ಹೊಟ್ಟೆ ನೋವಿನಿಂದ ಹಿಡಿದು ಕ್ಯಾನ್ಸರ್ ತಡೆಯುವವರಗೆ: ಪುಟ್ಟ ಬೆಳ್ಳುಳ್ಳಿಯಲ್ಲಿ ದೊಡ್ಡ ಶಕ್ತಿ ಇದೆ

Garlic Benefits: ನೆಗಡಿಯಾದಾಗ ಹಿಂದೆ ಹಿರಿಯರ ಕಾಲದಲ್ಲಿ ಒಂದು ಬೆಳ್ಳುಳ್ಳಿ ಜಜ್ಜಿ ಒಂದು ಅರಿವೆಯಲ್ಲಿ ಕಟ್ಟಿ ವಾಸನೆ ನೋಡುತ್ತಿದ್ದರು. ಇದರಿಂದ ನೆಗಡಿ ಶಮನವಾಗುತ್ತಿತ್ತು. ಜತೆಗೆ ಬೆಳ್ಳುಳ್ಳಿ ಎಸಳು ಸುಟ್ಟು ಸೇವನೆ ಮಾಡುತ್ತಿದ್ದರು

ಬೆಳ್ಳುಳ್ಳಿ

ಬೆಳ್ಳುಳ್ಳಿ

 • Share this:
  ಭಾರತೀಯರು(Indians) ಬಳಸುವಂತಹ ಪ್ರತಿಯೊಂದು ಸಾಂಬಾರ ಪದಾರ್ಥದಲ್ಲೂ(Masala) ಹಲವಾರು ಆರೋಗ್ಯ(Health) ಗುಣಗಳು ಅಡಗಿವೆ. ಹಿಂದಿನವರ ಜೀವನಶೈಲಿ(Lifestyle) ಮತ್ತು ಆಹಾರ(Food) ಕ್ರಮವನ್ನು ನೋಡಿದರೆ ಅವರ ಆರೋಗ್ಯದ ಗುಟ್ಟು ತಿಳಿದುಬರುವುದು. ಆದರೆ ಇಂದಿನ ಯುವಜನರು ಫಿಜ್ಜಾ(Pizza), ಬರ್ಗರ್(Burger) ಎಂದು ಸಿಕ್ಕಿದೆಲ್ಲವನ್ನೂ ತಿಂದು ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸದೆ ಇರುವ ಪರಿಣಾಮವಾಗಿ ಅನಾರೋಗ್ಯವು ಬೆನ್ನತ್ತಿ ಬರುತ್ತಿದೆ. ಹೀಗಾಗಿ ನಾವು ನಮ್ಮ ಹಿರಿಯರಂತೆ ದೈಹಿಕವಾಗಿ ಫಿಟ್ ಆಗಿರಲು ತುಂಬಾ ಕಷ್ಟಬೇಕಾಗುತ್ತದೆ. ಪ್ರತಿನಿತ್ಯವು ನಾವು ಅಡುಗೆಯಲ್ಲಿ ಬಳಸುವಂತಹ ಸಾಂಬಾರ ಪದಾರ್ಥದಲ್ಲಿ ಬೆಳ್ಳುಳ್ಳಿ ಕೂಡ ಒಂದಾಗಿದೆ..

  ಬೆಳ್ಳುಳ್ಳಿಯಲ್ಲಿದೆ ಆರೋಗ್ಯಕಾರಿ ಗುಣಗಳು..

  ಪ್ರಸ್ತುತ ಬೆಳ್ಳುಳ್ಳಿ ನೋಡದ ವ್ಯಕ್ತಿಗಳಿಲ್ಲ, ತಿನ್ನದ ಜನರಿಲ್ಲ. ಅನೇಕ ಆಹಾರ ಪದಾರ್ಥಗಳಲ್ಲಿ ಆಹ್ವಾದ ಹೆಚ್ಚಸಲು ಬೆಳ್ಳುಳ್ಳಿ ಪ್ರಧಾನವಾಗಿ ಬೇಕು. ಬೆಳ್ಳುಳ್ಳಿ ಸಾರು, ಬೆಳ್ಳುಳ್ಳಿ ಚಟ್ನಿ ಪುಡಿ ಅತ್ಯಂತ ರುಚಿಕರವಾದ ಆಹಾರಗಳಾಗಿವೆ. ನೆಗಡಿಯಾದಾಗ ಹಿಂದೆ ಹಿರಿಯರ ಕಾಲದಲ್ಲಿ ಒಂದು ಬೆಳ್ಳುಳ್ಳಿ ಜಜ್ಜಿ ಒಂದು ಅರಿವೆಯಲ್ಲಿ ಕಟ್ಟಿ ವಾಸನೆ ನೋಡುತ್ತಿದ್ದರು. ಇದರಿಂದ ನೆಗಡಿ ಶಮನವಾಗುತ್ತಿತ್ತು. ಜತೆಗೆ ಬೆಳ್ಳುಳ್ಳಿ ಎಸಳು ಸುಟ್ಟು ಸೇವನೆ ಮಾಡುತ್ತಿದ್ದರು. ಬೆಳ್ಳುಳ್ಳಿಯಲ್ಲಿ ಅನೇಕ ಔಷಧೀಯ ಗುಣಗಳಿವ. ಜತೆಗೆ ಇದು ಕ್ರಿಮಿ ನಾಶಕದಂತೆ ಕೆಲಸ ಮಾಡುತ್ತದೆ ಕೂಡ.

  ಇದನ್ನೂ ಓದಿ: ಕಾಶ್ಮೀರಿ ಬೆಳ್ಳುಳ್ಳಿಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು - ಏನೆಲ್ಲಾ ಪ್ರಯೋಜನಗಳಿದೆ ನೋಡಿ

  ಬೆಳ್ಳುಳ್ಳಿ ಸೇವನೆಯಿಂದ ಆಗುವ ಉಪಯೋಗ

  *ಬೆಳ್ಳುಳ್ಳಿ ಬೇಯಿಸಿ ಆ ನೀರಿನಿಂದ ಗಾಯ ವನ್ನು ತೊಳೆದರೆ ಗಾಯ ಬೇಗನೆ ವಾಸಿಯಾಗುತ್ತದೆ.

  *ತೂಕ ಹೆಚ್ಚು ಇರುವವರು ಪ್ರತಿದಿನ ಆಹಾರದಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.

  *ಬೆಳ್ಳುಳ್ಳಿ ರಸವನ್ನು ಜೇನು ತುಪ್ಪದಲ್ಲಿ ಬೆರಸಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಇರುವ ಜಂತು ಹುಳುಗಳು ಶಮನವಾಗುತ್ತವೆ.

  *ಋತುಚಕ್ರದ ಸಮಯದಲ್ಲಿ ಹೊಟ್ಟೆನೋವು ಬರುತ್ತಿದ್ದರೆ ಒಂದು ವಾರಕ್ಕೆ ಮುಂಚಿತವಾಗಿ ಎರಡು ಎಸಳುಗಳನ್ನು ಬೆಲ್ಲದೊಂದಿಗೆ ಸೇರಿಸಿ ಪ್ರತಿನಿತ್ಯ ರಾತ್ರಿ ಮಲಗುವಾಗ ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುವುದು.

  *ಬೆಳ್ಳುಳ್ಳಿಯು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ರೋಗಗಳಿಗೆ ಉತ್ತಮ ಮನೆ ಮದ್ದಾಗಿದೆ.

  *ಮೂರು-ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಹಾಲಿಗೆ ಹಾಕಿ ಕಾಯಿಸಿ ರಾತ್ರಿ ಕುಡಿಯುವುದರಿಂದ ಅಸ್ತಮಾ ಕಾಯಿಲೆಗೆ ಒಳ್ಳೆಯದು.

  *ಬಿಸಿ ನೀರಿನಲ್ಲಿ ಅರ್ಧ ಚಮಚ ನಿಂಬೆರಸ ಹಾಗೂ ಬೆಳ್ಳುಳ್ಳಿಯ ಎರಡು ಎಸಳುಗಳನ್ನು ಬೆರಸಿ ಮೂರು ತಿಂಗಳವರೆಗೆ ಕುಡಿಯುವುದರಿಂದ ಬೊಜ್ಜು ಕರಗುತ್ತದೆ.

  *ಬೆಳಿಗ್ಗೆ ಎದ್ದ ಕೂಡಲೇ ಮೂರು-ನಾಲ್ಕು ಬೆಳ್ಳುಳ್ಳಿಯ ಎಸಳುಗಳನ್ನು ಹಸಿಯಾಗಿ ತಿನ್ನುವುದರಿಂದ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗುತ್ತವೆ.

  *ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಸಾಧಾರಣವಾಗಿ ಬರುವ ಕಾಲುನೋವು ಕಡಿಮೆಯಾಗುತ್ತದೆ.

  * ಬೆಳ್ಳುಳ್ಳಿ ರಕ್ತದ ಒತ್ತಡ ತಗ್ಗಿಸಿ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುವುದು. ಇದು ವಾಯು ಪ್ರಕೋಪ ಕಡಿಮೆ ಮಾಡಿ ಸದೃಢ ಜೀರ್ಣಾಂಗ ವ್ಯವಸ್ಥೆಗೂ ಕಾರಣವಾಗುತ್ತದೆ.

  *ರಕ್ತವನ್ನು ಹೆಪ್ಪುಗಟ್ಟಿಸುವ ಅಜೋನ ಎಂಬ ನಿರೋಧಕ ಅಂಶವು ಬೆಳ್ಳುಳ್ಳಿಯಲ್ಲಿದ್ದು, ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಬೆಳ್ಳುಳ್ಳಿಯ ಈ ಗುಣವು ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಇನ್ನಿತರ ತೊಂದರೆ ಇರುವವರಿಗೆ ಬಹಳ ಪ್ರಯೋಜನಕಾರಿ.

  ಇದನ್ನೂ ಓದಿ: 10 ಸೆಕೆಂಡ್​ನಲ್ಲಿ ಬಹಳ ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವ ವಿಧಾನ ಇಲ್ಲಿದೆ, ವಿಡಿಯೋ ನೋಡಿ…

  ಮನೆಯಲ್ಲಿ ಬೆಳ್ಳುಳ್ಳಿ ಗಿಡ ಬೆಳೆಸುವುದು ಹೇಗೆ..?

  *ಅಡುಗೆ ಮನೆಯ ತೋಟದಲ್ಲಿ ಬೆಳ್ಳುಳ್ಳಿ ಗಿಡವನ್ನು ಸುಲಭವಾಗಿ ನೆಡಬಹುದು.
  *ಮೊದಲು ಬೆಳ್ಳುಳ್ಳಿಯನ್ನು ಬೇರ್ಪಡಿಸಿ.
  *ಮಡಕೆಗೆ ಮಣ್ಣನ್ನು ಸೇರಿಸಿ ಮತ್ತು ಕೆಲವು ಗಂಟೆಗಳ ಕಾಲ ಬಿಡಿ.
  *ಈಗ ಮಡಕೆಯ ಮಣ್ಣಿಗೆ ಬೆಳ್ಳುಳ್ಳಿಗಳನ್ನು 3 ರಿಂದ 4 ಇಂಚು ಆಳದಲ್ಲಿ ಸೇರಿಸಿ ಮತ್ತು ಮೇಲಿನಿಂದ ಮಣ್ಣನ್ನು ಒತ್ತಿ.
  *ಬೀಜಗಳನ್ನು ಹಾಕಿದ  ನಂತರ ಮೇಲಿನಿಂದ ಗೊಬ್ಬರವನ್ನು ಸೇರಿಸಿ.
  *ಸಾವಯವ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರವನ್ನು ಮಾತ್ರ ಬಳಸಿ.
  *ಪ್ರತಿದಿನ ಗಿಡಕ್ಕೆ  ಸೂರ್ಯನ ಬೆಳಕನ್ನು ತೋರಿಸಿ, ನೀರು ಹಾಕಲು ಮರೆಯಬೇಡಿ.
  *ಬೀಜ ಮೊಳಕೆಯೊಡೆದ ಮೇಲೆ ನಿಯಮಿತವಾಗಿ ಗೊಬ್ಬರ ಮತ್ತು ನೀರು ಸೇರಿಸಿ.
  *ಬೆಳ್ಳುಳ್ಳಿ ಗಿಡವನ್ನು 2 ರಿಂದ 3 ತಿಂಗಳೊಳಗೆ ಕತ್ತರಿಸಿ ಬಳಸಿ
  Published by:ranjumbkgowda1 ranjumbkgowda1
  First published: