Gluten Free Grain: ಜೋಳದಿಂದ ಸಿಗುವ ಆರೋಗ್ಯಕರ ಪ್ರಯೋಜನಗಳು ಹೀಗಿವೆ..!

ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಅದ್ಭುತ ಗ್ಲುಟೆನ್-ಮುಕ್ತ ಧಾನ್ಯವಾಗಿದೆ ಈ ಜೋಳ. ಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ಜೋಳದಿಂದ ತಯಾರಿಸಿದ ಆಹಾರ ಪದಾರ್ಥ ಸೇವಿಸುವುದರಿಂದ ದೇಹವನ್ನು ತಂಪಾಗಿರಿಸುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಒಳ್ಳೆಯ ಆಹಾರವಾಗಿದೆ

ಜೋಳ

ಜೋಳ

  • Share this:
ಬಹುತೇಕ ಜನರು ತಮ್ಮ ದೇಹದಲ್ಲಿರುವ ಅತಿಯಾದ ತೂಕ ಕಡಿಮೆ ಮಾಡಿಕೊಳ್ಳಲು ತಮ್ಮ ಆಹಾರ ಪದ್ಧತಿಗಳಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಲೇ ಇರುವುದನ್ನು ನಾವೆಲ್ಲಾ ಗಮನಿಸಿರುತ್ತೇವೆ. ಹೌದು.. ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ನಾವು ಸೇವಿಸುವ ಆಹಾರ ಪದಾರ್ಥಗಳ ಪಾತ್ರ ಅಪಾರವಾಗಿರುತ್ತದೆ.ಇದಕ್ಕಾಗಿಯೇ ತಜ್ಞರು ಆಗಾಗ್ಗೆ ಆರೋಗ್ಯಕರ ಆಹಾರ ಪದಾರ್ಥಗಳ ಸೇವನೆ ಬಗ್ಗೆ ಮತ್ತು ಕೆಲವು ಆಹಾರ ಬದಲಾವಣೆಗಳನ್ನು ಮಾಡಿಕೊಳ್ಳಲು ಹೇಳುತ್ತಿರುತ್ತಾರೆ. ಅದು ದೇಹದ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ದಿನವಿಡೀ ಸಂತೃಪ್ತ ಮತ್ತು ಶಕ್ತಿಯುತ ಭಾವನೆ ನೀಡುತ್ತದೆ.

"ಸೋರ್ಗಮ್ ಎಂದೂ ಕರೆಯಲ್ಪಡುವ ಜೋಳವು ಆಯುರ್ವೇದ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಅದ್ಭುತ ಗ್ಲುಟೆನ್-ಮುಕ್ತ ಧಾನ್ಯವಾಗಿದೆ. ಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ಜೋಳದಿಂದ ತಯಾರಿಸಿದ ಆಹಾರ ಪದಾರ್ಥ ಸೇವಿಸುವುದರಿಂದ ದೇಹವನ್ನು ತಂಪಾಗಿರಿಸುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಒಳ್ಳೆಯ ಆಹಾರವಾಗಿದೆ" ಎನ್ನುತ್ತಾರೆ ಆಯುರ್ವೇದ ಸಲಹೆಗಾರರಾದ ಪೂಜಾ. ಜೋಳವನ್ನು ವಿವಿಧ ರೀತಿಯಲ್ಲಿ ಹೇಗೆ ಬಳಸಬಹುದು ಎಂದೂ ಸಲಹೆ ನೀಡಿದ್ದಾರೆ.

North Karnataka Dish: Masala jowar roti now a hot favourite in north Karnataka
ಮಸಾಲ ಜೋಳದ ರೊಟ್ಟಿ


ನೀವು ಏಕೆ ಜೋಳವನ್ನು ಹೆಚ್ಚಾಗಿ ಸೇವಿಸಬೇಕು..?

"ಕೆಲವೊಮ್ಮೆ ಆಯುರ್ವೇದ ವೈದ್ಯರು ಮಧುಮೇಹ ರೋಗಿಗಳಿಗೆ ಅನ್ನ ಸೇವಿಸುವ ಬದಲು ಜೋಳದಿಂದ ತಯಾರಿಸಿದ ಆಹಾರ ಸೇವಿಸಲು ಹೇಳುತ್ತಾರೆ. ಏಕೆಂದರೆ ಇದು ತೂಕ ನಿಯಂತ್ರಣಕ್ಕೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿದ ನಾರು ಜೀರ್ಣಕಾರಿ ಆರೋಗ್ಯಕ್ಕೂ ಉತ್ತಮವಾಗಿದೆ" ಎಂದು ಅವರು ಉಲ್ಲೇಖಿಸಿದರು.

ಇದು ಮಧುಮೇಹ ರೋಗಿಗಳಿಗೆ ಹೇಗೆ ಸಹಾಯ ಮಾಡುತ್ತದೆ?

ಆರೋಗ್ಯಕರ ಧಾನ್ಯವಾಗಿ, ಜೋಳವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ. ಅಂದರೆ ಇದು ಸಕ್ಕರೆ ಪ್ರಮಾಣವನ್ನು ಹೆಚ್ಚು ಮಾಡುವುದಿಲ್ಲ ಮತ್ತು ಇದರಿಂದ ನಿಮ್ಮ ಇನ್ಸುಲಿನ್ ಮಟ್ಟ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಇದು ಹಾರ್ಮೋನ್ ಮತ್ತು ಹೃದಯದ ಆರೋಗ್ಯ ಕಾಪಾಡುತ್ತದೆ. ಜೋಳವು ನಿಧಾನವಾಗಿ ಜೀರ್ಣವಾಗುತ್ತದೆ, ಅಂದರೆ ಇದು ಹೆಚ್ಚು ಕಾಲ ಹೊಟ್ಟೆ ತುಂಬಿದ ಹಾಗೆ ಅನ್ನಿಸುತ್ತದೆ. ಜೋಳದಲ್ಲಿ ಪ್ರೋಟೀನ್, ನಾರು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ವಿಟಮಿನ್ ಬಿ ಮತ್ತು ಸಿ ಇರುತ್ತದೆ.

ಇದನ್ನೂ ಓದಿ: ಬಿಸಿಯೂಟ, ಇಂದಿರಾ ಕ್ಯಾಂಟೀನ್​ನಲ್ಲಿ ಸಿರಿಧಾನ್ಯ ಬಳಕೆಗೆ ಮುಂದಾದ ಕುಮಾರಸ್ವಾಮಿ ಸರ್ಕಾರ

ನೀವು ಜೋಳವನ್ನು ಹೇಗೆಲ್ಲಾ ಬಳಸಬಹುದು..?

ನೀವು ಜೋಳದ ರೊಟ್ಟಿಗಳು, ಉಪ್ಪಿಟ್ಟು, ಪಲಾವ್ ಇತ್ಯಾದಿಗಳನ್ನು ಮಾಡಿಕೊಳ್ಳಬಹುದು. "ನಮ್ಮಲ್ಲಿ ಹೆಚ್ಚಿನವರು ಜೋಳವನ್ನು ತಮ್ಮ ಆಹಾರ ಪದ್ದತಿಯಲ್ಲಿ ಅಳವಡಿಸಿಕೊಂಡಿದ್ದಾರೆ" ಎಂದು ಪೂಜಾ ಹೇಳಿದ್ದಾರೆ.

ಜೋಳದ ರೊಟ್ಟಿ ಮಾಡುವುದು ಹೇಗೆ ಗೊತ್ತೇ?

ಮೊದಲಿಗೆ ಕುದಿಯುವ ನೀರು, ಮತ್ತು ಜೋಳದ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿರಿ, ನಂತರ ನೀವು ಹಿಟ್ಟನ್ನು 15 ನಿಮಿಷಗಳ ಕಾಲ ಹಾಗೆ ಕೈಗಳಿಂದ ಚೆನ್ನಾಗಿ ಮೃದು ಮಾಡಿಕೊಳ್ಳಿ. ನೀರು ಚಿಮುಕಿಸಿ 10 ಸೆಕೆಂಡುಗಳ ಕಾಲ ಕಾಯಿರಿ ಮತ್ತು ನಂತರ ಅದನ್ನು ತಿರುಗಿಸಿ.

ಇದನ್ನೂ ಓದಿ: Diet Plan: ಜೋಳ ತಿಂದ್ರೆ ಬೇಗ ತೂಕ ಇಳಿಯುತ್ತಂತೆ ನೋಡಿ; ಚಪಾತಿ ಬದಲು ಇದೇ ಬೆಟರ್ ಅಂತಾರೆ ತಜ್ಞರು !

ಜೋಳದ ಹಿಟ್ಟಿನ ಉಂಡೆ ಮಾಡಿಕೊಂಡು ಅವುಗಳಿಗೆ ಜೋಳದ ಹಿಟ್ಟು ಹಚ್ಚಿ, ಹಿಟ್ಟನ್ನು ಮೃದುವಾಗಿಸಲು ಒಂದು ಒದ್ದೆ ಬಟ್ಟೆಯಿಂದ ಅದನ್ನು ಸ್ವಲ್ಪ ಕಾಲ ಹಾಗೆ ಮುಚ್ಚಿಡಿ. ನಂತರ ರೊಟ್ಟಿಯನ್ನು ವೃತ್ತಾಕಾರವಾಗಿ ಮಾಡಿಕೊಂಡು ಬೇಯಿಸಿ. ತಯಾರಿಸಿದ ರೊಟ್ಟಿಗಳನ್ನು ಹೆಚ್ಚು ಕಾಲ ಮೃದುವಾಗಿ ಮತ್ತು ತೇವಾಂಶದಿಂದ ಇರಿಸಲು ಮುಚ್ಚಿದ ಪಾತ್ರೆಯಲ್ಲಿ ಇರಿಸಿ.
Published by:Anitha E
First published: