Garlic Benefits: ಕಾಶ್ಮೀರಿ ಬೆಳ್ಳುಳ್ಳಿಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು - ಏನೆಲ್ಲಾ ಪ್ರಯೋಜನಗಳಿದೆ ನೋಡಿ

Himalayn Garlic Benefits :ಸಾಮಾನ್ಯ ಬೆಳ್ಳುಳ್ಳಿಗಳಿಗಿಂತ ಏಳು ಪಟ್ಟು ಹೆಚ್ಚು ಕಮಟು ಮತ್ತು ಘಾಟು ಹೊಂದಿರುವ ಕಾಶ್ಮೀರಿ ಬೆಳ್ಳುಳ್ಳಿಯನ್ನು ಹಸಿಯಾಗಿಯೂ ಸೇವಿಸಬಹುದು ಅಥವಾ ಅಡುಗೆಗೂ ಬಳಸಬಹುದು. ಇದೂ ಕೇವಲ ಕಾಶ್ಮೀರದಲ್ಲಿಯೇ ಬೆಳೆಯುವ ಬೆಳೆಯಾಗಿರುವ ಕಾರಣ ಇವನ್ನು ಅಂತರ್ಜಾಲದ ಮೂಲಕ ತರಿಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತೀಯರ ಅಡುಗೆಮನೆ(Indian Kitchen) ಕೇವಲ ರುಚಿ ರುಚಿಯಾದ ಆಹಾರ(Tasty Food) ತಯಾರಿಸಲು ಮಾತ್ರ ಸೀಮಿತವಾದ ಸ್ಥಳವಲ್ಲ.. ಭಾರತೀಯರ ಅಡುಗೆಮನೆಯಲ್ಲಿ ಹಲವು ಗಿಡಮೂಲಿಕೆಗಳು, ಔಷಧೀಯ(Medicine) ಗುಣಗಳು ಇರುವ ಹಲವು ವಸ್ತುಗಳು ಇವೆ.. ಇವುಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು(Immunity) ಹೆಚ್ಚಳಮಾಡಿ ನಮ್ಮ ಆರೋಗ್ಯವನ್ನು(Health) ಸುಧಾರಣೆ ಮಾಡುತ್ತದೆ.. ಈ ರೀತಿ ಸುಲಭವಾಗಿ ಅಡುಗೆ ಮನೆಯಲ್ಲಿ ಸಿಗುವ ಔಷಧೀಯ ಗುಣಗಳಿರುವ ವಸ್ತುಗಳಲ್ಲಿ ಬೆಳ್ಳುಳ್ಳಿ ಕೂಡ ಒಂದು.. ಪ್ರತಿನಿತ್ಯ ಅಡುಗೆಯ ರುಚಿ, ಘಮ ಹೆಚ್ಚಿಸುವ ಬೆಳ್ಳುಳ್ಳಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ..ಇದರಲ್ಲಿರುವ ಅಲ್ಲಿಲ್‌ ಸಲ್ಫೈಡ್‌ ಎಂಬ ರಾಸಾಯನಿಕ ಅಂಶ ಮೆದುಳಿಗೆ ಹಾಗೂ ಸಣ್ಣಕರುಳಿನ ಆರೋಗ್ಯಕ್ಕೂ ಉಪಯುಕ್ತಅಲ್ಲದೆ ಸ್ಮರಣಶಕ್ತಿಯನ್ನು ಹೆಚ್ಚಿಸಬಲ್ಲದು. ಹಾಗೆಯೇ ಕರುಳಿನ ಉರಿಯೂತವನ್ನು ಕಡಿಮೆ ಮಾಡುವ ಶಕ್ತಿಯೂ ಇದಕ್ಕಿದೆ ಎನ್ನುತ್ತಾರೆ ವಿಜ್ಞಾನಿಗಳು.. ಆದ್ರೆ ಸಾಮಾನ್ಯವಾಗಿ ಬಳಸುವ ಬೆಳ್ಳುಳ್ಳಿ ಗಿಂತ ಹಿಮಾಲಯನ್ ಬೆಳ್ಳುಳ್ಳಿ ಆರೋಗ್ಯವನ್ನು ಹೆಚ್ಚಿಸುವಲ್ಲಿ ಮತ್ತು ಮತ್ತಷ್ಟು ಸಹಕಾರಿ ಎನ್ನುತ್ತಾರೆ ವಿಜ್ಞಾನಿಗಳು..

    ಆರೋಗ್ಯ ವೃದ್ಧಿಗೆ ಸಹಕಾರಿ ಕಾಶ್ಮೀರಿ ಬೆಳ್ಳುಳ್ಳಿ..

    ಸಾಮಾನ್ಯ ಬೆಳ್ಳುಳ್ಳಿಗಳಿಗಿಂತ ಏಳು ಪಟ್ಟು ಹೆಚ್ಚು ಕಮಟು ಮತ್ತು ಘಾಟು ಹೊಂದಿರುವ ಕಾಶ್ಮೀರಿ ಬೆಳ್ಳುಳ್ಳಿಯನ್ನು ಹಸಿಯಾಗಿಯೂ ಸೇವಿಸಬಹುದು ಅಥವಾ ಅಡುಗೆಗೂ ಬಳಸಬಹುದು. ಇದೂ ಕೇವಲ ಕಾಶ್ಮೀರದಲ್ಲಿಯೇ ಬೆಳೆಯುವ ಬೆಳೆಯಾಗಿರುವ ಕಾರಣ ಇವನ್ನು ಅಂತರ್ಜಾಲದ ಮೂಲಕ ತರಿಸಬೇಕಾಗುತ್ತದೆ. ಹಿಮಾಲಯದ ಎತ್ತರದ ಪ್ರದೇಶದಲ್ಲಿ ಬೆಳೆಯುವ ಕಾಶ್ಮೀರಿ ಬೆಳ್ಳುಳ್ಳಿಯನ್ನು ವರ್ಷಕ್ಕೆ ಒಮ್ಮೆ ಮಾತ್ರ ಕೊಯ್ಲು ಮಾಡಲಾಗುತ್ತದೆ.. ಇಂತಹ ಬೆಳ್ಳುಳ್ಳಿಯಲ್ಲಿ ಹಲವು ಆರೋಗ್ಯಕಾರಿ ಪ್ರಯೋಜನಗಳು ಇವೆ.

    ಇದನ್ನೂ ಓದಿ :ಬೆಳ್ಳುಳ್ಳಿ ಸಿಪ್ಪೆ ಬಿಡಿಸೋಕೆ ಅಷ್ಟೆಲ್ಲಾ ಕಷ್ಟ ಪಡ್ಬೇಡಿ.. ತುಂಬಾ ಸಲಭದ ಟ್ರಿಕ್ ಇದೆ, ಹೀಗೆ ಮಾಡಿ ನೋಡಿ!

    1) ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ : ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಹಿಮಾಲಯನ್ ಬೆಳ್ಳುಳ್ಳಿ ಅಥವಾ ಕಾಶ್ಮೀರಿ ಬೆಳ್ಳುಳ್ಳಿ ಸಹಕಾರಿಯಾಗಿದೆ.. ಹಿಮಾಲಯನ್ ಬೆಳ್ಳುಳ್ಳಿ ಮಾನವ ದೇಹದಲ್ಲಿ 20 mg/dl ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ.

    2) ಕೆಮ್ಮು ಮತ್ತು ಶೀತ ಗುಣಪಡಿಸಲು ಸಹಕಾರಿ :ಹಿಮಾಲಯನ್ ಬೆಳ್ಳುಳ್ಳಿ ಕೆಮ್ಮು ಮತ್ತು ಶೀತವನ್ನು ಗುಣಪಡಿಸುವಲ್ಲಿ ಸಹಕಾರಿಯಾಗಿದೆ . ಇತರ ಕಾಯಿಲೆಗಳಿಂದ ಸೋಂಕಿಗೆ ಒಳಗಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ. ಇದು ಅಲೈನೇಸ್ ಮತ್ತು ಅಲೈನ್ ಎಂಬ ರಾಸಾಯನಿಕ ಸಂಯುಕ್ತಗಳನ್ನು ಹೊಂದಿದ್ದು, ಅಲಿಸಿನ್ ಎಂಬ ಪ್ರಬಲ ಸಂಯುಕ್ತವನ್ನು ರಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ದೀರ್ಘಕಾಲ ಕೆಮ್ಮು ಮತ್ತು ಶೀತದಿಂದ ಬಳಲುವವರು ಕಾಶ್ಮೀರಿ ಬೆಳ್ಳುಳ್ಳಿ ಸೇವನೆ ಮಾಡುವುದು ಬಹಳ ಉಪಯೋಗ.

    3) ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ : ಕಾಶ್ಮೀರಿ ಬೆಳ್ಳುಳ್ಳಿ ಡಯಾಲಿಲ್ ಟ್ರೈಸಲ್ಫೈಡ್ ಎಂಬ ಆರ್ಗನೊಸಲ್ಫರ್ ಸಂಯುಕ್ತವನ್ನು ಹೊಂದಿದ್ದು , ಇದು ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ :ಚಳಿಗಾಲದಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಸಿಗುವ 5 ದೊಡ್ಡ ಪ್ರಯೋಜನಗಳ ಬಗ್ಗೆ ತಿಳಿಯಿರಿ

    4) ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣ :ಸಂಶೋಧಕರ ಪ್ರಕಾರ ನಿಯಮಿತವಾಗಿ ಎರಡರಿಂದ ಮೂರು ಕಾಶ್ಮೀರಿ ಬೆಳ್ಳುಳ್ಳಿಗಳನ್ನು ಸೇವನೆ ಮಾಡುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಯನ್ನು ಪ್ರಚೋದಿಸುತ್ತದೆ.. ಹೀಗಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣವಾಗುತ್ತದೆ..

    5) ಹೃದಯದ ಆರೋಗ್ಯಕ್ಕೆ ಸಹಕಾರಿ :ಹೈಡ್ರೋಜನ್ ಸಲ್ಫೈಡ್ ಎಂಬ ರಾಸಾಯನಿಕ ಸಂಯುಕ್ತವನ್ನು ಹೊಂದಿದ್ದು ಹಿಮಾಲಯನ್ ಬೆಳ್ಳುಳ್ಳಿ ದೇಹದಲ್ಲಿ LDL ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ರಕ್ತದ ಸಾಂದ್ರತೆಯನ್ನು ಕಡಿಮೆ ಮಾಡುವ ಮೂಲಕ ಪ್ಲೇಕ್ ಮತ್ತು ಹೆಪ್ಪುಗಟ್ಟುವಿಕೆಯ ರಚನೆಯನ್ನು ತಡೆಯುತ್ತದೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಕಾಶ್ಮೀರಿ ಬೆಳ್ಳುಳ್ಳಿ ಕಾಪಾಡುತ್ತದೆ.
    Published by:ranjumbkgowda1 ranjumbkgowda1
    First published: