Health Tips: ತೂಕ ಇಳಿಕೆ ಸೇರಿದಂತೆ ಹಲವು ಪ್ರಯೋಜನ ಹೊಂದಿದೆ ಸೋರೆಕಾಯಿ ಸಿಪ್ಪೆ

Bottle Gourd: ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ನಂತರ ನೀವು ಸೋರೆಕಾಯಿ ಸಿಪ್ಪೆಗಳನ್ನು ಬಳಸಬಹುದು. ಇದನ್ನು ಎಳ್ಳು ಎಣ್ಣೆಯೊಂದಿಗೆ ಬೆರೆಸಿ ನೆತ್ತಿಯ ಮೇಲೆ ಹಚ್ಚುವುದರಿಂದ ಕೂದಲು ಉದುರುವುದು ಮತ್ತು ಬೋಳು ಮುಂತಾದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

ಸೋರೆಕಾಯಿ

ಸೋರೆಕಾಯಿ

 • Share this:
  ನಮ್ಮ ಆರೋಗ್ಯಕ್ಕೆ (Health) ಹಣ್ಣುಗಳು (Fruits) ಮತ್ತು ತರಕಾರಿಗಳು (Vegetables) ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂದರೆ ನಾವು ಅವುಗಳನ್ನು ಊಹಿಸಲು ಕೂಡ ಸಾಧ್ಯವಾಗುವುದಿಲ್ಲ. ನಮಗೆ ಗೊತ್ತಿಲ್ಲದೆ ನಾವು ಇಂದು ನೆಪ ಮಾತ್ರಕ್ಕೆ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನಬೇಕಲ್ಲ ಎಂದು ತಿನ್ನುತ್ತಿದ್ದೇವೆ. ಆದರೆ ನಿಸರ್ಗದಿಂದ (Nature) ಬಂದ ಈ ಉಡುಗೊರೆಗಳಿಂದ ನಮಗೆ ಸಿಗುವ ಆರೋಗ್ಯದ ಲಾಭಗಳು ಅಪಾರ ಪ್ರಮಾಣದಲ್ಲಿರುತ್ತವೆ. ಅದ್ರಲ್ಲೂ  ಸೋರೆಕಾಯಿ (Bottle Gourd) ಎಂಬ ತರಕಾರಿ ದೇಹದ ಆರೋಗ್ಯಕ್ಕೆ ಅಮೃತ ಇದ್ದಂತೆ. ಸೋರೆಕಾಯಿ ಅಧಿಕ ನೀರಿನಂಶ ಹೊಂದಿರುವ ತರಕಾರಿ ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ತರಕಾರಿಯಾಗಿದೆ. ಕೆಲವು ನಿರ್ಧಿಷ್ಟ ಕಾಯಿಲೆಗಳನ್ನು ಹೋಗಲಾಡಿಸಲು ಸೋರೆಕಾಯಿಯನ್ನು ಮದ್ದಾಗಿ ಉಪಯೋಗಿಸುತ್ತಾರೆ.

  ವಿಟಮಿನ್ ಗಳ ಆಗರ ಸೋರೆಕಾಯಿ

  ಸೋರೆಕಾಯಿಯನ್ನು ಯಾವಾಗಲೂ ಆರೋಗ್ಯಕರ ಸಸ್ಯಾಹಾರಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಬಹುಮುಖ ತರಕಾರಿ ಸುಮಾರು 92% ರಷ್ಟು ನೀರು ಮತ್ತು ಖನಿಜಗಳಿಂದ ಕೂಡಿದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಕೆ ಮತ್ತು ಕ್ಯಾಲ್ಸಿಯಂ ಸಮೃದ್ಧ ವಾಗಿರುವುದನ್ನು ಕಾಣಬಹುದು.

  ರಿಬೊಫ್ಲಾವಿನ್, ಸತು, ಥೈಮೆನ್, ವಿಟಮಿನ್ ಎ, ಸಿ, ಫಾಲಟೆ, ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿನಾಂಶ, ವಿಟಮಿನ್ ಬಿ6, ಪೊಟಾಶಿಯಂ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಸ್ ಗಳಿಂದ ಇದು ಸಮೃದ್ಧವಾಗಿದೆ.
  ಇಷ್ಟೇ ಅಲ್ಲದೆ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

  ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತೆಗೆದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದರಿಂದ ಈ ರಸವು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ.

  ಸೋರೆಕಾಯಿ ಮಾತ್ರವಲ್ಲ ಅದರ ಸಿಪ್ಪೆ ಅದಕ್ಕಿಂತ ಒಳ್ಳೆಯದು. ಸೊರೆಕಾಯಿ ಸಿಪ್ಪೆಯಿಂದ ಪದಾರ್ಥಗಳನ್ನ ಮಾಡಿ, ಸೇವಿಸಿದರೆ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣಾ...

  ಇದನ್ನೂ ಓದಿ: ಈ 6 ಸೊಪ್ಪುಗಳಲ್ಲಿದೆ ನಿಮ್ಮ ಆರೋಗ್ಯವನ್ನು ಕಾಪಾಡುವ ಶಕ್ತಿ

  1) ಪೈಲ್ಸ್‌ ನಿವಾರಣೆ: ಪೈಲ್ಸ್‌ನಿಂದ ಬಳಲುತ್ತಿರುವವರು ಸೊರೇಕಾಯಿ ಸಿಪ್ಪೆಯ ಸೇವನೆ ಮಾಡಬೇಕು. ಇದರಿಂದ ಪೈಲ್ಸ್ ನಿವಾರಣೆಯಾಗುತ್ತದೆ. ಸೊರೇಕಾಯಿ ಸಿಪ್ಪೆಯನ್ನ ಒಣಗಿಸಿ, ಅದು ಚೆನ್ನಾಗಿ ಒಣಗಿದ ಮೇಲೆ ಪೌಡರ್ ಮಾಡಿ, ಅದನ್ನು ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚು ಹಾಲಿನೊಂದಿಗೆ ಸೇವಿಸಬೇಕು.

  ಒಂದು ಸ್ಪೂನ್ ಸೊರೇಕಾಯಿ ಸಿಪ್ಪೆಯ ಪೌಡರ್ ಮತ್ತು ಒಂದು ಲೋಟ ಹಾಲು ಸೇರಿಸಿ ಕುಡಿಯಬೇಕು. ಹಾಲು ಇಲ್ಲದಿದ್ದಲ್ಲಿ ನೀರನ್ನ ಕೂಡ ಬಳಸಬಹುದು.

  2) ಉರಿ ಅಥವಾ ತುರಿಕೆ ನಿವಾರಣೆ: ಕಾಲಲ್ಲಿ, ಪಾದದಲ್ಲಿ ಉರಿ ಅಥವಾ ತುರಿಕೆಯಾಗುತ್ತಿದ್ದಲ್ಲಿ, ಸೊರೇಕಾಯಿ ಸಿಪ್ಪೆ ಬಳಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಸೊರೇಕಾಯಿ ಸಿಪ್ಪೆಯನ್ನ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ, ಅದನ್ನ ಪಾದಕ್ಕೆ ಹಚ್ಚಿದ್ದಲ್ಲಿ, ತುರಿಕೆ ಅಥವಾ ಉರಿ ಇದ್ದಲ್ಲಿ ಕಡಿಮೆಯಾಗುತ್ತದೆ. ದೇಹದಲ್ಲಿ ಎಲ್ಲಿ ಉರಿ, ತುರಿಕೆ ಇದ್ದರೂ ಈ ರೆಮಿಡಿಯನ್ನ ನೀವು ಟ್ರೈ ಮಾಡಬಹುದು.

  3) ತೂಕ ಇಳಿಕೆ: ವಾರದಲ್ಲಿ ಎರಡು ಮೂರು ಬಾರಿ ನಿಯಮಿತವಾಗಿ ಸೋರೆಕಾಯಿಯ ಜ್ಯೂಸ್ ಕುಡಿಯುತ್ತಾ ಬಂದರೆ ದೇಹದ ತೂಕ ಇಳಿಸಿಕೊಳ್ಳಬಹುದು. ವಿಶೇಷವಾಗಿ ಬೆಳಿಗ್ಗೆದ್ದ ಕೂಡಲೇ ಒಂದು ಲೋಟ ಸೋರೆಕಾಯಿ ಜ್ಯೂಸಿಗೆ ಸ್ವಲ್ಪ ಕೂಡ ಸಕ್ಕರೆ ಬೆರೆಸದೇ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಪರಿಣಾಮವನ್ನು ಪಡೆಯಬಹುದು.

  4) ಮಲಬದ್ಧತೆ ಸಮಸ್ಯೆ ನಿವಾರಣೆ: ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಇದು ಸಹಕಾರಿಯಾಗಿದೆ. ಇದರಲ್ಲಿ ನೀರಿನಂಶ ಮತ್ತು ನಾರಿನಂಶ ಅಧಿಕವಿರುವುದರಿಂದ ಇದನ್ನು ತಿಂದರೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು.

  5) ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ : ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ನಂತರ ನೀವು ಸೋರೆಕಾಯಿ ಸಿಪ್ಪೆಗಳನ್ನು ಬಳಸಬಹುದು. ಇದನ್ನು ಎಳ್ಳು ಎಣ್ಣೆಯೊಂದಿಗೆ ಬೆರೆಸಿ ನೆತ್ತಿಯ ಮೇಲೆ ಹಚ್ಚುವುದರಿಂದ ಕೂದಲು ಉದುರುವುದು ಮತ್ತು ಬೋಳು ಮುಂತಾದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

  ಇದನ್ನೂ ಓದಿ: ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿಯಾಗಿರುವ ಹಾಗಲಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

  6) ಚರ್ಮದ ಕಿರಿಕಿರಿಯನ್ನು ತೆಗೆದುಹಾಕಲು : ಮಹಿಳೆಯರು ಹೆಚ್ಚಾಗಿ ಚರ್ಮದಲ್ಲಿ ಸುಡುವ ಸಂವೇದನೆಯನ್ನು ಅನುಭವಿಸುತ್ತಾರೆ. ಈ ಸುಡುವ ಸಂವೇದನೆಯನ್ನು ತೆಗೆದುಹಾಕಲು ಮತ್ತು ತಂಪಾದ ಭಾವನೆಯನ್ನು ಪಡೆಯಲು, ನೀವು ಸೋರೆಕಾಯಿ ಸಿಪ್ಪೆಗಳನ್ನು ಪುಡಿಮಾಡಿ ಸುಡುವ ಪ್ರದೇಶದ ಮೇಲೆ ಹಚ್ಚಬಹುದು. ಇದು ಸುಡುವ ಸಂವೇದನೆಯಲ್ಲಿ ಪರಿಹಾರವನ್ನು ನೀಡುತ್ತದೆ ಮತ್ತು ಆ ಸ್ಥಳದಲ್ಲಿ ತಂಪಾದ ಭಾವನೆಯೂ ಇರುತ್ತದೆ.
  Published by:ranjumbkgowda1 ranjumbkgowda1
  First published: