Silver ಪಾತ್ರೆಯಲ್ಲಿ ಮಕ್ಕಳಿಗೆ ಊಟ ಮಾಡಿಸೋದು ಆರೋಗ್ಯಕ್ಕೆ ಒಳ್ಳೆಯದಂತೆ

Health Care: ಹೌದು, ಮಕ್ಕಳು ಬೆಳೆಯುತ್ತಿದ್ದಂತೆ, ಆ ಬೆಳವಣಿಗೆಯ ಸಮಯದಲ್ಲಿ ಬೆಳ್ಳಿಯ ಪಾತ್ರೆ ಬಳಸಿದರೆ, ಅವರ ಮೆದುಳಿನ ಶಕ್ತಿ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಹೀಗಾಗಿ, ಬೆಳ್ಳಿಯ ಪಾತ್ರೆಯಲ್ಲಿ ಮಕ್ಕಳಿಗೆ ಆಹಾರವನ್ನು ನೀಡುವುದು ಅವರನ್ನು ಆರೋಗ್ಯವಾಗಿಡಲು ಉತ್ತಮ ಮಾರ್ಗವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊಮ್ಮಕ್ಕಳಿಗೆ ಆಹಾರ (food) ನೀಡುವಾಗ ಬೆಳ್ಳಿ ಪಾತ್ರೆ (Silver) , ಬೆಳ್ಳಿ ಚಮಚ ಹಾಗೂ ಬೆಳ್ಳಿ ತಟ್ಟೆ ಅಥವಾ ಬಟ್ಟಲನ್ನೇ ಬಳಸಿ ಎಂದು ಹಿರಿಯರು ತಮ್ಮ ಮಕ್ಕಳಿಗೆ ಸಲಹೆ ನೀಡುತ್ತಾರೆ. ಇದಕ್ಕೇನಾದರೂ ಕಾರಣವಿದ್ಯಾ..? ಬೆಳ್ಳಿ ತಟ್ಟೆಯಲ್ಲಿ ತಿನ್ನಿಸಿದರೆ ಅದು ಆರೋಗ್ಯಕರವೇ, ಅಥವಾ ಕೇವಲ ಪ್ರತಿಷ್ಠಯೇ ಎಂಬೆಲ್ಲ ಪ್ರಶ್ನೆಗಳು ಹಲವರಲ್ಲಿ ಮೂಡಬಹುದು. ಈ ಲೇಖನದಲ್ಲಿ ಇದಕ್ಕೆ ಉತ್ತರ ನೀಡಲಾಗಿದೆ ನೋಡಿ. ಆಹಾರವನ್ನು ಬಡಿಸುವ ಕಲೆಯು ವರ್ಗ ಮತ್ತು ಸೊಬಗಿನ ಪ್ರತಿಬಿಂಬವಾಗಿದೆ..! ವಾಸ್ತವವಾಗಿ, ಭಾರತದಲ್ಲಿ (India) , ಆಚರಣೆಗಳು ಮತ್ತು ಹಬ್ಬಗಳ ಭವ್ಯತೆಯನ್ನು ಆಹಾರವನ್ನು ಪ್ರಸ್ತುತಪಡಿಸುವ ಮತ್ತು ಬಡಿಸುವ ವಿಧಾನದಲ್ಲಿ ಕಾಣಬಹುದು. ಭಾರತೀಯ ಪಾಕಶಾಲೆಯ ಪರಂಪರೆಯು ಆಹಾರ ಸೇವೆಯ ಕಲೆಯ ಅತ್ಯಂತ ಸೊಗಸಾದ ಉದಾಹರಣೆಗಳಲ್ಲಿ ಒಂದಾಗಿದೆ. ಇದು ಆಹಾರ ಮತ್ತು ಲೇಪನದ ಪರಿಪೂರ್ಣ ಸಂಯೋಜನೆಯಾಗಿದೆ.

ಅದರಲ್ಲೂ ಹಲವು ಶ್ರೀಮಂತರಂತೂ ಮಕ್ಕಳು ಹುಟ್ಟುವ ಖುಷಿಗೆ ನೀಡುವ ಪಾರ್ಟಿಯಿಂದ ಹಿಡಿದು ಹಬ್ಬಗಳು, ಮದುವೆ ಸಮಾರಂಭಗಳವರೆಗೆ - ಹೀಗೆ ತಮ್ಮ ಮನೆಯಲ್ಲಿ ಆಹಾರ ಬಡಿಸುವ ಅದ್ಭುತ ಉದಾಹರಣೆಯಾಗಿದ್ದರೆ ಅದು ಲೋಹ ಆಧಾರಿತ ಪಾತ್ರೆಗಳ ಬಳಕೆ. ಅದರಲ್ಲೂ ಬೆಳ್ಳಿ ತಟ್ಟೆಗಳಲ್ಲಿ ಊಟ ನೀಡುವುದು ಹಾಗೂ ಬೆಳ್ಳಿ ಲೋಟ, ಚಮಚಗಳನ್ನೇ ಊಟ ಮಾಡುವ ಎಲ್ಲರಿಗೂ ನೀಡುವರಿದ್ದಾರೆ.

ಅದೇ ರೀತಿ, ಶಿಶುಗಳಿಗೆ ಆಹಾರಕ್ಕಾಗಿ ಬೆಳ್ಳಿಯ ವಸ್ತುಗಳ ಬಳಕೆಯ ಬಗ್ಗೆ ಬಾಲ್ಯದಿಂದಲೂ, ನಾವು ಕೇಳಿದ್ದೇವೆ. ವಾಸ್ತವವಾಗಿ, ಕೆಲವು ಸಂಸ್ಕೃತಿಗಳಲ್ಲಿ ಮಗುವಿಗೆ ಬೆಳ್ಳಿಯ ಚಮಚವನ್ನು ಬಳಸಿ ಅವನ/ಅವಳ ಮೊದಲ ಊಟವನ್ನು ನೀಡಲಾಗುತ್ತದೆ. ಇದಕ್ಕೆ ಸರಳ ಕಾರಣ, ಬೆಳ್ಳಿಯ ಶುದ್ಧತೆ ಮತ್ತು ಈ ಲೋಹವು ಆರೋಗ್ಯದ ಅಂಶವನ್ನು ಹೇಗೆ ಸೇರಿಸುತ್ತದೆ ಎಂಬುದು. ಬೆಳ್ಳಿ ಪಾತ್ರೆಯಲ್ಲಿ ತಿನ್ನುವುದು ಆರೋಗ್ಯಕರವೆಂದು ಪರಿಗಣಿಸಲು ಇದು ಒಂದು ಕಾರಣವಾಗಿದೆ.

ಅದೇ ರೀತಿ, ಬೆಳ್ಳಿ ಪಾತ್ರೆಯಲ್ಲಿ ಆಹಾರ ತಿನ್ನುವುದರಿಂದ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅದರ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಅನೇಕ ರೋಗಗಳ ವಿರುದ್ಧ ಹೋರಾಡುತ್ತದೆ
ಬೆಳ್ಳಿಯ ಪಾತ್ರೆಯಲ್ಲಿ ತಿನ್ನುವುದು ಬಲವಾದ ಚಯಾಪಚಯವನ್ನು ನಿರ್ಮಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.. ಇದಲ್ಲದೆ, ಬೆಳ್ಳಿಯ ಪಾತ್ರೆಗಳಲ್ಲಿ ತಿನ್ನುವುದರಿಂದ ಹಲವಾರು ರೋಗಗಳನ್ನು ತಡೆಯುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಈ ಹಿನ್ನೆಲೆ ಮಕ್ಕಳಿಗೆ ಹೆಚ್ಚು ಬೆಳ್ಳಿ ಪಾತ್ರೆ ಬಳಸಲು ಒತ್ತು ನೀಡಲಾಗುತ್ತದೆ.

ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ
ಲೋಹದ ಸ್ವಭಾವದ ವಿಷಯದಲ್ಲಿ ಬೆಳ್ಳಿಯು ತಂಪಾಗಿರುತ್ತದೆ ಎಂಬ ವಾಸ್ತವ ಅಂಶದ ಹೊರತಾಗಿಯೂ, ಇದು ಸಾಕಷ್ಟು ಖನಿಜಗಳನ್ನು ಹೊಂದಿದೆ. ಈ ಕಾರಣದಿಂದ, ಬೆಳ್ಳಿಯು ಕಾಲೋಚಿತ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಹಿನ್ನೆಲೆ, ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದು ಮಕ್ಕಳನ್ನು ಕಾಲೋಚಿತ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂಬುದು ಪ್ರಮುಖ ಕಾರಣಗಳಲ್ಲಿ ಒಂದು.

ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಸಾಕುಪ್ರಾಣಿಗಳನ್ನು ಹೀಗೆ ನೋಡಿಕೊಳ್ಳಬೇಕಂತೆ

ಶುದ್ಧೀಕರಿಸುತ್ತದೆ
ಈ ಮೇಲೆ ಹೇಳಿರುವಂತೆ ಬೆಳ್ಳಿ ಖನಿಜಗಳನ್ನು ಹೊಂದಿದೆ. ಈ ಕಾರಣದಿಂದ ಬೆಳ್ಳಿಯ ಪಾತ್ರೆಗಳು ನೀರನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಯಾವುದೇ ರೀತಿಯ ಕಲಬೆರಕೆಗಳ ವಿರುದ್ಧವೂ ಹೋರಾಡುತ್ತದೆ. ಹೀಗಾಗಿ ಬೆಳ್ಳಿಯ ಪಾತ್ರೆಯಲ್ಲಿ ನೀರು ಕುಡಿಯುವುದು ಯಾವಾಗಲೂ ಒಳ್ಳೆಯದು ಎಂದೂ ಹೇಳಲಾಗುತ್ತದೆ.

ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ
ಬೆಳ್ಳಿಯಲ್ಲಿರುವ ಅನೇಕ ಅಂಶಗಳಿಂದು, ಅದರ ಸಾರಗಳನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಸಕ್ರಿಯ ಘಟಕಾಂಶವಾಗಿ ಬಳಸಲಾಗುತ್ತದೆ. ಇದರ ಜತೆಗೆ, ಬೆಳ್ಳಿಯು ಕೇವಲ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ, ಮೆದುಳಿನ ಬೆಳವಣಿಗೆಯಲ್ಲೂ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: ದಾಂಡೇಲಿಗೆ ಟ್ರಿಪ್​ ಹೋದ್ರೆ ಏನೆಲ್ಲಾ ಎಂಜಾಯ್​ ಮಾಡ್ಬೋದು ನೋಡಿ

ಹೌದು, ಮಕ್ಕಳು ಬೆಳೆಯುತ್ತಿದ್ದಂತೆ, ಆ ಬೆಳವಣಿಗೆಯ ಸಮಯದಲ್ಲಿ ಬೆಳ್ಳಿಯ ಪಾತ್ರೆ ಬಳಸಿದರೆ, ಅವರ ಮೆದುಳಿನ ಶಕ್ತಿ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಹೀಗಾಗಿ, ಬೆಳ್ಳಿಯ ಪಾತ್ರೆಯಲ್ಲಿ ಮಕ್ಕಳಿಗೆ ಆಹಾರವನ್ನು ನೀಡುವುದು ಅವರನ್ನು ಆರೋಗ್ಯವಾಗಿಡಲು ಉತ್ತಮ ಮಾರ್ಗವಾಗಿದೆ.
Published by:Sandhya M
First published: