ಜ್ಯೂಸ್ ಕುಡೀತೀರಾ? ಹಾಗಿದ್ರೆ ಬೀಟ್​ ರೂಟ್​ ಜ್ಯೂಸ್ ಕುಡಿಯಿರಿ, ಇದರಲ್ಲಿದೆ ನೀವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಪ್ರಯೋಜನಗಳು

ಇದಲ್ಲದೆ ಬೀಟ್​ ರೂಟ್​ ರಸದಿಂದ ನಿಮ್ಮ ಮೆದುಳಿಗೆ ರಕ್ತ ಪರಿಚಲನೆ ಸಹ ಹೆಚ್ಚಾಗುತ್ತದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯು ಈ ಜ್ಯೂಸ್ ಸೇವನೆಯಿಂದ ದೂರವಾಗುತ್ತದೆ.

zahir | news18
Updated:April 10, 2019, 6:33 PM IST
ಜ್ಯೂಸ್ ಕುಡೀತೀರಾ? ಹಾಗಿದ್ರೆ ಬೀಟ್​ ರೂಟ್​ ಜ್ಯೂಸ್ ಕುಡಿಯಿರಿ, ಇದರಲ್ಲಿದೆ ನೀವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಪ್ರಯೋಜನಗಳು
@Get Inspired Everyday!
zahir | news18
Updated: April 10, 2019, 6:33 PM IST
ತರಕಾರಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಅನುಕೂಲಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಅನೇಕರಿಗೆ ಹಾಗಲಕಾಯಿ ಹಾಗೂ ಬೀಟ್ ರೂಟ್ ಅಂದ್ರೆ ಅದೇನೊ ಅಲರ್ಜಿ. ಆದರೆ ಈ ಎರಡು ತರಕಾರಿಗಳಿಂದ ಸಿಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಬೀಟ್​ ರೂಟ್​ ಅನ್ನು ದಿನನಿತ್ಯ ತಿನ್ನುವುದರಿಂದ ನಮ್ಮ ದೇಹದಲ್ಲಿನ ರಕ್ತ ಸ್ವಚ್ಛವಾಗುತ್ತದೆ ಎನ್ನುತ್ತಾರೆ ವೈದ್ಯರು. ರಕ್ತಹೀನತೆಯ ಸಮಸ್ಯೆಯಿದ್ದರೂ ಬೀಟ್​ ರೂಟ್​ಗಳನ್ನು ಸೇವಿಸುವುದರಿಂದ ಪರಿಹಾರ ಕಾಣಬಹುದು. ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದಾದ ಈ ತರಕಾರಿಯ ಜ್ಯೂಸ್​ನಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಬೀಟ್​ ರೂಟ್​ನಲ್ಲಿ ಆ್ಯಂಟಿ-ಆ್ಯಕ್ಸಿಡೆಂಟ್ಸ್​ ಅಂಶಗಳು ಹೇರಳವಾಗಿದೆ. ಇದರೊಂದಿಗೆ ಕ್ಯಾಲ್ಸಿಯಂ, ಮೆಗ್ನಿಷಿಯಂ, ಐರನ್, ಸೋಡಿಯಂ, ಪೊಟ್ಯಾಷಿಯಂ, ಫಾಸ್ಪರಸ್​, ಕ್ಲೋರಿನ್ ಮತ್ತು ಐಯೋಡಿನ್ ಸೇರಿದಂತೆ ಅನೇಕ ಪ್ರಮುಖ ಜೀವ ಸತ್ವಗಳನ್ನು ಹೊಂದಿರುವ ತರಕಾರಿ ಬೀಟ್​ ರೂಟ್. ಇಷ್ಟೆಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಇದರ ರಸವನ್ನು ಕುಡಿದರೆ ಒಂದೇ ಬಾರಿ ಅನೇಕ ಆರೋಗ್ಯಕಾರಿ ಪ್ರಯೋಜನಗಳು ಲಭಿಸುತ್ತದೆ. ಬೀಟ್​ ರೂಟ್​ ಜ್ಯೂಸ್ ಹಸಿವನ್ನು ತಕ್ಷಣ ನೀಗಿಸುವುದಲ್ಲದೆ, ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ.

ಹಣ್ಣುಗಳ ಅಥವಾ ತರಕಾರಿ ಜ್ಯೂಸ್ ಕುಡಿಯ ಬಯಸಿದರೆ ನಿಮ್ಮ ಮೊದಲ ಆಯ್ಕೆ ಬೀಟ್​ ರೂಟ್​ ಆಗಿರಲಿ. ಇದಕ್ಕೆ ನಿಂಬೆ ಮತ್ತು ಶುಂಠಿ ರಸವನ್ನು ಮಿಶ್ರಣ ಮಾಡಿ ಕುಡಿಯುವುದು ಕೂಡ ಒಳ್ಳೆಯದು. ಪ್ರತಿನಿತ್ಯ ಬೀಟ್​ ರೂಟ್ ಜ್ಯೂಸ್ ಸೇವಿಸಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಲ್ಲದೆ ನೈಟ್ರೇಟ್ ರಕ್ತನಾಳ ಬೆಳವಣಿಗೆಗೆ ಸಹಕರಿಸುತ್ತದೆ.

ಇದಲ್ಲದೆ ಬೀಟ್​ ರೂಟ್​ ರಸದಿಂದ ನಿಮ್ಮ ಮೆದುಳಿಗೆ ರಕ್ತ ಪರಿಚಲನೆ ಸಹ ಹೆಚ್ಚಾಗುತ್ತದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯು ಈ ಜ್ಯೂಸ್ ಸೇವನೆಯಿಂದ ದೂರವಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಆ್ಯಂಟಿ ಅಕ್ಸಿಡೆಂಟ್ಸ್ ಮತ್ತು ನ್ಯೂಟ್ರಿಯೆಂಟ್ಸ್ ಇಮ್ಯುನ್ ಸಿಸ್ಟಂ ಅನ್ನು ಬಲಪಡಿಸುತ್ತದೆ. ಇದರಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗಗಳು ದೂರವಾಗುತ್ತದೆ.ಒಟ್ಟಿನಲ್ಲಿ ಬೀಟ್​ ರೂಟ್ ಸೇವನೆಯಿಂದ ಆರೋಗ್ಯ ವೃದ್ಧಿಸುವುದಲ್ಲದೆ, ರೋಗಾಣುಗಳಿಂದ ದೇಹವನ್ನು ರಕ್ಷಿಸುತ್ತದೆ.
First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626