Health Tips: ಶುಂಠಿ ಚಹಾದಲ್ಲಿ ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

Ginger Tea: ಶುಂಠಿ ಚಹಾದಲ್ಲಿ ಹಲವು ಔಷಧೀಯ ಗುಣಗಳಿವೆ ಎಂದು ಹಲವಾರು ಅಧ್ಯಯನಗಳು ಸಾಬೀತು ಮಾಡಿವೆ. ವಾರಕ್ಕೆ 2 ರಿಂದ 3 ಬಾರಿಯಾದರೂ ಶುಂಠಿ ಚಹಾ ಕುಡಿಯುವುದು ಆರೋಗ್ಯಕ್ಕೆ ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶುಂಠಿ ಚಹಾವನ್ನು ಬಹಳಷ್ಟು ಜನರು ಇಷ್ಟ ಪಡುತ್ತಾರೆ. ಆದರೆ ಕೆಲವರು ಅದರ ವಿಭಿನ್ನ ರುಚಿಯನ್ನು ನೋಡಿ ದೂರವೇ ಇರುತ್ತಾರೆ. ಆದರೆ ಈ ಶುಂಠಿ ಚಹಾದಿಂದ ಆಗುವ ಪ್ರಯೋಜನಗಳು ಒಂದೆರೆಡಲ್ಲ. ಶುಂಠಿಯೇ ಹಲವು ರೋಗಗಳ ಔಷಧಿಯ ಮೂಲ. ಇನ್ನು ಈ ಶುಂಠಿ ಟೀ ಮಾಡುವುದು ಹೆಚ್ಚು ಸುಲಭ. ಒಣಗಿದ ಅಥವಾ ತಾಜಾ ಶುಂಠಿಯ ತುಂಡುಗಳನ್ನು ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಕುದಿಸಿ ಇಟ್ಟುಕೊಳ್ಳಬೇಕು. ಟೀ ಕುಡಿಯುವ ಮೊದಲು ಅದನ್ನು ಬಿಸಿ ಬಿಸಿ ನೀಡಿಗೆ ಸೇರಿಸಿ ಸೇವಿಸಬೇಕು. ಈ ಶುಂಠಿ ಟೀ ಸ್ವಲ್ಪ ಮಸಾಲೆ ರುಚಿಯನ್ನು ಹೊಂದಿರುತ್ತದೆ.

ಶುಂಠಿ ಚಹಾದ ಸಾಕಷ್ಟು ಪ್ರಯೋಜನಗಳನ್ನು ಇಲ್ಲಿದೆ ನೋಡಿ:

ಜೀರ್ಣಕ್ರಿಯೆಗೆ ಒಳ್ಳೆಯದು: ಶುಂಠಿ ಚಹಾವು ಜೀರ್ಣಕ್ರಿಯೆಗೆ ಸಂಬಂಧಿಸಿದ  ಸಮಸ್ಯೆಗಳನ್ನು ಶಮನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ವಿಶೇಷವಾಗಿ ಎದೆಯುರಿ ಮತ್ತು ವಾಕರಿಕೆ ತೊಂದರೆಯನ್ನು ಬಹು ಬೇಗನೆ ನಿವಾರಿಸಲು ಸಹಾಯ ಮಾಡುತ್ತದೆ. ಒಂದು ಕಪ್ ಶುಂಠಿ ಚಹಾ ಕುಡಿಯುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಬಹುದು. ಈ ಚಹಾದಲ್ಲಿ ಹಲವು ಔಷಧೀಯ ಗುಣಗಳಿವೆ ಎಂದು ಹಲವಾರು ಅಧ್ಯಯನಗಳು ಸಾಬೀತು ಮಾಡಿವೆ. ವಾರಕ್ಕೆ 2 ರಿಂದ 3 ಬಾರಿಯಾದರೂ ಶುಂಠಿ ಚಹಾ ಕುಡಿಯುವುದು ಆರೋಗ್ಯಕ್ಕೆ ಉತ್ತಮ.

ಮೂತ್ರಪಿಂಡದ ಆರೋಗ್ಯಕ್ಕೆ ಒಳ್ಳೆಯದು: ಶುಂಠಿ ಚಹಾ ಮುತ್ರಪಿಂಡದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಪ್ರತಿನಿತ್ಯ ಶುಂಠಿ ಚಹಾ ಸೇವಿಸುವುದರಿಂದ ಮೂತ್ರಪಿಂಡಕ್ಕೆ ಉಂಟಾಗುವ  ಹಾನಿಯ ಅಪಾಯವನ್ನು ಕಡಿಮೆ ಮಾಡಬಹುದು. ಅಲ್ಲದೇ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಿ, ಮಧುಮೇಹದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಈ ಆಹಾರಗಳನ್ನು ಸೇವಿಸಿದರೆ ನಿಮ್ಮ ಸೆಕ್ಸ್ ಲೈಫ್ ಸೂಪರ್.. ಉತ್ತಮ ಲೈಂಗಿಕತೆಯ ಗುಟ್ಟು ಇಲ್ಲಿದೆ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಶುಂಠಿ ಚಹಾ ಒಳ್ಳೆಯ ಪರಿಹಾರ. ನೀವು ದಿನಕ್ಕೆ ಒಮ್ಮೆ ಶುಂಠಿ ಸಹ ಸೇವನೆ ಮಾಡುವುದು ಒತ್ತಡವನ್ನು ಕಡಿಮೆ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ: ಶುಂಠಿ ಚಹಾ ಅಥವಾ  ಶುಂಠಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು  ಹೆಚ್ಚು ತಿನ್ನುವ ಬಯಕೆಯನ್ನು ನಿಯಂತ್ರಿಸುತ್ತದೆ. ಚಹಾವು ಚಯಾಪಚಯ ಮತ್ತು ಕೊಬ್ಬು ಹೀರಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ಹೆಚ್ಚಿಸುತ್ತದೆ.  ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಶುಂಠಿ ಟೀ ಯನ್ನು ದಿನಾ ಬೆಳಗ್ಗೆ ಸೇವನೆ ಮಾಡುವುದರಿಂದ ದೇಹದ ತೂಕ ಬೇಗನೆ ಇಳಿಸಿಕೊಳ್ಳಬಹುದು.

ತಲೆನೋವು ಮತ್ತು ಮೈಗ್ರೇನ್ ವಿರುದ್ಧ ಹೋರಾಡುತ್ತದೆ: ಶುಂಠಿ ಮತ್ತು ಅದರ ನೋವು ನಿವಾರಕ ಪರಿಣಾಮಗಳ ಬಗ್ಗೆ ಉತ್ತಮ ಪ್ರಮಾಣದ ಸಂಶೋಧನೆ ನಡೆದಿದೆ. ಸಂಶೋಧನೆಗಳ ಪ್ರಕಾರ ಶುಂಠಿ ಚಹಾವು ತಲೆನೋವು ಮತ್ತು ಮೈಗ್ರೇನ್ ನಿಂದ ಬಳಲುತ್ತಿರುವ ಜನರಿಗೆ ಹೆಚ್ಚು ಪ್ರಯೋಜನ ಮತ್ತು ಪರಿಣಾಮಕಾರಿ. ಶುಂಠಿ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಎರಡೂ ಸಮಸ್ಯೆಗಳನ್ನು ತಡೆಯಬಹುದು.

ಆ್ಯಂಟಿ ಆಕ್ಸಿಡೆಂಟ್ ಹೆಚ್ಚಿರುತ್ತದೆ: ಶುಂಠಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗಿ ತುಂಬಿದ್ದು,  ಇದು ಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಾಬೀತಾಗಿದೆ. ಶುಂಠಿ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಕೊಲೊನ್ ಕ್ಯಾನ್ಸರ್ ಅನ್ನು ತಡೆಯಬಹುದು ಎಂದು ಸಂಶೋಧನೆಗಳು ಸಾಬೀತು ಮಾಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: