Benefits Of Kesari Water: ನಿದ್ರೆ ಸರಿಯಾಗಿ ಬರ್ತಿಲ್ಲ ಅಂದ್ರೆ ಕೇಸರಿ ನೀರು ಟ್ರೈ ಮಾಡಿ..

Kesari Water: ಕೇಸರಿಯನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಇದನ್ನು ಹಲವಾರು ಸಾಂಪ್ರದಾಯಿಕ ಸಿಹಿ ಮತ್ತು ಖಾರದ ಖಾದ್ಯಗಳಿಗೆ ಸೇರಿಸಲಾಗುತ್ತದೆ. ಅದರ ಹೊರತಾಗಿ ಕೇಸರಿಯನ್ನು ಹಾಲಿನಲ್ಲಿ ಹಾಕಿ ಕುಡಿಯಲಾಗುತ್ತದೆ. ಕೇಸರಿ ಹಾಲು ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು.

ಕೇಸರಿ ನೀರು

ಕೇಸರಿ ನೀರು

  • Share this:

ಭಾರತೀಯ ಅಡುಗೆ ಮನೆಗಳ ದಾಸ್ತಾನು ಜಾಗವು, ಅದ್ಭುತ ಗಿಡಮೂಲಿಕೆಗಳು ಮತ್ತು ಮಸಾಲೆಗಳ ಕಣಜವಾಗಿದೆ. ಈ ಪದಾರ್ಥಗಳು ಆಹಾರಕ್ಕೆ ಸುವಾಸನೆ ನೀಡುವುದು ಮಾತ್ರವಲ್ಲ, ತಮ್ಮ ಆರೋಗ್ಯಕರ ಲಾಭಗಳಿಗಂದಲೂ ಹೆಸರುವಾಸಿ. ಜೀರಿಗೆ, ಕೊತ್ತಂಬರಿ, ದಾಲ್ಚಿನ್ನಿ ಮುಂತಾದವು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿದ್ದು, ಒಳಗಿನಿಂದ ನಮ್ಮನ್ನು ಪುಷ್ಟೀಕರಿಸುತ್ತವೆ. ಅಂತಹದ್ದೇ ಬಹುಪಯೋಗಿ ಗಿಡಮೂಲಿಕೆಗಳಲ್ಲಿ ಒಂದು ಕೇಸರಿ. ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥಗಳ ಸಾಲಿಗೆ ಸೇರುವ ಕೇಸರಿಯನ್ನು ಕ್ರೋಕಸ್ ಸ್ಯಾಟಿವಸ್ ಎಂಬ ಹೂವಿನಿಂದ ಪಡೆಯಲಾಗುತ್ತದೆ. ಈ ಕೇಸರಿ ಬಣ್ಣದ ಪದಾರ್ಥದ ಒಂದೆರಡು ಎಸಳುಗಳು ಇದ್ದರೆ ಸಾಕು, ಯಾವುದೇ ತಿನಿಸನ್ನು ಅದ್ಧೂರಿ ಮತ್ತು ರುಚಿಕರಗೊಳಿಸಲು ಸಾಧ್ಯವಿದೆ.


ಕೇಸರಿಯ ಆರೋಗ್ಯಕರ ಅಂಶಗಳು:ಕೇಸರಿ ಚಳಿಗಾದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಬೆಂಗಳೂರಿನ ಪೌಷ್ಟಿಕ ತಜ್ಞೆ ಡಾ. ಅಂಜು ಸೂದ್ ಪ್ರಕಾರ, “ಕೇಸರಿ, ಹಲವಾರು ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಕಾಪಾಡಬಲ್ಲ ಆ್ಯಂಟಿಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿದೆ”. BJOG ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಅಂತರಾಷ್ಟ್ರೀಯ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಮಹಿಳೆಯರಲ್ಲಿ ಪಿಎಂಎಸ್ ಲಕ್ಷಣಗಳನ್ನು ನಿವಾರಿಸುವಲ್ಲಿ ಕೇಸರಿ ಧನಾತ್ಮಕ ಪರಿಣಾಮ ಬೀರುತ್ತದೆ.


ಆಹಾರ ಕ್ರಮದಲ್ಲಿ ಕೇಸರಿ ಸೇರಿಸುವ ವಿಧಾನ:
ಕೇಸರಿಯನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಇದನ್ನು ಹಲವಾರು ಸಾಂಪ್ರದಾಯಿಕ ಸಿಹಿ ಮತ್ತು ಖಾರದ ಖಾದ್ಯಗಳಿಗೆ ಸೇರಿಸಲಾಗುತ್ತದೆ. ಅದರ ಹೊರತಾಗಿ ಕೇಸರಿಯನ್ನು ಹಾಲಿನಲ್ಲಿ ಹಾಕಿ ಕುಡಿಯಲಾಗುತ್ತದೆ. ಕೇಸರಿ ಹಾಲು ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು. ಇದು ಕೇಸರಿಯನ್ನು ನಮ್ಮ ಆಹಾರದಲ್ಲಿ ಸೇರಿಸುವ ಸಾಮಾನ್ಯ ವಿಧಾನವಾದರೆ, ತಜ್ಞರ ಪ್ರಕಾರ, ಕೇಸರಿ ನೀರು ಅರೋಗ್ಯಕ್ಕೆ ತುಂಬಾ ಒಳ್ಳೆಯದು.


ಇದನ್ನೂ ಓದಿ: ಕಣ್ಣಿನ ಆರೋಗ್ಯದಿಂದ ಜೀರ್ಣಶಕ್ತಿ ವೃದ್ಧಿಯವರೆಗೆ ಬಟಾಣಿ ಕಾಳಿನ ಆರೋಗ್ಯ ಪ್ರಯೋಜನಗಳು ..

ಕೇಸರಿ ನೀರು ಮಾಡುವ ವಿಧಾನ:
ಕೇಸರಿ ನೀರು ಎಂದರೆ, ಒಂದೆರೆಡು ಕೇಸರಿ ದಳಗಳನ್ನು ಹಾಕಿರುವ ನೀರು. ನೀವು ಮಾಡಬೇಕಾದದ್ದು ಇಷ್ಟೆ, ಒಂದು ಲೋಟ ನೀರಿಗೆ ಎರಡು ಮೂರು ಕೇಸರಿ ದಳಗಳನ್ನು ಹಾಕಿ ರಾತ್ರಿಯಿಡೀ ನೆನಸಿಡಿ. ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಿರಿ.


ಕೇಸರಿ ನೀರಿನಿಂದ ಆರೋಗ್ಯಕ್ಕಾಗುವ ಲಾಭಗಳು:
1. ಮುಟ್ಟಿನ ಸೆಳೆತ ನಿವಾರಿಸುತ್ತದೆ:ಡಾ. ಭರತ್ ಅಗರ್‌ವಾಲ್‌ ಅವರ ‘ಹೀಲಿಂಗ್ ಸ್ಪೈಸಸ್’ ಎಂಬ ಪುಸ್ತಕದ ಪ್ರಕಾರ, ಮುಟ್ಟಿನ ನೋವು ನಿವಾರಿಸಲು, ಪಿಎಂಎಸ್ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಹಾರ್ಮೋನುಗಳ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುವಲ್ಲಿ ಕೇಸರಿ ಪರಿಣಾಮಕಾರಿ ಎಂದು ಸಾಬೀತಾಗಿದೆ.


2. ಚರ್ಮದ ಆರೋಗ್ಯಕ್ಕೆ ಉತ್ತಮ:ಕೇಸರಿಯು ಆ್ಯಂಟಿಆ್ಯಕ್ಸಿಡೆಂಟ್‍ಗಳ ಆಗರವಾಗಿದ್ದು, ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ ಮತ್ತು ಚರ್ಮವನ್ನು ರ‍್ಯಾಡಿಕಲ್ ಹಾನಿಗಳಿಂದ ಕಾಪಾಡುತ್ತದೆ. ಅದನ್ನು ನೀರಿನಲ್ಲಿ ಹಾಕಿ ಸೇವಿಸಿದಾಗ, ಚರ್ಮವನ್ನು ಹೈಡ್ರೆಟ್ ಮಾಡುತ್ತದೆ ಮತ್ತು ಒಳಗಿನಿಂದ ಪೋಷಣೆ ನೀಡಲು ಸಹಾಯ ಮಾಡುತ್ತದೆ. ಮೊಡವೆ ಮತ್ತು ಹಲವು ಚರ್ಮದ ಸಮಸ್ಯೆಗಳಿಂದ ದೂರ ಇಡುತ್ತದೆ.


3. ನಿದ್ರಾಹೀನತೆಯನ್ನು ನಿವಾರಿಸುತ್ತದೆ:ಹೀಲಿಂಗ್ ಫುಡ್ಸ್ ಪುಸ್ತಕದ ಪ್ರಕಾರ, ಕೇಸರಿಯು ಕ್ರೋಸಿನ್, ಸ್ಯಾಫ್ರನಾಲ್ ಮತ್ತು ಪಿಕ್ರೋಕ್ರೋಸಿನ್ ಎಂಬ ಆ್ಯಂಟಿಆ್ಯಕ್ಸಿಡೆಂಟ್‍ಗಳ ಅತ್ಯುತ್ತಮ ಮೂಲವಾಗಿದೆ. ಅವು ನಿದ್ರಾ ಹೀನತೆಯನ್ನು ನಿವಾರಿಸಲು ಸಹಾಯ ಮಾಡಬಲ್ಲದು.


ಇದನ್ನೂ ಓದಿ: ಖಾರ ಅಂತ ಅಳ್ಬೇಡಿ, ಹಸಿಮೆಣಸಿನಕಾಯಿ ತಿಂದ್ರೆ ಬೇಗ ಸಣ್ಣಗಾಗ್ತಾರಂತೆ!

ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ, ಕೇಸರಿಯನ್ನು ಒಟ್ಟಾರೆ ಪೋಷಣೆಗಾಗಿ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಆದರೆ ನೆನಪಿಡಿ, ಯಾವುದನ್ನೇ ಆದರೂ ಮಿತವಾಗಿ ಬಳಸಬೇಕು. ಅಲ್ಲದೆ, ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮುನ್ನ ತಜ್ಞರ ಸಲಹೆ ಪಡೆಯುವುದನ್ನು ಮರೆಯಬೇಡಿ.


Published by:Sandhya M
First published: