HOME » NEWS » Lifestyle » HEALTH BENEFITS OF EATING MILLET OR RAGI ZP

ರಾಗಿ ಆಹಾರ ಸೇವನೆಯಿಂದ ಸಿಗುವ ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯಿರಿ

ರಾಗಿ ನೈಸರ್ಗಿಕ ಕಬ್ಬಿಣಾಂಶದ ಉತ್ತಮ ಮೂಲವಾಗಿದೆ. ಇದು ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಹೊಂದಿರುವ ಜನರಿಗೆ ವರದಾನವಾಗಿ ಕಾರ್ಯನಿರ್ವಹಿಸುತ್ತದೆ.

news18-kannada
Updated:January 6, 2021, 7:19 AM IST
ರಾಗಿ ಆಹಾರ ಸೇವನೆಯಿಂದ ಸಿಗುವ ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
  • Share this:
ಚಳಿಗಾಲದಲ್ಲಿ ಅನೇಕ ರೀತಿಯ ಅನಾರೋಗ್ಯ ಸಮಸ್ಯೆಗಳು ತಲೆದೂರುತ್ತವೆ. ಇಂತಹ ಸಮಯದಲ್ಲಿ ನಾವು ಆಹಾರಗಳತ್ತ ಹೆಚ್ಚಿನ ಕಾಳಜಿವಹಿಸಬೇಕು. ಅದರಲ್ಲೂ ಚಳಿಗಾಲದಲ್ಲಿ ಶೀತ-ಕೆಮ್ಮು, ತೂಕ ಹೆಚ್ಚಾಗುವುದು, ಗಂಟಲು ನೋವು ಮತ್ತು ಅತಿಯಾದ ಶೀತದಿಂದಾಗಿ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ. ಆದರೆ ಕೆಲವು ಆಹಾರಗಳ ಸೇವನೆಯಿಂದ ಚಳಿಗಾಲದಲ್ಲಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಂತಹ ಮುಖ್ಯವಾದ ಆಹಾರಗಳಲ್ಲಿ ರಾಗಿ ಕೂಡ ಒಂದು. ಹಾಗಿದ್ರೆ ಚಳಿಗಾಲದಲ್ಲಿ ರಾಗಿ ಆಹಾರಗಳನ್ನು ಸೇವಿಸುವುದರಿಂದ ಸಿಗುವ ಪ್ರಯೋಜನಗಳನ್ನು ತಿಳಿಯೋಣ.

ಕ್ಯಾಲ್ಸಿಯಂ ಸಮೃದ್ಧವಾಗಿದೆ: ರಾಗಿ ಹಿಟ್ಟಿನಲ್ಲಿ ಇತರ ಧಾನ್ಯಗಳಿಗಿಂತ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಸಂಶೋಧನೆಯ ಪ್ರಕಾರ, 100 ಗ್ರಾಂ ರಾಗಿಯಲ್ಲಿ 344 ಮಿ. ಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಮೂಳೆಗಳು ಮತ್ತು ಹಲ್ಲುಗಳಿಗೆ ಕ್ಯಾಲ್ಸಿಯಂ ಬಹಳ ಮುಖ್ಯ. ಆಸ್ಟಿಯೊಪೊರೋಸಿಸ್​ನಂತಹ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕ್ಯಾಲ್ಸಿಯಂ ಅವಶ್ಯಕವಾಗಿದೆ. ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ ರಾಗಿ ಸೇವಿಸುವುದು ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ, ನಿಮ್ಮ ಆಹಾರ ಪದ್ದತಿಯಲ್ಲಿ ರಾಗಿಯಿಂದ ಮಾಡಿದ ಆಹಾರವನ್ನು ಸೇರಿಸುವುದು ಉತ್ತಮ.

ಇನ್ನು ರಾಗಿ ಫೈಬರ್​ ಅಂಶ ಕೂಡ ಸಮೃದ್ಧವಾಗಿದೆ. ಇದು ಆಹಾರದ ಹಂಬಲವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಜೀರ್ಣಕ್ರಿಯೆಯ ವೇಗವನ್ನು ಕಾಪಾಡಿಕೊಳ್ಳುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ರಾಗಿ ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳು ಚಳಿಗಾಲದಲ್ಲಿ ರಾಗಿ ಹಿಟ್ಟಿನಿಂದ ಮಾಡಿದ ರೊಟ್ಟಿಗಳನ್ನು ತಿನ್ನಲು ಸೂಚಿಸಲಾಗುತ್ತದೆ.

ಆಂಟಿ ಏಜಿಂಗ್: ರಾಗಿ ಆಹಾರ ಸೇವನೆಯು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಯೌವ್ವನವನ್ನು ಕಾಪಾಡಿಕೊಳ್ಳಲು ರಾಗಿ ಆಹಾರ ಉತ್ತಮ. ಇದರಲ್ಲಿರುವ ಮೆಥಿಯೋನಿನ್ ಮತ್ತು ಲೈಸಿನ್ ನಂತಹ ಅಗತ್ಯವಾದ ಅಮೈನೊ ಆಸಿಡ್ ಅಂಶಗಳು ಚರ್ಮದ ಅಂಗಾಂಶಗಳನ್ನು ಸುಕ್ಕುಗಳು ಮತ್ತು ವಯಸ್ಸಾದ ಚಿಹ್ನೆಗಳಿಂದ ರಕ್ಷಿಸುತ್ತದೆ. ಇದಲ್ಲದೆ, ರಾಗಿ ಸೇವನೆ ಮೂಲಕ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.

ರಕ್ತಹೀನತೆಗೆ ಪರಿಹಾರ: ರಾಗಿ ನೈಸರ್ಗಿಕ ಕಬ್ಬಿಣಾಂಶದ ಉತ್ತಮ ಮೂಲವಾಗಿದೆ. ಇದು ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಹೊಂದಿರುವ ಜನರಿಗೆ ವರದಾನವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿ ಕಬ್ಬಿಣಾಂಶವನ್ನು ತುಂಬಲು ನೀವು ರಾಗಿಯನ್ನು ಸೇವಿಸುವುದು ಉತ್ತಮ. ಇದನ್ನು ಹಿಟ್ಟು, ಮೊಳಕೆ ಅಥವಾ ಇನ್ನಾವುದೇ ಖಾದ್ಯವಾಗಿ ಬಳಸಬಹುದು.
Published by: zahir
First published: January 6, 2021, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories