ಆರೋಗ್ಯಕ್ಕೆ ಕರಿಬೇವು ಅತೀ ಮುಖ್ಯ...ಯಾಕೆ?

ಕರಿಬೇವಿನಲ್ಲಿ ಫೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಹಾಗೆಯೇ ಐರನ್ ಅಂಶವು ಈ ಎಲೆಗಳಿರುತ್ತವೆ. ಹೀಗಾಗಿ ಇದನ್ನು ಪ್ರತಿನಿತ್ಯದ ಆಹಾರದಲ್ಲಿ ಬಳಸಿ ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆ ನಿವಾರಿಸಬಹುದು.

zahir | news18-kannada
Updated:September 18, 2019, 2:59 PM IST
ಆರೋಗ್ಯಕ್ಕೆ ಕರಿಬೇವು ಅತೀ ಮುಖ್ಯ...ಯಾಕೆ?
curry leaves
  • Share this:
ಒಗ್ಗರಣೆ ಅಥವಾ ಆಹಾರ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನುವವರು ತುಂಬಾ ವಿರಳ. ಸಾಮಾನ್ಯ ಮಸಾಲೆಯುಕ್ತ ಎಲ್ಲ ಆಹಾರ ಪದಾರ್ಥಗಳಲ್ಲೂ ಕರಿಬೇವು ಎಲೆಗಳನ್ನು ಬಳಸಲಾಗುತ್ತಿದ್ದರೂ, ಇದನ್ನು ತಿನ್ನದೆ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ ಕರಿಬೇವು ಕೇವಲ ಆಹಾರದ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂಬುದು ನೆನಪಿಟ್ಟುಕೊಳ್ಳಿ. ನಮ್ಮ ದಿನನಿತ್ಯದ ಆಹಾರದಲ್ಲಿ ಕರಿಬೇವು ಬಳಸುವುದರಿಂದ ಸಿಗುವ ಪ್ರಯೋಜನಗಳಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ:
ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಅಂಶ ಹೆಚ್ಚಿರುತ್ತದೆ. ಇದು ದೇಹದಲ್ಲಿರುವ ಅನಗತ್ಯ ವಿಷ ಪದಾರ್ಥಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸಿ ಅರ್ಜೀರ್ಣ ಸಮಸ್ಯೆಯನ್ನು ದೂರ ಮಾಡುತ್ತದೆ.

ಬಿಳಿ ಕೂದಲು ಸಮಸ್ಯೆ:
ದೇಹದದಲ್ಲಿ ಪೋಷಕಾಂಶಗಳ ಕೊರತೆಯಾದರೆ ಸಣ್ಣ ಪ್ರಾಯದಲ್ಲೇ ಕೂದಲು ಬಿಳಿಯಾಗಿಬಿಡುತ್ತದೆ. ಇಂತಹ ಸಮಸ್ಯೆಯನ್ನು ಕರಿಬೇವಿನ ಆಹಾರದಿಂದ ತಡೆಯಬಹುದು. ಹಾಗೆಯೇ ಕೂದಲ ಬೆಳವಣಿಗೆಗೂ ಕರಿಬೇವಿನ ಎಲೆಗಳು ಸಹಕಾರಿಯಾಗಿದೆ.

ಇದನ್ನೂ ಓದಿ: ಕೊನೆಗೂ ಮೌನ ಮುರಿದ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದ ಆರೋಪಿ ನಟ ಸೂರಜ್

ಅತಿಸಾರಕ್ಕೆ ಪರಿಹಾರ:ಕರಿಬೇವಿನಲ್ಲಿ ಕಾರ್ಬಜೋಲ್ ಅಲ್ಕಾಲೋಯ್ಡ್ ಅಂಶವಿದೆ. ಈ ಅಂಶವು ದೇಹದಲ್ಲಿ ಸಾಮಾನ್ಯ ಪ್ರಮಾಣದಲ್ಲಿದ್ದರೆ ಅತಿಸಾರದ ಸಮಸ್ಯೆ ತಲೆದೂರುವುದಿಲ್ಲ. ಹೀಗಾಗಿ ಕರಿಬೇವನ್ನು ಅತಿಸಾರದ ಮನೆಮದ್ದು ಎನ್ನಬಹುದು.

ನೆಗಡಿ, ಕೆಮ್ಮಿಗೂ ಉತ್ತಮ:
ಆಹಾರದಲ್ಲಿ ಕರಿಬೇವಿನ ಬಳಕೆಯಿಂದ ಶ್ವಾಸಕೋಶದ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಕೆಮ್ಮು, ನೆಗಡಿ ಅಸ್ತಮಾದಂತಹ ಸಮಸ್ಯೆಗಳು ದೂರವಾಗುತ್ತವೆ.

ರಕ್ತಹೀನತೆಗೆ ಪರಿಹಾರ:
ಕರಿಬೇವಿನಲ್ಲಿ ಫೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಹಾಗೆಯೇ ಐರನ್ ಅಂಶವು ಈ ಎಲೆಗಳಿರುತ್ತವೆ. ಹೀಗಾಗಿ ಇದನ್ನು ಪ್ರತಿನಿತ್ಯದ ಆಹಾರದಲ್ಲಿ ಬಳಸಿ ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆ ನಿವಾರಿಸಬಹುದು.

ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾದರೆ ಏನು ಮಾಡಬೇಕು: ಈಗ ಫೋನ್​ಗಳನ್ನು ಪತ್ತೆ ಹಚ್ಚುವುದು ಮತ್ತಷ್ಟು ಸುಲಭ

ಮಧುಮೇಹ ನಿಯಂತ್ರಣ:
ಕರಿಬೇವು ಎಲೆಗಳಲ್ಲಿ ಆ್ಯಂಟಿ ಆಕ್ಸಿಡೆಂಟ್​ ಪ್ರಮಾಣ ಹೇರಳವಾಗಿರುತ್ತದೆ. ಇದರ ನಿಯಮಿತ ಬಳಕೆಯು ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಈ ಮೂಲಕ ಮಧುಮೇಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕೊಲೆಸ್ಟ್ರಾಲ್ ನಿಯಂತ್ರಣ:
ಆಹಾರದಲ್ಲಿ ಕರಿಬೇವಿನ ಬಳಕೆಯು ದೇಹದಲ್ಲಿನ ಕೊಲೆಸ್ಟ್ರಾಲ್​ನ್ನು ನಿಯಂತ್ರಿಸುವುದಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಮೂತ್ರ ಸಂಬಂಧಿ ಕಾಯಿಲೆಗೆ ಪರಿಹಾರ:
ಕರಿಬೇವನ್ನು ಕುದಿಸಿ, ಕಷಾಯ ಮಾಡಿ ಕುಡಿಯುವುದು ಕೂಡ ಉತ್ತಮ. ಕರಿಬೇವಿನ ಕಷಾಯ ಕುಡಿಯುವುದರಿಂದ ಮೂತ್ರ ಸಂಬಂಧಿಸಿ ಕಾಯಿಲೆಗಳು ದೂರವಾಗುತ್ತವೆ.

ಇದನ್ನೂ ಓದಿ: ಕ್ರಿಕೆಟಿಗ ರಾಹುಲ್ ಜತೆ ನಟಿ ಸೋನಾಲ್ ಡೇಟಿಂಗ್: ಅಷ್ಟಕ್ಕೂ ಯಾರೀಕೆ?

First published: September 18, 2019, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading