Green Apple: ದಿನಕ್ಕೊಂದು ಗ್ರೀನ್​ ಆ್ಯಪಲ್​ ತಿಂದ್ರೆ ಈ ಪ್ರಯೋಜನಗಳು ನಿಮ್ಮದಾಗುತ್ತದೆ

ಹಸಿರು ಸೇಬು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿರು ಸೇಬಿನಲ್ಲಿರುವ ನಾರಿನಾಂಶವು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಇದು ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಡೆಯುವುದು.

ಹಸಿರು ಸೇಬು ಹಣ್ಣು

ಹಸಿರು ಸೇಬು ಹಣ್ಣು

  • Share this:
    ಹಣ್ಣುಗಳು ಹಾಗೂ ತರಕಾರಿ(Vegetable)ಗಳು ಪೋಷಕಾಂಶಗಳ ಖಜಾನೆ ಎನ್ನಬಹುದು. ಇವುಗಳನ್ನು ಎಷ್ಟು ಹೆಚ್ಚು ಸೇವಿಸುತ್ತೇವೆಯೋ ಅಷ್ಟು ನಮ್ಮ ದೇಹವು ಆರೋಗ್ಯವಾಗಿರುತ್ತದೆ. ದಿನಕ್ಕೊಂದು ಸೇಬು (Apple) ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವ ಮಾತಿದೆ. ಅದರಲ್ಲೂ ಕೆಂಪು ಸೇಬಿಗಿಂತ ಹಸಿರು ಸೇಬು (Green Apple) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೆಚ್ಚಿನವರು ಕೆಂಪು ಸೇಬನ್ನೇ ತಿನ್ನಲು ಬಳಸುತ್ತಾರೆ. ಜೀರ್ಣಕ್ರಿಯೆ(Digestion)ಯನ್ನು ಸುಧಾರಿಸುತ್ತದೆ. ಹಸಿರು ಸೇಬಿನಲ್ಲಿ ಸಿಹಿ ಕಡಿಮೆ ಇರುವ ಕಾರಣದಿಂದ ಇದನ್ನು ಹೆಚ್ಚಾಗಿ ಪದಾರ್ಥಗಳಲ್ಲಿ ಬಳಸುತ್ತಾರೆ. ಈಗೀಗ ಹೆಚ್ಚಾಗಿ ಹಸಿರು ಸೇಬನ್ನು ವಿವಿಧ ರೀತಿಯ ತರಕಾರಿ ಖಾದ್ಯಗಳಲ್ಲಿ ಬಳಸುತ್ತಾರೆ. ಹಸಿರು ಸೇಬು ಕಚ್ಚಾ ಹಣ್ಣಿನಂತೆ ಕಾಣುವ ಕಾರಣದಿಂದ ಅದರ ಬಗ್ಗೆ ನಿರ್ಲಕ್ಷ್ಯ. ಆದರೆ ಕೆಂಪು ಸೇಬಿಗಿಂತ ಹಸಿರು ಸೇಬಿನಲ್ಲಿ ಆರೋಗ್ಯ ಲಾಭಗಳು ಅಧಿಕವಾಗಿವೆ.

    ಮೂಳೆಗಳನ್ನು ಬಲಗೊಳಿಸುತ್ತದೆ 

    ದಟ್ಟವಾದ ಮತ್ತು ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ. ಹಸಿರು ಸೇಬುಹಣ್ಣಿನಲ್ಲಿ ಪೊಟ್ಯಾಶಿಯಂ , ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ಕೆಲವು ಅಧ್ಯಯನಗಳು ಕಂಡುಕೊಂಡಂತೆ ವಿಟಮಿನ್ ಕೆ (Vitamin K) ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ತಡೆಗಟ್ಟಲು ನೆರವಾಗುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಸಂಧಿವಾತವನ್ನು ತಡೆಯುವುದು.

    ಕಣ್ಣಿನ ಆರೋಗ್ಯಕ್ಕೆ ತುಂಬಾ ಉಪಯುಕ್ತ 

    ಆಹಾರದಲ್ಲಿ ಹಸಿರು ಸೇಬುಗಳನ್ನು ಸೇರಿಸಿಕೊಳ್ಳಿ, ಇದರಲ್ಲಿ ಇರುವಂತಹ ವಿಟಮಿನ್ ಎ ಕಣ್ಣಿನ ದೃಷ್ಟಿಗೆ ಒಳ್ಳೆಯದು. ಕೆಲವು ವರ್ಷಗಳಿಂದ ಟಿವಿ, ಲ್ಯಾಪ್ ಟಾಪ್, ಮೊಬೈಲ್ ಬಳಕೆಯಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಸಾಮಾನ್ಯವಾಗಿ ಹೋಗಿದೆ. ಹಾಗೂ ಹಸಿರು ಸೇಬು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ.

    ಇದನ್ನೂ ಓದಿ: Walnuts Benefits: ವಾಲ್‌ನಟ್ಸ್‌ನ ಆರೋಗ್ಯಕರ ಪ್ರಯೋಜನಗಳು, ಮದುಮೇಹ ನಿಯಂತ್ರಣಕ್ಕೂ ಇದು ಸಹಕಾರಿಯಂತೆ!

    ಕರುಳಿನ ಕ್ಯಾನ್ಸರ್ ತಡೆಯುವುದು

    ಕರುಳಿನ ಕ್ಯಾನ್ಸರ್ ತಡೆಯುವುದು ಹಸಿರು ಸೇಬನ್ನು ತಿನ್ನುವುದರಿಂದ ಆಗುವಂತಹ ಬಹುದೊಡ್ಡ ಲಾಭವಿದು. ಹಸಿರು ಸೇಬಿನಲ್ಲಿರುವ ನಾರಿನಾಂಶವು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಇದು ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಡೆಯುವುದು.

    ಆರೋಗ್ಯಕರ ಚರ್ಮಕ್ಕೆ ಉತ್ತಮ

    ಹಸಿರು ಸೇಬು ಕೇವಲ ದೇಹಕ್ಕೆ ಮಾತ್ರವಲ್ಲದೇ ಚರ್ಮಕ್ಕೆ ಕೂಡ ಪ್ರಯೋಜನಕಾರಿಯಾಗಿದೆ. ಗ್ರೀನ್​ ಆಪಲ್​​ನಲ್ಲಿ ವಿಟಮಿನ್ ಸಿ, ವಿಟಮಿನ್-ಎ ಮತ್ತು ಆಂಟಿ ಆಕ್ಸಿಡೆಂಟ್ ಗಳ ಉತ್ತಮ ಮೂಲವಾಗಿದ್ದು, ಇದು ಚರ್ಮ ಸುಕ್ಕಾಗುವುದರ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಹಾಗೂ ಚರ್ಮದ ಕ್ಯಾನ್ಸರ್​ ತಡೆಯಲು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

    ಯಕೃತ್‌ನ ಆರೈಕೆ

    ಯಕೃತ್‌ನ ಆರೈಕೆ ಹಸಿರು ಸೇಬಿನಲ್ಲಿ ಆರೋಗ್ಯ ಲಾಭಗಳು ತುಂಬಾ ಇದೆ. ಇದರಲ್ಲಿರುವ ಕೆಲವೊಂದು ಅಂಶಗಳು ಯಕೃತ್ ಅನ್ನು ಸರಿಯಾಗಿ ನೋಡಿಕೊಂಡು ಯಕೃತ್‌ಗೆ ಬರುವಂತಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಹಸಿರು ಸೇಬು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

    ಇದನ್ನೂ ಓದಿ: Peach Fruit: ಜೀರ್ಣಕ್ರಿಯೆಯಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಪೀಚ್​ ಹಣ್ಣಿನ ಪ್ರಯೋಜನಗಳಿವು

    ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

    ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ವಿಟಮಿನ್ ಮತ್ತು ಖನಿಜಾಂಶಗಳ ಖಜಾನೆಯಾಗಿರುವ ಹಸಿರು ಸೇಬನ್ನು ದೇವರು ಕೊಟ್ಟ ವರವೆಂದು ಕರೆಯಬಹುದು. ಯಾಕೆಂದರೆ ಇದರಲ್ಲಿರುವ ಅಂಶಗಳು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್, ಬ್ಯಾಕ್ಟೀರಿಯಾ ಇತ್ಯಾದಿಗಳ ವಿರುದ್ಧ ಹೋರಾಡಲು ದೇಹಕ್ಕೆ ನೆರವಾಗುವುದು.

    ಮಧುಮೇಹದಲ್ಲಿ ಪ್ರಯೋಜನಕಾರಿ 

    ಮಧುಮೇಹಿ ರೋಗಿಯಾಗಿದ್ದರೆ, ಹಸಿರು ಸೇಬುಗಳನ್ನು ತಿನ್ನಿ, ಹಸಿರು ಸೇಬುಗಳಲ್ಲಿ ಕೆಂಪು ಸೇಬುಗಳಿಗಿಂತ ಕಡಿಮೆ ಸಕ್ಕರೆ ಅಂಶವಿದೆ ಮತ್ತು ನಾರಿನಂಶವು ತುಂಬಾ ಹೆಚ್ಚಾಗಿರುತ್ತದೆ. ಅದರಲ್ಲೂ ಹಸಿರು ಸೇಬು ಗಳು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
    Published by:Swathi Nayak
    First published: