ದೇಹ ತೂಕವನ್ನು ಕಡಿಮೆ ಮಾಡಲು ಮಾಡುವ ಕಸರತ್ತು ಒಂದಾ ಎರಡಾ..! ಆದರೂ ತೂಕದಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಅದರಲ್ಲೂ ಡೊಳ್ಳು ಹೊಟ್ಟೆಯನ್ನು ಕರಗಿಸಲು ನಾನಾ ರೀತಿಯ ವ್ಯಾಯಾಮ ಮಾಡಿದರೂ ಪ್ರಯೋಜನ ಮಾತ್ರ ಶೂನ್ಯ ಎಂದು ಕೆಲವರು ಹೇಳುತ್ತಾರೆ.
ಇದೀಗ ಮಳೆಗಾಲದ ಸೀಸನ್. ಈ ಋತುವಿನಲ್ಲಿ ಸಾಮಾನ್ಯವಾಗಿ ಹಣ್ಣುಗಳು ಮತ್ತು ತರಕಾರಿಗಳು ಹೇರಳವಾಗಿ ದೊರೆಯುತ್ತವೆ. ಹೀಗೆ ಸಿಗುವ ಹಣ್ಣುಗಳಲ್ಲಿ
ಪೇರಲೆ ಅಥವಾ ಸೀಬೆಹಣ್ಣು ಕೂಡ ಒಂದು. ಇದನ್ನು ದಿನನಿತ್ಯ ಸೇವಿಸುವ ಮೂಲಕ ಕೂಡ ನಿಮ್ಮ ಸ್ಥೂಲಕಾಯತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಹೌದು, ಪೇರಲೆ ಹಣ್ಣಿನಲ್ಲಿ ಫೋಲೇಟ್ ಎಂಬ ಅಂಶವಿದ್ದು, ಇದು ಅಧಿಕ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ. ಹಾಗೆಯೇ ಈ ಹಣ್ಣು ಸೋಡಿಯಂನ ನಕರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಿ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನಿಮ್ಮ ಡಯಟ್ನಲ್ಲಿ ಸೀಬೆಹಣ್ಣನ್ನು ಸೇರಿಸುವುದು ಉತ್ತಮ.
ಪೇರಲೆ ಹಣ್ಣಿನಿಂದ ಪ್ರಯೋಜನಗಳು ಯಾವುವು?
1. ಪೇರಲೆ ಅಥವಾ ಸೀಬೆ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಫೈಬರ್ ಅಂಶ ಇರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಜೀರ್ಣಕ್ರಿಯೆ ಸಾಮರ್ಥ್ಯವನ್ನು ಚೇತರಿಸಿಕೊಳ್ಳುವುದು ಬಹಳ ಮುಖ್ಯ. ಅಂದರೆ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುವಲ್ಲಿ ಫೈಬರ್ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪೇರಲೆ ಎಂಬುದು ಜೀರ್ಣಕ್ರಿಯೆಗೆ ಮನೆಮದ್ದು ಎನ್ನಬಹುದು.
2. ಪೇರಲೆಯಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ತುಂಬಾ ಕಡಿಮೆ. 100 ಹಣ್ಣಿನಲ್ಲಿ ಕೇವಲ 14 ಗ್ರಾಂ ಕಾರ್ಬೋಹೈಡ್ರೇಟ್ ಕಂಡುಬರುತ್ತದೆ. ಅನೇಕ ಅಧ್ಯಯನಗಳ ಪ್ರಕಾರ, ಕಾರ್ಬೋಹೈಡ್ರೇಟ್ ಕಡಿಮೆ ಇರುವ ವಸ್ತುಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
3. ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣುಗಳನ್ನು ತೂಕ ಇಳಿಸುವ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ. ಅಂತಹ ಹಣ್ಣುಗಳಲ್ಲಿ ಪೇರಲ ಕೂಡ ಒಂದು ಎಂದು ಸಲಹೆ ನೀಡಲಾಗುತ್ತದೆ.
4. ಸೀಬೆಹಣ್ಣನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಪ್ರೋಟೀನ್ ಹಸಿವು-ಸಂಬಂಧಿತ ಹಾರ್ಮೋನ್ 'ಗ್ರೇಲಿನ್' ಅನ್ನು ನಿಯಂತ್ರಿಸುತ್ತದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.
5. ಪೇರಲೆಯಲ್ಲಿ ಬಿ 1, ಬಿ 3, ಬಿ 6 ಮತ್ತು ಫೋಲೇಟ್‌ನಂತಹ ಬಿ ವಿಟಮಿನ್ಗಳು ಅಧಿಕ ಪ್ರಮಾಣದಲ್ಲಿರುತ್ತದೆ. ಇದು ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ.
ಇದನ್ನೂ ಓದಿ: ನಿದ್ರೆ ಬಾರದ ಸಮಸ್ಯೆಗೆ ಇಲ್ಲಿದೆ ಸರಳ ಮದ್ದು..!
6. ಮಧುಮೇಹ ರೋಗಿಗಳಿಗೆ ರಾಮಬಾಣವಾಗಿ ಸೀಬೆಹಣ್ಣು ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿ ಇನ್ಸುಲಿನ್ ಹೆಚ್ಚಿಸಲು ಪೇರಲೆ ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ