Hibiscus Tea :ದಾಸವಾಳ ಕೇವಲ ಪೂಜೆಗೆ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿ

Benefits of tea :ದಾಸವಾಳದ ಹೂವಿನಲ್ಲಿ 14 ಔಷಧೀಯ ಗುಣಗಳು ಇರುವುದರಿಂದ ಇದನ್ನು ಚಹಾದ ರೂಪದಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಆಗುತ್ತವೆ.

ದಾಸವಾಳ

ದಾಸವಾಳ

 • Share this:
  ದಾಸವಾಳ (Hibiscus) ಪೂಜೆಗೆ(prayer) ಶ್ರೇಷ್ಠವೆಂದು, ಮನೆಯ(Home) ಹೊರಗೆ ಅಲಂಕಾರಕ್ಕೆಂದೋ (Decoration) ನಾವು ಬಳಸುತ್ತೇವೆ, ದಾಸವಾಳವನ್ನು ಹಿಂದೂ ಧರ್ಮದ (Hindu religion) ದೈವಿಕ ವ್ಯಾಖ್ಯಾನಗಳಲ್ಲಿಯೂ ಸಹ ಬಳಸಲಾಗುತ್ತದೆ. ಆದರೆ ಆ ದಾಸವಾಳದ ನಿಜವಾದ ಉಪಯೋಗ  ಕೆಲವರಿಗೆ ಗೊತ್ತೆಯಿಲ್ಲ . ಪ್ರಾಚೀನ ಕಾಲದಿಂದಲೂ,ವಿಭಿನ್ನ ಸಂಸ್ಕೃತಿಗಳಲ್ಲಿ(Culture) ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವ ಪರಿಹಾರವಾಗಿ ಬಳಸಲ್ಪಟ್ಟಿದೆ..ಕೆಂಪು,(Red) ಬಿಳಿ,(White) ಹಳದಿ(yellow) ಬಣ್ಣದ ದಾಸವಾಳ ಹೂಗಳನ್ನ ಉತ್ತಮವಾದ ಹಾಗೂ ಆರೋಗ್ಯಕರವಾದ ಕೇಶರಾಶಿಯನ್ನು ಹೊಂದಲು ಕೆಲವು ಕಡೆ ಬಳಸಿದರೆ ದಾಸವಾಳ ಎಲೆಗಳನ್ನು ಔಷಧೀಯ ವಸ್ತುವನ್ನಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ ದಾಸವಾಳ ದಿಂದಲೂ ರುಚಿರುಚಿಯಾದ ಚಹಾ ತಯಾರು ಮಾಡಿ ಕುಡಿಯಬಹುದು. ಈ ರೀತಿ ದಾಸವಾಳದಿಂದ ಚಹಾ ಮಾಡಿ ಕುಡಿಯುವುದರಿಂದ ದೇಹಕ್ಕೆ ಹಲವಾರು ಆರೋಗ್ಯಕಾರಿ ಅಂಶಗಳಿವೆ..

  ದಾಸವಾಳದ ಎಲೆಗಳಿಂದ ಮಾಡಬಹುದು ಚಹಾ

  ಸಾಮಾನ್ಯವಾಗಿ ನಾವು ಗ್ರೀನ್ ಟೀ, ಲೆಮನ್ ಟೀ, ಶುಂಠಿ ಟೀ ಹೀಗೆ ನಾನಾ ಬಗೆಯ ಟೀಗಳನ್ನು ಕುಡಿಯುತ್ತೇವೆ..ಇವುಗಳೆಲ್ಲವೂ ಆರೋಗ್ಯದ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಬೀರುತ್ತವೆ.. ಅದೇ ರೀತಿ ದಾಸವಾಳದ ಎಲೆ ಗಳಿಂದಲೂ ಸಹಾ ನಾವು ಟೀ ಮಾಡಿ ಕುಡಿಯಬಹುದು.. ದಾಸವಾಳದ ಹೂವಿನಲ್ಲಿ 14 ಔಷಧೀಯ ಗುಣಗಳು ಇರುವುದರಿಂದ ಇದನ್ನು ಚಹಾದ ರೂಪದಲ್ಲಿ ಸೇವನೆ ಮಾಡುವುದರಿಂದ
  ನಮ್ಮ ದೇಹಕ್ಕೆ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಆಗುತ್ತವೆ.

  ಇದನ್ನೂ ಓದಿ :ಬಳಸಿದ ಟೀ ಪುಡಿಯಿಂದ ಗಿಡಗಳಿಗೆ ಬೊಂಬಾಟ್​​ ಗೊಬ್ಬರ.. ಈ ರೀತಿ ಮಾಡಿ

  ದೇಹಕ್ಕೆ ಹಲವು ಪೋಷಕಾಂಶಗಳನ್ನು ನೀಡುವ ದಾಸವಾಳದ ಚಹಾ

  ದಾಸವಾಳದ ಚಹಾ ನೈಸರ್ಗಿಕವಾಗಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಕೆಫೀನ್ ಮುಕ್ತವಾಗಿದೆ.ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಫಾಸ್ಫರಸ್, ಪೊಟ್ಯಾಸಿಯಮ್, ಸೋಡಿಯಂ ಮತ್ತು ಸತುವು ಸೇರಿದಂತೆ ಖನಿಜಗಳ ಉತ್ತಮ ಪೂರೈಕೆಯನ್ನು ದಾಸವಾಳದ ಚಹಾ ಹೊಂದಿದೆ. ಇದು ನಿಯಾಸಿನ್ ಮತ್ತು ಫೋಲಿಕ್ ಆಮ್ಲದಂತಹ ಬಿ-ವಿಟಮಿನ್‌ಗಳನ್ನು ದಾಸವಾಳ ಚಹಾ ಮೂಲಕ ಪಡೆಯಬಹುದಾಗಿದೆ.. ಅಲ್ಲದೆ ಅಧಿಕ ರಕ್ತದೊತ್ತಡದಮಟ್ಟಗಳು, ನೆಗಡಿ ಮತ್ತು ಮೂತ್ರನಾಳದ ಸೋಂಕುಗಳನ್ನುಹೋಗಲಾಡಿಸಲು ಸಹಾಯಕಾರಿಯಾಗಿದೆ..

  2) ಅಧಿಕ ರಕ್ತದೊತ್ತಡದ ನಿವಾರಣೆ

  ಇದರಲಿರುವ ಉರಿಯೂತ ನಿವಾರಕ ಗುಣ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ದಾಸವಾಳದ ಹೂವಿನ ಚಹಾ ಒಂದು ವರದಾನವಾಗಿದೆ.

  3) ತೂಕ ಇಳಿಕೆಗೆ ಸಹಕಾರಿ

  ಹೇಗಾದರೂ ಸರಿ ನಾವು ತೂಕ ಇಳಿಕೆ ಮಾಡಬೇಕು ಎಂದು ಬಯಸುವವರು ಗ್ರೀನ್ ಸೇರಿ ಹಲವಾರು ಪೌಷ್ಟಿಕಾಂಶಯುಕ್ತ ಆಹಾರಗಳ ಸೇವನೆ ಮಾಡುತ್ತಾರೆ.. ಈ ರೀತಿ ತೂಕ ಇಳಿಕೆಗೆ ಸೇವನೆ ಮಾಡುವ ಆಹಾರಗಳ ಪಟ್ಟಿಯಲ್ಲಿ ದಾಸವಾಳದ ಚಹಾ ಸೇರಿಕೊಂಡರೆ ಆದಷ್ಟು ಬೇಗ ತೂಕ ಇಳಿಕೆ ಮಾಡಬಹುದಾಗಿದೆ..

  4) ಕೊಲೆಸ್ಟ್ರಾಲ್ ನಿಯಂತ್ರಣ

  ದಾಸವಾಳದ ಚಹಾ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನರಗಳ ಒಳಗೋಡೆಗಳಿಗೆ ಅಂಟಿಕೊಂಡಿದ್ದುದು ಸಡಿಲಗೊಳ್ಳುವ ಮೂಲಕ ನಿವಾರಣೆಯಾಗಲು ಸಾಧ್ಯವಾಗುತ್ತದೆ.  ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣ ಮಾಡುವ ಮೂಲಕ ರಕ್ತನಾಳಗಳು ಮತ್ತು ತನ್ಮೂಲಕ ಹೃದಯಕ್ಕೆ ಆಗುವ ಹಾನಿಯನ್ನು ಸಂಭವಿಸುತ್ತದೆ. ಅದರಲ್ಲೂ ದಿನಕ್ಕೆ ಕೆಲವಾರು ಕಪ್ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಅಂಶ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ

  5) ಕ್ಯಾನ್ಸರ್ ನಿಯಂತ್ರಿಸಲು ಸಹಕಾರಿ

  ಇತ್ತೀಚಿಗೆ ನಡೆದ ಹೊಸ ಅಧ್ಯಯನಗಳು ಹೇಳುವ ಹಾಗೆ ದಾಸವಾಳ ಚಹಾ ಸೇವನೆಯಿಂದ ದೇಹದಲ್ಲಿ ಈಗಾಗಲೇ ಅಭಿವೃದ್ಧಿ ಯಾಗಿರುವ ಕ್ಯಾನ್ಸರ್ ಕಾರಕ ಜೀವಕೋಶಗಳ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತದೆ. ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ ಹಾಗೂ ಮಹಿಳೆಯರ ಸ್ತನಗಳ ಭಾಗದಲ್ಲಿ ಕಂಡುಬರುವ ಕ್ಯಾನ್ಸರ್ ಜೀವಕೋಶಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು. ಆದರೆ ಸಂಪೂರ್ಣವಾಗಿ ಇದರ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ. ಹಾಗಾಗಿ ಈ ವಿಷಯದಲ್ಲಿ ವೈದ್ಯಕೀಯ ನೆರವು ಅಗತ್ಯವಿದೆ ಎಂದು ಹೇಳಬಹುದು

  ಇದನ್ನೂ ಓದಿ :ಆರೋಗ್ಯಕರ ಮಸಾಲೆ ಟೀ ಮಾಡುವ ವಿಧಾನ..!

  6) ಯಕೃತ್ ಸಮಸ್ಯೆ ಉಂಟಾಗುವುದರಿಂದ ರಕ್ಷಣೆ

  ಯಕೃತ್‌ನ ತೊಂದರೆಗಳಿದ್ರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಉತ್ತಮ ಸಹಕಾರ ನೀಡುತ್ತವೆ ಎಂದು ಸಂಶೋಧನೆಗಳು ದೃಢಗೊಳಿಸಿವೆ.
  ರಕ್ತದಲ್ಲಿನ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಷ್ಕ್ರಿಯಗೊಳಿಸಿ ಯಕೃತ್ ಸಹಿತ ದೇಹದ ಇತರ ಅಂಗಗಳನ್ನು ಹಾನಿಯಿಂದ ರಕ್ಷಿಸುತ್ತದೆ ಹಾಗೂ ಕ್ಷಮತೆಯನ್ನು ಹೆಚ್ಚಿಸುತ್ತದೆ.

  ದಾಸವಾಳ ಚಹಾ ತಯಾರಿಕೆಗೆ ಬೇಕಾಗುವ ಪದಾರ್ಥಗಳು

  *ನೀರು
  *ಲಿಂಬು
  *ದಾಲ್ಚಿನ್ನಿ
  *ಪುದೀನ ಎಲೆಗಳು
  * ಒಣಗಿಸಿಟ್ಟ ದಾಸವಾಳದ ಎಲೆಗಳು

  ದಾಸವಾಳದ ಚಹಾ ಮಾಡುವ ವಿಧಾನ

  ತಣ್ಣನೆಯ ನೀರಿನಲ್ಲಿ ದಾಸವಾಳದ ಎಲೆಯ ಪುಡಿಗಳನ್ನು 2 ಗಂಟೆಗಳ ಕಾಲ ನೆನೆಸಿಡಿ. ಅದನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ಸಕ್ಕರೆ ಅಥವಾ ಜೇನುತುಪ್ಪ ಮತ್ತು ಲಿಂಬು ರಸವನ್ನು ಸೇರಿಸಿ. ಜತೆಗೆ ದಾಲ್ಚಿನ್ನಿ ಮತ್ತು ಪುದೀನ ಎಲೆಗಳನ್ನು ಬೆರೆಸಿದ್ರೆ ದಾಸವಾಳದ ಚಹಾ ಸಿದ್ಧವಾಗಲಿದೆ
  Published by:ranjumbkgowda1 ranjumbkgowda1
  First published: