Weight Loss Tips: ದೇಹದ ತೂಕ ಇಳಿಸಲು ಚಿಯಾ ಬೀಜಗಳನ್ನು ಟ್ರೈ ಮಾಡಿ..

Chia Seeds: ಚಿಯಾ ಬೀಜಗಳಲ್ಲಿ ಹಲವು ಆರೋಗ್ಯಕರ ಪ್ರಯೋಜಗಳಿದ್ದು, ಅದನ್ನು ನಿಯಮಿತವಾಗಿ ಸೇವಿಸುವುದು ದೇಹದ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ.

ಚಿಯಾ ಬೀಜಗಳು

ಚಿಯಾ ಬೀಜಗಳು

  • Share this:
ದೇಹದ ತೂಕದಲ್ಲಿನ ಏರಿಕೆ ನಮ್ಮ ನಿದ್ದೆ ಗೆಡಿಸುವುದು ಸಹಜ. ತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತೇವೆ. ಆದರೆ ನಮ್ಮ ಮನೆಯಲ್ಲಿರುವ ಸಣ್ಣ ಪದಾರ್ಥಗಳು ಸಹ ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ ಎಂಬುದನ್ನ ನಾವು ಮರೆಯುತ್ತೇವೆ. ಉದಾಹರಣೆಗೆ ಚಿಯಾ ಬೀಜಗಳು, ಇದನ್ನು ಅತ್ಯುತ್ತಮ ಆರೋಗ್ಯ ಪ್ರಯೋಜಕಾರಿ ಆಹಾರ ಪದಾರ್ಥ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ನಮ್ಮ ದೇಹಕ್ಕೆ ಮತ್ತು ಮೆದುಳಿಗೆ ಬೇಕಾಗುವ ಹೆಚ್ಚು ಪೋಷಕಾಂಶಗಳಿರುತ್ತದೆ. ಆದರೆ ಅದರ ಪ್ರಯೋಜನಗಳೇನು ಎಂಬುದನ್ನ ತಿಳಿದುಕೊಳ್ಳುವುದು ಮುಖ್ಯ.

ಚಿಯಾ ಬೀಜಗಳು ಬಹಳ ಕಡಿಮೆ ಪ್ರಮಾಣದ ಕ್ಯಾಲೋರಿಗಳೊಂದಿಗೆ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ನೀಡುತ್ತವೆ. ಇನ್ನು ಚಿಯಾ ಬೀಜದ ಅರ್ಥವೇ ಶಕ್ತಿ ಎಂಬುದು. ಈ ಬೀಜಗಳನ್ನು ಹಲವಾರು ವರ್ಷಗಳಿಂದ ಆಹಾರದ ಒಂದು ಭಾಗವಾಗಿ ಸೇವನೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಹ ಆಧುನಿಕ ಆಹಾರ ಪದ್ಧತಿಯಲ್ಲಿ ಇದನ್ನು ಬಳಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ  ಪ್ರಪಂಚದಾದ್ಯಂತ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಜನರು ಇದನ್ನು ಸೇವಿಸಲು ಆರಂಭಿಸಿದ್ದಾರೆ. ಈ ಬೀಜಗಳು ನೋಡಲು ಮಾತ್ರ ಸಣ್ಣ ಆದರೆ ಅದರಲ್ಲಿರುವ ಪೋಷಕಾಂಶಗಳು ಮಾತ್ರ ಹೇರಳ.

ಇದನ್ನೂ ಓದಿ:ದೇಹದ ತೂಕ ಇಳಿಕೆಗೆ ಕ್ಯಾರೆಟ್ ಹೇಗೆ ಸಹಕಾರಿ ಗೊತ್ತೇ?

ಇನ್ನು ಕೇವಲ 28 ಗ್ರಾಂ ಚಿಯಾ ಬೀಜಗಳಲ್ಲಿ ಈ ಎಲ್ಲ ಪೋಷಕಾಂಶಗಳಿರುತ್ತದೆ.

ಫೈಬರ್: 11 ಗ್ರಾಂ.

ಪ್ರೋಟೀನ್: 4 ಗ್ರಾಂ.

ಕೊಬ್ಬು: 9 ಗ್ರಾಂ (ಅದರಲ್ಲಿ 5 ಒಮೆಗಾ -3 ಗಳಿರುತ್ತದೆ)

ಕ್ಯಾಲ್ಸಿಯಂ: 18% RDI.

ಮ್ಯಾಂಗನೀಸ್: 30% RDI.

ಮೆಗ್ನೀಸಿಯಮ್: 30% RDI.

ರಂಜಕ: 27% RDI.

ಇವುಗಳಲ್ಲದೇ, ಅದರಲ್ಲಿ ವಿಟಮಿನ್ ಬಿ 3 (ನಿಯಾಸಿನ್), ಪೊಟ್ಯಾಸಿಯಮ್, ವಿಟಮಿನ್ ಬಿ 1 (ಥಯಾಮಿನ್) ಮತ್ತು ವಿಟಮಿನ್ ಬಿ 2 ಗಳಿರುತ್ತದೆ.

ಚಿಯಾ ಬೀಜಗಳು ಆ್ಯಂಟಿ ಆಕ್ಸಿಡೆಂಟ್ಗಳಿಂದ ತುಂಬಿದೆ. ಈ ಆ್ಯಂಟಿ ಆಕ್ಸಿಡೆಂಟ್ಗಳು ದೇಹದಲ್ಲಿನ ಕೊಬ್ಬಿನ ಅಂಶಗಳು ಹೆಚ್ಚಾಗದಂತೆ ತಡೆಯುತ್ತವೆ. ಆಹಾರಗಳ ಮೂಲಕ  ನಮ್ಮ  ದೇಹಕ್ಕೆ ಆ್ಯಂಟಿ ಆಕ್ಸಿಡೆಂಟ್ಗಳು ಹೋಗುವುದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬಹು ಮುಖ್ಯವಾಗಿ, ಈ ಆ್ಯಂಟಿ ಆಕ್ಸಿಡೆಂಟ್ಗಳು ಜೀವಕೋಶಕ್ಕೆ ಹಾನಿ ಮಾಡುವ ಮತ್ತು ಕ್ಯಾನ್ಸರ್​ಗೆ ಕಾರಣವಾಗುವ  ಸ್ವತಂತ್ರ ರಾಡಿಕಲ್‌ಗಳ ಉತ್ಪಾದನೆಯ ವಿರುದ್ಧ ಹೋರಾಡುತ್ತವೆ.

ಚಿಯಾ ಬೀಜಗಳಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇರುತ್ತದೆ. ಕೆಲ ತಜ್ಞರ ಪ್ರಕಾರ ಅವುಗಳಲ್ಲಿ ಸುಮಾರು 14% ಪ್ರೋಟೀನ್ ಅಂಶವಿದ್ದು, ಇದು  ಸಸ್ಯಗಳಲ್ಲಿರುವ ಪ್ರೋಟೀನ್ ಅಂಶಕ್ಕೆ ಹೋಲಿಸಿದರೆ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ.  ಪ್ರೋಟೀನ್ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಇದು ದೇಹದ ತೂಕ ಕಡಿಮೆ ಮಾಡುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ. ಹೆಚ್ಚು ಪ್ರೋಟೀನ್ ಆಹಾರ ಸೇವನೆ ಮಾಡುವುದು ಹಸಿವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ರಾತ್ರಿ ವೇಳೆ ಹೆಚ್ಚು ತಿನ್ನುವ ಬಯಕೆಯಾಗುವುದನ್ನ ಅದು ಕಡಿಮೆ ಮಾಡುತ್ತದೆ. ಚಿಯಾ ಬೀಜಗಳು ನಿಜವಾಗಿಯೂ ಅತ್ಯುತ್ತಮ ಪ್ರೋಟೀನ್ ಮೂಲವಾಗಿದೆ. ಅದರಲ್ಲೂ ಸಸ್ಯಹಾರಿಗಳಿಗೆ ಇದು ಹೇಳಿ ಮಾಡಿಸಿದ ಆಹಾರ ಪದಾರ್ಥ.

ಇದನ್ನೂ ಓದಿ:ಹೆಚ್ಚು ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತಾ..? ಇಲ್ಲಿದೆ ಸತ್ಯ!

ಅನೇಕ ಆರೋಗ್ಯ ತಜ್ಞರು ಚಿಯಾ ಬೀಜಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಾಬೀತು ಮಾಡಿದ್ದಾರೆ. ಚಿಯಾ ಬೀಜಗಳು ಫೈಬರ್ ಮತ್ತು ಪ್ರೋಟೀನ್ ಅಂಶಗಳ ಜೊತೆ ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತದೆ. ಇದು ನಮ್ಮ ದೇಹ ಆಹಾರವನ್ನು ಹೀರಿಕೊಳ್ಳುವುದನ್ನ ನಿಧಾನಗೊಳಿಸುತ್ತದೆ. ಅಲ್ಲದೆ, ಚಿಯಾ ಬೀಜಗಳಲ್ಲಿನ ಪ್ರೋಟೀನ್ ಹಸಿವು ಮತ್ತು ಆಹಾರ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೆಲ ಅಧ್ಯಯನಗಳ ಪ್ರಕಾರ ಬೆಳಗಿನ ಉಪಹಾರದ ಜೊತೆ ಚಿಯಾ ಬೀಜಗಳನ್ನು ಸೇರಿಸಿ ಸೇವನೆ ಮಾಡುವುದು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
Published by:Sandhya M
First published: