ಪ್ರತಿಯೊಬ್ಬರಿಗೂ ಇಷ್ಟವಾಗುವ ಪಾನೀಯವೆಂದರೆ ಅದು ಹಾಲು(Milk)ಮಾತ್ರ. ಅದರಲ್ಲೂ ಹಸುವಿನ ಹಾಲು(Cow Milk) ಅಮೃತಕ್ಕೆ ಸಮಾನ ಎನ್ನುತ್ತಾರೆ. ಹಾಗಾಗಿ ನಮ್ಮ ಹಿರಿಯರು ಮಕ್ಕಳಿಗೆ(Childrens) ಬಾಲ್ಯದಿಂದಲೇ ಹಾಲು ಕುಡಿಯುವ ರೂಢಿಯನ್ನು ಬೆಳೆಸಿರುತ್ತಾರೆ. ಹಾಲು ನಮ್ಮ ಆರೋಗ್ಯಕ್ಕೆ(Health) ತುಂಬಾ ಪ್ರಯೋಜನಕಾರಿ ಕೂಡ ಹೌದು. ಆದ್ದರಿಂದ ಇದನ್ನು ಕುಡಿಯಲು ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ವೈದ್ಯರು ಯಾವಾಗಲೂ ಶಿಫಾರಸು ಮಾಡುತ್ತಾರೆ. ಒಂಬತ್ತು ಅಗತ್ಯ ಪೋಷಕಾಂಶಗಳನ್ನು(Nutrients) ಒಳಗೊಂಡಿರುವ ಕಾರಣ ಒಂದು ಲೋಟ ಹಾಲನ್ನು ಇಡೀ ಊಟವೆಂದು ಪರಿಗಣಿಸಲಾಗುತ್ತದೆ.ಹಾಲನ್ನು ಅದರ ಪ್ರಯೋಜನಗಳಿಂದಾಗಿ ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಹಾಲಿನಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ಗಳು ಮತ್ತು ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಅನೇಕ ಜೀವಸತ್ವಗಳು ಮತ್ತು ಖನಿಜಗಳಿವೆ. ಹಾಲು ಕುಡಿಯುವುದರಿಂದ ಶಕ್ತಿ ಬರುತ್ತದೆ.
1)ಕ್ಯಾಲ್ಸಿಯಂಗಳ ಕಣಜ: ನಮ್ಮ ಹಲ್ಲು ಮತ್ತು ಮೂಳೆಗಳಿಗೆ ಕ್ಯಾಲ್ಸಿಯಂ ಬೇಕು. ಪ್ರತಿದಿನ ಬೆಚ್ಚಗಿನ ಹಾಲು ಕುಡಿಯುವುದರಿಂದ ನಮ್ಮ ಹಲ್ಲು ಮತ್ತು ಮೂಳೆಗಳು ಬಲಗೊಳ್ಳುತ್ತವೆ.
ಇದನ್ನೂ ಓದಿ: ಮಲಗುವ ಮುನ್ನ ಹಾಲು ಕುಡಿಯಬೇಕೇ..? ಬೇಡವೇ..?
2)ತೂಕ ಇಳಿಕೆಗೆ ಸಹಕಾರಿ: ತೂಕ ಕಡಿಮೆ ಮಾಡಿಕೊಳ್ಳಬೇಕೆಂದರೆ ಒಂದು ಕಪ್ ಹಾಲು ಸೇವಿಸಿ. ಇದು ನಿಮಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಆಗ ನೀವು ಅನಗತ್ಯ ತಿನಿಸುಗಳನ್ನು ಸೇವಿಸುವುದಿಲ್ಲ. ಬೇಕಾದರೆ ನೀವು ಹಾಲಿಗೆ ನ್ಯೂಟ್ರಿಶನ್ ಯುಕ್ತ ಚಾಕೊಲೇಟ್ ಪುಡಿ ಸೇರಿಸುವ ಮೂಲಕ ಸೇವಿಸಬಹುದು. ಇದು ನಿಮ್ಮ ನಾಲಿಗೆ ರುಚಿಯನ್ನು ಸಹ ಪೂರೈಸುತ್ತದೆ.
3)ಹಲ್ಲುಗಳ ರಕ್ಷಣೆ: ದಿನಕ್ಕೆ ಒಂದೆರಡು ಬಾರಿ ಒಂದು ಕಪ್ ಹಾಲನ್ನು ಕುಡಿಯುವುದು ಹಲ್ಲುಕುಳಿಗಳು ಮತ್ತು ಹಲ್ಲಿನ ಕೊಳೆತವನ್ನು ತಡೆಯಲು ಸಹಾಯ ಮಾಡುತ್ತದೆ.
ಹಾಲು ಮತ್ತು ಡೈರಿ ಉತ್ಪನ್ನಗಳು ಕ್ಯಾಲ್ಸಿಯಂ ಮತ್ತು ರಂಜಕವನ್ನು ಮಾತ್ರವಲ್ಲ, ಕ್ಯಾಸೀನ್ ಎಂಬ ಪ್ರೋಟೀನ್ಗಳನ್ನು ಸಹ ಒಳಗೊಂಡಿರುತ್ತವೆ. ಇವುಗಳು ನಿಮ್ಮ ಹಲ್ಲುಗಳು ಕೊಳೆಯದಂತೆ ತಡೆಯಲು ಸಹಾಯ ಮಾಡುತ್ತವೆ.
4)ಎದೆಯೂರಿ ತಡೆಗಟ್ಟುತ್ತದೆ: ನಾವು ಸೇವಿಸುವ ಆಹಾರಗಳು ಸಾಮಾನ್ಯವಾಗಿ ಹೆಚ್ಚು ಮಸಾಲೆಯುಕ್ತವಾಗಿರುತ್ತವೆ. ಹೆಲ್ತ್ ಲೈನ್ ಪ್ರಕಾರ, ಮಸಾಲೆಯುಕ್ತ ಆಹಾರ ಹೊಟ್ಟೆಯ ತೊಂದರೆಗಳನ್ನು ಹೆಚ್ಚಿಸುತ್ತದೆ. ಈ ತೊಂದರೆ ತಪ್ಪಿಸಲು ಊಟದ ನಂತರ ಒಂದು ಲೋಟ ಹಾಲು ಸೇವಿಸಲು ಸೂಚಿಸಲಾಗಿದೆ. ಹಾಲು ಹೊಟ್ಟೆಯನ್ನು ತಂಪಾಗಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
5)ಪ್ರೊಟೀನ್ ಹೆಚ್ಚಳ: ಹಾಲಿನಲ್ಲಿ ಸಾಕಷ್ಟು ಪ್ರೋಟೀನ್ ಲಭ್ಯವಿದೆ. ಈ ಆಧಾರದ ಮೇಲೆ ಪ್ರತಿದಿನ ಹಾಲನ್ನು ಕುಡಿಯಲು ಸೂಚಿಸಲಾಗುತ್ತದೆ. ಒಂದು ಲೋಟ ಬೆಚ್ಚಗಿನ ಹಾಲಿನೊಂದಿಗೆ ದಿನವನ್ನು ಪ್ರಾರಂಭಿಸಿ ದಿನವಿಡೀ ದೇಹವನ್ನು ಶಕ್ತಿಯುತವಾಗಿರಿಸುತ್ತದೆ. ಇದರೊಂದಿಗೆ ಸ್ನಾಯುಗಳ ಬೆಳವಣಿಗೆಗೆ ಸಹ ಇದು ಬಹಳ ಮುಖ್ಯವಾಗಿದೆ.
6)ಚರ್ಮ ರಕ್ಷಣೆ: ಹಾಲು ನಮ್ಮ ತ್ವಚೆಗೆ ಸಹ ತುಂಬಾ ಪ್ರಯೋಜನಕಾರಿ. ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸಿದ ಹಾಲಿನ ಫೇಸ್ ಮಾಸ್ಕ್ ನಿಮ್ಮ ಚರ್ಮವು ಹೊಳಪನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಅದು ರಂಧ್ರಗಳನ್ನು ಆಳವಾಗಿ ಶುದ್ಧೀಕರಿಸುತ್ತದೆ. ಹಾಲಿನಲ್ಲಿರುವ ಮೊಯಿಶ್ಚರೈಸಿಂಗ್ ಗುಣಗಳು ಮಗುವಿನಂತೆ ಮೃದು ಚರ್ಮ ಪಡೆಯಲು ಸಹಾಯ ಮಾಡುತ್ತದೆ. ಹಾಲು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ನೀವು ಬಳಸೋ ಹಾಲು ಕಲಬೆರಕೆ ಇಲ್ಲ ತಾನೆ? ಯಾವುದಕ್ಕೂ ಈ ರೀತಿ ಒಂದ್ಸಲ ಚೆಕ್ ಮಾಡಿ
7)ಕೂದಲಿನ ಆರೋಗ್ಯ ರಕ್ಷಣೆ: ಹಾಲಿನಲ್ಲಿರುವ ನೈಸರ್ಗಿಕ ಮಾಯಿಶ್ಚರೈಸರ್’ಗಳು ತ್ವಚೆಗೆ ಮಾತ್ರವಲ್ಲ, ನಿಮ್ಮ ಕೂದಲಿಗೆ ಸಹ ತುಂಬಾ ಸಹಾಯ ಮಾಡುತ್ತವೆ. ವಿಶೇಷವಾಗಿ ಒಣ ಮತ್ತು ಮಂದ ಕೂದಲಿನ ಸಮಸ್ಯೆ ಎದುರಿಸುತ್ತಿರುವವರಿಗೆ ಮ್ಯಾಜಿಕ್’ನಂತೆ ಕಾರ್ಯನಿರ್ವಹಿಸುತ್ತದೆ.
8)ನಿದ್ರೆ ಸಮಸ್ಯೆ ನಿವಾರಣೆ: ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ಇದು ದೊಡ್ಡ ಲಾಭ ನೀಡುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಕೆಲವು ಅಧ್ಯಯನಗಳ ಪ್ರಕಾರ, ರಾತ್ರಿ ಮಲಗುವ ಮೊದಲು ತಿಳಿ ಬೆಚ್ಚಗಿನ ಹಾಲು ಕುಡಿಯುವುದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ