• Home
 • »
 • News
 • »
 • lifestyle
 • »
 • Health Tips: ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿಯಾಗಿರುವ ಹಾಗಲಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

Health Tips: ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿಯಾಗಿರುವ ಹಾಗಲಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

ಹಾಗಲಕಾಯಿ

ಹಾಗಲಕಾಯಿ

Bitter Gourd: ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ

 • Share this:

  ಹಾಗಲಕಾಯಿ (Bitter gourd) ಕಹಿಗೆ ಹೆಸರುವಾಸಿಯಾಗಿದೆ. ಅದರ ಸೇವನೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ(Health) ಪ್ರಯೋಜನಕಾರಿಯಾಗಿದೆ.  ಪ್ರಾಚೀನ ಕಾಲದಿಂದಲೂ ಔಷಧಿಗಳಲ್ಲಿ(Medicine) ಮತ್ತು ಆಹಾರ (Food)ತರಕಾರಿಗಳಲ್ಲಿ(Vegetables) ಇದನ್ನು ಬಳಸುತ್ತಾರೆ. ನಿಮ್ಮಲ್ಲಿ ಹಲವರಿಗೆ ಹಾಗಲಕಾಯಿಯೆಂದರೆ ಸ್ವಲ್ಪ ತಿರಸ್ಕಾರವೇ ಇರಬಹುದು. ಆದರೆ ಇದು ಕಹಿಯಾದಷ್ಟೇ ಉತ್ತಮ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ತಲೆನೋವು, ಗಂಟುಗಳಲ್ಲಿ ನೋವು ಮತ್ತು ಮದುಮೇಹದಂತಹ ಗಂಭೀರ ಕಾಯಿಲೆಗಳನ್ನೇ ದೂರಮಾಡುವ ಶಕ್ತಿಯನ್ನು ಹೊಂದಿದೆ. ಇದು ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣ, ಮೆಗ್ನೀಷಿಯಂ, ಮತ್ತು ಪೊಟ್ಯಾಷಿಯಂ ಜೀವಸತ್ವ - ಸಿ ಹಾಗೂ ಅಧಿಕ ಪ್ರಮಾಣದಲ್ಲಿ ನಾರಿನಾಂಶ ಹೊಂದಿದೆ.. ಹೀಗಾಗಿ ಹಾಗಲಕಾಯಿ ಸೇವನೆಯಿಂದ ಆಗುವ ಪ್ರಯೋಜನಗಳು ಏನು ಎನ್ನುವುದನ್ನು ನೋಡೋಣ...


  1) ಮಧುಮೇಹ ನಿಯಂತ್ರಣ: ಹಾಗಲಕಾಯಿಯು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾದ ಆಹಾರಗಳಲ್ಲಿ ಒಂದಾಗಿದೆ. ಹಾಗಲಕಾಯಿಯ ಸೊಪ್ಪು, ಕಾಯಿ ಹೀಗೆ ಯಾವುದೇ ಭಾಗವನ್ನು ಔಷಧದ ರೂಪದಲ್ಲಿ ತೆಗೆದುಕೊಂಡರೂ ಉತ್ತಮ ಪರಿಣಾಮವನ್ನು ನೀಡುತ್ತದೆ. ಇದರ ಸೇವನೆಯಿಂದ ಮಧುಮೇಹ ಇರುವವರಲ್ಲಿ ಕರುಳಿನಿಂದ ಗ್ಲುಕೋಸ್ ಹಿರಿಕೆಯಾಗುವ ಅಂಶವನ್ನು ಕಡಿಮೆಗೊಳಿಸುವ ಜೊತೆಗೆ ಸ್ನಾಯುಗಳಲ್ಲಿ ಅವುಗಳ ಬಳಕೆಯನ್ನು ಹೆಚ್ಚಿನದಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಮಧುಮೇಹಿಗಳು ತಮ್ಮ ಸಮಸ್ಯೆಯಿಂದ ದೂರಾಗಿ ನಿರಾಳತೆಯನ್ನು ಪಡೆಯುತ್ತಾರೆ. ಈ ಎಲ್ಲ ಬದಲಾವಣೆಗಳಿಗೆ ಅದರಲ್ಲಿರುವ ಪೈಟೋಕೆಮಿಕಲ್ಸ್ ಕಾರಣವಾಗಿದೆ.


  ಇದನ್ನೂ ಓದಿ: ಉತ್ತಮ ನಿದ್ರೆಗೆ, ಕೂದಲಿನ ಆರೋಗ್ಯಕ್ಕೆ, ರಕ್ತ ಹೆಚ್ಚಳಕ್ಕೆ ಸಹಕಾರಿ ಬೀಟ್​ರೂಟ್​​ ಸೇವನೆ


  2) ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು: ಹಾಗಲಕಾಯಿ ರಸವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ನಂತಹ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಾಗಲಕಾಯಿ ದೇಹದ ರಕ್ತದ ಒತ್ತಡವನ್ನು ಸಮತೋಲನದಿಂದ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ, ಇದು ಪೊಟ್ಯಾಸಿಯಮ್ ನಲ್ಲಿ ಹೆಚ್ಚಿನ ಮಟ್ಟದಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಹೆಚ್ಚಿನ ಸೋಡಿಯಂ ಅನ್ನು ಸಹ ಹೀರಿಕೊಳ್ಳುತ್ತದೆ.


  3) ತಲೆನೋವು ಗುಣಪಡಿಸಲು: ಹಾಗಲಕಾಯಿ ಸೇವನೆ ತಲೆನೋವನ್ನು ಗುಣಪಡಿಸುತ್ತದೆ. ನಿಮಗೆ ತಲೆನೋವಿನ ಸಮಸ್ಯೆ ಇದ್ದರೆ ಹಾಗಲಕಾಯಿ ರಸವನ್ನು ಹಣೆಗೆ ಹಚ್ಚಿ, ಹೀಗೆ ಮಾಡುವುದರಿಂದ ತಲೆನೋವು ಗುಣವಾಗುತ್ತದೆ.


  4) ಮೊಡವೆಗಳ ನಿವಾರಣೆ: ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ 6 ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿಮ್ಮ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.


  5) ರೋಗನಿರೋಧಕ ಶಕ್ತಿ ಹೆಚ್ಚಳ: ರೋಗನಿರೋಧಕ ಶಕ್ತಿಯನ್ನು ಉತ್ತಮಪಡಿಸುವುದು ಹಾಗೂ ಹಲವಾರು ಕಾಯಿಲೆಗಳಿಂದ ರಕ್ಷಣೆ ನೀಡುವುದು. ಇದು ಮೊಡವೆ ದೂರವಿಡುವುದು ಮಾತ್ರವಲ್ಲದೆ, ಬೊಕ್ಕೆ, ಶಿಲೀಂಧ್ರ ಸೋಂಕು ಇತ್ಯಾದಿಗಳಿಂದಲೂ ರಕ್ಷಣೆ ಒದಗಿಸುವುದು. ಹಾಗಾಗಿ ಆದಷ್ಟು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಹಾಗಲಕಾಯಿಯನ್ನು ಸೇರಿಸಿಕೊಳ್ಳಿ.


  6) ರಕ್ತ ಶುದ್ಧೀಕರಿಸಲು: ಹಾಗಲಕಾಯಿ ಸೇವನೆ ಮಾಡಿದರೆ, ಅದು ರಕ್ತವನ್ನು ಶುದ್ಧೀಕರಿಸಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ ಮತ್ತು ಸೂಕ್ಷ್ಮಾಣು ವಿರೋಧಿ ಅಂಶಗಳು ಇದಕ್ಕೆ ಕಾರಣವಾಗಿದೆ. ಇದು ರಕ್ತ ಸಂಚಾರವನ್ನು ಉತ್ತಮಪಡಿಸುವುದು ಮತ್ತು ರಕ್ತದಲ್ಲಿನ ಕಾಯಿಲೆಗಳನ್ನು ದೂರವಿಡುವುದು.


  ಇದನ್ನೂ ಓದಿ: ಟೊಮ್ಯಾಟೊ ಆಯ್ತು ಈಗ ಬದನೆಕಾಯಿ ಸರದಿ, 1 ಕೆಜಿಗೆ 100-140 ರೂಪಾಯಿ!


  7) ತೂಕ ನಿರ್ವಹಣೆಗೆ ಸಹಕಾರಿ: ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಹಾಗಲಕಾಯಿ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು. ಹಾಗಲಕಾಯಿಯಲ್ಲಿ ಸಹ ಹೆಚ್ಚಿನ ನೀರಿನ ಅಂಶ ಇರುವುದರಿಂದ, ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಉಂಟಾಗುವುದಿಲ್ಲ. ಅದು ಅಲ್ಲದೆ ತುಂಬಾ ಹೊತ್ತಿನವರೆಗೂ ಹೊಟ್ಟೆ ಹಸಿವು ಕೂಡ ಆಗುವುದಿಲ್ಲ. ಹಾಗಾಗಿ ತೂಕ ಇಳಿಸಿಕೊಳ್ಳಬೇಕು ಎನ್ನುವವರು ಹಾಗಲಕಾಯಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

  Published by:ranjumbkgowda1 ranjumbkgowda1
  First published: