ಸಹಾಯಕಾರಿಯಾಗಿದೆ.. ಯುಎಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ಪ್ರಕಾರ, ಒಂದು ಈರುಳ್ಳಿಯಲ್ಲಿ 25.3 ಮಿಗ್ರಾಂ ಕ್ಯಾಲ್ಸಿಯಂ ಇದೆ.. ಹೀಗಾಗಿ ಈರುಳ್ಳಿ ಸೇವನೆ ಮಾಡುವುದರಿಂದ ಮೂಳೆಗಳನ್ನು ಬಲ ಪಡಿಸಬಹುದಾಗಿದೆ
3) ರೋಗ ನಿರೋಧಕ ಶಕ್ತಿ ಸುಧಾರಣೆ
ಈರುಳ್ಳಿ ಸೇವನೆ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.. ದೇಹದಲ್ಲಿ ನ ರೋಗಕ್ಕೆ ಕಾರಣವಾಗುವ ಅಂಶಗಳ ವಿರುದ್ಧ ಪ್ರತಿರಕ್ಷಣೆಗೆ ಬಿಳಿ ಸಹಕಾರಿಯಾಗಿದೆ.. ಈರುಳ್ಳಿಯಲ್ಲಿ ರಾಸಾಯನಿಕ ಸಂಯೋಜನೆಯು ತುಂಬಾ ಪ್ರಬಲವಾಗಿದೆ.. ಹೀಗಾಗಿ ಈರುಳ್ಳಿ ರೋಗನಿರೋಧಕ ಶಕ್ತಿ ಹೆಚ್ಚಳ ಮಾಡುವಲ್ಲಿ ಸಹಾಯಕ..
ಇದನ್ನೂ ಓದಿ : ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ಮಾಡಲು ಹೀಗೆ ಮಾಡಿ!
4) ಉಸಿರಾಟದ ತೊಂದರೆ ನಿವಾರಣೆ
ಈರುಳ್ಳಿಯಲ್ಲಿನ ಉರಿಯೂತದ ಕ್ರಿಯೆಯು ಸ್ವಾತಂತ್ರ್ಯದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.. ಬ್ರಾಂಕೈಟಿಸ್ ಅನ್ನು ಬಿಡುಗಡೆ ಮಾಡುತ್ತದೆ.. ಹೀಗಾಗಿ ಕೆಮ್ಮು ಶೀತ ಜ್ವರ ಸೀನುವಿಕೆ ಮತ್ತು ಮೂಗು ಕಟ್ಟುವಿಕೆಯನ್ನು ಈರುಳ್ಳಿ ಸೇವೆ ತಡೆಯುತ್ತದೆ.. ಅಸ್ತಮಾ ರೋಗಿಗಳು ಈರುಳ್ಳಿ ಸೇವನೆ ಮಾಡುವುದರಿಂದ ಸುಲಭವಾಗಿ ಉಸಿರಾಟ ಮಾಡಲು ಸಹಾಯಕವಾಗಿದೆ..
5) ಕಣ್ಣಿನ ದೃಷ್ಟಿ ಹೆಚ್ಚಳಕ್ಕೆ ಸಹಕಾರಿ
ಈರುಳ್ಳಿಯಲ್ಲಿ ಕಾಂಜಂಕ್ಟಿವಿಸ್ ಸಾಮಾನ್ಯವಾಗಿದೆ. ಜೊತೆಗೆ ಈರುಳ್ಳಿಯಲ್ಲಿರುವ ಸೆಲಿನಿಯಂ ವಿಟಮಿನ್ E ಉತ್ಪಾದನೆಗೆ ಸಹಾಯ ಮಾಡುತ್ತದೆ.. ಅಲ್ಲದೇ ಇದು ಕಣ್ಣಿನ ನೋವು ಸಮಸ್ಯೆಯನ್ನು ದೂರಮಾಡುತ್ತದೆ
6) ಬಾಯಿಯ ಆರೋಗ್ಯ ಸುಧಾರಣೆಗೆ ಸಹಕಾರಿ
ಈರುಳ್ಳಿ ಸೇವನೆಯಿಂದ ನಮ್ಮ ಬಾಯಿಯನ್ನು ಆರೋಗ್ಯವಾಗಿಟ್ಟುಕೊಳ್ಳ ಬಹುದು.. ನಮ್ಮ ದಂತಪಂಕ್ತಿಗಳನ್ನು ಆರೋಗ್ಯವಾಗಿ ಇರಿಸಲು ಈರುಳ್ಳಿಯಲ್ಲಿರುವ ವಿಟಮಿನ್-ಸಿ ಸಹಾಯಕವಾಗಿದೆ..
7) ಲೈಂಗಿಕ ಆರೋಗ್ಯ ಸುಧಾರಣೆ
ಈರುಳ್ಳಿ ಸೇವನೆಯಿಂದ ಪುರುಷರಲ್ಲಿನ ಲೈಂಗಿಕ ಆರೋಗ್ಯ ಸುಧಾರಣೆಯಾಗುತ್ತದೆ.. ಲೈಂಗಿಕತೆಗೆ ಸಂಬಂಧಿಸಿದಂತೆ ಪುರುಷರು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಈರುಳ್ಳಿ ಸೇವನೆಯಿಂದ ಸಹಕಾರಿಯಾಗುತ್ತದೆ.. ಹೆಚ್ಚು ಈರುಳ್ಳಿ ಸೇವನೆ ಮಾಡುವ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಳವಾಗಿರುತ್ತದೆ.
ಇದನ್ನೂ ಓದಿ :ಅಮೆರಿಕದಲ್ಲಿ ಈರುಳ್ಳಿ ತಿಂದು 650 ಮಂದಿ ಅಸ್ವಸ್ಥ: ಮನೆಯಲ್ಲಿರುವ ಈರುಳ್ಳಿ ಎಸೆಯಲು ಸರ್ಕಾರದಿಂದ ಸೂಚನೆ
8) ಚರ್ಮದ ಆರೋಗ್ಯಕ್ಕೆ ಈರುಳ್ಳಿ ಸಹಕಾರಿ
ಮನುಷ್ಯ ಚರ್ಮದ ಬಗ್ಗೆ ಕಾಳಜಿ ವಹಿಸಿದರು ದೇಹದ ಯಾವ ಭಾಗದ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವುದಿಲ್ಲ.. ಹೀಗಾಗಿ ಚರ್ಮದ ಆರೋಗ್ಯಕ್ಕೆ ಸಹಕಾರಿಯಾದ ಹಲವಾರು ಆಹಾರಗಳನ್ನು ಸೇವನೆ ಮಾಡುತ್ತಾನೆ.. ಇದಕ್ಕಾಗಿಯೇ ಈರುಳ್ಳಿ ಸೇವನೆ ಮಾಡುವುದರಿಂದ ಈರುಳ್ಳಿಯಲ್ಲಿರುವ ವಿಟಮಿನ್ ಸಿ ಮತ್ತು ಕೆ, ಹಾಗೂ ಜೀವಸತ್ವಗಳು ಪಿಗ್ಮೆಂಟೇಶನ್ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿವೆ.. ಅಲ್ಲದೇ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ನಮ್ಮನ್ನು ಈರುಳ್ಳಿ ಸೇವನೆ ರಕ್ಷಿಸುತ್ತದೆ.. ಅಲ್ಲದೇ ಈರುಳ್ಳಿ ರಸದಿಂದ ಫೇಸ್ ಪ್ಯಾಕ್ ಮಾಡಿಕೊಂಡ್ರೆ ಚರ್ಮ ಮೃದುವಾಗಿ ಮೊಡವೆ ಮುಕ್ತ ಸ್ಕಿನ್ ಪಡೆಯಬಹುದು.
9) ಕೂದಲಿನ ಆರೋಗ್ಯಕ್ಕೆ ಸಹಕಾರಿ
ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಹೆಚ್ಚು ಹೇರ್ ಫಾಲ್ ಸಮಸ್ಯೆ ಕಾಡುತ್ತಿದೆ..ಆಯುರ್ವೇದದಲ್ಲಿಯೂ ಈರುಳ್ಳಿ ಬಳಕೆಯಿಂದ ಕೂದಲಿನ ಆರೋಗ್ಯ ಸುಧಾರಣೆ ಮಾಡಬಹುದು ಎಂಬ ಮಾಹಿತಿ ಇದೆ.. ಹೀಗಾಗಿ ಈರುಳ್ಳಿ ರಸವನ್ನು ತಲೆಗೆ ಲೇಪಿಸುವುದರಿಂದ ಬ್ಯಾಕ್ಟೀರಿಯಾ ವಿರೋಧಿ ಗುಣ ಲಕ್ಷಣಗಳು ನಮ್ಮ ನೆತ್ತಿಯಲ್ಲಿನ ತಲೆಹೊಟ್ಟು ಹೇನುಗಳ ನಿವಾರಣೆಗೆ ಸಹಕಾರಿಯಾಗಿದೆ.
10) ಕ್ಷಯ ರೋಗಕ್ಕೆ ಈರುಳ್ಳಿ ಮದ್ದು
ಈರುಳ್ಳಿಯಲ್ಲಿ ನಂಜುನಿರೋಧಕ ಮತ್ತು anti-microbial ಗುಣಗಳೂ ಇವೆ.. ಇವುಗಳು ಕ್ಷಯರೋಗಕ್ಕೆ ಕಾರಣವಾಗಿರುವ ಮೈಕೋ ಬ್ಯಾಕ್ಟೀರಿಯವನ್ನು ನಿಷ್ಕ್ರಿಯಗೊಳಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡುತ್ತವೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ