Clove Tea: ಲವಂಗ ಟೀ ಬಗ್ಗೆ ಕೇಳಿದ್ದೀರಾ? ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತಾ?

Weight Loss: ನಾವು ನಿಯಮಿತವಾಗಿ ಬಳಸುವ ಅತ್ಯಂತ ಪ್ರಮುಖವಾದ ಮಸಾಲೆಗಳಲ್ಲಿ ಲವಂಗ ಸಹ ಒಂದು. ಲವಂಗ ಚಹಾವನ್ನು ದಿನನಿತ್ಯ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯ ಅಡುಗೆ(Kitchen) ಮನೆಯಲ್ಲಿರುವ ಮಸಾಲೆಗಳು ಹೆಚ್ಚು  ಆರೋಗ್ಯಯುತ ಅಂಶಗಳನ್ನು ಹೊಂದಿದೆ. ಈ ಪದಾರ್ಥಗಳು ಕೇವಲ ರುಚಿ ಮಾತ್ರವಲ್ಲ ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಇವೆ. ಈ ಹೆಚ್ಚಿನ ಮಸಾಲೆಗಳನ್ನು ದೈನಂದಿನ ಅಡುಗೆಯಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ, ಅವುಗಳ ಔಷಧೀಯ ಗುಣಗಳಿಂದಾಗಿ, ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದ ಔಷಧದಲ್ಲಿ ಅವುಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಅದರಲ್ಲಿ ಲವಂಗ(Clove) ಕೂಡ ಒಂದು.  ನೀವು ಲವಂಗ ಟೀ(Clove Tea) ಬಗ್ಗೆ ಕೇಳಿದ್ದೀರಾ? ಹೌದು, ಈ ಲವಂಗ ಟೀ ನಿಮ್ಮ ದೇಹದ ತೂಕ ಇಳಿಸುವುದರಿಂದ(Weight Loss) ಹಿಡಿದು ಹಲವಾರು ಆರೊಗ್ಯಕರ ಪ್ರಯೋಜನಗಳನ್ನು ಹೊಂದಿದೆ.

ಲವಂಗ ಚಹಾ

ನಾವು ನಿಯಮಿತವಾಗಿ ಬಳಸುವ ಅತ್ಯಂತ ಪ್ರಮುಖವಾದ ಮಸಾಲೆಗಳಲ್ಲಿ ಲವಂಗ ಸಹ ಒಂದು. ಲವಂಗ ಚಹಾವನ್ನು ದಿನನಿತ್ಯ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ತೂಕ ಇಳಿಸಿಕೊಳ್ಳಲು ಅನೇಕ ಜನರು  ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಮನೆಯಲ್ಲಿ ತಯಾರಿಸಿದ ಲವಂಗ ಚಹಾ ನಿಮಗೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕೊಬ್ಬನ್ನು ಕರಗಿಸುತ್ತದೆ. 

ಈ ಮಸಾಲೆ ಚಹಾ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಲವಂಗ ಚಹಾದಲ್ಲಿ ಬಳಸುವ ಮಸಾಲೆಗಳಲ್ಲಿನ  ಆರೋಗ್ಯಕರ ಅಂಶವು ನಿಮ್ಮ ಜೀರ್ಣ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಚಯಾಪಚಯವನ್ನು ಹೆಚ್ಚು ಮಾಡುವ ಮೂಲಕ ಇದು ದೇಹದ ಕೊಬ್ಬನ್ನು ಸಹ ಸುಡುತ್ತದೆ.

ಇದನ್ನೂ ಓದಿ: ತ್ವಚೆಯ ಕಾಂತಿಗೆ ಮೊಸರಿನ ಮ್ಯಾಜಿಕ್ ಫೇಸ್​ ಪ್ಯಾಕ್ ಬಳಸಿ

ಲವಂಗ ಚಹಾ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ. ನೀವು ಕೇವಲ ಎರಡು ಪದಾರ್ಥಗಳನ್ನು ಬಳಸಿ ಮನೆಯಲ್ಲಿ ತಯಾರಿಸಬಹುದು. ನೀವು ಚಹಾ ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ ಇದು ಉತ್ತಮ ಪರ್ಯಾಯವಾಗಿದೆ.

ಲವಂಗ ಚಹಾ ಮಾಡುವುದು ಹೇಗೆ? 

ಬೇಕಾಗುವ ಸಾಮಾಗ್ರಿಗಳು

1 ಚಮಚ ಲವಂಗ

1 ಕಪ್ ನೀರು

ಮಾಡುವ ವಿಧಾನ  

ಬಾಣಲೆಯಲ್ಲಿ ಒಂದು ಲೋಟ ನೀರು ಹಾಕಿ ಅದಕ್ಕೆ ಲವಂಗ ಸೇರಿಸಿ. ಕುದಿಯಲು ಬಿಡಿ. 3-5 ನಿಮಿಷಗಳ ನಂತರ ಆಫ್ ಮಾಡಿ.  ಅದನ್ನು ಸೋಸಿ  ಅದಕ್ಕೆ ಜೇನುತುಪ್ಪವನ್ನು ಸೇರಿಸಿ. ನಿಮಗೆ ಸಿಹಿ ಅಂಶದ ಅವಶ್ಯಕತೆ ಇದ್ದರೆ ಮಾತ್ರ ಜೇನುತುಪ್ಪ ಬಳಕೆ ಮಾಡಿ. ಈ ಚಹಾವನ್ನು ಬೆಳಿಗ್ಗೆ ಸೇವಿಸುವುದು ಉತ್ತಮ.  ಈ ಚಹಾವನ್ನು ನೀವು ಒಂದು ಕಪ್ ಗಿಂತ ಹೆಚ್ಚು ಕುಡಿಯದಂತೆ ನೋಡಿಕೊಳ್ಳಿ ಅಧಿಕ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ.

ಲವಂಗವು  ಆ್ಯಂಟಿ ಆಕ್ಸಿಡೆಂಟ್​ಗಳನ್ನು ಹೊಂದಿದ್ದು ಅದು ದೇಹಕ್ಕೆ ಸ್ವತಂತ್ರ ರಾಡಿಕಲ್ ಹಾನಿಯ ವಿರುದ್ಧ ಹೋರಾಡಲು ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಲವಂಗವು ನಂಜುನಿರೋಧಕ, ಆಂಟಿವೈರಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು ಅದು ಸಾಮಾನ್ಯ ಸೋಂಕುಗಳು, ಶೀತ ಮತ್ತು ಕೆಮ್ಮನ್ನು ದೂರವಿರಿಸುತ್ತದೆ ಎಂಬುದು ಸಾಬೀತಾಗಿದೆ.

ನೀವು ಒಸಡು ಅಥವಾ ಹಲ್ಲಿನ ನೋವಿನಿಂದ ಬಳಲುತ್ತಿದ್ದರೆ ಲವಂಗ ಚಹಾ ಸೇವಿಸುವುದು ನಿಮಗೆ ಒಳ್ಳೆಯದು. ಲವಂಗವು ಉರಿಯೂತದ ಗುಣಗಳನ್ನು ಹೊಂದಿದ್ದು ಅದು ಒಸಡುಗಳ ಊತವನ್ನು ಕಡಿಮೆ ಮಾಡುತ್ತದೆ ಮತ್ತು ಹಲ್ಲುನೋವಿನಿಂದ ಪರಿಹಾರ ನೀಡುತ್ತದೆ. ಲವಂಗ ಚಹಾವನ್ನು ಕುಡಿಯುವುದರಿಂದ ನಿಮ್ಮ ಬಾಯಿಯಿಂದ ಎಲ್ಲಾ ಬ್ಯಾಕ್ಟೀರಿಯಾಗಳಿಂದ ಮುಕ್ತಿ ನೀಡುತ್ತದೆ.

ಇದನ್ನೂ ಓದಿ: ಯಾವ ಸಮಯದಲ್ಲಿ ವ್ಯಾಯಾಮ ಮಾಡಿದ್ರೆ ಉತ್ತಮ? ಇಲ್ಲಿದೆ ಡಿಟೇಲ್ಸ್​​

ಸೈನಸ್ ನಿಂದ ಬಳಲುತ್ತಿರುವವರಿಗೆ ಲವಂಗ ಚಹಾವು ಆರೋಗ್ಯಕರ  ಎಂದು ಹೇಳಲಾಗುತ್ತದೆ. ಲವಂಗದಲ್ಲಿ ಯುಜೆನಾಲ್ ಇದ್ದು ಇದು ಕಫದ ಸಮಸ್ಯೆಯಿದ್ದಲ್ಲಿ ಅದರಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಲವಂಗದಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಕೆ ಇದ್ದು ಇದು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
Published by:Sandhya M
First published: