Capsicum: ತೂಕ ಇಳಿಸಿಕೊಳ್ಬೇಕು ಅಂದ್ರೆ ಈ ಬಣ್ಣದ ಕ್ಯಾಪ್ಸಿಕಂ ತಿನ್ಬೇಕಂತೆ ನೋಡಿ, ಡಾಕ್ಟರ್ ಹೇಳಿದ್ದು!

ಕೆಂಪು ಬಣ್ಣದ ಕ್ಯಾಪ್ಸಿಕಂ ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಗಳು ಹೇರಳವಾಗಿ ಸಿಗಲಿವೆ. ಕ್ಯಾಪ್ಸಿಕಂನಲ್ಲಿರುವ ಕಬ್ಬಿಣವು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ, ಇದು ಆಮ್ಲಜನಕಯುಕ್ತ ರಕ್ತವನ್ನು ದೇಹದ ಜೀವಕೋಶಗಳಿಗೆ ಸಾಗಿಸುತ್ತದೆ ಮತ್ತು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಬಗೆಬಗೆಯ ದೊಡ್ಡಮೆಣಸಿನಕಾಯಿ

ಬಗೆಬಗೆಯ ದೊಡ್ಡಮೆಣಸಿನಕಾಯಿ

  • Share this:
    ದಪ್ಪಮೆಣಸಿನಕಾಯಿ(Capsicum) ಹೆಸರು ಕೇಳುತ್ತಿದ್ದಂತೆ ಕೆಲವರ ಬಾಯಲ್ಲಿ ತಟ್ಟಂತ ನೀರೂರಿಸಿ, ರುಚಿರುಚಿಯಾದ ಕ್ಯಾಪ್ಸಿಕಂ ಬಾತ್,ಮೆಣಸಿನಕಾಯಿ ಬಜ್ಜಿ ಹಾಗೂ ಅಷ್ಟೇ ರೀತಿಯಾಗಿರುವ ಕ್ಯಾಪ್ಸಿಕಮ್ ಮಸಾಲವನ್ನು(Capsicum Masala)  ನೆನಪಿಸಿಕೊಳ್ಳುವ ಹಾಗೆ ಆಗುತ್ತೆ. ಹಸಿರು ಹಳದಿ ಕೆಂಪು( Red, Yellow, Green) ಬಣ್ಣ ಗಳಲ್ಲಿ ದೊರೆಯುವ ಕ್ಯಾಪ್ಸಿಕಂನ್ನು ದೇಶದ ನಾನಾ ಭಾಗಗಳಲ್ಲಿ ನಾನಾ ಆಹಾರ(Food) ತಯಾರಿಕೆಗಳ ಬಳಕೆಗಾಗಿ ಬಳಸಲಾಗುತ್ತೆ.. ಇಂತಹ ರುಚಿರುಚಿಯಾದ ಕ್ಯಾಪ್ಸಿಕಂ ಸೇವನೆಯಿಂದ ನಮ್ಮ ದೇಹಕ್ಕೆ(Body) ಹತ್ತು ಹಲವು ಪ್ರಯೋಜನಕಾರಿಯಾಗಿವೆ.. ದಪ್ಪಮೆಣಸಿನಕಾಯಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು(health) ಸಹ ನಾವು ಕಾಪಾಡಿಕೊಳ್ಳಬಹುದಾಗಿದೆ.. ಹೀಗಾಗಿ ದಪ್ಪ ಮೆಣಸಿನಕಾಯಿ ಸೇವನೆಯಿಂದ ಏನು ಪ್ರಯೋಜನ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ..

    1) ರೋಗನಿರೋಧಕ ಶಕ್ತಿ ಹೆಚ್ಚಳ :ಕ್ಯಾಪ್ಸಿಕಂನಲ್ಲಿ ಪ್ರಮುಖವಾಗಿ ವಿಟಮಿನ್ ಸಿ, ಎ ಮತ್ತು ಬೀಟಾ ಕೆರೋಟಿನ್ ಅಂಶವಿದೆ. ಇದರಲ್ಲಿರುವ ಉತ್ತಮ ಪೋಷಕಾಂಶಗಳು ದೇಹವನ್ನು ಹಲವು ರೀತಿಯ ಕಾಯಿಲೆಗಳಿಂದ ರಕ್ಷಿಸಲು ಸಹಕಾರಿಯಾಗಿದೆ.. ಅಲ್ಲದೆ ದೇಹಕ್ಕೆ ವಿಟಮಿನ್ ಸಿ ಜೊತೆಗೆ ದೇಹಕ್ಕೆ ಬೇಕಾದ ಬಿಳಿಯ ರಕ್ತಕಣಗಳನ್ನು ಸಹ ಕ್ಯಾಪ್ಸಿಕಂ ಸೇವನೆಯಿಂದ ಪಡೆದುಕೊಳ್ಳಬಹುದಾಗಿದೆ..

    ಇದನ್ನೂ ಓದಿ :ಅಡುಗೆಗೆ ಈ ಎಣ್ಣೆ ಬಳಸಿದ್ರೆ ಖಾಯಿಲೆಗಳು ನಿಮ್ಮ ಹತ್ತಿರಕ್ಕೂ ಬರೋದಿಲ್ವಂತೆ, ಹೃದಯಕ್ಕೆ ಇದು ಅತ್ಯುತ್ತಮ!

    2) ಕಬ್ಬಿಣಾಂಶದ ಕೊರತೆ ಹಾಗೂ ರಕ್ತಹೀನತೆ ಗುಣಪಡಿಸಲು ಸಹಕಾರಿ : ನಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯುಂಟಾಗುವುದರಿಂದ ಆಯಾಸ ದೌರ್ಬಲ್ಯ ತೆಳು ಚರ್ಮ, ಅನಿಯಮಿತ ಹೃದಯಬಡಿತ ಉಸಿರಾಟದ ತೊಂದರೆ ಮುಂತಾದ ರೋಗ ಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.. ಆದ್ರೆ ಕ್ಯಾಪ್ಸಿಕಂ ದೈನಂದಿನ ಬಳಕೆಯಿಂದ ದೇಹಕ್ಕೆ ಅಗತ್ಯ ಇರುವ ವಿಟಮಿನ್ ಸಿ 300% ನೀಡುತ್ತದೆ, ಕಬ್ಬಿಣವನ್ನು ಸರಿಯಾಗಿ ಹೀರಿಕೊಳ್ಳಲು ವಿಟಮಿನ್ಸ್ ಅವಶ್ಯಕ.

    ಆದ್ದರಿಂದ ದೇಹದಲ್ಲಿ ಕಬ್ಬಿಣಾಂಶ ಕೊರತೆ ಇದ್ದವರು ಕ್ಯಾಪ್ಸಿಕಂ ತರಕಾರಿಯನ್ನು ತಮ್ಮ ದೈನಂದಿನ ಅಡುಗೆಯಲ್ಲಿ ಬಳಸಿಕೊಳ್ಳಬಹುದಾಗಿದೆ.ಅಲ್ಲದೆ
    ಕ್ಯಾಪ್ಸಿಕಂನಲ್ಲಿರುವ ಕಬ್ಬಿಣವು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ, ಇದು ಆಮ್ಲಜನಕಯುಕ್ತ ರಕ್ತವನ್ನು ದೇಹದ ಜೀವಕೋಶಗಳಿಗೆ ಸಾಗಿಸುತ್ತದೆ ಮತ್ತು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

    3) ತೂಕ ಇಳಿಕೆಗೆ ಸಹಕಾರಿ : ಪ್ರತಿನಿತ್ಯ ತೂಕ ಇಳಿಸಿಕೊಳ್ಳುವುದರ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಚಿಂತೆ ಮಾಡಬೇಕಾದ ಪ್ರಮೇಯವೇ ಇಲ್ಲ.. ಯಾಕಂದ್ರೆ ಪ್ರತಿನಿತ್ಯ ಕ್ಯಾಲ್ಸಿಯಂ ಸೇವನೆ ಮಾಡುವುದರಿಂದ, ಇದರಲ್ಲಿ ಇರುವ ನಾರಿನಂಶ, ದೇಹದಲ್ಲಿ ಪಚನ ಕ್ರಿಯೆಯನ್ನು ಸರಾಗವಾಗಿ ಮಾಡುತ್ತದೆ. ದೇಹದಿಂದ ವಿಷ, ಮಾಲಿನ್ಯಕಾರಕಗಳು ಮತ್ತು ಇತರ ಅನಗತ್ಯ ವಸ್ತುಗಳನ್ನು ತೆಗೆದುಹಾಕುತ್ತದೆ ಮತ್ತು ಜೀವಾಣು ವಿಷವನ್ನು ಆರೋಗ್ಯಕ್ಕೆ ಹಾನಿಯಾಗದಂತೆ ತಡೆಯುತ್ತದೆ.

    ಇದನ್ನೂ ಓದಿ :ಮನೆಯಲ್ಲಿರುವ ಈ ಆಹಾರಗಳನ್ನು ಸೇವಿಸಿ ಬ್ಲಡ್​ ಶುಗರ್​ ಕಂಟ್ರೋಲ್​ ಮಾಡಿ!

    4) ಕ್ಯಾನ್ಸರ್ ವಿರೋಧಿ ಗುಣ : ದಪ್ಪಮೆಣಸಿನಕಾಯಿ ಯಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಪೋಷಕಾಂಶಗಳು ಸಮೃದ್ಧವಾಗಿದೆ, ಇವು ಕ್ಯಾನ್ಸರ್ ಕಣಗಳು ಒಂದಿಗೆ ಹೋರಾಡುವ ಶಕ್ತಿಯನ್ನು ಹೊಂದಿದೆ, ದೇಹದಲ್ಲಿ ದೀರ್ಘಕಾಲದ ಅನಗತ್ಯ ಆಕ್ಸಿದೇಟಿವ್ ಒತ್ತಡದಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು. ಅಲ್ಲದೆ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತವೆ ಮತ್ತು ಕರುಳಿನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಕಿಬ್ಬೊಟ್ಟೆಯ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮುಂತಾದ ಹಲವಾರು ಕ್ಯಾನ್ಸರ್‌ಗಳ ಅಪಾಯವನ್ನು ಕ್ಯಾಪ್ಸಿಕಂ ಸೇವನೆ ಕಡಿಮೆ ಮಾಡುತ್ತದೆ.

    5) ವಿಟಮಿನ್ B6 ಮತ್ತು ಮೆಗ್ನೀಷಿಯಂ ಹೆಚ್ಚಳಕ್ಕೆ ಸಹಕಾರಿ :ಕ್ಯಾಪ್ಸಿಕಂ ವಿಟಮಿನ್ B6 ಮತ್ತು ಮೆಗ್ನೀಷಿಯಂ ಅತ್ಯುತ್ತಮ ಮೂಲವಾಗಿದ್ದು ಇದು ನಮಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕ್ಯಾಪ್ಸಿಕಂ ಸೇವನೆಯಿಂದ ಹೆಚ್ಚಳವಾಗುವ ವಿಟಮಿನ್ ಬಿ 6 ಮತ್ತು ಮೆಗ್ನೀಸಿಯಮ್ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್‌ನಿಂದ ಉಂಟಾಗುವ ಆತಂಕವನ್ನು ಕಡಿಮೆ ಮಾಡುತ್ತದೆ.

    6) ಕಣ್ಣಿನ ಸಮಸ್ಯೆಗಳ ನಿವಾರಣೆ : ಪ್ರತಿಯೊಬ್ಬರಿಗೂ ತಮ್ಮ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಅದರಲ್ಲೂ ಈ ವಿಟಮಿನ್ ಕೊರತೆಯಿಂದ ಬರುವ ಇರುವ ಕುರುಡಿನ ಬಗ್ಗೆ ಹೆಚ್ಚು ಜಾಗೃತವಾಗಿರಬೇಕಾಗುತ್ತದೆ.. ಕೆಂಪು ಬಣ್ಣದ ಕ್ಯಾಪ್ಸಿಕಂ ಸೇವನೆ ಮಾಡುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಗಳು ಹೇರಳವಾಗಿ ಸಿಗಲಿವೆ.. ಜೊತೆಗೆ ಕೆಂಪು ದಪ್ಪ ಮೆಣಸಿನ ಕಾಯಿಯಲ್ಲಿ ಲುಟಿನ್ ಎಂಬ ಕ್ಯಾರೋಟಿನ್ ಅಧಿಕವಾಗಿದ್ದು, ಕಣ್ಣುಗಳು ತಮ್ಮ ಶಕ್ತಿ ಕಳೆದುಕೊಳ್ಳುವುದನ್ನು ತಪ್ಪಿಸುತ್ತದೆ, ವಯಸ್ಸಿಗೆ-ಸಂಬಂಧಿಸಿದ ದೃಷ್ಟಿದೋಷವನ್ನು ನಿವಾರಿಸುತ್ತದೆ, ಕಣ್ಣಿನ ಪೊರೆ ಗಳು ಬರುವಿಕೆಯನ್ನು ತಡೆಯುತ್ತದೆ ಕಾರಣ ಇದರಲ್ಲಿ ಹೆಚ್ಚಿನ ಪ್ರಮಾಣದ ಬೀಟಾ ಕೆರೋಟಿನ್ ಮತ್ತು ವಿಟಮಿನ್-ಸಿ ಇರುತ್ತದೆ.

    7) ಪೊಟ್ಯಾಶಿಯಂ ಪ್ರಯೋಜನ : ಕ್ಯಾಪ್ಸಿಕಂ ತರಕಾರಿಯಲ್ಲಿ ಪೊಟಾಶಿಯಮ್ ಅಕ್ಷ ಉತ್ತಮವಾಗಿತ್ತು, ಈಗ ನಿಜವು ದೇಹದಲ್ಲಿ ಧರ್ಮಗಳು ಮತ್ತು ಖನಿಜಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲದೆ ಸ್ನಾಯುಗಳ ಕಾರ್ಯವನ್ನು ಹೆಚ್ಚಿಸುತ್ತದೆ ಹಾಗೂ ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
    Published by:ranjumbkgowda1 ranjumbkgowda1
    First published: