Health Tips: ಕರಿಬೇವಿನ ಎಲೆಗಳು ಎಷ್ಟು ಪ್ರಯೋಜನಕಾರಿ ಗೊತ್ತಾ?

ಕರಿ ಬೇವಿನ ಎಲೆಗಳಲ್ಲಿ  ಕ್ಯಾನ್ಸ್​ರ್​ ನಿವಾರಕ ಶಕ್ತಿಗಳಿದೆ ಎಂದು ಹೇಳಲಾಗುತ್ತದೆ. ಮಲೇಷಿಯಾದ ವಿವಿಧ ಸ್ಥಳಗಳಲ್ಲಿ ಬೆಳೆದ ಕರಿಬೇವಿನ ಎಲೆಗಳಿಂದ ಮೂರು ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು ಆ ಅಧ್ಯಯನದಲ್ಲಿ ಕರಿ ಬೇವಿನ ಎಲೆ ಸ್ತನ ಕ್ಯಾನ್ಸ್​ರ್​ಗೆ ಔಷಧವಾಗುತ್ತದೆ ಎಂಬ ವಿಚಾರ ಬಹಿರಂಗವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರಿಬೇವಿನ ಎಲೆಗಳು ಭಾರತೀಯರ ಅಡುಗೆಯಲ್ಲಿ  ತಲತಲಾಂತರಗಳಿಂದ ಬಂದಿದೆ. ಭಾರತೀಯರ ಅಡುಗೆ ಮನೆಯಲ್ಲಿ ಕರಿ ಬೇವಿನ ಎಲೆ ಇಲ್ಲದೇ ಇರುವುದಿಲ್ಲ.  ಇದರ ಎಲೆಗಳು  ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಆಹಾರದಲ್ಲಿ ಹೆಚ್ಚು ಬಳಸಲಾಗುತ್ತದೆ. ಇದರ ಗುಣ ಅಡುಗೆಯ ರುಚಿಯನ್ನು ಹೆಚ್ಚು ಮಾಡುತ್ತದೆ.  ಅಷ್ಟೇ ಅಲ್ಲದೇ ಇದರಲ್ಲಿ ಹೆಚ್ಚು ಆರೋಗ್ಯಕರ ಪ್ರಯೋಜಗಳಿವೆ. ಕರಿಬೇವಿನ ಎಲೆಗಳು ಲಿನೂಲ್, ಆಲ್ಫಾ-ಟೆರ್ಪಿನೆನ್, ಮೈರ್ಸೀನ್, ಮಹಾನಿಂಬೈನ್, ಕ್ಯಾರಿಯೊಫಿಲೀನ್, ಮುರಾಯನಾಲ್, ಮತ್ತು ಆಲ್ಫಾ-ಪಿನೆನ್ ಸೇರಿದಂತೆ ಹಲವು  ಪೋಷಕಾಂಶಗಳನ್ನು ಹೊಂದಿದೆ  ಎಂದು ಸಂಶೋಧನೆಗಳು ಹೇಳಿವೆ.

ಕರಿಬೇವಿನ ಎಲೆಯಲ್ಲಿರುವ ಉಪಯೋಗಗಳು ಇಲ್ಲಿವೆ.

ಇವುಗಳು ನಿಮ್ಮ ದೇಹದಲ್ಲಿ ರೋಗ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ರೋಗ ನಿರೋಧಕಗಳು ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಮತ್ತು ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ.

ಕರಿ ಬೇವಿನಗಳಲ್ಲಿ ಔಷಧಿಯ ಸಾರ ಹೊಟ್ಟೆಗೆ ಸಂಬಂಧಿಸಿದ ರೋಗಗಳಿಂದ  ಮುಕ್ತಿ ನೀಡುತ್ತದೆ.

ಕರಿಬೇವಿನ ಸಾರವು ನರಮಂಡಲ, ಹೃದಯ, ಮೆದುಳು ಮತ್ತು ಮೂತ್ರಕೋಶಗಳ ಆರೋಗ್ಯವನ್ನು ಸಹ ಕಾಪಾಡುತ್ತದೆ.

ಇದನ್ನೂ ಓದಿ: ಡಾರ್ಕ್​ ಬಿಯರ್​ ಕುಡಿಯುವುದರಿಂದ ಆಗೋ ಪ್ರಯೋಜನಗಳು ಏನೇನು ಗೊತ್ತಾ?

ಅಧಿಕ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳಂತಹ ಅಪಾಯಕಾರಿ ಅಂಶಗಳು ನಿಮ್ಮ ಹೃದಯದ ಸಮಸ್ಯೆಗಳನ್ನು ಹೆಚ್ಚಿಸಬಹುದು. ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸುವುದರಿಂದ ಈ ಕೆಲವು ಅಪಾಯಕಾರಿ ಅಂಶಗಳನ್ನು ಅದು ಕಡಿಮೆ ಮಾಡುತ್ತದೆ.

ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವಾಗುತ್ತದೆ.

ಅಧಿಕ ಕೊಬ್ಬು-ಆಹಾರ-ಪ್ರೇರಿತ ಬೊಜ್ಜು  ಹೊಂದಿರುವವರಿಗೆ ಇದು ಹೇಳಿ ಮಾಡಿಸಿದ ಸಸ್ಯ. ಇದರಲ್ಲಿ ಪೋಷಕಾಂಶಗಳು ಕೊಬ್ಬನ ಅಂಶವನ್ನು ಕಡಿಮೆ ಮಾಡುತ್ತವೆ.

ಕರಿ ಬೇವಿನ ಎಲೆಯ ಪರಿಣಾಮಗಳನ್ನು ಹೆಚ್ಚಿನ ಸಂಶೋಧಕರು ಪ್ರಾಣಿಗಳ ಮೇಲೆ ಮಾಡಿದ್ದಾರೆ. ಅವೆಲ್ಲ ಪ್ರಯೋಗಗಳಲ್ಲಿ ಕರಿ ಬೇವಿನ ಎಲೆಯ ಮಹತ್ವದ ಅರಿವಾಗಿದೆ.

ಅಲ್ಲದೇ ಮಾನವರ ಮೇಲೆ ಕರಿ ಬೇವಿನ ಎಲೆಯ ಪರಿಣಾಮದ ಬಗ್ಗೆ ಹೆಚ್ಚು ಅಧ್ಯಯನಗಳು ನಡೆದಿಲ್ಲ.

ಇದನ್ನೂ ಓದಿ: ಜೀರಿಗೆ ಪುಡಿ ಮಾಡುವುದನ್ನು ಹೇಳಿಕೊಟ್ಟ ನೀನಾ ಗುಪ್ತಾ: ವಿಡಿಯೋ ನೋಡಿ ವಾವ್​ ಎಂದ ನೆಟ್ಟಿಗರು..!

ಕೆಲವು ಸಂಶೋಧನೆಗಳು ಕರಿಬೇವಿನ ಎಲೆಗಳು ನಿಮ್ಮ ಮೆದುಳು ಸೇರಿದಂತೆ ನಿಮ್ಮ ನರಮಂಡಲದ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು  ಸಾಬೀತು ಮಾಡಿದೆ.  ಕರಿಬೇವಿನ ಎಲೆಗಳು ಆಲ್ಝೈಮರ್ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ಆಲ್ಝೈಮರ್ ರೋಗವು ಮೆದುಳಿನ ನರಗಳ ಕಾರಣದಿಂದ ಬರುತ್ತದೆ. ಕರಿಬೇವು ಸೇವನೆ , ನರಗಳನ್ನು ಶಕ್ತಿಯುತಗೊಳಿಸುತ್ತದೆ.

ಕರಿ ಬೇವಿನ ಎಲೆಗಳಲ್ಲಿ  ಕ್ಯಾನ್ಸ್ರ್ ನಿವಾರಕ ಶಕ್ತಿಗಳಿದೆ ಎಂದು ಹೇಳಲಾಗುತ್ತದೆ. ಮಲೇಷಿಯಾದ ವಿವಿಧ ಸ್ಥಳಗಳಲ್ಲಿ ಬೆಳೆದ ಕರಿಬೇವಿನ ಎಲೆಗಳಿಂದ ಮೂರು ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು ಆ ಅಧ್ಯಯನದಲ್ಲಿ ಕರಿ ಬೇವಿನ ಎಲೆ ಸ್ತನ ಕ್ಯಾನ್ಸ್​ರ್​ಗೆ ಔಷಧವಾಗುತ್ತದೆ ಎಂಬ ವಿಚಾರ ಬಹಿರಂಗವಾಗಿದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಕರಿ ಬೇವಿನ ಎಲೆ  ಪ್ರಯೋಜನಕಾರಿ ಎನ್ನಲಾಗಿದೆ. ಕರಿ ಬೇವಿನ ಎಲೆ ನೋವು ನಿವಾರಕ ಅಂಶಗಳನ್ನು ಹೊಂದಿದೆ. ಅಲ್ಲದೇ ಕೂದಲಿನ ಆರೋಗ್ಯದಲ್ಲಿ ಕರಿಬೇವು ಹೆಚ್ಚು ಪ್ರಯೋಜನಕಾರಿ ಮತ್ತು ಪರಿಣಾಮಕಾರಿ ಕೂಡ.  ಕರಿ ಬೇವಿನ ಎಲೆಗಳನ್ನು ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿ, ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ, ಆ ಎಣ್ಣೆಯನ್ನು ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ ಕೂದಲಿನ ಹಲವು ಸಮಸ್ಯೆಗಳಾದ ಕೂದಲು ಉದುರುವುದು, ತಲೆಹೊಟ್ಟು  ಹಾಗೂ ಒಣ ಕೂದಲಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ಕೆಲ ಅಧ್ಯಯನಗಳ ಪ್ರಕಾರ ಕರಿಬೇವಿನ ಎಲೆ ಬ್ಯಾಕ್ಟೀರಿಯಾದಿಂದ ದೇಹವನ್ನು ಸಂರಕ್ಷಿಸುತ್ತದೆ. ಕರಿಬೇವಿನ ಎಲೆಯನ್ನು ದಿನನಿತ್ಯ ಸೇವಿಸುವುದರಿಂದ ಹಲವು ರೀತಿಯ ಸೋಂಕುಗಳಿಂದ ದೂರವಿರಬಹುದು.ಇವೆಲ್ಲಕ್ಕಿಂತ ಹೆಚ್ಚಾಗಿ ದೇಹದ ತೂಕವನ್ನು ಕಡಿಮೆಗೊಳಿಸುವಲ್ಲಿ ಕರಿ ಬೇವಿನ ಎಲೆ ಬಹಳ ಉಪಯುಕ್ತವಾಗುತ್ತದೆ.
Published by:Sandhya M
First published: