news18-kannada Updated:November 25, 2020, 1:24 PM IST
ಗ್ರೀನ್ ಟೀ
ಸಾಮಾನ್ಯವಾಗಿ ಫಿಟ್ನೆಸ್ ಪ್ರಿಯರು ಗ್ರೀನ್ ಟೀ ಕುಡಿಯುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಒಂದು ಕಾರಣ ಗ್ರೀನ್ ಟೀ ಸೇವಿಸುವುದರಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳು. ಆದರೆ ಇದುವೇ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ ಎಂದರೆ..! ಆಶ್ಚರ್ಯವಾಗುತ್ತದೆಯಲ್ಲವೇ.
ಹೌದು, ಗ್ರೀನ್ ಟೀ ಕುಡಿಯುವುದು ಉತ್ತಮ. ಆದರೆ ಅದು ಬೆಳಗಿನ ಹೊತ್ತಲ್ಲಿ ಎಂಬುದು ನೆನಪಿರಲಿ. ನೀವು ರಾತ್ರಿಯಲ್ಲಿ ವೇಳೆ ಈ ಚಹಾವನ್ನು ಕುಡಿಯುವುದರಿಂದ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಗ್ರೀನ್ ಟೀಯಲ್ಲಿ ಫ್ಲೊವೊನಾಯ್ಡ್ ಅಂಶಗಳು ಹೇರಳವಾಗಿವೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಆದರೆ ಇದೇ ವೇಳೆ ಇದು ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೆ ನಿಯಮಿತವಾಗಿ ರಾತ್ರಿಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ನಿದ್ರಾಹೀನತೆಯ ಸಮಸ್ಯೆಗೆ ತುತ್ತಾಗುತ್ತೀರಿ ಎಂದು ಸಂಶೋಧನಾ ತಂಡವೊಂದು ತಿಳಿಸಿದೆ.
ಹಸಿರು ಚಹಾದಲ್ಲಿ ಕಾಫಿಗಿಂತ ಕಡಿಮೆ ಕೆಫೀನ್ ಇದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಬೆಳಿಗ್ಗೆ ಗ್ರೀನ್ ಕುಡಿಯುವುದರಿಂದ ವ್ಯಕ್ತಿಯು ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯವಾಗಿರಲು ಮತ್ತು ಚೆನ್ನಾಗಿ ನಿದ್ರೆ ಮಾಡಲು ಬೆಳಿಗ್ಗೆ ಅಥವಾ ಮಧ್ಯಾಹ್ನ ಒಂದು ಅಥವಾ ಎರಡು ಕಪ್ ಹಸಿರು ಚಹಾವನ್ನು ಕುಡಿಯುವುದು ಪ್ರಯೋಜನಕಾರಿ. ಆದರೆ ರಾತ್ರಿಯಲ್ಲಿ ಗ್ರೀನ್ ಕುಡಿಯುವುದು ಮಾತ್ರ ಒಳ್ಳೆಯದಲ್ಲ ಎಂದು ಅಧ್ಯಯನ ತಂಡ ತಿಳಿಸಿದೆ.
Published by:
HR Ramesh
First published:
November 25, 2020, 12:33 PM IST