ನುಗ್ಗೆಕಾಯಿ, ನುಗ್ಗೆ ಸೊಪ್ಪು ಹಲವು ಪೋಷಕಾಂಶಗಳನ್ನು ಹೊಂದಿರುವ ತರಕಾರಿ ಮತ್ತು ಸೊಪ್ಪುಗಳಲ್ಲಿ ಒಂದು. ಭಾರತೀಯರಿಗೆ ಇದು ಪೋಷಕಾಂಶಗಳ ಗೂಡು. ಆಯುರ್ವೇದದಲ್ಲಿ ಸಹ ಇದನ್ನು ಬಹಳ ವರ್ಷಗಳಿಂದ ಹಲವು ರೋಗಗಳ ಪರಿಹಾರಕ್ಕೆ ಬಳಸಲಾಗುತಿದೆ. ಆದರೆ ನುಗ್ಗೆ ಸೊಪ್ಪಿನಲ್ಲಿ ಕಹಿಯ ಅಂಶವಿರುವ ಕಾರಣ ಹಲವಾರು ಜನರು ಸೇವಿಸಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ನುಗ್ಗೆ ಸೊಪ್ಪಿನಲ್ಲಿ ಬಹಳಷ್ಟು ಆರೋಗ್ಯಯುತ ಅಂಶಗಳಿದ್ದು, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿದೆ. ನುಗ್ಗೆ ಆಂಟಿಫಂಗಲ್, ಆಂಟಿವೈರಲ್, ಖಿನ್ನತೆ ಸೇರಿದಂತೆ ಉರಿಯೂತಗಳನ್ನು ಶಮನ ಮಾಡುವ ಆರೋಗ್ಯಕರ ಗುಣವನ್ನು ಹೊಂದಿದೆ. ನುಗ್ಗೆ ಸೊಪ್ಪನ್ನು ಪುಡಿ ಅಥವ ಜ್ಯೂಸ್ ಮಾಡಿ ಸೇವಿಸುವುದು ಉತ್ತಮ.
ಇದರ ಎಣ್ಣೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ನುಗ್ಗೆ ಸೊಪ್ಪಿನಲ್ಲಿರುವ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಇತ್ಯಾದಿ ಹೆಚ್ಚಿನ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೆಂಡೆಕಾಯಿಯಲ್ಲಿ ಯಾವೆಲ್ಲ ಪೋಷಕಾಂಶಗಳಿಗೆ ಗೊತ್ತಾ?
ನುಗ್ಗೆ ಸೊಪ್ಪಿನಲ್ಲಿ ಕ್ಲೋರೊಜೆನಿಕ್ ಆಮ್ಲ ಎಂದು ಕರೆಯಲ್ಪಡುವ ವರ್ಣದ್ರವ್ಯ ಇರುತ್ತದೆ, ಇದು ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಹೆಚ್ಚು ನುಗ್ಗೆ ಸೊಪ್ಪಿನ ಬಳಕೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ.
ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಮಟ್ಟವಿದ್ದಲ್ಲಿ ಅದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು. ನುಗ್ಗೆ ಸೊಪ್ಪಿನ ಸೇವನೆಯು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ನುಗ್ಗೆ ಸೊಪ್ಪಿನ ಹೆಚ್ಚು ಸೇವನೆ ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದೇಹದ ತೂಕ ಇಳಿಸುವ ಕ್ರಿಯೆ ನುಗ್ಗೆ ಸೊಪ್ಪು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸನೀರಿಗೆ ನುಗ್ಗೆ ಸೊಪ್ಪಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ದೇಹದ ತೂಕ ಇಳಿಯುತ್ತದೆ.
ನುಗ್ಗೆ ಸೊಪ್ಪು ಅಧಿಕ ನಿರೋಧಕ ಗುಣಗಳನ್ನು ಹೊಂದಿದೆ ಮತ್ತು ನುಗ್ಗೆ ಸೊಪ್ಪಿನಲ್ಲಿ ಕಂಡುಬರುವ ಕ್ವೆರ್ಸೆಟಿನ್ ಎಂಬ ನಿರ್ದಿಷ್ಟ ಸಂಯುಕ್ತವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಹೆಚ್ಚು ರಕ್ತದೊತ್ತಡ ಸಮಸ್ಯೆ ಇರುವವರು ನಿಯಮಿತವಾಗಿ ನುಗ್ಗೆ ಸೊಪ್ಪಿನ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಇದನ್ನೂ ಓದಿ: ಮಳೆಗಾಲದಲ್ಲಿ ಈ ಆಹಾರಗಳನ್ನು ಸೇವಿಸಿ, ಆರೋಗ್ಯವಾಗಿರಿ.
ನುಗ್ಗೆ ಸೊಪ್ಪಿನಲ್ಲಿರುವ ಉರಿಯೂತದ ಗುಣಲಕ್ಷಣಗಳು ಆಸ್ಟಿಯೊಪೊರೋಸಿಸ್ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪು ಕ್ಯಾಲ್ಸಿಯಂ ಮತ್ತು ರಂಜಕದ ಸಮೃದ್ಧ ಮೂಲವಾಗಿದೆ, ಇದು ಉತ್ತಮ ಮೂಳೆಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. ನಿಮ್ಮಲ್ಲಿ ಹೆಚ್ಚು ಸ್ನಾಯು ಸೆಳೆತ, ನೋವು ಕಂಡು ಬಂದಲ್ಲಿ ನುಗ್ಗೆ ಸೊಪ್ಪಿನ ಆಹಾರ ಪದಾರ್ಥವನ್ನು ನಿಯಮಿತವಾಗಿ ಸೇವಿಸಿ ನೋಡಿ, ಬೇಗನೆ ನೋವಿನಿಂದ ಮುಕ್ತಿ ಸಿಗುತ್ತದೆ.
ನುಗ್ಗೆ ಸೊಪ್ಪಿನಲ್ಲಿರುವ ಸಾರಗಳು ಮಲಬದ್ಧತೆ, ಜಠರದಲ್ಲಿ ಕಂಡು ಬರುವ ಉರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್ ರೋಗಗಳಿಗೆ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ನುಗ್ಗೆಸೊಪ್ಪು ಪ್ರತಿಜೀವಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ವಿವಿಧ ರೋಗಾಣುಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದರ ಹೆಚ್ಚಿನ ವಿಟಮಿನ್ ಬಿ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ